ಪೋಷಕರ ಸುದ್ದಿಗೋಷ್ಠಿ ಬಳಿಕ ಯುವತಿಯಿಂದ 5ನೇ ವಿಡಿಯೋ ಬಿಡುಗಡೆ; ಆಕೆ ಹೇಳಿದ್ದೇನು ಗೊತ್ತಾ?

ನನಗೆ ಏನೇನು ಅನ್ಯಾಯ ಮಾಡಿದ್ದಾರೆ ಎಲ್ಲವನ್ನೂ ಎಳೆಎಳೆಯಾಗಿ ಬಿಚ್ಚಿಡುತ್ತೇನೆ ಎಲ್ಲರ ಮುಂದೆನೂ. ನಾನು ನ್ಯಾಯಾಧೀಶರ ಮುಂದೆಯೇ ಬಂದು ಸ್ಟೆಂಟ್ ಮೆಂಟ್ ಕೊಡಬೇಕು ಅಂದುಕೊಂಡಿದ್ದೇನೆ. ನ್ಯಾಯಾಧೀಶರ ಮುಂದೆ ಬಂದು ಸ್ಟೆಂಟ್​ಮೆಂಟ್​ ಕೊಡಲು ಎಲ್ಲರೂ ನನಗೆ ಹೆಲ್ಪ್ ಮಾಡಬೇಕು ಎಂದು ನಾನು ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದ್ದಾರೆ.

ಸಿಡಿ ಯುವತಿ

ಸಿಡಿ ಯುವತಿ

 • Share this:
  ಬೆಂಗಳೂರು: ಸಿಡಿ ಪ್ರಕರಣ ಇಂದು ಸಾಕಷ್ಟು ತಿರುವುಗಳನ್ನು ಪಡೆದುಕೊಂಡಿದ್ದು, ರಾಜ್ಯದಲ್ಲಿ ಮಹತ್ವದ ಹಾಗೂ ಕುತೂಹಲಕಾರಿ ಬೆಳವಣಿಗೆಗಳು ಘಟಿಸಿವೆ. ಇಂದು ಬೆಳಗ್ಗೆ ಸಿಡಿ ಯುವತಿಯ ಪೋಷಕರು ಎಸ್​ಐಟಿ ಮುಂದೆ ಹಾಜರಾಗಿ ತನಿಖೆ ಮುಗಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಘಟನೆಗೆ ಡಿ.ಕೆ.ಶಿವಕುಮಾರ್ ಅವರೇ ನೇರ ಕಾರಣ ಎಂದು ಆರೋಪ ಮಾಡಿದ್ದರು. ಅದರ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಡಿಕೆಶಿ ವಿರುದ್ಧ ಏಕವಚನದಲ್ಲಿ ಹರಿಹಾಯ್ದಿದ್ದರು. ಇದಾದ ನಂತರ ಯುವತಿ ಮತ್ತೆ ಐದನೇ ವಿಡಿಯೋ ಬಿಡುಗಡೆ ಮಾಡಿದ್ದು, ನನ್ನ ತಂದೆ-ತಾಯಿ ಮುಗ್ಧರು. ಅವರಿಗೆ ಏನೇನು ಗೊತ್ತಿಲ್ಲ. ಅವರನ್ನು ಇಂದು ಕರೆಸಿಕೊಂಡು, ಹೀಗೆ ಹೇಳಿಕೆ ಕೊಡಿಸಿದ್ದಾರೆ ಎಂದು ಹೇಳಿದ್ದಾರೆ.

  ಇಂದು ರಾತ್ರಿ ಯುವತಿ 1.46 ನಿಮಿಷವುಳ್ಳ ಐದನೇ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಅವರು ಹೇಳಿದ ಯಥಾವತ್ ರೂಪ ಇಲ್ಲಿದೆ. "ಎಲ್ಲರಿಗೂ ನಮಸ್ಕಾರ. ಇವತ್ತು ಆಗಿರುವ ಬೆಳವಣಿಗೆ ನೋಡ್ತಾ ಇದ್ರೆ ನನಗೆ ಎಲ್ಲೋ ಒಂದು ಕಡೆ ಭಯ ಆಗ್ತಾ ಇದ್ದೆ. ನಮ್ಮ ಅಪ್ಪ- ಅಮ್ಮನಿಗೆ ಏನೂ ಗೊತ್ತೆ ಇಲ್ಲ. ಅಂಥವರನ್ನು ಇವರು ಅಷ್ಟು ಪ್ರಭಾವ ಬೀರಿ, ಅಷ್ಟು ಬ್ಲಾಕ್​ಮೇಲ್ ಮಾಡಿ, ಎಲ್ಲೋ ಇರಿಸಿ, ಅವರನ್ನು ಇವತ್ತು ಈಚೆಗೆ ಕರೆಸಿಕೊಂಡು ಏನೇನೋ ಹೇಳಿಸ್ತಾ ಇದ್ದಾರೆ. ಅವರಿಗೆ ಏನಾಗಿದೆ ಅಂತ ಗೊತ್ತಿಲ್ಲ. ಈ ಕೇಸಲ್ಲಿ ಅನ್ಯಾಯ ಆಗಿರೋದು ನನಗೆ. ಅನ್ಯಾಯ ಮಾಡಿರೋದು ಅವರಾಗಿರೋದ್ರಿಂದ ಅವರ ಮನೆಯವರನ್ನು ಕರೆದುಕೊಂಡು ಬಂದು ಯಾರೂ ವಿಚಾರಣೆ ಮಾಡ್ತಾ ಇಲ್ಲ. ನಮ್ಮ ಮನೆಯವರನ್ನು ಕರೆದುಕೊಂಡು ಹೋಗಿ  ಏನೇನೋ ವಿಚಾರಣೆ ಮಾಡಿ, ಏನೇನೋ ಹೆಸರು ಹೇಳಿಸಿಬಿಟ್ಟು, ಈ ಕೇಸನ್ನು ಬೇರೆ ರೀತಿ ಟರ್ನ್ ಮಾಡ್ತಾ ಇದ್ದಾರೆ. ಇಲ್ಲಿ ನ್ಯಾಯ ಸಿಗಬೇಕಿರುವುದು ನನಗೆ. ಫಸ್ಟ್ ನನ್ನ ಬಗ್ಗೆ ಮಾತನಾಡಬೇಕು. ಅದು ಬಿಟ್ಟು ಅವರ ಬಗ್ಗೆ ಇವರ ಬಗ್ಗೆ ಅದು ನನಗೆ ಬೇಕಿಲ್ಲ. ಅದು ಅವರ ಪರ್ಸನಲ್," ಎಂದು ಯುವತಿ ಹೇಳಿದ್ದಾರೆ.

  ಇದನ್ನು ಓದಿ: ಡಿಕೆಶಿ ಅವರೇ ಇದಕ್ಕೆಲ್ಲಾ ಕಾರಣ, ಅವರೇ ನಮ್ಮ ಮಗಳನ್ನು ಕರೆದುಕೊಂಡು ಹೋಗಿದ್ದಾರೆ; ಸಿಡಿ ಯುವತಿ ಪೋಷಕರ ಗಂಭೀರ ಆರೋಪ

  "ಈಗ ನಾನು ಅಲ್ಲಿಗೆ ಬಂದು ಹೇಳಿಕೆ ಕೊಡಬೇಕು ಅಂದರೆ ಭಯ ಆಗ್ತಾ ಇದೆ. ಇಷ್ಟು ಪ್ರಭಾವ ಬೀರಿ, ನಮ್ಮ ಅಪ್ಪ-ಅಮ್ಮನಿಗೆ ಏನೇನೋ ಹೇಳ್ಸಿ, ಇಷ್ಟೆಲ್ಲಾ ಕೇಸ್​ ಚೇಂಜ್ ಮಾಡ್ತಾ ಇರೋ ಇವರು, ನಾಳೆ ನಾನು ಅಲ್ಲಿಗೆ ಬಂದಾಗ ಸ್ಟೆಂಟ್ ಮೆಂಟ್ ಕೊಡುವಾಗ ಏನಾಗುತ್ತೋ ಏನೋ ಗೊತ್ತಿಲ್ಲ. ಅದಕ್ಕೆ ನಾನು ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ, ಗೃಹ ಸಚಿವ ಬೊಮ್ಮಾಯಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ರಮೇಶ್ ಕುಮಾರ್ ಅವರಿಗೆ ಇವರೆಲ್ಲರಿಗೂ ನಾನು ಕೇಳಿಕೊಳ್ಳುವುದು ಇಷ್ಟೇ, ನನಗೆ ಪ್ಲೀಸ್ ಮುಂದೆ ಬಂದು ಹೆಲ್ಪ್ ಮಾಡಿ. ನಾನು ಏನೇನು ಸ್ಟೇಟ್​ಮೆಂಟ್ ಇದೆಯೋ ಪ್ರತಿಯೊಂದನ್ನು ನೀಡುತ್ತೇನೆ. ಇವರು ನನಗೆ ಏನೇನು ಅನ್ಯಾಯ ಮಾಡಿದ್ದಾರೆ ಎಲ್ಲವನ್ನೂ ಎಳೆಎಳೆಯಾಗಿ ಬಿಚ್ಚಿಡುತ್ತೇನೆ ಎಲ್ಲರ ಮುಂದೆನೂ. ನಾನು ನ್ಯಾಯಾಧೀಶರ ಮುಂದೆಯೇ ಬಂದು ಸ್ಟೆಂಟ್ ಮೆಂಟ್ ಕೊಡಬೇಕು ಅಂದುಕೊಂಡಿದ್ದೇನೆ. ನ್ಯಾಯಾಧೀಶರ ಮುಂದೆ ಬಂದು ಸ್ಟೆಂಟ್​ಮೆಂಟ್​ ಕೊಡಲು ಎಲ್ಲರೂ ನನಗೆ ಹೆಲ್ಪ್ ಮಾಡಬೇಕು ಎಂದು ನಾನು ಕೇಳಿಕೊಳ್ಳುತ್ತೇನೆ," ಎಂದು ಮನವಿ ಮಾಡಿದ್ದಾರೆ.
  Published by:HR Ramesh
  First published: