HOME » NEWS » State » CCB POLICE TO SEND NOTICE TO 15 SANDALWOOD STARS SOON GNR

ಸ್ಯಾಂಡಲ್​​ವುಡ್​​ ಡ್ರಗ್​​ ಮಾಫಿಯಾ: 15 ಮಂದಿ ಸ್ಟಾರ್ಸ್​ಗೆ ಸದ್ಯದಲ್ಲೇ ಸಿಸಿಬಿ ಪೊಲೀಸರಿಂದ ನೋಟಿಸ್​​

ಇನ್ನು, ಸಿಸಿಬಿ ಪೊಲೀಸರಿಗೆ ಇಂದ್ರಜಿತ್​​ ಲಂಕೇಶ್​​ ಒಂಬತ್ತು ನಟಿಯರು ಮತ್ತು 6 ನಟರು ಸೇರಿದಂತೆ 15 ಮಂದಿ ಹೆಸರನ್ನು ನೀಡಿದ್ದಾರೆ. ಹೀಗಾಗಿ ಇನ್ನೆರಡು ದಿನಗಳಲ್ಲಿ ಎಲ್ಲರಿಗೂ ನೋಟಿಸ್​ ನೀಡಿ ವಿಚಾರಣೆಗೆ ಹಾಜರಾಗಿ ಎಂದು ಪೊಲೀಸರು ಸೂಚಿಸಲಿದ್ಧಾರೆ.

news18-kannada
Updated:September 2, 2020, 9:02 PM IST
ಸ್ಯಾಂಡಲ್​​ವುಡ್​​ ಡ್ರಗ್​​ ಮಾಫಿಯಾ: 15 ಮಂದಿ ಸ್ಟಾರ್ಸ್​ಗೆ ಸದ್ಯದಲ್ಲೇ ಸಿಸಿಬಿ ಪೊಲೀಸರಿಂದ ನೋಟಿಸ್​​
ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್
  • Share this:
ಬೆಂಗಳೂರು(ಸೆ.02): ಡ್ರಗ್ಸ್ ಜಾಲದ ಹಿಂದೆ ಸ್ಯಾಂಡಲ್​​ವುಡ್ ನಂಟು ಇದೆ ಎಂದು ಸುದ್ದಿ ಕೇಳಿದ ಬೆನ್ನಲ್ಲೇ ಸಿಸಿಬಿ ಅಧಿಕಾರಿಗಳು ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದಾರೆ. ಈಗಾಗಲೇ ನಿರ್ಮಾಪಕ ಮತ್ತು ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಿಸಿಬಿ ಕಚೇರಿಗೆ ತೆರಳಿ ಈ ಸಂಬಂಧ ಸಾಕಷ್ಟು ಮಾಹಿತಿ ನೀಡಿದ್ದಾರೆ. ಈ ವೇಳೆ ಸುಮಾರು 15 ಮಂದಿ ನಟ ನಟಿಯರ ಲಿಸ್ಟ್​​ ಅನ್ನು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಸದ್ಯ ಇಂದ್ರಜಿತ್​​​​​ ಲಕೇಶ್​​ ನೀಡಿದ ಹೆಸರುಗಳನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಸಾಕ್ಷಿಯಿದ್ದರೂ ಇಲ್ಲದಿದ್ದರೂ ಇಂದ್ರಜಿತ್​ ಲಂಕೇಶ್​ ನೀಡಿದ ಎಲ್ಲಾ ಸ್ಟಾರ್ಸ್​ಗೂ ನೋಟಿಸ್​​ ನೀಡಲು ಸಿಸಿಬಿ ಪೊಲೀಸರು ಸಿದ್ದತೆ ನಡೆಸಿಕೊಂಡಿದ್ದಾರೆ.

ದಿನಕ್ಕೆ ಇಬ್ಬರನ್ನು ಸಿಸಿಬಿ ಕಚೇರಿಗೆ ಕರೆಸಿ ವಿಚಾರಣೆ ಮಾಡಲು ಪೊಲೀಸರು ಮುಂದಾಗಿದ್ದಾರೆ. ಏನೇ ಆಗಲಿ ಇದು ಡ್ರಗ್ಸ್​​ ಆರೋಪವಾದ್ದರಿಂದ ಸಿಸಿಬಿ ಪೊಲೀಸರು ಸಾಕ್ಷಿ ಸಿಗಲಿ ಇಲ್ಲದೆ ಹೋಗಲಿ ಸ್ಟಾರ್ಸ್​ ವಿಚಾರಣೆ ಮಾಡೋದು ಮಾತ್ರ ಪಕ್ಕಾ ಆಗಿದೆ ಎನ್ನಲಾಗುತ್ತಿದೆ.
Youtube Video

ಇನ್ನು, ಸಿಸಿಬಿ ಪೊಲೀಸರಿಗೆ ಇಂದ್ರಜಿತ್​​ ಲಂಕೇಶ್​​ ಒಂಬತ್ತು ನಟಿಯರು ಮತ್ತು 6 ನಟರು ಸೇರಿದಂತೆ 15 ಮಂದಿ ಹೆಸರನ್ನು ನೀಡಿದ್ದಾರೆ. ಹೀಗಾಗಿ ಇನ್ನೆರಡು ದಿನಗಳಲ್ಲಿ ಎಲ್ಲರಿಗೂ ನೋಟಿಸ್​ ನೀಡಿ ವಿಚಾರಣೆಗೆ ಹಾಜರಾಗಿ ಎಂದು ಪೊಲೀಸರು ಸೂಚಿಸಲಿದ್ಧಾರೆ.

ಇದನ್ನೂ ಓದಿ: ಐಪಿಎಸ್​​ ಅಧಿಕಾರಿ ಆರ್​​.ಪಿ ಶರ್ಮಾ ಕುತ್ತಿಗೆಗೆ ಗುಂಡೇಟು; ಸ್ಥಿತಿ ಗಂಭೀರ

ಈ ಮಧ್ಯೆ ನಾಳೆ ಬೆಳಿಗ್ಗೆ 11 ಗಂಟೆಯೊಳಗೆ ಎಲ್ಲರ ಬಗ್ಗೆ ಸಾಕ್ಷ್ಯಾಧಾರಗಳು ನೀಡಲಿದ್ದೇನೆ ಎಂದು ಇಂದ್ರಜಿತ್​​​ ಲಂಕೇಶ್​​​ ಹೇಳಿಕೆ ನೀಡಿರುವುದು ಈಗ ಚಿತ್ರರಂಗದಲ್ಲಿ ಭಾರೀ ಚರ್ಚೆಯಾಗುತ್ತಿದೆ.
Published by: Ganesh Nachikethu
First published: September 2, 2020, 9:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories