HOME » NEWS » State » CCTV CAMERAS ARE NOT WORKING IN PUTTUR NEAR MANGALORE AKP HK

ಉಪಯೋಗಕ್ಕಿಲ್ಲದ ಸಿಸಿ ಟಿವಿ ಕ್ಯಾಮೆರಾಗಳು: ಅಪರಾಧ ಕೃತ್ಯಗಳ ಪತ್ತೆಗೆ ತೊಂದರೆ

ಪುತ್ತೂರು ನಗರದಲ್ಲಿ ಸುಮಾರು 60 ಕಡೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಈಗಾಗಲೇ ಆಳವಡಿಸಲಾಗಿದೆ. ಇವುಗಳಲ್ಲಿ 46 ಸಿಸಿ ಕ್ಯಾಮೆರಾಗಳನ್ನು ಪುತ್ತೂರು ನಗರಸಭೆ, ಪೋಲೀಸ್ ಇಲಾಖೆ ಅನುದಾನದಲ್ಲಿ ಅಳವಡಿಸಲಾಗಿದೆ


Updated:December 16, 2020, 7:07 AM IST
ಉಪಯೋಗಕ್ಕಿಲ್ಲದ ಸಿಸಿ ಟಿವಿ ಕ್ಯಾಮೆರಾಗಳು: ಅಪರಾಧ ಕೃತ್ಯಗಳ ಪತ್ತೆಗೆ ತೊಂದರೆ
ಹಾಳಾಗಿರುವ ಸಿಸಿಟಿವಿ ಕ್ಯಾಮೆರಾಗಳು
  • Share this:
ಪುತ್ತೂರು(ಡಿಸೆಂಬರ್​.16): ನಗರ ಪ್ರದೇಶವಾಗಿ ಬೆಳೆಯುತ್ತಿರುವ ಪುತ್ತೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ, ಕಳ್ಳತನ ಪ್ರಕರಣಗಳೂ ಹೆಚ್ಚಾಗಲಾರಂಭಿಸಿದೆ. ಹಾಡುಹಗಲೇ ಕಾರುಗಳ ಕಳ್ಳತನ ಸೇರಿದಂತೆ ಹಲವು ಅಪರಾಧ ಕೃತ್ಯಗಳು ನಡೆಯುತ್ತಿದ್ದರೂ, ಕಳ್ಳರನ್ನು ಪತ್ತೆ ಹಚ್ಚಲು ಮಾತ್ರ ಪೋಲೀಸರು ವಿಫಲರಾಗುತ್ತಿದ್ದಾರೆ. ಇಂಥಹ ಅಪರಾಧ ಕೃತ್ಯಗಳ ತಡೆಗೆಂದೇ ಪುತ್ತೂರು ನಗರದ ಸುತ್ತಮತ್ತ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದರೂ, ಅವುಗಳಲ್ಲಿ ಹಲವು ಇದೀಗ ಸರಿಯಾಗಿ ಕಾರ್ಯಾಚರಿಸುತ್ತಿಲ್ಲ. ಈ ಹಿನ್ನಲೆಯಲ್ಲಿ ಪುತ್ತೂರು ನಗರದಾದ್ಯಂತ ಸಿಸಿ ಕ್ಯಾಮೆರಾ ಅಳವಡಿಸಲು ತೀರ್ಮಾನಿಸಲಾಗಿದ್ದು, ಕಳ್ಳತನ, ಹಿಟ್ ಅಂಡ್ ರನ್ ಪ್ರಕರಣಗಳನ್ನು ಪತ್ತೆ ಹಚ್ಚಲು ಮುಂದಿನ ದಿನಗಳಲ್ಲಿ ಇದು ಸಹಕಾರಿಯಾಗಲಿದೆ. ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರನ್ನು ಹೊರತುಪಡಿಸಿದರೆ, ಪುತ್ತೂರು ಎರಡನೇ ದೊಡ್ಡ ನಗರವಾಗಿ ಬೆಳೆಯುತ್ತಿದೆ. ನಗರವಾಗಿ ಬೆಳೆಯುತ್ತಿದ್ದಂತೆ ಅಪರಾಧ ಕೃತ್ಯಗಳೂ ಈ ಭಾಗದಲ್ಲಿ ಹೆಚ್ಚೆಚ್ಚು ಸಂಭವಿಸುತ್ತಿದೆ.  ಅದರಲ್ಲೂ ಕಳ್ಳತನ, ವಾಹನಗಳ ಹಿಟ್ ಅಂಡ್ ರನ್ ಪ್ರಕರಣಗಳು ಹೆಚ್ಚಾಗುತ್ತಿವೆ.

ಇಂಥಹ ಕೃತ್ಯಗಳು ಸಂಭವಿಸಿದ ತಕ್ಷಣವೇ ಆರೋಪಿಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗುವ ಸಿಸಿ ಕ್ಯಾಮೆರಾಗಳನ್ನು ಪುತ್ತೂರು ನಗರದಾದ್ಯಂತ ಅಳವಡಿಸಲಾಗಿದೆ. ಆದರೆ ಈ ಕ್ಯಾಮರಾಗಳಲ್ಲಿ ಕೆಲವು ಮಾತ್ರವೇ ಕಾರ್ಯಾಚರಿಸುತ್ತಿದೆ. ಸರಿಯಾದ ನಿರ್ವಹಣೆಯಿಲ್ಲದ ಕಾರಣ ಸಿಸಿ ಕ್ಯಾಮೆರಾಗಳು ಇದ್ದೂ, ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ.

ತಿಂಗಳಿನಿಂದೀಚೆಗೆ ಪುತ್ತೂರು ನಗರದಲ್ಲಿ ಹಾಡುಹಗಲೇ ನಾಲ್ಕು ಕಾರುಗಳನ್ನು ಕದೀಮರು ಲಪಟಾಯಿಸಿದ್ದಾರೆ. ಕಾರು ಕಳುವಾದ ಪ್ರದೇಶಗಳೂ ನಗರದ ಮಧ್ಯದಲ್ಲೇ ಇದ್ದರೂ, ಸರಿಯಾದ ಸಿಸಿ ಕ್ಯಾಮೆರಾ ಇಲ್ಲದ ಕಾರಣ ಕಳ್ಳರನ್ನು ಪತ್ತೆಹಚ್ಚುವುದು ಪೋಲೀಸರಿಗೆ ಹರ ಸಾಹಸವಾಗಿ ಪರಿಣಮಿಸಿದೆ. ಅಲ್ಲದೆ ರಾಜ್ಯ ಹೆದ್ದಾರಿಗಳಲ್ಲಿಯೂ ರಾತ್ರಿ ಹೊತ್ತಿನಲ್ಲಿ ಕೆಲವು ಆಯಕಟ್ಟಿನ ಸ್ಥಳಗಳಲ್ಲಿ ಅಪರಿಚಿತ ವಾಹನಗಳು ದ್ವಿಚಕ್ರ ವಾಹನ ಹಾಗೂ ಲಘು ವಾಹನಗಳಿಗೆ ಹಿಟ್ ಅಂಡ್ ರನ್ ಮಾಡಿ ಪಲಾಯನ ಮಾಡುವ ಘಟನೆಗಳೂ ಹೆಚ್ಚಾಗುತ್ತಿವೆ. ಆದರೆ ಈ ಕಡೆಗಳಲ್ಲೂ ಸಿಸಿ ಕ್ಯಾಮೆರಾಗಳು ಇಲ್ಲದ ಕಾರಣ ಇಂಥಹ ಪ್ರಕರಣಗಳನ್ನೂ ಪತ್ತೆಹಚ್ಚುವುದು ಕಷ್ಟಸಾಧ್ಯವಾಗುತ್ತಿದೆ. ಈ ಹಿನ್ನಲೆಯಲ್ಲಿ ಇಂಥಹ ಆಯಕಟ್ಟಿನ ಪ್ರದೇಶಗಳು ಸೇರಿದಂತೆ ಪುತ್ತೂರು ನಗರದೆಲ್ಲಡೆ ಖಾಸಗಿ ಸಹಭಾಗಿತ್ವ ಸೇರಿದಂತೆ ಸರಕಾರಿ ವೆಚ್ಚದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ತೀರ್ಮಾನಿಸಲಾಗಿದೆ.

ಇದನ್ನೂ ಓದಿ: ಕೊರೋನಾ ಎಫೆಕ್ಟ್ ಈ ವರ್ಷ ಬೇಸಿಗೆ ರಜೆ ಅನುಮಾನ ; ಜನವರಿಯಲ್ಲಿ SSLC, PUC ತರಗತಿ ಆರಂಭ ಸಾಧ್ಯತೆ..!

ಪುತ್ತೂರು ನಗರದಲ್ಲಿ ಸುಮಾರು 60 ಕಡೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಈಗಾಗಲೇ ಆಳವಡಿಸಲಾಗಿದೆ. ಇವುಗಳಲ್ಲಿ 46 ಸಿಸಿ ಕ್ಯಾಮೆರಾಗಳನ್ನು ಪುತ್ತೂರು ನಗರಸಭೆ, ಪೋಲೀಸ್ ಇಲಾಖೆ ಅನುದಾನದಲ್ಲಿ ಅಳವಡಿಸಲಾಗಿದೆ. 14 ಸಿಸಿ ಕ್ಯಾಮೆರಾಗಳು ಖಾಸಗಿಯವರ ಸಹಕಾರದಲ್ಲಿ ಅಳವಡಿಸಲಾಗಿದೆ. ಆದರೆ ಈ ಇರುವ ಸಿಸಿ ಕ್ಯಾಮೆರಾಗಳಲ್ಲಿ ಅರ್ಧದಷ್ಟು ಸರಿಯಾಗಿ ಕಾರ್ಯಾಚರಿಸುತ್ತಿಲ್ಲ.
Youtube Video

ಅದರಲ್ಲೂ ಖಾಸಗಿ ಸಹಭಾಗಿತ್ವದಲ್ಲಿ ಅಳವಡಿಕೆಯಾದ ಸಿಸಿ ಕ್ಯಾಮೆರಾಗಳನ್ನು ಸರಿಯಾಗಿ ನಿರ್ವಹಣೆಯಿಲ್ಲದೆ ಅನುಪಯುಕ್ತವಾಗಿದೆ. ಅಲ್ಲದೆ ಪುತ್ತೂರು ನಗರದಲ್ಲಿ ನೈರ್ಮಲ್ಯೀಕರಣವನ್ನು ಕಾಪಾಡುವ ಉದ್ಧೇಶಕ್ಕೂ ಸಿಸಿ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ. ನಿಷೇಧಿತ ಪ್ರದೇಶಗಳಲ್ಲಿ ತ್ಯಾಜ್ಯಗಳನ್ನು ಹಾಕುವವರ ವಿರುದ್ಧವೂ ಇದೇ ಸಿಸಿ ಕ್ಯಾಮೆರಾದ ಮೂಲಕ ಕ್ರಮ ತೆಗೆದೊಳ್ಳಲಾಗುತ್ತದೆ.
Published by: G Hareeshkumar
First published: December 16, 2020, 7:07 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories