ಡ್ರಗ್ಸ್​ ಕೇಸ್​​: ನಟಿ ರಾಗಿಣಿ ಜೈಲಿಗೆ, ಸಂಜನಾ ವಿಚಾರಣೆಗೆ; ಇನ್ನೆರಡು ದಿನ ಸಿಸಿಬಿ ಪೊಲೀಸರಿಂದ ಫುಲ್​​ ಡ್ರಿಲ್​​

ಇನ್ನೆರಡು ದಿನ ಪೊಲೀಸ್ ಕಸ್ಟಡಿಯಲ್ಲಿ ಸಂಜನಾ ಅವರನ್ನು ಸಿಸಿಬಿ ತನಿಖಾಧಿಕಾರಿ ಅಂಜುಮಾಲಾ ಮತ್ತಷ್ಟು ವಿಚಾರಣೆ ನಡೆಸಲಿದ್ದಾರೆ. ಡ್ರಗ್ಸ್ ದಂಧೆ ಪ್ರಕರಣದ ಏಳು ಆರೋಪಿಗಳಲ್ಲಿ ನಟಿ ರಾಗಿಣಿ ಸೇರಿದಂತೆ ಲೂಮ್‌ಪೆಪ್ಪರ್, ರಾಹುಲ್, ಪ್ರಶಾಂತ ರಾಂಕ, ನಿಯಾಜ್ ಅಹ್ಮದ್ ನ್ಯಾಯಾಂಗ ಬಂಧನವಾಗಿದೆ. ಇನ್ನು ನಟಿ ಸಂಜನಾ, ವೀರೇನ್ ಖನ್ನಾ, ರವಿಶಂಕರ್ ಪೊಲೀಸ್ ಕಸ್ಟಡಿಯಲ್ಲಿದ್ದು ಸೆ.16ರವರೆಗೆ ಸಿಸಿಬಿ ವಿಚಾರಣೆ ಎದುರಿಸಬೇಕಾಗಿದೆ.‌

news18-kannada
Updated:September 15, 2020, 7:06 AM IST
ಡ್ರಗ್ಸ್​ ಕೇಸ್​​: ನಟಿ ರಾಗಿಣಿ ಜೈಲಿಗೆ, ಸಂಜನಾ ವಿಚಾರಣೆಗೆ; ಇನ್ನೆರಡು ದಿನ ಸಿಸಿಬಿ ಪೊಲೀಸರಿಂದ ಫುಲ್​​ ಡ್ರಿಲ್​​
ಸಂಜನಾ, ರಾಗಿಣಿ
  • Share this:
ಬೆಂಗಳೂರು(ಸೆ. 15): ಸ್ಯಾಂಡಲ್​​ವುಡ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ಜೈಲು ಪಾಲಾಗಿದ್ದಾರೆ. ಇದರ ಬೆನ್ನ ಹಿಂದೆಯೇ ಬಂಧಿತ ನಟಿ ಸಂಜನಾ ಅವರನ್ನು ಇನ್ನೆರಡು ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಅಸಲಿಗೆ ಬಂಧನ ವೇಳೆ ನಟಿ ಸಂಜನಾ ಮಾಡಿದ ಕಿತಾಪತಿ ಏನು ಗೊತ್ತಾ? ಈ ಕುರಿತು ಡಿಟೈಲ್ ಸ್ಟೋರಿ ಇಲ್ಲಿದೆ. ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ನಟಿಯರಿಬ್ಬರಲ್ಲಿ ರಾಗಿಣಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ‌. ಆದರೆ ನಟಿ ಸಂಜನಾ ವಿಚಾರಣೆಗೆ ಅವಕಾಶ ನೀಡಿ ಎಂದು ಸಿಸಿಬಿ ಪರ ಸರ್ಕಾರಿ ವಕೀಲರು ಮನವಿ ಮಾಡಿಕೊಂಡರು. ಐದು ದಿನಗಳ ವಿಚಾರಣೆಗೆ ಕೋರಿದ್ದರು. ನಟಿ ಸಂಜನಾ ಅವರನ್ನು ಹೆಚ್ಚಿನ ತ‌ನಿಖೆ ಮಾಡಬೇಕಾದ ಹಿನ್ನೆಲೆ‌ ಕಸ್ಟಡಿಗೆ ವಕೀಲರು ಮನವಿ ಮಾಡಿದ್ದರು. ಬಂಧನ ವೇಳೆ ಸಿಸಿಬಿ ಪೊಲೀಸರಿಗೆ ಸಂಜನಾ ಗಲ್ರಾನಿ ಬಳಿ ಸಿಕ್ಕದ್ದು ಮೊಬೈಲ್ ಮಾತ್ರ. ಸಿಕ್ಕ ಮೊಬೈಲ್​​ನಲ್ಲಿ ಸಿಮ್ ಇರಲಿಲ್ಲ.‌ ಸಿಮ್ ತೆಗೆದು ನಾಶ ಮಾಡಿರುವ ಶಂಕೆಯಿದೆ‌ ಎನ್ನಲಾಗಿದೆ.

ಇದರಿಂದಾಗಿ ಪೊಲೀಸ್ ಕಸ್ಟಡಿ ಕೇಳಿದ್ದರು. ಈ ಹಿನ್ನೆಲೆ ಮೂರು ದಿನಗಳ ಕಾಲ ಸೆಪ್ಟೆಂಬರ್ 16ರವರೆಗೆ ಪೊಲೀಸ್ ಕಸ್ಟಡಿ ನೀಡಿದ್ದಾರೆ. ಇದರಿಂದಾಗಿ ನಿನ್ನೆ ಬೆಳಗ್ಗೆ ಮೆಡಿಕಲ್ ಚೆಕಪ್​​ಗೆ ಕೆ ಸಿ ಜನರಲ್ ಆಸ್ಪತ್ರೆಗೆ ಕರೆಲಾಯಿತು. ಆ ನಂತರ ಮಡಿವಾಳದ ಎಫ್​​ಎಸ್​​ಎಲ್ ಕಚೇರಿಯ ವಿಚಾರಣ ಕೊಠಡಿಯಲ್ಲಿ ನಟಿ ರಾಗಿಣಿ ಹಾಗೂ ಸಂಜನಾ ಅವರನ್ನು ವೀಡಿಯೋ ಕಾನ್ಪರೆನ್ಸ್ ಮೂಲಕ ಹಾಜರುಪಡಿಸಲಾಯಿತು. ಕೋರ್ಟ್ ಸೂಚನೆ ಮೇರೆಗೆ ನಟಿ ರಾಗಿಣಿ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿದರೆ ಇತ್ತ ನಟಿ ಸಂಜನಾ ಎಫ್​​ಎಸ್​​ಎಲ್ ಕಚೇರಿಯಿಂದ ಮಹಿಳಾ ನಿಲಯಕ್ಕೆ ನಟಿ ಸಂಜನಾ ಕರೆದುಕೊಂಡು ಹೋಗಲಾಯಿತು.

ಇನ್ನೆರಡು ದಿನ ಪೊಲೀಸ್ ಕಸ್ಟಡಿಯಲ್ಲಿ ಸಂಜನಾ ಅವರನ್ನು ಸಿಸಿಬಿ ತನಿಖಾಧಿಕಾರಿ ಅಂಜುಮಾಲಾ ಮತ್ತಷ್ಟು ವಿಚಾರಣೆ ನಡೆಸಲಿದ್ದಾರೆ. ಡ್ರಗ್ಸ್ ದಂಧೆ ಪ್ರಕರಣದ ಏಳು ಆರೋಪಿಗಳಲ್ಲಿ ನಟಿ ರಾಗಿಣಿ ಸೇರಿದಂತೆ ಲೂಮ್‌ಪೆಪ್ಪರ್, ರಾಹುಲ್, ಪ್ರಶಾಂತ ರಾಂಕ, ನಿಯಾಜ್ ಅಹ್ಮದ್ ನ್ಯಾಯಾಂಗ ಬಂಧನವಾಗಿದೆ. ಇನ್ನು ನಟಿ ಸಂಜನಾ, ವೀರೇನ್ ಖನ್ನಾ, ರವಿಶಂಕರ್ ಪೊಲೀಸ್ ಕಸ್ಟಡಿಯಲ್ಲಿದ್ದು ಸೆ.16ರವರೆಗೆ ಸಿಸಿಬಿ ವಿಚಾರಣೆ ಎದುರಿಸಬೇಕಾಗಿದೆ.‌

ಇದನ್ನೂ ಓದಿ: ‘ಕೊಲಂಬೋಗೆ ಹೋದರೆ ಹೇಗೆ ಶಾಂತಿ ಸಿಗಲಿದೆ ಎನ್ನುವುದು ಮಾತ್ರ ಜಮೀರ್​ ಹೇಳಬೇಕು‘ - ಸಚಿವ ಸಿಟಿ ರವಿ ವ್ಯಂಗ್ಯ

ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಶಿವಪ್ರಕಾಶ್ ಇನ್ನೂ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಲ್ಲ. ಪ್ರಕರಣದ ಬೆನ್ನಲ್ಲೆ ತಲೆಮರಿಸಿಕೊಂಡಿರುವ ಶಿವಪ್ರಕಾಶ್​​​ಗಾಗಿ ಸಿಸಿಬಿ ಹುಡುಕಾಟದಲ್ಲಿದ್ದಾರೆ. ನಟಿ ರಾಗಿಣಿ, ರವಿಶಂಕರ್ ಜೊತೆ ನಿಕಟ ಸಂಪರ್ಕ ಹೊಂದಿದ್ದ ಶಿವಪ್ರಕಾಶ್ ಹುಡುಕಲು ಇವರಿಗೆ ಕುಟುಂಬ ಸದಸ್ಯರು ಇರುವ ಮನೆ ತಡಕಾಡುತ್ತಿದ್ದಾರೆ‌. ಈ ಮಧ್ಯೆ ಎ1 ಆರೋಪಿ ಶಿವಪ್ರಕಾಶ್ ಪರ ವಕೀಲರಿಂದ ಸಲ್ಲಿಸಿದ್ದ ನಿರೀಕ್ಷಣಾ ಜಾಮಿನು ಅರ್ಜಿ ಮುಂದೂಡಿಕೆಯಾಗಿದೆ. ಅರ್ಜಿ ವಿಚಾರಣೆಯನ್ನು 16ನೇ ತಾರೀಖಿಗೆ ಮುಂದೂಡಿದೆ.
Published by: Ganesh Nachikethu
First published: September 15, 2020, 7:06 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading