HOME » NEWS » State » CCB POLICE TO DRILL RAGINI VIREN KHANNA AND AFRICAN MAN AND OTHERS TODAY IN DRUGS CASE SNVS

ಆಫ್ರಿಕನ್ ಭಾಷೆಯಲ್ಲಿ ಮಾತನಾಡಿ ಪೊಲೀಸರಿಗೆ ಬೇಸ್ತು ಬೀಳಿಸುತ್ತಿರುವ ಡ್ರಗ್ ಪೆಡ್ಲರ್

ಸೆನಗಲ್ ದೇಶದ ಪ್ರಜೆ ಲೂಮ್ ಪೆಪ್ಪರ್ ಸಾಂಬಾನ ವಿಚಾರಣೆಗೆ ಪೊಲೀಸರು ಆಫ್ರಿಕನ್ ಭಾಷಾ ಅನುವಾದಕರ ನೆರವು ಪಡೆಯಲಿದ್ದಾರೆ. ಇಂದು ಇತರ ಆರೋಪಿಗಳಾದ ರಾಗಿಣಿ, ವಿರೇನ್ ಖನ್ನ ಮೊದಲಾದವರ ವಿಚಾರಣೆ ನಡೆಯಲಿದೆ.

news18-kannada
Updated:September 6, 2020, 8:53 AM IST
ಆಫ್ರಿಕನ್ ಭಾಷೆಯಲ್ಲಿ ಮಾತನಾಡಿ ಪೊಲೀಸರಿಗೆ ಬೇಸ್ತು ಬೀಳಿಸುತ್ತಿರುವ ಡ್ರಗ್ ಪೆಡ್ಲರ್
ಬೆಂಗಳೂರಿನಲ್ಲಿರುವ ಸಿಸಿಬಿ ಪೊಲೀಸ್ ಕಚೇರಿ
  • Share this:
ಬೆಂಗಳೂರು(ಸೆ. 06): ಡ್ರಗ್ಸ್ ಪ್ರಕರಣದಲ್ಲಿ ಎ7 ಆರೋಪಿಯಾಗಿರುವ ಆಫ್ರಿಕನ್ ಮೂಲದ ಲೂಮ್ ಪೆಪ್ಪರ್​ನನ್ನು ವಿಚಾರಣೆ ಮಾಡುವುದು ಪೊಲೀಸರಿಗೆ ತುಸು ತಲೆನೋವಾಗಿ ಪರಿಣಮಿಸಿದಂತಿದೆ. ನಿನ್ನೆ ಸಿಸಿಬಿ ಪೊಲೀಸರು ವಿಚಾರಣೆ ನಡೆಸುವಾಗ ಲೂಮ್ ಪೆಪ್ಪರ್ ಸೈಮನ್ ಆಫ್ರಿಕನ್ ಭಾಷೆಯಲ್ಲೇ ಉತ್ತರ ಕೊಡುತ್ತಿದ್ದನೆನ್ನಲಾಗಿದೆ. ಆಫ್ರಿಕನ್ ಭಾಷೆ ಬಾರದ ಬೆಂಗಳೂರಿನ ಪೊಲೀಸರು ಇಂಗ್ಲೀಷ್​ನಲ್ಲಿ ಕೇಳಿದ ಪ್ರಶ್ನೆಗೆ ಈತ ತನಗೆ ಇಂಗ್ಲೀಷ್ ಬರೋದಿಲ್ಲ ಎಂದು ಹೇಳಿ ಬೇಸ್ತು ಬೀಳಿಸಿದ್ದಾನೆ. ಈತನ ಹರಕು ಮುರುಕು ಇಂಗ್ಲೀಷ್ ಭಾಷೆ ಕೂಡ ಪೊಲೀಸರಿಗೆ ಅರ್ಥವಾಗುತ್ತಿಲ್ಲ. ಇಂಗ್ಲೀಷ್ ಭಾಷೆ ಗೊತ್ತಿಲ್ಲದ ಈತ ಹೇಗೆ ಡ್ರಗ್ಸ್ ವ್ಯವಹಾರ ನಡೆಸುತ್ತಿದ್ದ ಎಂಬುದು ಸೋಜಿಗದ ವಿಷಯ. ಈತ ಬೇಕಂತಲೇ ಇಂಗ್ಲೀಷ್ ಬಾರದೆಂಬಂತೆ ನಾಟಕವಾಡುತ್ತಿರುವ ಸಂಶಯವೂ ಇದೆ. ಈತನಿಗೆ ಇಂಗ್ಲೀಷ್ ಬರುತ್ತೆ ಎಂದು ಆರೋಪಿ ರವಿಶಂಕರ್ ಹೇಳಿದ್ದ. ಆದರೂ ಕೂಡ ಲೂಮ್ ತನಿಖಾಧಿಕಾರಿಗಳ ತಾಳ್ಮೆ ಪರೀಕ್ಷಿಸುತ್ತಿರುವಂತಿದೆ. ಇದೇ ವೇಳೆ, ಪೊಲೀಸರು ಇಂದು ಆಫ್ರಿಕನ್ ಭಾಷೆ ಬರುವ ಅನುವಾದಕರೊಬ್ಬರನ್ನು ಕರೆತಂದು ಲೂಮ್ ಪೆಪ್ಪರ್​ನನ್ನು ವಿಚಾರಣೆ ಮಾಡಿ ಚಳಿ ಬಿಡಿಸಲಿದ್ದಾರೆ.

ಇಂಗ್ಲೀಷ್ ಬಾರದು ಎಂದು ಹೇಳುತ್ತಿರುವ ಲೂಮ್ ಪೆಪ್ಪರ್ ಸಾಮಾನ್ಯನಲ್ಲ. ವಿದೇಶದಿಂದ ಬರುವ ಡ್ರಗ್​​ಗಳನ್ನ ಎಲ್ಲೆಡೆ ವಿತರಣೆ ಮಾಡುತ್ತಿದ್ದುದು ಈತನೇ. ಬೆಂಗಳೂರು ಅಷ್ಟೇ ಅಲ್ಲ, ಬೇರೆ ರಾಜ್ಯಗಳ ಡ್ರಗ್ ಪೆಡ್ಲರ್​ಗಳ ಜೊತೆಗೆಲ್ಲಾ ಈತನ ಸಂಪರ್ಕ ಇದೆ.

ಇದನ್ನೂ ಓದಿ: ರಾಜ್ಯದಲ್ಲಿ ಡ್ರಗ್ಸ್​ ಮಾಫಿಯಾ: ಕಟ್ಟುನಿಟ್ಟಿನ ಕ್ರಮಕ್ಕೆ ಪೊಲೀಸ್​ ವರಿಷ್ಠರಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ

ಆಫ್ರಿಕಾ ಖಂಡದ ಸೆನೆಗಲ್ ಮೂಲದ ಲೂಮ್ ಪೆಪ್ಪರ್ ಮೊದಮೊದಲು ಬೆಂಗಳೂರಿನ ಕಾಲೇಜು ಮತ್ತು ಐಟಿ ಬಿಟಿ ಬಳಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ. ಪಬ್​ವೊಂದರಲ್ಲಿ ಪಾರ್ಟಿ ಆಯೋಜಕರ ಪರಿಚಯವಾಗಿ ಅಂದಿನಿಂದ ಹೈ ಎಂಡ್ ಪಾರ್ಟಿಗಳಿಗೆ ಈತ ಡ್ರಗ್ಸ್ ಸರಬರಾಜು ಮಾಡುತ್ತಿದ್ದ. ಆ ಪಾರ್ಟಿಗಳಲ್ಲಿ ಪರಿಚಯವಾದ ಉದ್ಯಮಿ ಮಕ್ಕಳಿಗೂ ನೇರವಾಗಿ ಡ್ರಗ್ಸ್ ತಂದುಕೊಡುತ್ತಿದ್ದನೆನ್ನಲಾಗಿದೆ.

ಇವತ್ತು ಎ3 ಆರೋಪಿ ವೀರೇನ್ ಖನ್ನ ಅವರ ವಿಚಾರಣೆ ನಡೆಯಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೈ ಎಂಡ್ ಪಾರ್ಟಿ ಆಯೋಜನೆಯಲ್ಲಿ ಎತ್ತಿದ ಕೈ ಎನಿಸಿದರುವ ವೀರೇನ್ ಖನ್ನ ನಿನ್ನೆ ವಿಚಾರಣೆಗೆ ಸರಿಯಾಗಿ ಸಹಕರಿಸಿಲ್ಲ. ಇವತ್ತು ಸಿಸಿಬಿ ಕಚೇರಿಯಲ್ಲಿ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಲಿದ್ಧಾರೆ.

ಡ್ರೈವ್ ಇನ್ ಥಿಯೇಟರ್ ಎಂಬ ಪಾರ್ಟಿ ಆಯೋಜನೆ ಮಾಡುತ್ತಿದ್ದ ಖನ್ನಾ ಸಂಪರ್ಕದಲ್ಲಿ ಗಣ್ಯರ ಮಕ್ಕಳೇ ಹೆಚ್ಚಿದ್ದಾರೆ. ಈತನ ಮೊಬೈಲ್ ಪರಿಶೀಲಿಸಿದಾಗ ಸಿನಿಮಾ ಇಂಡಸ್ಟ್ರಿಯವರು, ವಿದೇಶೀಯರು ಹಾಗೂ ಶ್ರೀಮಂತರ ನಂಬರ್​ಗಳು ಸಿಕ್ಕಿವೆ. ಬೆಂಗಳೂರು, ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ ಸೇರಿದಂತೆ ಹೊರ ರಾಜ್ಯಗಳಲ್ಲಿ ಕೆಲ ಉದ್ಯಮಿ ಮಕ್ಕಳ ಜೊತೆ ಈತನ ಸಂಪರ್ಕ ಇದೆ. ಈತನ ಜೊತೆ ಹೆಚ್ಚು ಸಂಪರ್ಕದಲ್ಲಿದ್ದವರ ನಂಬರ್​ಗಳ ಪಟ್ಟಿಯನ್ನು ಅಧಿಕಾರಿಗಳು ಮಾಡಿಕೊಂಡಿದ್ದಾರೆ. ಇಂದು ಆ ವಿಚಾರದ ಬಗ್ಗೆ ಹ ಆಗೂ ಪಾರ್ಟಿಗೆ ಡ್ರಗ್ಸ್ ಯಾವ್ಯಾವ ಭಾಗದಿಂದ ಯಾರ್ಯಾರ ಕಡೆಯಿಂದ ಪೂರೈಕೆಯಾಗುತ್ತಿತ್ತು ಎಂಬಿತ್ಯಾದಿ ವಿಚಾರದ ಬಗ್ಗೆ ವಿರೇನ್ ಖನ್ನಾ ಅವರಿಂದ ಬಾಯಿ ಬಿಡಿಸಲು ಸಿಸಿಬಿ ಪೊಲೀಸರು ಇಂದು ಪ್ರಯತ್ನಿಸಲಿದ್ದಾರೆ.

ಇದನ್ನೂ ಓದಿ: Drug Mafia: ಡ್ರಗ್ ಮಾಫಿಯಾ ತನಿಖೆ ಯಾರ್ಯಾರ ಮನೆ ಬಾಗಿಲಿಗೆ ಹೋಗುತ್ತೋ ಗೊತ್ತಿಲ್ಲ; ಸಚಿವ ಸಿ.ಟಿ. ರವಿಇಂದು ಎ2 ಆರೋಪಿ ನಟಿ ರಾಗಿಣಿಯ ವಿಚಾರಣೆ ನಡೆಯಲಿದೆ. ನಿನ್ನೆ ಅನಾರೋಗ್ಯದ ನೆಪವೊಡ್ಡಿದ್ದರಿಂದ ಆಕೆಯ ವಿಚಾರಣೆ ಸಾಧ್ಯವಾಗಿರಲಿಲ್ಲ. ಹಾಗೆಯೇ, 12 ಆರೋಪಿಗಳ ವಿರುದ್ಧ ದಾಖಲಾಗಿರುವ ಎಫ್​ಐಆರ್​ನಲ್ಲಿ ರವಿಶಂಕರ್ ಹೆಸರು ಇಲ್ಲದಿದ್ದುದು ಅಚ್ಚರಿ ಮೂಡಿಸಿತ್ತು. ಈತ ಅಪ್ರೂವರ್ ಆಗಿರುವ ಶಂಕೆ ಇದೆ. ಆದರೆ, ಪೊಲೀಸರು ಈತನ ಮೇಲೆ ಪ್ರತ್ಯೇಕ ಕೇಸ್ ದಾಖಲಿಸಲಿದ್ದಾರೆನ್ನಲಾಗಿದೆ.

ಇನ್ನು, ಎ11 ಆರೋಪಿ ರಾಹುಲ್​ನ ಆಪ್ತೆ ಎನ್ನಲಾಗಿರುವ ನಟಿ ಸಂಜನಾ ಅವರಿಗೆ ಸಿಸಿಬಿ ಪೊಲೀಸರು ಇಂದು ವಿಚಾರಣೆಗೆ ನೋಟೀಸ್ ನೀಡುವ ಸಾಧ್ಯತೆ ಇದೆ.
Published by: Vijayasarthy SN
First published: September 6, 2020, 8:42 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories