ನೆರೆಪೀಡಿತ ಕರ್ನಾಟಕಕ್ಕೆ ಸದ್ಯಕ್ಕಿಲ್ಲ ಕೇಂದ್ರದ ವಿಶೇಷ ಪ್ಯಾಕೇಜ್; ನಿರ್ಧಾರಕ್ಕೆ ಬರಲು ವಿಫಲವಾಯಿತು ಮೋದಿ ಸಂಪುಟ

ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ರಾಜ್ಯದ ಪ್ರವಾಹಕ್ಕೆ ಯಾವುದೇ ಪರಿಹಾರ ಘೋಷಣೆ ಮಾಡಿಲ್ಲ. ಇದರಿಂದ ಕೇಂದ್ರದ ಸಹಾಯ ಹಸ್ತದ ನಿರೀಕ್ಷಯಲ್ಲಿದ್ದ ಜನರಿಗೆ ನಿರಾಸೆ ಮೂಡಿದೆ

Seema.R
Updated:August 13, 2019, 4:24 PM IST
ನೆರೆಪೀಡಿತ ಕರ್ನಾಟಕಕ್ಕೆ ಸದ್ಯಕ್ಕಿಲ್ಲ ಕೇಂದ್ರದ ವಿಶೇಷ ಪ್ಯಾಕೇಜ್; ನಿರ್ಧಾರಕ್ಕೆ ಬರಲು ವಿಫಲವಾಯಿತು ಮೋದಿ ಸಂಪುಟ
ಬೆಳಗಾವಿ ಪ್ರವಾಹ
Seema.R
Updated: August 13, 2019, 4:24 PM IST
ನವದೆಹಲಿ(ಆ. 13): ಭೀಕರ ಪ್ರವಾಹಕ್ಕೆ ತುತ್ತಾಗಿರುವ ರಾಜ್ಯಕ್ಕೆ ಈಗ ನೆರವಿನ ಹಸ್ತ ಬೇಕಾಗಿದೆ. ಮುಕ್ಕಾಲು ಪಾಲು ರಾಜ್ಯ ಪ್ರವಾಹಕ್ಕೆ ತುತ್ತಾಗಿದ್ದು, ಜನರು ಮನೆ ಮಠ ಕಳೆದುಕೊಂಡು ಸಂತ್ರಸ್ತರ ಕೇಂದ್ರ ಸೇರಿದ್ದಾರೆ. ಅವರಿಗೆ ಪುನರ್ವಸತಿ ಕಲ್ಪಿಸುವ ಜೊತೆಗೆ ಹೊಸ ಬದುಕು ಕಟ್ಟಿಕೊಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ರಾಜ್ಯದಲ್ಲಿ ಈಗಾಗಲೇ ಮಳೆಗೆ 30 ಸಾವಿರ ಕೋಟಿ ಹಾನಿ ಸಂಭವಿಸಿದ್ದು, ಕೇಂದ್ರದಿಂದ ಮೊದಲ ಹಂತದಲ್ಲಿ 3000 ಕೋಟಿ  ಪರಿಹಾರ ನೀಡುವಂತೆ ರಾಜ್ಯ ಸರ್ಕಾರ ಕೋರಿದೆ.

ಭಾನುವಾರ ಪ್ರವಾಹ ಪರಿಶೀಲನೆ ನಡೆಸಿದ ಗೃಹ ಸಚಿವ ಅಮಿತ್​ ಷಾ ರಾಜ್ಯದ ಸ್ಥಿತಿಗತಿ ಅರಿತ ಅವರು ನೆರವಿಗೆ ಮುಂದಾಗುತ್ತಾರೆ ಎಂಬ ಭರವಸೆ ಮೂಡಿತು. ಅಲ್ಲದೇ  ಇಂದು ನಡೆಯುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ರಾಜ್ಯಕ್ಕೆ ವಿಶೇಷ ಪ್ಯಾಕೇಜ್​ ಘೋಷಣೆ ಮಾಡುವ ಭರವಸೆಯನ್ನು ರಾಜ್ಯ ಹೊಂದಿತ್ತು. ಆದರೆ, ಈ ಭರವಸೆ ಹುಸಿಕೊಂಡಿದೆ.

ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ರಾಜ್ಯದ ಪ್ರವಾಹಕ್ಕೆ ಯಾವುದೇ ಪರಿಹಾರ ಘೋಷಣೆ ಮಾಡಿಲ್ಲ. ಇದರಿಂದ ಕೇಂದ್ರದ ಸಹಾಯ ಹಸ್ತದ ನಿರೀಕ್ಷಯಲ್ಲಿದ್ದ ಜನರಿಗೆ ನಿರಾಸೆ ಮೂಡಿದೆ. ಸಂಪುಟ ಸಭೆಯಲ್ಲಿ ರಾಜ್ಯದ ಇಬ್ಬರು ಸಚಿರಿದ್ದರೂ ಕೂಡ ಪರಿಹಾರ ಕೊಡಿಸುವಲ್ಲಿ ವಿಫಲರಾಗಿದ್ದಾರೆ.

ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ, ರಾಜ್ಯದ ಪರಿಸ್ಥಿತಿ ಬಗ್ಗೆ ಪ್ರಧಾನಿ ಮಾಹಿತಿ ಪಡೆದಿದ್ದಾರೆ. ಜೊತೆ ಅಮಿತ್ ಶಾ, ನಿರ್ಮಲಾ ಸೀತಾರಾಮನ್​ರಿಂದಲೂ  ಮಾಹಿತಿ ಸಂಗ್ರಹಿಸಲಾಗಿದ್ದು, ಎಲ್ಲ ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದರು.

ಇದನ್ನು ಓದಿ: ನೆರೆ ವೀಕ್ಷಣೆಗೆ ಗೃಹ ಸಚಿವ ಅಮಿತ್ ಶಾ ಬಂದ್ರು ಹೋದ್ರು ಆದರೆ, ಪರಿಹಾರ ಮಾತ್ರ ಬರಲಿಲ್ಲ; ವಿ.ಎಸ್. ಉಗ್ರಪ್ಪ ಕಿಡಿ

ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಗೆ ಎನ್​ಡಿಆರ್​ಎಫ್​  ಸಿಬ್ಬಂದಿ ಕೆಲಸದ ಬಗ್ಗೆ ಮೋದಿ ಶ್ಲಾಘಸಿದ್ದಾರೆ. ಪ್ರವಾಹದಲ್ಲಿ ಸಿಲುಕಿರುವ ಜನ ಜಾನುವಾರುಗಳ ರಕ್ಷಣೆ ನಮ್ಮ ಮೊದಲ ಆದ್ಯತೆಯಾಗಿದೆ. ಸಿಎಂ ಯಡಿಯೂರಪ್ಪ ಉತ್ತಮ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಹಣಕಾಸಿನ ಸೌಲಭ್ಯ ಒದಗಿಸಿದ್ದು, ಇದರಿಂದ ಶೀಘ್ರವಾಗಿ ಪರಿಹಾರಕ್ಕೆ ಸ್ಪಂದಿಸಲಾಗುತ್ತಿದೆ.

ಮಳೆ‌ ಪ್ರಮಾಣ ತಗ್ಗಿದ ಮೇಲೆ‌ ರಾಜ್ಯಕ್ಕೆ ಕೇಂದ್ರ ಗೃಹ ಇಲಾಖೆಯಿಂದ ಸಮಿತಿ ಬರಲಿದೆ. ಬಳಿಕ ತಜ್ಞರ ವರದಿ ಪಡೆದು ಕೇಂದ್ರ ವಿಶೇಷ ಅನುದಾನ ನೀಡಲಿದೆ ಎಂದು ಭರವಸೆ ನೀಡಿದರು.

First published:August 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...