HOME » NEWS » State » CCB POLICE OPERATIONS CONTINUED FURTHER DRUG PEDDLERS HUNTING IN SILICON CITY KMTV MAK

Drugs Mafia: ಮುಂದುವರೆದ ಸಿಸಿಬಿ ಪೊಲೀಸರ ಕಾರ್ಯಾಚರಣೆ; ಸಿಲಿಕಾನ್ ಸಿಟಿಯಲ್ಲಿ ಮತ್ತಷ್ಟು ಡ್ರಗ್ ಪೆಡ್ಲರ್​ಗಳ ಬೇಟೆ

ಆರೋಪಿಗಳು ಡ್ರಗ್ಸ್ ಶೇಖರಣೆ ಮಾಡಿ ಅದನ್ನ ಪಾರ್ಟಿಗಳು, ಕಾಲೇಜು ವಿದ್ಯಾರ್ಥಿಗಳು ಮತ್ತು ಟೆಕ್ಕಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಬಂಧಿತರಿಂದ 20ಗ್ರಾಂ ಕೊಕೇನ್, 13 ಗ್ರಾಂನ 30 ಎಂಡಿಎಂಎ ಮಾತ್ರೆಗಳು, 6 ಮೊಬೈಲ್, ಹೋಂಡಾ ಕಾರು ಸೇರಿ ಐದು ಲಕ್ಷದ ಮೌಲ್ಯದ ವಸ್ತುಗಳನ್ನ ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.

news18-kannada
Updated:February 21, 2021, 7:33 PM IST
Drugs Mafia: ಮುಂದುವರೆದ ಸಿಸಿಬಿ ಪೊಲೀಸರ ಕಾರ್ಯಾಚರಣೆ; ಸಿಲಿಕಾನ್ ಸಿಟಿಯಲ್ಲಿ ಮತ್ತಷ್ಟು ಡ್ರಗ್ ಪೆಡ್ಲರ್​ಗಳ ಬೇಟೆ
ಬಂಧಿತ ಡ್ರಗ್​ ಪೆಡ್ಲರ್​ಗಳು.
  • Share this:
ಬೆಂಗಳೂರು (ಫೆಬ್ರವರಿ 21); ಪೊಲೀಸರು ಎಷ್ಟೇ ಕಂಟ್ರೋಲ್‌ ಮಾಡಿದ್ರು ದಂಧೆಕೋರರು ಮಾತ್ರ ತಮ್ಮ ಕಸುಬನ್ನ ಬಿಡೋದಿಲ್ಲ. ಖಾಕಿ ಪಡೆಗೆ ಕಮಾಲ್ ತೋರಿಸಿ ತಮ್ಮ ಕೆಲಸ ಮಾಡಿಬಿಡ್ತಾರೆ. ಅದರಲ್ಲೂ ನಗರದಲ್ಲಿ ಇತ್ತೀಚಿಗೆ ಮತ್ತಿನ ಗತ್ತು ಎಗ್ಗಿಲ್ಲದೆ ಸಾಗಿದೆ. ಒಂದಷ್ಟು ಮಂದಿಗೆ ಖಾಕಿ ಪಡೆ ಬಲೆ ಹಾಕಿದ್ದಾರೆ. ಸಿಲಿಕಾನ್ ಸಿಟಿ ಬೆಂಗಳೂರು ಡ್ರಗ್ ದಂಧೆಕೋರರ ತವರೂರಾಗ್ತಿದ್ಯಾ ಅನ್ನೋ ಅನುಮಾನ ಉಂಟಾಗ್ತಿದೆ. ನಗರದಲ್ಲಿ ದಿನನಿತ್ಯ ಹತ್ತಾರು ಡ್ರಗ್ ಪೆಡ್ಲರ್​ಗಳು ಪತ್ತೆಯಾಗ್ತಿದ್ದು ಖಾಕಿ ಪಡೆಯೆ ಬೆಚ್ಚಿ ಬೀಳುವಂತೆ ಮಾಡಿದೆ. ನಗರ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು ಪ್ರತಿದಿನ ಒಂದಲ್ಲ ಒಂದು ಕಡೆ ದಾಳಿ ನಡೆಸಿ ಲಕ್ಷಾಂತರ ಮೌಲ್ಯದ ಡ್ರಗ್ಸ್ ಅನ್ನ ಸೀಜ್ ಮಾಡ್ತಿದ್ದಾರೆ.

ಅದೇ ರೀತಿ ಇಂದು ಸಹ ನಗರದ ಎರಡು ಕಡೆಗಳಲ್ಲಿ ಮಾದಕವಸ್ತು ದಂಧೆಕೋರರ ಅಡ್ಡೆಗಳ ಮೇಲೆ ಪೊಲೀಸರು ಲಗ್ಗೆ ಇಟ್ಟಿದ್ದಾರೆ. ನಗರದ ಆರ್ ಟಿ ನಗರ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿದ ಸಿಸಿಬಿ ಪೊಲೀಸರು ಡ್ರಗ್ ಮಾರಾಟದಲ್ಲಿ ತೊಡಗಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನ ಬಂಧಿಸಿದ್ದಾರೆ. ನೈಜೀರಿಯಾ ಮೂಲದ ಅಗಸ್ಟೀನ್ ಓಕಾಫೋರ್ ಮತ್ತು ಅಚುನಿಜೆ ನಾಫೋರ್ ಬಂಧಿತ ಆರೋಪಿಗಳಾಗಿದ್ದು ಇವರು ಕೊಕೇನ್ ಮತ್ತು ಎಂಡಿಎಂಎ ಡ್ರಗ್ಸ್ ಮಾರಾಟ ಮಾಡುತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಆರೋಪಿಗಳು ಡ್ರಗ್ಸ್ ಶೇಖರಣೆ ಮಾಡಿ ಅದನ್ನ ಪಾರ್ಟಿಗಳು, ಕಾಲೇಜು ವಿದ್ಯಾರ್ಥಿಗಳು ಮತ್ತು ಟೆಕ್ಕಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಬಂಧಿತರಿಂದ 20ಗ್ರಾಂ ಕೊಕೇನ್, 13 ಗ್ರಾಂನ 30 ಎಂಡಿಎಂಎ ಮಾತ್ರೆಗಳು, 6 ಮೊಬೈಲ್, ಹೋಂಡಾ ಕಾರು ಸೇರಿ ಐದು ಲಕ್ಷದ ಮೌಲ್ಯದ ವಸ್ತುಗಳನ್ನ ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.

ಇನ್ನೂ ನಗರದ ಉಪ್ಪಾರಪೇಟೆ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಮತ್ತೊಂದು ಗ್ಯಾಂಗ್ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದೆ. ಆರೋಪಿಗಳು ಸುಮಾರು 9.5 ಕೆಜಿ ಗಾಂಜಾವನ್ನ ಆಂಧ್ರದಿಂದ ತಂದು ನಗರದಲ್ಲಿ ಮಾರುತ್ತಿದ್ದು ಈ ವೇಳೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಗಾಂಜಾ ಎಲೆಕ್ಟ್ರಾನಿಕ್ ತೂಕದ ಮಷಿನ್, ಐದು ಮೊಬೈಲ್, ಒಂದು ಬೈಕ್ ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ: ಮಠಾಧಿಪತಿಗಳು ಮಠದಲ್ಲಿರಬೇಕು, ಬೀದಿಗ್ಯಾಕೆ ಇಳಿದಿದ್ದೀರಿ?: ವಾಟಳ್‌ ನಾಗರಾಜ್‌ ಕಿಡಿ

ಗಾಂಜಾ ಮಾರಾಟ ಮಾಡುತ್ತಿದ್ದ ಮದನ್, ರಂಜಿತ್ ಕುಮಾರ್, ಮಹಾರ್ಸಾಯ್ಯ ನಾಯಕ್, ಚಂದನ್ ದಿಗಾಲ್, ಮುಕುಂದ್ ರಾಜ್, ಮೋನಿಶ್ ರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ. ನಗರದಲ್ಲಿ ಮಾದಕವಸ್ತು ಮಾರಾಟ ಜಾಲ ವ್ಯಾಪಕವಾಗಿ ಹಬ್ಬಿದ್ದು ಒಂದಲ್ಲ ಒಂದು ಕಡೆ ಖದೀಮರು ಡ್ರಗ್ಸ್ ಸೇಲಿಂಗ್ ನಲ್ಲಿ ತೊಡಗಿದ್ದಾರೆ. ಪೊಲೀಸರು ಎಷ್ಟೇ ಬೇಟೆಯಾಡಿದ್ರು ಪದೇ ಪದೇ ಕೇಸ್ ಗಳು ಪತ್ತೆಯಾಗಿದ್ದು ಖಾಕಿ ನಿದ್ದೆಗೆಡಿಸಿದೆ.
Youtube Video
ಈಗಾಗಲೇ ಕಳೆದ ಐದು ತಿಂಗಳಿಂದ ಸಿಸಿಬಿ ಪೊಲೀಸರು ಡ್ರಗ್ಸ್ ಪೆಡ್ಲರ್ ಗಳು, ಸಫ್ಲೈಯರ್ಸ್ ಸೇರಿ ಹಲವಾರು ಮಂದಿ ಮೇಲೆ ನಿರಂತರ ದಾಳಿ ನಡೆಸಿದ್ದಾರೆ. ನಗರದ ವಿವಿಧ ಭಾಗಗಳಲ್ಲಿ ಸದ್ದಿಲ್ಲದೆ ನಡೆಯುತ್ತಿದ್ದ ಈ ದಾಳಿಯಿಂದ ಹಲವಾರು ಪೆಡ್ಲರ್​ಗಳು ಜೈಲು ಸೇರಿದ್ದು ಕೋಟಿ ಗಟ್ಟಲೆ ಮೌಲ್ಯದ ಡ್ರಗ್ಸ್, ಗಾಂಜಾ ವಶಕ್ಕೆ ಪಡೆದಿದ್ದರು. ನಗರದಲ್ಲಿ ಡ್ರಗ್ಸ್ ದಂಧೆ ನಡೆಸುತ್ತಿದ್ದ ನೂರಾರು ಮಂದಿಯನ್ನ ಬಂಧಿಸಿದ್ದರು. ಸಿಸಿಬಿ ಪೊಲೀಸರು ಮತ್ತು ಸ್ಥಳೀಯ ಪೊಲೀಸರು ಪದೇ ಪದೇ ದಾಳಿ ನಡೆಸಿದರು ಸಹ ಡ್ರಗ್ಸ್ ಜಾಲ ಇನ್ನೂ ನಿಂತಿಲ್ಲ.
Published by: MAshok Kumar
First published: February 21, 2021, 7:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories