• Home
  • »
  • News
  • »
  • state
  • »
  • Kannada Rajyotsava: ಬೆಳಗಾವಿಯಲ್ಲಿ ಕನ್ನಡ ಡಿಂಡಿಮ; ಕರಾಳ ದಿನ ಆಚರಿಸಲು ಬಂದ MESಗೆ ಮುಖಭಂಗ

Kannada Rajyotsava: ಬೆಳಗಾವಿಯಲ್ಲಿ ಕನ್ನಡ ಡಿಂಡಿಮ; ಕರಾಳ ದಿನ ಆಚರಿಸಲು ಬಂದ MESಗೆ ಮುಖಭಂಗ

ಕನ್ನಡ ರಾಜ್ಯೋತ್ಸವ ಸಡಗರ

ಕನ್ನಡ ರಾಜ್ಯೋತ್ಸವ ಸಡಗರ

ಬೆಳಗಾವಿಯಲ್ಲಿ ಮೆರವಣಿಗೆಯಲ್ಲಿ ಲಕ್ಷಾಂತರ ಜನ ಪಾಲ್ಗೊಂಡು ಹೊಸ ಇತಿಹಾಸವನ್ನು ಸೃಷ್ಠಿ ಮಾಡಿದ್ದಾರೆ. ಇನ್ನೂ ಸಂಭ್ರಮದ ವೇಳೆಯಲ್ಲಿ ಖ್ಯಾತೆ ತೆಗೆಯಲು ಯತ್ನಿಸಿದ ಎಂಇಎಸ್ ಗೆ ತೀವ್ರ ಮುಖಭಂಗವಾಗಿದೆ.

  • Share this:

ಬೆಳಗಾವಿ (ನ.01): ಬೆಳಗಾವಿಯಲ್ಲಿ (Belagavi) ಇಂದು ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ (Kannada Rajyotsava) ನಡೆಯಿತು. ಬೆಳಗ್ಗೆ 11 ಗಂಟೆಗೆ ಆರಂಭವಾದ ಮೆರವಣಿಗೆ ರಾತ್ರಿ 10 ಗಂಟೆಯ ವರೆಗೆ ನಡೆದಿದೆ. ರಾಣಿ ಚನ್ನಮ್ಮ ವೃತ್ತ ಸೇರಿ ನಗರದ ಬಹುತೇಕ ರಸ್ತೆಗಳಲ್ಲಿ ಕನ್ನಡ ಬಾವುಟ ಹಿಡಿದು ಯುವಕರು ಸಂಭ್ರಮಿಸಿದ್ರು. ಎಲ್ಲೆಲ್ಲೂ ಇಂದು ಕನ್ನಡವಾಗಿದ್ದು ಬೆಳಗಾವಿ, ಜತೆಗೆ ದಿ. ಪುನೀತ್ ರಾಜಕುಮಾರ್ (Puneeth Rajkumar) ಭಾವಚಿತ್ರ ಇರೋ ಬಾವುಟಗಳು ಹಾರಾಡಿದವು.


ಎಂಇಎಸ್​ಗೆ ತೀವ್ರ ಮುಖಭಂಗ


ಸತತ 11 ಗಂಟೆ ನಡೆದ ಮೆರವಣೆಯನ್ನು ಕೊನೆಗೆ ಪೊಲೀಸರು ಡಾಲ್ಬಿಗಳನ್ನು ಬಂದ್ ಮಾಡಿಸಿ ಯುವಕರ ಗುಂಪನ್ನು ಚದುರಿಸಿದ್ರು. ಬೆಳಗಾವಿಯಲ್ಲಿ ಮೆರವಣಿಗೆಯಲ್ಲಿ ಲಕ್ಷಾಂತರ ಜನ ಪಾಲ್ಗೊಂಡು ಹೊಸ ಇತಿಹಾಸವನ್ನು ಸೃಷ್ಠಿ ಮಾಡಿದ್ದಾರೆ. ಇನ್ನೂ ಸಂಭ್ರಮದ ವೇಳೆಯಲ್ಲಿ ಖ್ಯಾತೆ ತೆಗೆಯಲು ಯತ್ನಿಸಿದ ಎಂಇಎಸ್ ಗೆ ತೀವ್ರ ಮುಖಭಂಗವಾಗಿದೆ. ಹುಕ್ಕೇರಿ ಶ್ರೀಮಠ ಆಯೋಜನೆ ಮಾಡಿದ್ದ ಹೋಳಿಗೆ ಊಟದ ಆಯೋಜನೆಯಲ್ಲಿ 70 ಸಾವಿರಕ್ಕೂ ಹೆಚ್ಚು ಜನ ಊಟ ಮಾಡಿ ಸಂತೃಪ್ತರಾಗಿದ್ದಾರೆ.
ಅಪ್ಪು ಫೋಟೋ ಹಿಡಿದು ಬಂದ ಅಭಿಮಾನಿಗಳು


ಬೆಳಗಾವಿಯಲ್ಲಿ ಇಂದು ನಡೆದ ಕನ್ನಡ ರಾಜ್ಯೋತ್ಸವ ಒಂದು ಇತಿಹಾಸವನ್ನು ಸೃಷ್ಠಿ ಮಾಡಿದೆ. ಸತತ 11 ಗಂಟೆಗಳ ಕಾಲ ನಡೆದ ಭವ್ಯ ಮೆರವಣಿಗೆಯಲ್ಲಿ ಲಕ್ಷ ಲಕ್ಷೋಪಜನ ಪಾಲ್ಗೊಂಡು ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಮೆರವಣಿಗೆಯಲ್ಲಿ ಪಾಲ್ಗೊಂಡ ಜನರು ಅಪ್ಪು ಫೋಟೋ ಇರೋ ಬಾವುಟ ಹಿಡಿದು ಸಂಭ್ರಮಿಸಿದ್ರು.


ಕನ್ನಡದ ಹಾಡುಗಳಿಗೆ ಭರ್ಜರಿ ಡ್ಯಾನ್ಸ್​


ಅಷ್ಟೇ ಅಲ್ಲದೇ ಕನ್ನಡದ ಹಾಡುಗಳಿಗೆ ಹುಚ್ಚೆದ್ದು ಕುಣಿದು ಸಂಭ್ರಮಿಸಿದ್ರು. 100ಕ್ಕೂ ಹೆಚ್ಚು ರೂಪಕವಾಹನಗಳು ಭವ್ಯ ಮೆರವಣಿಗೆಯಲ್ಲಿ ಭಾಗಿಯಾಗಿದ್ದವು. ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮೆರವಣಿಗೆ ಕಾರ್ಯಕ್ಕೆ ಚಾಲನೆ ನೀಡಿದ್ರು. ಬಳಿಕ ಚನ್ನಮ್ಮ ವೃತ್ತದ ಸುತ್ತಮುತ್ತ ಲಕ್ಷಾಂತರ ಸಂಖ್ಯೆಯಲ್ಲಿ ಜನ ಸೇರಿದ್ದು, ಯಾರೊಬ್ಬರು ಒಳಗೆ ಬರಲು ಸಾಧ್ಯವಾಗಲಿಲ್ಲ.


ರಾಜ್ಯೋತ್ಸವದ ಸಂಭ್ರಮದ ಸಮಯದಲ್ಲಿ ಕ್ಯಾತೆ ತೆಗೆಯುವ ಎಂಇಎಸ್ ಇಂದು ಮತ್ತೊಂದು ಮುಖಭಂಗ ಆಗಿದೆ. ಇಂದು ಬೆಳಗ್ಗೆ 9 ಸಮಯದಲ್ಲಿ ಸಂಭಾಜಿ ಉದ್ಯಾನದಿಂದ ಎಂಇಎಸ್ ರ್‍ಯಾಲಿ ಆರಂಭಗೊಂಡಿತ್ತು. ಬಳಿಕ ಕಪಿಲೇಶ್ವರ ರಸ್ತೆ ಮಾರ್ಗಾವಾಗಿ ಶಹಾಪುರ ಬಡಾವನೆಯಿಂದ ಬಸವೇಶ್ವರ ವೃತ್ತದಿಂದ ಮರಾಠ ಮಂದಿರ ತಲುಪಿತು. ರ್‍ಯಾಲಿ ಉದ್ದಕ್ಕೂ ರಾಜ್ಯದ ವಿರೋಧಿ ಘೋಷಣೆಯನ್ನು ಎಂಇಎಸ್ ನಾಯಕರು ಹಾಕಿದ್ರು.


ಇದನ್ನೂ ಓದಿ: Skandagiri Hills: ಸ್ಕಂದಗಿರಿ ಬೆಟ್ಟಕ್ಕೆ ಹೋಗಲು ಪ್ಲಾನ್ ಮಾಡ್ತಿದ್ದೀರಾ? ಡಬಲ್ ಆಗಿದೆ ಪ್ರವೇಶ ಶುಲ್ಕ!


ಪೊಲೀಸರ ಜತೆಗೆ ಕಿರಿಕ್


ಇನ್ನೂ ಕರಾಳ ದಿನ ಆಚರಣೆಯಲ್ಲಿ ಪಾಲ್ಗೊಳ್ಳುವ ಭರವಸೆ ನೀಡಿದ್ದ ಶಿವಸೇನೆ ನಾಯಕರು ಕೈ ಕೊಟ್ಟಿದ್ದರು. ಕರ್ನಾಟಕ ಗಡಿ ಪ್ರವೇಶ ಮಾಡೊಕೆ ಕೆಲ ಶಿವಸೇನೆ ನಾಯಕರು ಹರಸಾಹಸ ಪಟ್ಟರು. ಆದರೇ ಬೆಳಗಾವಿಯ ಪೊಲೀಸರು ರಾಜ್ಯ ಪ್ರವೇಶ ನೀಡಲು ನಿರಾಕರಣೆ ಮಾಡಿದ್ರು. ಗಡಿ ಭಾಗದಲ್ಲಿ ಪೊಲೀಸರ ಜತೆಗೆ ಕಿರಿಕ್ ಮಾಡಿ ಮಾಡಿ ವಾಪಸ್ ಹೋದರು.


ಇದನ್ನೂ ಓದಿ: Conductor Death: ಚೆಕ್ಕಿಂಗ್​ ಇನ್ಸ್​ಪೆಕ್ಟರ್​ ಕಂಡು ಕಂಡಕ್ಟರ್​ಗೆ ಹಾರ್ಟ್​ ಅಟ್ಯಾಕ್; ಬಸ್‌ನಲ್ಲೇ ಹೋಯ್ತು ಪ್ರಾಣ!


ಅದ್ದೂರಿ ಕನ್ನಡ ರಾಜ್ಯೊತ್ಸವದಲ್ಲಿ ಪಾಲ್ಗೊಂಡ ಜನರಿಗೆ ಸರ್ದಾರ್​ ಹೈಸ್ಕೂಲ್ ಮೈದಾನದಲ್ಲಿ ಹುಕ್ಖೇರಿ ಶ್ರೀಮಠದ ವತಿಯಿಂದ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ಕಾರ್ಯಕ್ಕೆ ಸಚಿವ ಗೋವಿಂದ ಕಾರಜೋಳ, ನಟ ಸಾಯಿ ಕುಮಾರ ಚಾಲನೆ ನೀಡಿದ್ರು. ಸಂಜೆಯ ವೇಳೆ 70 ಸಾವಿರಕ್ಕೂ ಹೆಚ್ಚು ಜನ ಇಲ್ಲಿ ಊಟ ಮಾಡಿದ್ದಾರೆ. ಒಬ್ಬರಿಗೆ ಎರಡು ಹೋಳಿಗೆ ಅನ್ನ, ಸಾರು ಹಾಗೂ ಪಲ್ಯೆಯನ್ನು ನೀಡಲಾಯಿತು.

Published by:ಪಾವನ ಎಚ್ ಎಸ್
First published: