ನವದೆಹಲಿ(ಜ.25): ಕೇಂದ್ರ ಸರಕಾರ ಬುಧವಾರ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ಪ್ರಶಸ್ತಿ (Padma Awards) ಪುರಸ್ಕೃತರನ್ನು ಪ್ರಕಟಿಸಿದೆ. ಒಟ್ಟು 106 ಮಂದಿ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ನೀಡಲಾಗಿದೆ. ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಲಭಿಸಿದ್ದರೆ, ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ, ಸಾಹಿತಿ ಎಸ್ಎಲ್ ಬೈರಪ್ಪ ಅವರಿಗೆ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರಲ್ಲದೆ ಕರ್ನಾಟದ ಐವರು ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ದೊರೆತಿದೆ.
ಕೊಡಗಿನ ಉಮ್ಮತ್ತಾಟ್ ಜಾನಪದ ನೃತ್ಯದ ಮೂಲಕ ಕೊಡವ ಸಂಸ್ಕೃತಿಯನ್ನು ಪಸರಿಸಲು ಶ್ರಮಿಸಿದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷೆ ರಾಣಿ ಮಾಚಯ್ಯ , ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ ದಿಂದ ಡಾ. ಖಾದರ್ ವಲ್ಲಿ ದುಡೆ ಕುಲ್ಲಾ, ತಮಟೆಯ ತಂದೆಯೆಂದು ಪ್ರಖ್ಯಾತರಾದ ಚಿಕ್ಕಬಳ್ಳಾಪುರದ ಪಿಂಡಿ ಪಾಪನಹಳ್ಳಿ ಮುನಿವೆಂಕಟಪ್ಪ, ಬೀದರ್ನ ಕಲಾವಿದ ಷಾ ರಶೀದ್ ಅಹ್ಮದ್ ಖಾದ್ರಿ, ಪುರಾತತ್ವ ಶಾಸ್ತ್ರಜ್ಞ ಎಸ್.ಸುಬ್ಬರಾಮನ್ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಕರ್ನಾಟಕದ ಸಾಧಕರು. ಹೀಗೆ ಕರ್ನಾಟಕದ ಒಟ್ಟು ಎಂಟು ಮಂದಿಗೆ ಪದ್ಮ ಪ್ರಶಸ್ತಿ ಲಭಿಸಿದೆ.
ಇದನ್ನೂ ಓದಿ: Sree Padmanabhaswamy temple: ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಬಗ್ಗೆ ನಿಮಗೆ ಗೊತ್ತಿಲ್ಲದ ರಹಸ್ಯಗಳು!
ಆರು ಮಂದಿಗೆ ಪದ್ಮ ವಿಭೂಷಣ
ಕರ್ನಾಟಕದ ಹಿರಿಯ ನಾಯಕ ಎಸ್. ಎಂ ಕೃಷ್ಣ ಸೇರಿ ಒಟ್ಟು ಆರು ಮಂದಿಗೆ ಅತ್ಯುನ್ನತ ಪದ್ಮ ವಿಭೂಷಣ ಪ್ರಶಸ್ತಿ ಲಭಿಸಿದೆ. ಇಲ್ಲಿದೆ ನೋಡಿ ಪಟ್ಟಿ
ಹೆಸರು | ವಿಭಾಗ | ರಾಜ್ಯ |
ಶ್ರೀ ಬಾಲಕೃಷ್ಣ ದೋಷಿ(ಮರಣೋತ್ತರ) | ವಾಸ್ತುಶಿಲ್ಪ | ಗುಜರಾತ್ |
ಶ್ರೀ ಜಾಕಿರ್ ಹುಸೇನ್ | ಕಲೆ | ಮಹಾರಾಷ್ಟ್ರ |
ಶ್ರೀ ಎಸ್ ಎಂ ಕೃಷ್ಣ | ಸಾರ್ವಜನಿಕ ವ್ಯವಹಾರಗಳು | ಕರ್ನಾಟಕ |
ಶ್ರೀ ದಿಲೀಪ್ ಮಹಾಲನಬಿಸ್(ಮರಣೋತ್ತರ) | ಔಷಧ | ಪಶ್ಚಿಮ ಬಂಗಾಳ |
ಶ್ರೀ ಶ್ರೀನಿವಾಸ್ ವರಧನ್ | ವಿಜ್ಞಾನ ಮತ್ತು ಎಂಜಿನಿಯರಿಂಗ್ | ಯುನೈಟೆಡ್ ಸ್ಟೇಟ್ಸ್ ಆಫ್ಅಮೆರಿಕಾ |
ಶ್ರೀ ಮುಲಾಯಂ ಸಿಂಗ್ ಯಾದವ್(ಮರಣೋತ್ತರ) | ಸಾರ್ವಜನಿಕ ವ್ಯವಹಾರಗಳು | ಉತ್ತರ ಪ್ರದೇಶ |
ಕರ್ನಾಟಕದಿಂದ ಯಾರಿಗೆಲ್ಲಾ ಯಾವ ವಿಭಾಗದಲ್ಲಿ ಪ್ರಶಸ್ತಿ?
ಹೆಸರು | ವಿಭಾಗ | ಪ್ರಶಸ್ತಿ |
ಶ್ರೀ ಎಸ್ ಎಂ ಕೃಷ್ಣ | ಸಾರ್ವಜನಿಕ ವ್ಯವಹಾರಗಳು | ಪದ್ಮ ವಿಭೂಷಣ |
ಶ್ರೀ ಎಸ್ ಎಲ್ ಭೈರಪ್ಪ | ಸಾಹಿತ್ಯ ಮತ್ತು ಶಿಕ್ಷಣ | ಪದ್ಮಭೂಷಣ |
ಶ್ರೀಮತಿ ಸುಧಾ ಮೂರ್ತಿ | ಸಮಾಜಕಾರ್ಯ | ಪದ್ಮಭೂಷಣ |
ಶ್ರೀ ಖಾದರ್ ವಲ್ಲಿ ದೂಡೆಕುಲ | ವಿಜ್ಞಾನ | ಪದ್ಮಭೂಷಣ |
ಶ್ರೀಮತಿ ರಾಣಿ ಮಾಚಯ್ಯ | ಕಲೆ | ಪದ್ಮಶ್ರೀ |
ಶ್ರೀ ನಾಡೋಜ ಪಿಂಡಿಪಾಪನಹಳ್ಳಿಮುನಿವೆಂಕಟಪ್ಪ | ಕಲೆ | ಪದ್ಮಶ್ರೀ |
ಶ್ರೀ ಶಾ ರಶೀದ್ ಅಹ್ಮದ್ ಖಾದ್ರಿ | ಕಲೆ | ಪದ್ಮಶ್ರೀ |
ಶ್ರೀ ಎಸ್ ಸುಬ್ಬರಾಮನ್ | ಪುರಾತತ್ವ | ಪದ್ಮಶ್ರೀ |
ಕರ್ನಾಟಕದ ಎಸ್ಎಂ ಕೃಷ್ಣ (ಸಾರ್ವಜನಿಕ ವ್ಯವಹಾರಗಳು) , ಗುಜರಾತ್ನ ಬಾಲಕೃಷ್ಣ ದೋಶಿ, ಮಹಾರಾಷ್ಟ್ರದ ಕಲಾವಿದ ಜಾಕೀರ್ ಹುಸೇನ್ (ಕಲೆ), ಪಶ್ಚಿಮ ಬಂಗಾಳದ ವೈದ್ಯ (ಮರಣೋತ್ತರ) ದಿಲೀಪ್ ಮಹಲನಬೀಸ್, ಅಮೆರಿಕದಲ್ಲಿ ನೆಲೆಸಿರುವ ಶ್ರೀನಿವಾಸ ವರದಾನ್ (ವಿಜ್ಞಾನ ಮತ್ತು ತಂತ್ರಜ್ಞಾನ), ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ (ಮರಣೋತ್ತರ) ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ.
ಒಂಭತ್ತು ಗಣ್ಯರಿಗೆ ಪದ್ಮಭೂಷಣ
ಕರ್ನಾಟಕದ ಹಿರಿಯ ಸಾಹಿತಿ ಎಸ್ಎಲ್ ಭೈರಪ್ (ಸಾಹಿತ್ಯ ಮತ್ತಯ ಶಿಕ್ಷಣ), ಸುಧಾಮೂರ್ತಿ (ಸಮಾಜ ಸೇವೆ), ಮಹಾರಾಷ್ಟ್ರದ ಕುಮಾರ್ ಮಂಗಳಂ ಬಿರ್ಲಾ (ವ್ಯಾಪಾರ ಮತ್ತು ಉದ್ಯಮ), ದೀಪಕ್ ದಾರ (ವಿಜ್ಞಾನ ಮತ್ತು ತಂತ್ರಜ್ಞಾನ), ಸುಮನ್ ಕಲ್ಯಾಣ್ಪುರ( ಕಲೆ), ತಮಿಳುನಾಡಿನ ವಾಣಿ ಜೈರಾಮ್ (ಕಲೆ), ತೆಲಂಗಾಣದ ಸ್ವಾಮಿ ಚಿನ್ನಾ ಜೀಯರ್ (ಇತರೆ-ಆಧ್ಯಾತ್ಮಿಕತೆ), ದೆಹಲಿಯ ಕಪಿಲ್ ಕಪೂರ್ (ಸಾಹಿತ್ಯ ಮತ್ತು ಶಿಕ್ಷಣ), ತೆಲಂಗಾಣದ ಕಲ್ಮೇಶ್ ಡಿ ಪಟೇಲ್ (ಇತರೆ-ಆಧ್ಯಾತ್ಮಿಕತೆ) ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.
For 2023, the President has approved conferment of 106 Padma Awards incl 3 duo cases. The list comprises 6 Padma Vibhushan, 9 Padma Bhushan & 91 Padma Shri. 19 awardees are women & the list also includes 2 persons from category of Foreigners/NRI/PIO/OCI and 7 Posthumous awardees pic.twitter.com/Gl4t6NGSzs
— ANI (@ANI) January 25, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ