ರಾಜ್ಯದ ಭಾರಿ ವಿರೋಧಕ್ಕೆ ಮಣಿದ ಕೇಂದ್ರ ಸರ್ಕಾರ; ಕೊನೆಗೂ ಬೆಂಗಳೂರಿನಲ್ಲೇ ಉಳಿದ ಏರೋ ಇಂಡಿಯಾ

news18
Updated:September 8, 2018, 1:02 PM IST
ರಾಜ್ಯದ ಭಾರಿ ವಿರೋಧಕ್ಕೆ ಮಣಿದ ಕೇಂದ್ರ ಸರ್ಕಾರ; ಕೊನೆಗೂ ಬೆಂಗಳೂರಿನಲ್ಲೇ ಉಳಿದ ಏರೋ ಇಂಡಿಯಾ
news18
Updated: September 8, 2018, 1:02 PM IST
ನ್ಯೂಸ್​18 ಕನ್ನಡ

ಬೆಂಗಳೂರು (ಸೆ. 8): ಈ ಬಾರಿಯ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ ಉತ್ತರ ಪ್ರದೇಶದ ಲಖನೌನಲ್ಲಿ ನಡೆಯಲಿದೆ ಎಂಬ ವದಂತಿಗಳಿಗೆಲ್ಲ ತೆರೆಬಿದ್ದಿದ್ದು, ಮತ್ತೊಮ್ಮೆ ಏಷ್ಯಾದ ಅತಿದೊಡ್ಡ ಏರ್​ ಶೋಗೆ ಬೆಂಗಳೂರು ಸಾಕ್ಷಿಯಾಗಲಿದೆ.

ಕೊನೆಗೂ ಕನ್ನಡಿಗರ ಬೇಡಿಕೆ ಮತ್ತು ಹೋರಾಟಕ್ಕೆ ಸ್ಪಂದಿಸಿರುವ ಕೇಂದ್ರ ಸರ್ಕಾರ ಬೆಂಗಳೂರಲ್ಲೇ ಏರೋ ಇಂಡಿಯಾ ಪ್ರದರ್ಶನ ನಡೆಸಲು ತೀರ್ಮಾನಿಸಿದೆ. 2019ರ ಫೆಬ್ರವರಿ 20ರಿಂದ 24ರವರೆಗೆ​ ಯಲಹಂಕದಲ್ಲಿ ಏರ್​ ಶೋ ನಡೆಯಲಿದೆ.

ಕಳೆದ ತಿಂಗಳಿನಲ್ಲಿ ಕೇಂದ್ರ ರಕ್ಷಣಾ ಇಲಾಖೆಯ ಮೂಲಗಳು ಏರೋ ಇಂಡಿಯಾ ಈ ಬಾರಿ ಉತ್ತರ ಪ್ರದೇಶದ ಲಖನೌ ನಗರಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಿತ್ತು. ಅತ್ತ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕೂಡ ವೈಮಾನಿಕ ಪ್ರದರ್ಶನವನ್ನು ಲಖನೌನಲ್ಲಿ ನಡೆಸಲು ಅನುಮತಿ ನೀಡುವಂತೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಅವರ ಬಳಿ ಕೇಳಿದ್ದರು ಎಂಬ ಸುದ್ದಿಯೂ ಹೊರಬಿದ್ದಿತ್ತು.

ಇದಕ್ಕೆ ಕರ್ನಾಟಕ ರಾಜಕೀಯ ವಲಯದಿಂದ ಮತ್ತು ಸಾರ್ವಜನಿಕ ವಲಯದಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಕುರಿತು ಖುದ್ದು ಸಿಎಂ ಕುಮಾರಸ್ವಾಮಿಯವರೇ ಸಚಿವೆ ನಿರ್ಮಲಾ ಸೀತಾರಾಮನ್​ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.  ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ನಿರ್ಮಲಾ ಸೀತಾರಾಮನ್​ ಅವರ ಬಳಿ ಈ ಬಗ್ಗೆ ಮನವಿ ಮಾಡಿದ್ದರು. ಟ್ವಿಟ್ಟರ್​ನಲ್ಲಿ ಅಭಿಯಾನವೂ ನಡೆದಿತ್ತು. ಇದೆಲ್ಲದರ ಪ್ರತಿಫಲವಾಗಿ   ಕರ್ನಾಟಕದಲ್ಲೇ ಈ ಬಾರಿಯ ವೈಮಾನಿಕ ಪ್ರದರ್ಶನ ನಡೆಸಲು ತೀರ್ಮಾನಿಸಲಾಗಿದೆ.

 
Loading...
ಯಲಹಂಕದ ವಾಯುನೆಲೆಯಲ್ಲಿ 1996ರಿಂದ 2 ವರ್ಷಗಳಿಗೊಮ್ಮೆ ವೈಮಾನಿಕ ಪ್ರದರ್ಶನ ನಡೆದುಕೊಂಡು ಬಂದಿತ್ತು. ಇಲ್ಲಿ ವಾಯುನೆಲೆಗೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ 2009ರಲ್ಲಿ ಕೇಂದ್ರ ಸರ್ಕಾರ 200 ದಶಲಕ್ಷ ಹಣವನ್ನು ಮಂಜೂರು ಮಾಡಿತ್ತು.

 
First published:September 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...