• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಡ್ರಗ್ಸ್​ ಕೇಸ್​​: ಆರೋಪಿ ಆದಿತ್ಯಾ ಆಳ್ವಾಗಾಗಿ ಹೊರ ರಾಜ್ಯದಲ್ಲೂ ಸಿಸಿಬಿ ಪೊಲೀಸರ ಹುಡುಕಾಟ

ಡ್ರಗ್ಸ್​ ಕೇಸ್​​: ಆರೋಪಿ ಆದಿತ್ಯಾ ಆಳ್ವಾಗಾಗಿ ಹೊರ ರಾಜ್ಯದಲ್ಲೂ ಸಿಸಿಬಿ ಪೊಲೀಸರ ಹುಡುಕಾಟ

ಆದಿತ್ಯಾ ಆಳ್ವಾ

ಆದಿತ್ಯಾ ಆಳ್ವಾ

ಸದ್ಯ ಕಾಟನ್​​ ಪೇಟೆ ಪೋಲಿಸ್​ ಠಾಣೆಯಲ್ಲಿ ಡ್ರಗ್ಸ್​ ಸಂಬಂಧ ಆದಿತ್ಯಾ ಆಳ್ವಾ ವಿರುದ್ಧ ಕೇಸ್ ಆಗಿದೆ. ಇವರು ಡ್ರಗ್ಸ್​ ಕೇಸ್​ನಲ್ಲಿ ಆದಿತ್ಯಾ ಆಳ್ವಾ ಎ6 ಆರೋಪಿಯಾಗಿದ್ದಾನೆ.

  • Share this:

ಬೆಂಗಳೂರು(ಸೆ.13): ಸ್ಯಾಂಡಲ್​​ವುಡ್ ಡ್ರಗ್ಸ್​ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ತೀವ್ರಗೊಳಿಸಿದ್ದಾರೆ. ಈ ನಡುವೆ ನಾಪತ್ತೆಯಾದ ಉಳಿದ ಆರೋಪಿಗಳಿಗಾಗಿ ಸಿಸಿಬಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಮುಂಬೈ, ದೆಹಲಿ ಮತ್ತು ಹೊರ ರಾಜ್ಯಗಳಲ್ಲಿ ಆರೋಪಿಗಳಿಗಾಗಿ ಶೋಧಕಾರ್ಯ ಮುಂದುವರೆದಿದೆ. ಕಳೆದೊಂದು ವಾರದಿಂದ ಪ್ರಕರಣದ ಎ6 ಆರೋಪಿ ಆದಿತ್ಯಾ ಆಳ್ವಾ ಇನ್ನೂ ಪತ್ತೆಯಿಲ್ಲ. ಹಾಗಾಗಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಸಂಬಂಧಿಕರು ಮತ್ತು ಸ್ನೇಹಿತರ ಮನೆಗಳಲ್ಲಿ ಆದಿತ್ಯಾ ಆಳ್ವಾಗಾಗಿ ಪೊಲೀಸರು ಹುಟುಕಾಟ ಮುಂದುವರಿಸಿದ್ದಾರೆ. ಆದರೆ, ಇನ್ನೂ ಎಲ್ಲಿಯೂ ಆದಿತ್ಯಾ ಆಳ್ವಾ ಇರುವ ಸುಳಿವು ಪತ್ತೆಯಾಗಿಲ್ಲ. ಮೊಬೈಲ್​​ ಸ್ವಿಚ್​ ಆಫ್​ ಮಾಡಿಕೊಂಡು ತಲೆಮರೆಸಿಕೊಂಡಿರುವುದು ಸಿಸಿಬಿ ಪೊಲೀಸರಿಗೆ ಭಾರೀ ತಲೆನೋವಾಗಿ ಪರಿಣಮಿಸಿದೆ.


ಡ್ರಗ್ಸ್​ ಕೇಸ್​​ನ ಪ್ರಮುಖ ಆರೋಪಿ ಆದಿತ್ಯಾ ಆಳ್ವಾ ಮೊಬೈಲ್​ ಸ್ವಿಚ್​ ಆಫ್​ ಮಾಡಿಕೊಂಡು ದಿನಕ್ಕೊಂದು ಸ್ಥಳ ಬದಲಿಸುತ್ತಿದ್ದಾನೆ ಎನ್ನಲಾಗಿದೆ. ಆರೋಪಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಆದಿತ್ಯಾ ಆಳ್ವಾ ಸುಮಾರು ಮೂರು ಪಾರ್ಟಿಗಳಲ್ಲಿ ಭಾಗಿಯಾಗಿ ಮೋಜು ಮಜಾ ಮಸ್ತಿ ಮಾಡಿದ್ದ ಎಂದು ಸಿಸಿಬಿ ಮೂಲಗಳು ತಿಳಿಸಿವೆ.


ಸದ್ಯ ಕಾಟನ್​​ ಪೇಟೆ ಪೋಲಿಸ್​ ಠಾಣೆಯಲ್ಲಿ ಡ್ರಗ್ಸ್​ ಸಂಬಂಧ ಆದಿತ್ಯಾ ಆಳ್ವಾ ವಿರುದ್ಧ ಕೇಸ್ ಆಗಿದೆ. ಇವರು ಡ್ರಗ್ಸ್​ ಕೇಸ್​ನಲ್ಲಿ ಆದಿತ್ಯಾ ಆಳ್ವಾ ಎ6 ಆರೋಪಿಯಾಗಿದ್ದಾನೆ.


ಇದನ್ನೂ ಓದಿ: ಡ್ರಗ್ಸ್​ ಕೇಸ್​​: ವಿರೇನ್​ ಖನ್ನಾ ಮನೆಯಲ್ಲಿ ಪತ್ತೆಯಾಯ್ತು ಬೇನಾಮಿ ಬ್ಯಾಂಕ್​​ ಅಕೌಂಟ್​ ನಂಬರ್ಸ್​?


ನಟಿ ರಾಗಿಣಿಯೊಂದಿಗೆ ಹಲವು ಪಾರ್ಟಿಗಳಲ್ಲಿ ಆದಿತ್ಯಾ ಆಳ್ವಾ ಭಾಗಿಯಾಗಿದ್ದ. ಈ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಆದಿತ್ಯಾ ಆಳ್ವಾಗಾಗಿ ಪೊಲೀಸರ ಹುಡುಕಾಟ ಮುಂದುವರಿದಿದೆ. ಈ ಮಧ್ಯೆ ನಿರೀಕ್ಷಣಾ ಜಾಮೀನಿಗಾಗಿ ಆದಿತ್ಯಾ ಆಳ್ವಾಪರ ವಕೀಲರು ಕೋರ್ಟ್​ ಮೊರೆ ಹೋಗಿದ್ದಾರೆ. ನಾಳೆ ಈ ಪ್ರಕರಣದ ತನಿಖೆ ನಡೆಯಲಿದೆ.

top videos
    First published: