ಬೆಂಗಳೂರು (ಸೆಪ್ಟೆಂಬರ್ 4): ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ವಿಚಾರ ಹೊತ್ತುರಿಯುತ್ತಿದೆ. ಸಾಕಷ್ಟು ನಟ-ನಟಿಯರ ಹೆಸರು ಕೇಳಿ ಬರುತ್ತಿದ್ದು, ಎಲ್ಲರಿಗೂ ಸಿಸಿಬಿ ಪೊಲೀಸರು ನೋಟಿಸ್ ನೀಡುತ್ತಿದ್ದಾರೆ. ಇನ್ನು, ಡ್ರಗ್ಸ್ ಜಾಲದ ನಂಟು ಹೊಂದುರು ಆರೋಪ ಇರುವ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ನಟಿ ರಾಗಿಣಿ ದ್ವಿವೇಣಿಗೆ ನೋಟಿಸ್ ನೀಡಿದ್ದರು. ಆದರೆ, ರಾಗಿಣಿ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸ್ ಇಲಾಖೆಯ ನಾರ್ಕೋಟಿಸ್ ವಿಭಾಗದ ಅಧಿಕಾರಿಗಳು ಇಂದು ಮುಂಜಾನೆಯೇ ಅವರ ಮನೆಯ ಮೇಲೆ ದಾಳಿ ನಡೆಸಿದ್ದಾರೆ. 3 ಗಂಟೆಗೂ ಅಧಿಕ ಕಾಲ ಶೋಧ ಕಾರ್ಯ ನಡೆಸಿದ್ದು, ಈಗ ರಾಗಿಣಿಯನ್ನು ಸಿಸಿಬಿ ಕಚೇರಿಗೆ ಕರೆದೊಯ್ಯಲು ಮುಂದಾಗಿದ್ದಾರೆ.
ನಟಿ ರಾಗಿಣಿ ಅನನ್ಯ ಅಪಾರ್ಟ್ಮೆಂಟ್ನಲ್ಲಿ ಎರಡು ಫ್ಲ್ಯಾಟ್ ಹೊಂದಿದ್ದಾರೆ. ವಾಸಕ್ಕೆ ಒಂದು ಫ್ಲ್ಯಾಟ್ ಇದ್ದರೆ, ಅದಕ್ಕೆ ತಾಗಿಕೊಂಡು ಮತ್ತೊಂದು ಫ್ಲ್ಯಾಟ್ ಇದೆ. ಎರಡು ಫ್ಲ್ಯಾಟ್ನಲ್ಲೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಇನ್ಸ್ಪೆಕ್ಟರ್ ಅಂಜುಮಾಲ ಸೇರಿದಂತೆ ಇಬ್ಬರು ಮಹಿಳಾ ಇನ್ಸ್ಪೆಕ್ಟರ್ಗಳು ರಾಗಿಣಿ ವಾಸದ ಕೊಠಡಿಯಲ್ಲಿ ಪರಿಶೀಲನೆ ಮಾಡಿದ್ದಾರೆ. ಈಗಾಗಲೇ ಎರಡು ಬ್ಯಾಗ್ಗಳಲ್ಲಿ ಕೆಲ ದಾಖಲೆಗಳನ್ನು ಅಧಿಕಾರಿಗಳು ಪಡೆದುಕೊಂಡಿದ್ದಾರೆ.
ಇನ್ನು, ರಾಗಿಣಿ ಇಂದಿರಾನಗರದ ಮನೆ ಮೇಲೂ ಸಿಸಿಬಿ ದಾಳಿ ನಡೆಸಿದೆ. ಅಲ್ಲಿಯೂ ಪರಿಶೀಲನೆ ನಡೆದಿದೆ. ಈಗ ವಿಚಾರಣೆ ಪೂರ್ಣಗೊಳ್ಳುವ ಹಂತಕ್ಕೆ ಬಂದು ನಿಂತಿದ್ದು, ಶೀಘ್ರವೇ ಅವರು ಸಿಸಿಬಿ ಕಚೇರಿಗೆ ತೆರಳಲಿದ್ದಾರೆ.
ವಶಕ್ಕೆ ಪಡೆಯುತ್ತಿಲ್ಲ:
ರಾಗಿಣಿಯ ನಾಲ್ಕು ಮೊಬೈಲ್ ಜಪ್ತಿ ಮಾಡಲಾಗಿದೆ. ಮನೆಯಲ್ಲಿ ಯಾವುದೆ ಡ್ರಗ್ ಪತ್ತೆ ಯಾಗಿಲ್ಲ. ಹೀಗಾಗಿ ರಾಗಿಣಿ ಅವರನ್ನು ವಶಕ್ಕೆ ಪಡೆಯುತ್ತಿಲ್ಲ ಎಂದು ಸಿಸಿಬಿ ಡಿಸಿಪಿ ರವಿಕುಮಾರ್ ಸ್ಟಷ್ಟನೆ ನೀಡಿದ್ದಾರೆ.
ಡ್ರಗ್ ಜಾಲದಲ್ಲಿ ಬಂಧಿತನಾಗಿರುವ ರವಿಶಂಕರ್ ಮೂಲತಃ ಆರ್ಟಿಓ ಅಧಿಕಾರಿ. ಈತನ ತಂದೆ ಕೆಲಸದಲ್ಲಿರುವಾಗಲೇ ಮೃತಪಟ್ಟ ಕಾರಣ ಈತನಿಗೆ ಆ ಕೆಲಸ ಸಿಕ್ಕಿತ್ತು. ಈತನ ತಿಂಗಳ ಸಂಬಳ 30 ರಿಂದ 35 ಸಾವಿರ ರೂಪಾಯಿ. ಆದರೆ, ಈತ ಪೊಲೀಸ್ ವಿಚಾರಣೆಯ ವೇಳೆ, "ನಾನು ರಾಗಿಣಿ ಜೊತೆ ಲಿವ್ ಇನ್ ಸಂಬಂಧದಲ್ಲಿದ್ದೇನೆ. ಆಕೆಗೆ ಒಂದು ದಿನಕ್ಕೆ 1 ಲಕ್ಷ ಖರ್ಚು ಮಾಡುತ್ತಿದ್ದೇನೆ" ಎಂದು ತಿಳಿಸಿದ್ದ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ