Hubballi: ಕೇಂದ್ರದಿಂದ ಪಾಲಿಸ್ಟರ್ ಧ್ವಜಕ್ಕೆ ಅವಕಾಶ, ಮೇಕ್ ಇನ್ ಚೈನಾಗೆ ಮೋದಿ ಜಯಕಾರ; ನಲಪಾಡ್ ಆರೋಪ

ಮೇಕ್ ಇನ್‌ ಇಂಡಿಯಾ ಅಂತ ಸದಾ ಹೇಳುವ ನರೇಂದ್ರ ಮೋದಿ ಅವರು ಪಾಲಿಸ್ಟರ್ ಧ್ವಜಕ್ಕೆ ಅವಕಾಶ ಕಲ್ಪಿಸೋ ಮೂಲಕ, ಮೇಕ್ ಇನ್ ಚೈನಾಗೆ ಜಯಕಾರ ಹಾಕಿದ್ದಾರೆ ಅಂತ ನಲಪಾಡ್ ಆರೋಪಿಸಿದ್ದಾರೆ. ಇದರ ವಿರುದ್ಧ ಬೃಹತ್ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

 ಖಾದಿ ಗ್ರಾಮೋದ್ಯೋಗಕ್ಕೆ ನಲಪಾಡ್​ ಭೇಟಿ

ಖಾದಿ ಗ್ರಾಮೋದ್ಯೋಗಕ್ಕೆ ನಲಪಾಡ್​ ಭೇಟಿ

  • Share this:
ಹುಬ್ಬಳ್ಳಿ (ಜು 19)  ಹುಬ್ಬಳ್ಳಿಯ ಬೆಂಗೇರಿಯ ಖಾದಿ ಗ್ರಾಮೋದ್ಯೋಗದ (Village Industry) ಸ್ಥಿತಿ ಅಯೋಮಯವಾಗಲಾರಂಭಿಸಿದೆ. ಆಜಾದೀಕಾ ಅಮೃತ ಮಹೋತ್ಸವದೊಂದಿಗೆ ಅದರ ಬಲವರ್ಧನೆ ಆಗುತ್ತದೆ ಅಂದುಕೊಂಡವರಿಗೆ ಕೇಂದ್ರ ಸರ್ಕಾರದ ನಿರ್ಧಾರ ಆಘಾತ ತಂದಿದೆ. ಪಾಲಿಸ್ಟರ್ ರಾಷ್ಟ್ರ ಧ್ವಜಕ್ಕೆ (National Flag) ಅವಕಾಶ ನೀಡಿರೋದ್ರಿಂದ ಖಾದಿ ರಾಷ್ಟ್ರ ಧ್ವಜಕ್ಕೆ ಸಂಕಷ್ಟ ಎದುರಾಗಿದೆ. ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆ ವೇಳೆ ಎಂಟು ಕೋಟಿ ರೂಪಾಯಿಗೂ ಅಧಿಕ ಮೊತ್ತದ ಧ್ವಜಗಳ ಮಾರಾಟ ಆಗುತ್ತೆ ಅಂದುಕೊಂಡವರಿಗೆ ನಿರಾಸೆಯಾಗಿದ್ದು, ಕೇಂದ್ರದ ಧೋರಣೆಗೆ ಕಾಂಗ್ರೆಸ್ (Congress) ಖಂಡಿಸಿದೆ.

ಖಾದಿ ಗ್ರಾಮೋದ್ಯೋಗ ಮಹಮ್ಮದ್ ನಲ್ಪಾಡ್ ಭೇಟಿ

ಕೇಂದ್ರ ಸರ್ಕಾರದ ಧ್ವಜ ಸಂಹಿತೆ ತಿದ್ದುಪಡಿ ಹಿನ್ನಲೆಯಲ್ಲಿ ಹುಬ್ಬಳ್ಳಿಯ ಬೆಂಗೇರಿಯ ರಾಷ್ಟ್ರಧ್ವಜ ತಯಾರಕ ಘಟಕಕ್ಕೆ ಕಾಂಗ್ರೆಸ್ ಯುವ ಘಟಕದ ರಾಜ್ಯಾಧ್ಯಕ್ಷ ಮಹಮ್ಮದ್ ನಲ್ಪಾಡ್ ಭೇಟಿ ನೀಡಿದರು. ಖಾದಿ ಧ್ವಜ ಹೊಲಿಯುವ, ಧ್ವಜ ಇಸ್ತ್ರಿ ಮಾಡುವ, ಧ್ವಜದ ಮಧ್ಯದಲ್ಲಿನ ಚಕ್ರದ ಬಣ್ಣ ಹಚ್ಚುವ ಇತ್ಯಾದಿ ಪ್ರಕ್ರಿಯೆಗಳನ್ನು ಪರಿಶೀಲಿಸಿದರು. ಖಾದಿ ಗ್ರಾಮೋದ್ಯೋಗ ಅಧಿಕಾರಿಗಳು, ಸಿಬ್ಬಂದಿಯ ಜೊತೆ ಮಾತನಾಡಿದ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ನಲಪಾಡ್, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ ಮೇಕ್‌ ಇನ್ ಇಂಡಿಯಾ ಅಂತಾರೆ. ಆದ್ರೆ ರಾಷ್ಟ್ರಧ್ವಜ ವಿಚಾರದಲ್ಲಿ ಮೇಕ್ ಇನ್‌ ಚೀನಾ ಅಂತಾರೆ. ಪಾಲಿಸ್ಟರ್ ಧ್ವಜಕ್ಕೆ ಅವಕಾಶ ನೀಡುವ ಮೂಲಕ ಖಾದಿಗೆ ಅಪಮಾನ ಮಾಡಲಾಗುತ್ತಿದೆ.

ದೊಡ್ಡ ಅಸ್ತ್ರವಾಗಿದ್ದೇ ಖಾದಿ

ಬ್ರಿಟಿಷರನ್ನು ದೇಶದಿಂದ ಓಡಿಸಲು ದೊಡ್ಡ ಅಸ್ತ್ರವಾಗಿದ್ದೇ ಖಾದಿ. ಇದೇ ಖಾದಿಗೆ ಕೇಂದ್ರ ಸರ್ಕಾರದಿಂದ ದ್ರೋಹವಾಗುತ್ತಿದೆ. ಬೆಂಗೇರಿ ಖಾದಿ ಗ್ರಾಮೋದ್ಯೋಗ ರಾಷ್ಟ್ರ ಧ್ವಜ ತಯಾರಿಸೋ ದೇಶದ ಏಕೈಕ ಸಂಸ್ಥೆ. ದೇಶ - ವಿದೇಶಗಳಲ್ಲಿ ಹಾರಾಟ ಮಾಡೋ ಧ್ವಜಗಳು ಇಲ್ಲಿಯೇ ತಯಾರಿಸಲಾಗಿದೆ. ಹೀಗಿರುವಾಗ ಇದರ ಬಲವರ್ಧನೆ ಮಾಡೋದು ಬಿಟ್ಟು, ಪಾಲಿಸ್ಟರ್ ಗೆ ಅವಕಾಶ ನೀಡಿರೋದು ಸರಿಯಲ್ಲ.

ಇದನ್ನೂ ಓದಿ: Student Arrest: ಎಕ್ಸಾಂ ಮುಂದೂಡಲು ಬಾಂಬ್​ ಬೆದರಿಕೆ; ಅದೇ ಶಾಲೆಯ ಬಾಲಕ ಪೊಲೀಸ್​ ವಶಕ್ಕೆ

ಪಾಲಿಸ್ಟರ್ ಧ್ವಜ ಪರಿಸರ ಸ್ನೇಹಿ ಅಲ್ಲ

ಪಾಲಿಸ್ಟರ್ ಧ್ವಜ ಪರಿಸರ ಸ್ನೇಹಿ ಅಲ್ಲ. ನಮ್ಮ ರಾಷ್ಟ್ರ ಧ್ವಜವನ್ನ ನಮ್ಮ ದೇಶದಲ್ಲಿ ತಯಾರಿ‌ ಮಾಡದಿರೋದು ನಮಗೆ ದೊಡ್ಡ ಅಪಮಾನವಾಗಿದೆ. ನಮ್ಮ ಸಂಸ್ಕೃತಿ, ಪರಂಪರೆಗೆ ದಕ್ಕೆ ತಂದರೆ ಸುಮ್ಮನೆ ಇರುವುದಿಲ್ಲ. ಪಾಲಿಸ್ಟರ್‌ಗೆ ಅವಕಾಶ ನೀಡಿದ್ದರಿಂದ ಖಾದಿ ಗ್ರಾಮೋದ್ಯೋಗದಲ್ಲಿ ಸಿದ್ಧವಾದ ಧ್ವಜಗಳು ಹಾಗೆಯೇ ಉಳಿದಿವೆ‌. ಈ ಧ್ವಜಗಳನ್ನ ನಮ್ಮ ಕಾಂಗ್ರೆಸ್ ಪಕ್ಷ ಖರೀದಿ ಮಾಡಲಿದೆ.

ಇದನ್ನೂ ಓದಿ: Karnataka Politics: ಡಿಕೆಶಿ-HDK ದೋಸ್ತಿ, ಡಿಕೆಗಾಗಿ ಕಾದು ಕುಳಿತ ಕುಮಾರಣ್ಣ; ನೀವೇ ನನ್ನ ಬ್ರದರ್ ಎಂದ್ರು ಡಿಕೆ ಶಿವಕುಮಾರ್

ಖಾದಿ ಗ್ರಾಮೋದ್ಯೋಗ ಉಳಿಸಲು ಕಾಂಗ್ರೆಸ್​ ಹೊರಾಟ

ಅದಕ್ಕಿಂತಲೂ ಮುಖ್ಯವಾಗಿ ಖಾದಿ ಗ್ರಾಮೋದ್ಯೋಗ ಉಳಿಯಬೇಕಿದೆ. ಅದಕ್ಕಾಗಿ ಕಾಂಗ್ರೆಸ್ ಸಂಘಟಿತ ಹೋರಾಟ ಮಾಡುತ್ತದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಹ ಇಲ್ಲಿಗೆ ಭೇಟಿ ನೀಡುವವರಿದ್ದಾರೆ. ಯಾವುದೇ ಕಾರಣಕ್ಕೂ ಪಾಲಿಸ್ಟರ್ ಬಟ್ಟೆಗೆ ಅವಕಾಶ ನೀಡುವುದಿಲ್ಲ ಎಂದು ಮಹಮ್ಮದ್ ‌ನಲ್ಪಾಡ್ ಎಚ್ಚರಿಸಿದರು. ಇದರ ಹಿಂದೆ ಖಾದಿ ಗ್ರಾಮೋದ್ಯೋಗ ಸಂಸ್ಥೆ ಮುಚ್ಚಿ, ಬೇರೊಬ್ಬರಿಗೆ ಅನುಕೂಲ ಮಾಡಿಕೊಡೋ ಹುನ್ನಾರ ನಡೆದಿದ್ದು, ಇದರ ವಿರುದ್ಧ ನಿರಂತರ ಹೋರಾಟ ನಡೆಸುವುದಾಗಿ ತಿಳಿಸಿದರು. ಈ ವೇಳೆ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಇಮ್ರಾನ್ ಎಲಿಗಾರ ಮತ್ತಿತರರು ಉಪಸ್ಥಿತರಿದ್ದರು.
Published by:Pavana HS
First published: