ಲೂಮ್ ಪೆಪ್ಪರ್ ಆಯ್ತು, ಬೆನಾಲ್ಡ್ ಆಯ್ತು; ಈಗ ಉಳಿದ ಮೂವರಿಗೆ ಬಲೆ ಬೀಸಿದ ಸಿಸಿಬಿ

ಕೊತ್ತನೂರು, ಹೆಣ್ಣೂರು, ಮಾದನಾಯಕನಹಳ್ಳಿ, ವಿದ್ಯಾರಣ್ಯಪುರ, ಟಿಸಿ ಪಾಳ್ಯ ಸೇರಿದಂತೆ ನಗರದಾದ್ಯಂತ ಹುಡುಕಾಟ ನಡೆಸುತ್ತಿದ್ದಾರೆ.

news18-kannada
Updated:September 23, 2020, 3:07 PM IST
ಲೂಮ್ ಪೆಪ್ಪರ್ ಆಯ್ತು, ಬೆನಾಲ್ಡ್ ಆಯ್ತು; ಈಗ ಉಳಿದ ಮೂವರಿಗೆ ಬಲೆ ಬೀಸಿದ ಸಿಸಿಬಿ
ಪ್ರಾತಿನಿಧಿಕ ಚಿತ್ರ.
  • Share this:
ಬೆಂಗಳೂರು(ಸೆ.23): ನೈಜೀರಿಯನ್ ಪ್ರಜೆಗಳದ್ದೇ ರಾಜಧಾನಿಯಲ್ಲಿ ಡ್ರಗ್ಸ್ ಜಾಲದ ಪಾರುಪತ್ಯವಾಗಿದೆ. ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಟೆಕ್ಕಿಗಳನ್ನ‌ ಬಿಟ್ಟು ಸೆಲಬ್ರೆಟಿಗಳ ಸಂಪರ್ಕವಿದ್ದು, ಸೆಲಬ್ರೆಟಿಗಳು, ಪಾರ್ಟಿ‌ ಆಯೋಜಕರಿಂದ ಲಕ್ಷ ಲಕ್ಷ ಹಣ ಗಳಿಸುತ್ತಿದ್ದಾರೆ. ಕ್ಷಣಾರ್ಧದಲ್ಲಿ ಮಾದಕ ವಸ್ತುಗಳನ್ನ ಸರಬರಾಜು ಮಾಡುವುದರಲ್ಲಿ ನಿಸ್ಸೀಮರಾಗಿದ್ದಾರೆ. ಪಾಸ್ ವರ್ಡ್ ಬಳಕೆ, ಪರಿಚಿತರಿಗಷ್ಟೇ ಮಾಲು ಇದು ನೈಜೀರಿಯನ್ ಡ್ರಗ್ಸ್ ಪೆಡ್ಲರ್​​​​ಗಳ ವ್ಯವಹಾರವಾಗಿದೆ. ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದ ತನಿಖೆಯನ್ನ ಸಿಸಿಬಿ ಚುರುಕುಗೊಳಿಸಿದೆ. ಈ ನಡುವೆ ಸೆಲಬ್ರೆಟೀಸ್ ಸಂಪರ್ಕದಲ್ಲಿದ್ದ ನೈಜೀರಿಯನ್‌ ಪ್ರಜೆಗಳಿಗಾಗಿ ಸಿಸಿಬಿ ಹುಡುಕಾಟ ನಡೆಸಿದೆ. ಲೂಮ್‌ ಪೆಪ್ಪರ್ ಹಾಗೂ ಬೆನಾಲ್ಡ್ ಉಡ್ಡೇನ ಜೊತೆ ಮೂವರು ನೈಜೀರಿಯನ್ಸ್ ಸಹಕಾರಿಸಿದ್ದಾರೆ ಎನ್ನಲಾಗಿದೆ.

ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಬಲಭೀಮ; ದಸರಾಗೆ ಬರುವ 5 ಆನೆಗಳ ಸಂಪೂರ್ಣ‌ ವಿವರ ಇಲ್ಲಿದೆ

ಐವರು ಸೇರಿ ಹೈಎಂಡ್ ಪಾರ್ಟಿ, ರೇವ್ ಪಾರ್ಟಿಗಳಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದು, ಐವರಿಗೂ ನಟ ನಟಿಯರು ಹಾಗೂ ರಾಜಕಾರಣಿ ಮಕ್ಕಳು ಸೇರಿದಂತೆ ಉದ್ಯಮಿ ಮಕ್ಕಳ ಸಂಪರ್ಕವಿದೆ ಎನ್ನಲಾಗಿದೆ. ಇದನ್ನೇ ಅಸ್ತ್ರವಾಗಿ ಬಳಸಿಕೊಂಡಿರುವ‌ ಸಿಸಿಬಿ ಅಧಿಕಾರಿಗಳು, ಈ ಮೂವರನ್ನ‌ ಹಿಡಿದರೆ, ಮೂವರ ಜೊತೆ ಸಂಪರ್ಕದಲ್ಲಿರುವವರು ಸಿಗ್ತಾರೆ ಎಂದು ಪ್ಲಾನ್‌ ಮಾಡಿದ್ದಾರೆ. ಕೊತ್ತನೂರು, ಹೆಣ್ಣೂರು, ಮಾದನಾಯಕನಹಳ್ಳಿ, ವಿದ್ಯಾರಣ್ಯಪುರ, ಟಿಸಿ ಪಾಳ್ಯ ಸೇರಿದಂತೆ ನಗರದಾದ್ಯಂತ ಹುಡುಕಾಟ ನಡೆಸುತ್ತಿದ್ದಾರೆ.

ಬೆನಾಲ್ಡ್ , ಲೂಮ್ ಪೆಪ್ಪರ್ ಸಂಪರ್ಕದಲ್ಲಿರೋರ ಬಗ್ಗೆ ಮಾಹಿತಿ ಪಡೆದಿರೋ ಸಿಸಿಬಿ, ಮೂವರು ನೈಜೀರಿಯನ್ ಡ್ರಗ್ಸ್ ಪೆಡ್ಲರ್ ಗಳ ಹಿಂದೆ ಬಿದ್ದಿದೆ. ಲೂಮ್ ಪೆಪ್ಪರ್ ಸಂಪರ್ಕದಲ್ಲಿ ನಟಿ ರಾಗಿಣಿ,ನಟಿ‌ ಸಂಜನಾ ಸಿಕ್ಕಿದ್ರೆ, ಬೆನಾಲ್ಡ್ ಉಡ್ಡೇನ್ ಸಂಪರ್ಕದಲ್ಲಿದ್ದ ವೈಭವ್‌ಜೈನ್, ವಿರೇನ್‌ ಮತ್ತು ಆದಿತ್ಯಾ ಆಳ್ವ ಸಿಕ್ಕಿದರು. ಪಾರ್ಟಿಗಳಿಗಾಗಿ ಇವರಿಬ್ಬರಿಂದ ಡ್ರಗ್ಸ್ ತರಿಸಿಕೊಳ್ತಿದ್ದ ಆರೋಪಿಗಳು,ಇದೇ ರೀತಿ ಉಳಿದ ಮೂವರು ಸಹ ನಟ ನಟಿಯರಿಗೆ ಹಾಗೂ ಉದ್ಯಮಿ ಮಕ್ಕಳಿಗೆ ಡ್ರಗ್ಸ್ ಸಪ್ಲೈ ಮಾಡಿರೋ ಮಾಹಿತಿ ಇದೆ.

ಮೂರ್ನಾಲ್ಕು ಹೆಸರನ್ನಿಟ್ಟುಕೊಂಡು ಮಾದಕ ವಸ್ತು ಸಪ್ಲೈ ಮಾಡ್ತಿದ್ದಾರೆ. ಈ ಮೂವರಿಗಾಗಿ ಹುಡುಕಾಟ ನಡೆಸ್ತಿರೋ ಸಿಸಿಬಿ, ಇವರ ಮೂಲಕ ಉಳಿದವ್ರಿಗೆ ಬಲೆ ಹಾಕಲು ಪ್ಲಾನ್ ಮಾಡಿದೆ. ವೀಸಾ ,ಪಾಸ್ ಪೋರ್ಟ್ ಅವಧಿ ಮುಗಿದಿದ್ರೂ ಅಕ್ರಮವಾಗಿ ನಗರದಲ್ಲಿ ವಾಸವಾಗಿದ್ದು, ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡು ಮೋಜು ಮಸ್ತಿ ಮಾಡ್ತಿದ್ದಾರೆ.
Published by: Latha CG
First published: September 23, 2020, 3:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading