• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Ramesh Jarkiholi: 120 ದಾಖಲೆ ಇದೆ, ರಿಲೀಸ್ ಮಾಡಲ್ಲ: ಡಿಕೆಶಿ ವಿರುದ್ಧ ಗುಡುಗುತ್ತಲೇ ಕಾಂಗ್ರೆಸ್​ನ 'ವಿಷ ಕನ್ಯೆ' ಬಗ್ಗೆ ಪ್ರಸ್ತಾಪಿಸಿದ ರಮೇಶ್ ಜಾರಕಿಹೊಳಿ!

Ramesh Jarkiholi: 120 ದಾಖಲೆ ಇದೆ, ರಿಲೀಸ್ ಮಾಡಲ್ಲ: ಡಿಕೆಶಿ ವಿರುದ್ಧ ಗುಡುಗುತ್ತಲೇ ಕಾಂಗ್ರೆಸ್​ನ 'ವಿಷ ಕನ್ಯೆ' ಬಗ್ಗೆ ಪ್ರಸ್ತಾಪಿಸಿದ ರಮೇಶ್ ಜಾರಕಿಹೊಳಿ!

ರಮೇಶ್ ಜಾರಕಿಹೊಳಿ

ರಮೇಶ್ ಜಾರಕಿಹೊಳಿ

ಡಿಕೆ ಶಿವಕುಮಾರ್ ರಾಜಕಾರಣಿ ಅನ್ನೋಕೆ ನಾಲಾಯಕರು. ವೈಯುಕ್ತಿಕವಾಗಿ ದಾಳಿ ಮಾಡಬಾರದು. ಷಡ್ಯಂತ್ರ ನಡೆಸಿ ಜೀವನ ಹಾಳು ಮಾಡಬಾರದು. ನನ್ನ ಬಳಿ 120 ಸಾಕ್ಷಿ ಇದೆ. ನಾನು ಅಷ್ಟು ಕೀಳು ಮಟ್ಟಕ್ಕೆ ಇಳಿಯುವುದಿಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

  • News18 Kannada
  • 4-MIN READ
  • Last Updated :
  • Belgaum, India
  • Share this:

ಬೆಳಗಾವಿ: ತಮ್ಮನ್ನು ಸಿ.ಡಿ ಪ್ರಕರಣದಲ್ಲಿ (CD Case) ಸಿಲುಕಿಸಿದ್ದೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (KPCC President DK Shivakumar) ಅಂಡ್​ ಕಂಪನಿ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಎಂದು ಆರೋಪಿಸಿದ್ದಾರೆ. ಅಲ್ಲದೆ, ಸಿ.ಡಿಯನ್ನು ಇಟ್ಟುಕೊಂಡು ನನಗೆ ಬ್ಲ್ಯಾಕ್​ ಮೇಲ್​ ಮಾಡಲು ಮುಂದಾಗಿದ್ದರು. ನಾನು ಅಂದು ಒಪ್ಪಿಕೊಂಡಿದ್ದರೆ ಸಿ.ಡಿ ಬಿಡುಗಡೆ ಆಗುತ್ತಿರಲಿಲ್ಲ ಎಂದು ಆರೋಪಿಸಿದ್ದಾರೆ. ಈ ಕುರಿತಂತೆ ಬೆಳಗಾವಿ (Belagavi) ಖಾಸಗಿ ಹೋಟೆಲ್​​ನಲ್ಲಿ ಸುದ್ದಿಗೋಷ್ಠಿ ನಡೆಸಿ ಸವಿವರವಾಗಿ ಮಾತನಾಡಿದ್ದಾರೆ. ನಾನು ಸಹಕಾರಿ ಸಚಿವನಾಗಿದ್ದ ವೇಳೆ ಶಾಂತಿನಗರ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ (Shanthinagar Housing Co Operative Society) ಕೇಸ್​ನಲ್ಲಿ ಫೈಲ್ ಕ್ಲೀಯರ್ ಮಾಡಲಿಲ್ಲ ಎಂದು ನನ್ನ ವಿರುದ್ಧ ಇಷ್ಟೆಲ್ಲಾ ಷಡ್ಯಂತರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.


ನನ್ನ ಬಳಿ 120 ಸಾಕ್ಷಿ ಇದೆ, ಎಲ್ಲವನ್ನೂ ಸಿಬಿಐ ಅಧಿಕಾರಿಗಳಿಗೆ ನೀಡುತ್ತೇನೆ


ಮಾಧ್ಯಮ ಸುದ್ದಿಗೋಷ್ಠಿಯಲ್ಲಿ ಆಡಿಯೋ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದ ಅವರು, ಯಾವುದೇ ಆಡಿಯೋ ಬಿಡುಗಡೆ ಮಾಡಲಿಲ್ಲ. ಆದರೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಾತನಾಡಿದ ರಮೇಶ್ ಜಾರಕಿಹೊಳಿ ಅವರು, ಡಿಕೆ ಶಿವಕುಮಾರ್ ರಾಜಕಾರಣಿ ಅನ್ನೋಕೆ ನಾಲಾಯಕರು. ವೈಯುಕ್ತಿಕವಾಗಿ ದಾಳಿ ಮಾಡಬಾರದು. ಷಡ್ಯಂತ್ರ ನಡೆಸಿ ಜೀವನ ಹಾಳು ಮಾಡಬಾರದು.


ಇದೇ ಮೊದಲ ಬಾರಿ ನಾನು ಅವರ ಮೇಲೆ ವೈಯುಕ್ತಿಕ ದಾಳಿ ನಡೆಸುತ್ತೇನೆ. ನನ್ನ ಬಳಿ 120 ಸಾಕ್ಷಿ ಇದೆ. ನಾನು ಅಷ್ಟು ಕೀಳು ಮಟ್ಟಕ್ಕೆ ಇಳಿಯುವುದಿಲ್ಲ, ಅಲ್ಲದೇ ಇದು ಕ್ರಿಮಿನಲ್ ಕೇಸ್​. ಹಾಗಾಗಿ ಸಾಕ್ಷಿ ಕೊಡುವುದಿಲ್ಲ. ಎಲ್ಲವನ್ನೂ ಅಧಿಕಾರಿಗಳಿಗೆ ನೀಡುತ್ತೇನೆ. ಈಗ ಒಂದು ಝಲಕ್ ಕೊಡುತ್ತೇನೆ.



ಸಿ.ಡಿ ಷಡ್ಯಂತರದಲ್ಲಿ ಡಿಕೆ ಶಿವಕುಮಾರ್ ಅಂಡ್ ಕಂಪನಿ


ನಾನು 1985ರಲ್ಲಿ ನಾನು ಹಾಗೂ ಡಿಕೆಶಿ ಒಟ್ಟಿಗೆ ರಾಜಕಾರಣಕ್ಕಿಳಿದಿದ್ದೆವು. ಅಂದು ಅವರು ಹರಿದ ಚಪ್ಪಲಿ ಹಾಕಿಕೊಂಡಿದ್ದರು. ಇಂದು ಅವರು ರಾಜ್ಯ ಲೂಟಿ ಮಾಡಿ ಹಗರಣ ನಡೆಸಿ ಆಗರ್ಭ ಶ್ರೀಮಂತ ಆಗಿದ್ದಾರೆ. ಇಂತಹ ಕುಕೃತ್ಯಗಳನ್ನು ನಡೆಸಿ ವರ್ಚಸ್ಸಿಗೆ ಧಕ್ಕೆಯುಂಟು ಮಾಡಿದ್ದಾರೆ.


ಇದನ್ನೂ ಓದಿ: Belagavi Politics: ಹಳೇ ದ್ವೇಷ, ಹೊಸ ಲೆಕ್ಕಾಚಾರ; ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಮಿಂಚಿನ ಸಂಚಾರ


ನನ್ನ ವಿರುದ್ಧ ಸಿ.ಡಿ ಷಡ್ಯಂತರದಲ್ಲಿ ಡಿಕೆ ಶಿವಕುಮಾರ್ ಅಂಡ್ ಕಂಪನಿ ಎಂದರೇ, ವಿಷಕನ್ಯೆ (ಯುವತಿ), ಯುವತಿ ಜೊತೆ ಇದ್ದ ಶ್ರವಣ್​, ನರೇಶ್​, ಕನಕಪುರ ಮೂಲದ ಗ್ರ್ಯಾನೇಟ್​ ಉದ್ಯಮಿ-ಆತನ ಚಾಲಕ, ಮಂಡ್ಯ ಮೂಲದ ಇಬ್ಬರು ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದಾರೆ. ಅವರನ್ನು ಬಂಧನ ಮಾಡಬೇಕು ಎಂದು ಒತ್ತಾಯ ಮಾಡಿದರು.




ಸಿ.ಡಿ ಬಿಡುಗಡೆಯಾದಾಗ ಡಿಕೆ ಶಿವಕುಮಾರ್ ಒಂದು ವಾರ ಆತಂಕದಲ್ಲಿದ್ದರು


ಉಷಾ ಡಿಕೆ ಶಿವಕುಮಾರ್​ ಅವರು ನನ್ನ ಬಳಿ ನಂದು ಪಾರ್ಟಿ ಬಿಡಬೇಡ ಎಂದು ಮನವಿ ಮಾಡಿದ್ದರು. ಆ ಬಳಿಕ ಸಿ.ಡಿ ಷಡ್ಯಂತರ ಮಾಡಿದ ಬಳಿಕ ನನ್ನ ಮಗ ಅಮರನಾಥ ಜಾರಕಿಹೊಳಿ ಅವರಿಗೆ ಭೇಟಿಯಾಗಿ ಬೆಳಗಾವಿ ನಾಯಕರೇ ಮಾಡಿದ್ದಾರೆ, ನಾನು ಏನು ಮಾಡಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದರು.


ಉನ್ನತ ಅಧಿಕಾರಿಗಳು, ನಾಯಕರ ವಿಡಿಯೋ ಮಾಡಿದ್ದಾರೆ


ಡಿ. ಕೆ. ಶಿವಕುಮಾರ್ ನನ್ನನ್ನು ಕೋಟಿ ಕೋಟಿ ಖರ್ಚು ಮಾಡಿ ಸಿಲುಕಿಸಿದ್ದಾರೆ. ಆದರೆ ನಾನು ಒಂದೂವರೆ ವರ್ಷದಿಂದ ಸೂಕ್ತ ಸಮಯಕ್ಕೆ ಕಾಯುತ್ತಿದ್ದೆ. ಹೇಗೆ ನನ್ನನ್ನು ಸಮಯ ನೋಡಿ ಸಿಲುಕಿಸಿದ್ದರುವ ಅದೇ ರೀತಿ ನಾನೂ ಒಂದು ಸರಿಯಾದ ಸಮಯಕ್ಕೆ ಕಾಯುತ್ತಿದ್ದೆ.


ಇಂದು ಚುನಾವಣೆ ಹತ್ತಿರವಿದೆ. ಈ ಸಮಯದಲ್ಲಿ ಅವರ ವಿರುದ್ಧ ನಾನು ಸಾಕ್ಷಿ ಕೊಡುತ್ತೇನೆ. ನೂರಾರು ಸಿ.ಡಿಗಳನ್ನು ಮಾಡಿದ್ದಾರೆ. ಇದರಲ್ಲಿ ಐಎಎಸ್ ಅಧಿಕಾರಿಗಳು ಸೇರಿದಂತೆ ಹಲವು ರಾಜಕಾರಣಿಗಳ ಸಿ.ಡಿಗಳನ್ನು ಮಾಡಿದ್ದಾರೆ. ಈ ಜಾಲದಲ್ಲಿ ಸಿಲುಕಿರುವ ಅಧಿಕಾರಿಗಳು ಭಯದಲ್ಲಿ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ಮಾಡಿದ್ದಾರೆ.


ಇದನ್ನೂ ಓದಿ: Ramesh Jarkiholi: ಲಕ್ಷ್ಮಿ ಹೆಬ್ಬಾಳ್ಕರ್ ಸೋಲಿಸಲು ಕರೆ ಕೊಟ್ಟ ರಮೇಶ್ ಜಾರಕಿಹೊಳಿ; ಸಾಹುಕಾರ್ ಹೊಸ ಸಂಕಲ್ಪ!


ತಪ್ಪು ಮಾಡಿದ್ರೆ ರುಂಡ ತೆಗೆದಿಡಲು ಸಿದ್ದ ಎಂದ ಸಾಹುಕಾರ್!


ಇಂದು ರಾಜ್ಯದಲ್ಲಿ ಜಾತಿ ಸಂಘರ್ಷ ನಡೆಯುತ್ತಿದೆ ಎಂದರೆ ಅದಕ್ಕೆ ಡಿಕೆಶಿ, ಹೆಬ್ಬಾಳ್ಕರ್ ಕಾರಣ. ತಪ್ಪು ಮಾಡಿದ್ರೆ ರುಂಡ ತೆಗೆದಿಡಲು ಸಿದ್ದ ಎಂದ ಸಾಹುಕಾರ್, ಡಿಕೆ ಶಿವಕುಮಾರ್ ಶುಗರ್ ಫ್ಯಾಕ್ಟರಿ ಪುರಾಣ ಬಿಚ್ಚಿಟ್ಟಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಹಣವನ್ನು ಸಕ್ಕರೆ ಕಾರ್ಖಾನೆ ಮೂಲಕ ಬ್ಯಾಂಕ್ ಹಣ ಡೈವರ್ಟ್​ ಮಾಡಿದ್ದಾರೆ.


ಕಪ್ಪು ಹಣವನ್ನು ಬಿಳಿ ಮಾಡಿದ್ದಾರೆ. ಸಿಡಿ ಮೂಲಕ ಅಧಿಕಾರಿಗಳ ಬ್ಲ್ಯಾಕ್​ಮೇಲ್ ಮಾಡಿದ್ದಾರೆ. ಸಿಡಿ ಬಿಡುಗಡೆ ಮೊದಲು ನನಗೆ ಅನೇಕ ಶರತ್ತು‌ ವಿಧಿಸಿದ್ದರು. ನಾನು ಷರತ್ತಿಗೆ ಒಪ್ಪಿದ್ರೆ ಸಿಡಿ ರಿಲೀಸ್ ಆಗುತ್ತಿರಲಿಲ್ಲ. ಸಿಬಿಐ ಅಧಿಕಾರಿಗಳು ಡಿಕೆ ಶಿವಕುಮಾರ್​​ನನ್ನು  ಬಂಧಿಸಬೇಕು. ಸಕ್ಕರೆ ಕಾರ್ಖಾನೆ ಅವ್ಯವಹಾರದ ತನಿಖೆ ಇಡಿ, ಸಿಐಬಿ ವಹಿಸಬೇಕು ಎಂದೂ ಆಗ್ರಹಿಸಿದ್ದಾರೆ.


hindu organizations demand to clearance fatima masque blames its illegal construction mrq
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್


ನನ್ನ ವಿರುದ್ಧ ಆಡಿಯೋ ಬಿಡುಗಡೆಯಾದ್ರೆ ಲಕ್ಷ್ಮಿ ಹೆಬ್ಬಾಳ್ಕರ್, ಡಿಕೆಶಿಯೇ ಕಾರಣ


ಕಿತ್ತೂರಿ ರಾಣಿ ಚೆನ್ನಮ್ಮ ಕುರಿತಂತೆ ಅವಹೇಳನಕಾರಿ ಹೇಳಿಕೆ ಕುರಿತಂತೆ ಆಡಿಯೋ ಬಿಡುಗಡೆ ಕೂಡ ಮಾಡುತ್ತಾರೆ. ಆದರೆ ನಾನು ಈ ಮಾತನ್ನು ಅಂದಿದ್ದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಬಗ್ಗೆ, ಏಕೆಂದರೆ ಅವರು ಸದನದಲ್ಲಿ ತಾವು ರಾಣಿ ಚೆನ್ನಮ್ಮನ ವಂಶಸ್ಥರು ಎಂದು ಹೇಳಿಕೊಂಡಿದ್ದರು. ಆಗ ನಾನು ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದೆ. ಒಂದೊಮ್ಮೆ ಈ ಬಗ್ಗೆ ಆಡಿಯೋ ಬಿಡುಗಡೆಯಾದರೆ ನನ್ನನ್ನು ರಾಜ್ಯದ ಜನತೆ ತಪ್ಪಾಗಿ ತಿಳಿದುಕೊಳ್ಳಬಾರದು, ರಾಜ್ಯದಲ್ಲಿ ಜಾರಿ ಸಂಘರ್ಷ ಉಂಟಾದರೆ ಈ ಇಬ್ಬರೇ ಕಾರಣ ಎಂದು ತಿಳಿಸಿದರು.


ಸಿ.ಡಿ ಕೇಸ್​ನ ಯುವತಿ ಡಿಕೆ ಶಿವಕುಮಾರ್ ಅವರ ಕೃಪೆಯಲ್ಲಿ ಕಾಂಗ್ರೆಸ್​ ಪದಾಧಿಕಾರಿಯ ಮನೆಯಲ್ಲಿ ಇಟ್ಟಿದ್ದಾರೆ. ಆಕೆಯನ್ನು ಬಂಧನ ಮಾಡಿದರೆ ಎಲ್ಲವೂ ಹೊರಕ್ಕೆ ಬರುತ್ತದೆ ಎಂದರು. ಸುದ್ದಿಗೋಷ್ಠಿಯ ಅಂತ್ಯದವರೆಗೂ ಲಕ್ಷ್ಮಿ ಹೆಬ್ಬಾಳ್ಕರ್ ಹೆಸರು ಪ್ರಸ್ತಾಪ ಮಾಡದ ರಮೇಶ್ ಜಾರಕಿಹೊಳಿ, ನಾನು ಕಾಂಗ್ರೆಸ್ ಪಕ್ಷ ಬಿಡಲು ಆ ವಿಷಕನ್ಯೆಯೇ ಕಾರಣ. ಆಕೆಯಿಂದಲೇ ಕಾಂಗ್ರೆಸ್ ಪಕ್ಷ ಹಾಳಾಗಿದೆ. ಬೆಳಗಾವಿ ಗ್ರಾಮಾಂತರ ಶಾಸಕಿ, ವಿಷಕನ್ಯೆ ಎಂದು ಆರೋಪಿಸುತ್ತಿದ್ದ ಅವರು ಕೊನೆಗೆ ಹೆಬ್ಬಾಳ್ಕರ್ ಅವರ ಹೆಸರು ಹೇಳಿ, ಸಕ್ಕರೆ ಕಾರ್ಖಾನೆಯಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ಆಗಿದೆ. ಕಾಂಗ್ರೆಸ್ ಪಕ್ಷ ಇವರಿಂದಲೇ ಹಾಳಾಗಿದೆ ಎಂದು ಆರೋಪಿಸಿದ್ದಾರೆ.

Published by:Sumanth SN
First published: