ಹಿಂದೆ ರಾಜ್ಯದಲ್ಲಿ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿದಿದ್ದಾಗ ಉಂಟಾದ ಗೊಂದಲಗಳಿಗೆ ಈಗ ಆಸ್ಪದವಿಲ್ಲ; ಡಿ.ವಿ. ಸದಾನಂದ ಗೌಡ

ಸಂಪುಟ ರಚನೆಗೆ ದಿನ ಒಂದೆರಡು ಹೆಚ್ಚು ಕಡಿಮೆ ಆದರೂ ಪರವಾಗಿಲ್ಲ, ಎಲ್ಲವೂ ಸರಿಯಾಗಿ ಆಗಬೇಕಷ್ಟೆ. ಬಿಜೆಪಿಯಲ್ಲಿ ಆಗಿನ ಹಾಗೂ ಈಗಿನ ಪರಿಸ್ಥಿತಿ ಬೇರೆಯೇ ಇದೆ. ಈಗ ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡುವ ವ್ಯವಸ್ಥೆ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಲಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದ್ದಾರೆ.

MAshok Kumar | news18-kannada
Updated:August 27, 2019, 3:11 PM IST
ಹಿಂದೆ ರಾಜ್ಯದಲ್ಲಿ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿದಿದ್ದಾಗ ಉಂಟಾದ ಗೊಂದಲಗಳಿಗೆ ಈಗ ಆಸ್ಪದವಿಲ್ಲ; ಡಿ.ವಿ. ಸದಾನಂದ ಗೌಡ
ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ
  • Share this:
ನವ ದೆಹಲಿ (ಆಗಸ್ಟ್27); ಹೈಕಮಾಂಡ್ ನಿರ್ದೇಶನದಂತೆ ಸಿಎಂ ಯಡಿಯೂರಪ್ಪ ಅಳೆದು ತೂಗಿ ಸಚಿವ ಸಂಪುಟವನ್ನು ವಿಸ್ತರಣೆ ಮಾಡಿ ಖಾತೆಯನ್ನು ಹಂಚಿದ್ದಾರೆ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿ ಇದ್ದಾಗ ಆದಂತಹ ಗೊಂದಲಕ್ಕೆ ಈಗ ಆಸ್ಪದವಿಲ್ಲ ಎಂದು ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ತಿಳಿಸಿದ್ದಾರೆ.

ಸಚಿವ ಸಂಪುಟ ರಚನೆಯಾದ ದಿನದಿಂದ ರಾಜ್ಯ ಬಿಜೆಪಿಯಲ್ಲಿ ಒಂದಲ್ಲಾ ಒಂದು ಅಸಮಾಧಾನದ ಹೊಗೆಯಾಡುತ್ತಲೇ ಇದೆ. ಇನ್ನೂ ಖಾತೆ ಹಂಚಿಕೆಯ ನಂತರ ಈ ಅಸಮಾಧಾನ ಮತ್ತೊಂದು ಹಂತಕ್ಕೆ ತಲುಪಿದೆ. ಆದರೆ, ಇದಕ್ಕೆ ತೇಪೆ ಹಚ್ಚುವ ಕಾರ್ಯ ಮಾತ್ರ ಹಿರಿಯ ನಾಯಕರಿಂದ ನಡೆಯುತ್ತಲೇ ಇದೆ. ಈ ಸರದಿಗೆ ಇದೀಗ ಹೊಸ ಸೇರ್ಪಡೆ ಎಂಬಂತೆ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡರು ಮುಂದಾಗಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದಿರುವ ಅಸಮಾಧಾನದ ಕುರಿತು ಇಂದು ದೆಹಲಿಯಲ್ಲಿ ಮಾತನಾಡಿರುವ ಡಿ.ವಿ. ಸದಾನಂದ ಗೌಡ, “ರಾಜ್ಯ ಬಿಜೆಪಿಯಲ್ಲಿ ಬಹಳಷ್ಟು ಜನ ಸಚಿವ ಸ್ಥಾನದ ಆಕಾಂಕ್ಷಿಗಳಿದ್ದಾರೆ. ಆದರೆ, ಯಾರನ್ನು ಸಚಿವರನ್ನಾಗಿ ಆಯ್ಕೆ ಮಾಡಬೇಕು ಎಂಬುದು ಸಿಎಂ ವಿವೇಚನಾಧಿಕಾರಕ್ಕೆ ಬಿಟ್ಟದ್ದು. ಅವರು ಹೈಕಮಾಂಡ್ ನಿರ್ದೇಶನದಂತೆ ಅಳೆದು ತೂಗಿ ಸಂಪುಟ ರಚನೆ ಮಾಡಿದ್ದಾರೆ. ಭವಿಷ್ಯದ ದೃಷ್ಟಿಯಿಂದ ಹಳಬರು ಮತ್ತು ಹೊಸಬರಿಗೆ ಸಾಮರ್ಥ್ಯ ನೋಡಿ ಅವಕಾಶ ನೀಡಲಾಗಿದೆ. ಈ ಸಚಿವ ಸಂಪುಟ ಹಳೆ ಬೇರು ಹೊಸ ಚಿಗುರಿನಂತಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಂಪುಟ ರಚನೆ ಹಾಗೂ ಖಾತೆ ಹಂಚಿಕೆ ತಡವಾಗಿರುವ ಕುರಿತು ಮಾತನಾಡಿರುವ ಅವರು, “ದಿನ ಒಂದೆರಡು ಹೆಚ್ಚು ಕಡಿಮೆ ಆದರೂ ಪರವಾಗಿಲ್ಲ, ಎಲ್ಲವೂ ಸರಿಯಾಗಿ ಆಗಬೇಕಷ್ಟೆ. ಬಿಜೆಪಿಯಲ್ಲಿ ಆಗಿನ ಹಾಗೂ ಈಗಿನ ಪರಿಸ್ಥಿತಿ ಬೇರೆಯೇ ಇದೆ. ಈಗ ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡುವ ವ್ಯವಸ್ಥೆ ಬಂದಿದೆ. ಹಿಂದೆ ನನ್ನನ್ನು ರೈಲ್ವೆ ಸಚಿವ ಸ್ಥಾನದಿಂದ ಬದಲಿಸಿದ್ದರು ನನಗಿಂತಲೂ ಸಮರ್ಥರಿದ್ದ ಕಾರಣಕ್ಕೆ ಬೇರೆಯವರಿಗೆ ಅವಕಾಶ ಕೊಟ್ಟರು. ಅದೇ ರೀತಿ ರಾಜ್ಯ ಸಚಿವ ಸಂಪುಟದಲ್ಲೂ ಸಾಮರ್ಥ್ಯ ನೋಡಿ ಅವಕಾಶ ನೀಡಲಾಗುತ್ತದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬೆನ್ನಿಗೆ ವಿವಾದ ಸೃಷ್ಟಿಸಿದ ಕಟೀಲ್; ಇವರು ಸುದ್ದಿಗೋಷ್ಠಿ ಮಾಡಲ್ಲ ಅಂದಿದ್ದಾದರೂ ಏಕೆ?

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:August 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading