ಡಿಜೆ ಹಳ್ಳಿ ಗಲಭೆ ಪ್ರಕರಣ: ವಿಚಾರಣೆಗಾಗಿ ಪುಲಿಕೇಶಿನಗರ ಕಾರ್ಪೋರೇಟರ್ ಜಾಕೀರ್​​ಗೆ ಸಿಸಿಬಿ ನೊಟೀಸ್​

ಪುಲಿಕೇಶಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಅಕ್ಕನ ಮಗ ನವೀನ್ ಎಂಬುವರ ಫೇಸ್​ಬುಕ್ ಖಾತೆಯಲ್ಲಿ ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದರು. ಇದು ಗಲಭೆಗೆ ಕಾರಣವಾಗಿತ್ತು.

ಡಿಜೆ ಹಳ್ಳಿ ಗಲಭೆಯ ದೃಶ್ಯ.

ಡಿಜೆ ಹಳ್ಳಿ ಗಲಭೆಯ ದೃಶ್ಯ.

 • Share this:
  ಬೆಂಗಳೂರು (ಅಕ್ಟೋಬರ್​ 12); ಮುಸ್ಲಿಂ ವಿರೋಧಿ ಫೇಸ್​ಬುಕ್​ ಪೋಸ್ಟ್ ಹಿನ್ನೆಲೆ ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿಯಲ್ಲಿ ದೊಡ್ಡ ಗಲಭೆಗೆ ಕಾರಣವಾಗಿದ್ದ ಮತ್ತು ಶಾಸಕ ಅಖಂಡ ಶ್ರೀನಿವಾಸ್​ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪುಂಡಾಟ ಮೆರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ಪುಲಿಕೇಶಿನಗರ ಕಾರ್ಪೋರೇಟರ್ ಜಾಕೀರ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಇಂದು ಜಾಕೀರ್​ ಅವರು ಇಂದು ಬೆಳಗ್ಗೆ 10 ಗಂಟೆ ವೇಳೆಗೆ ಪೊಲೀಸರ ಎದುರು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಪೊಲೀಸರು ಈಗಾಗಲೇ ಒಂದು ಬಾರಿ ನೊಟೀಸ್ ಕೊಟ್ಟು ವಿಚಾರಣೆ ನಡೆಸಿದ್ದಾರೆ. ಅಲ್ಲದೆ, ಈ ವೇಳೆ ಜಾಕೀರ್ ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದ ಸಿಸಿಬಿ ಪೊಲೀಸರು ಅದನ್ನು ಎಫ್ ಎಸ್ ಎಲ್ ಗೆ ರವಾನೆ ಮಾಡಿದ್ದರು. ಸಧ್ಯ ಮೊಬೈಲ್ ನಲ್ಲಿ ಡಿಲೀಟ್ ಆದ ಕೆಲವು ಮೆಸೇಜ್ ಗಳು ರಿಟ್ರೈವ್ ಆಗಿದೆ. ಗಲಭೆ ದಿನ‌ ಜಾಕೀರ್ ಮಾಡಿದ್ದ ಕರೆಗಳು ಹಾಗೂ ಮೆಸೇಜ್ ರಿಟ್ರೈವ್ ಆಗಿದೆ. ಇದೇ ಕಾರಣಕ್ಕೆ ಪೊಲೀಸರು ಮತ್ತೆ ಜಾಕೀರ್​ ಅವರ ವಿಚಾರಣೆ್ಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

  ಪುಲಿಕೇಶಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಅಕ್ಕನ ಮಗ ನವೀನ್ ಎಂಬುವರ ಫೇಸ್​ಬುಕ್ ಖಾತೆಯಲ್ಲಿ ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದರು. ಇದರಿಂದ ಒಂದು ಕೋಮಿನ ಜನರು ರೊಚ್ಚಿಗೆದ್ದು ಆಗಸ್ಟ್​ 11 ರಂದು ರಾತ್ರಿ ಡಿಜೆ ಹಳ್ಳಿ, ಕೆಜಿ ಹಳ್ಳಿ ಹಾಗೂ ಕಾವಲ್ ಬೈರಸಂದ್ರ ಪ್ರದೇಶಗಳಲ್ಲಿ ಗಲಭೆಗಳಿಗೆ ಕಾರಣರಾಗಿದ್ದರು.

  ಇದನ್ನೂ ಓದಿ : ಡಿಜೆ ಹಳ್ಳಿ ಗಲಭೆ ಪ್ರಕರಣ: ಎಸ್ಐಟಿ ಅಥವಾ ಸಿಐಡಿ ತನಿಖೆಗೆ ಸರ್ಕಾರ ಚಿಂತನೆ; ಇಂದು ಸಂಜೆ ನಿರ್ಧಾರ ಪ್ರಕಟ

  ಈ ವೇಳೆ ಅಖಂಡ ಶ್ರೀನಿವಾಸ್ ಅವರ ಮನೆ ಕಚೇರಿಯನ್ನ ಸುಟ್ಟುಹಾಕಿದ್ದರು. ಡಿಜೆ ಹಳ್ಳಿ ಪೊಲೀಸ್ ಠಾಣೆಯನ್ನು ಧ್ವಂಸ ಮಾಡಿದ್ದರು. 2-3 ಸಾವಿರದಷ್ಟಿದ್ದ ಗಲಭೆಕೋರರು ಪೊಲೀಸ್ ವಾಹನ ಸೇರಿದಂತೆ ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿ ಮಾಡಿದ್ದರು. ಪೊಲೀಸರ ಫೈರಿಂಗ್​ನಲ್ಲಿ ಮೂವರು ಸಾವನ್ನಪ್ಪಿದ್ದರು. 300ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು.

  ಅಲ್ಲದೆ, ಈ ಪ್ರಕರಣ ಆಡಳಿತ ಮತ್ತು ವಿರೋಧ ಪಕ್ಷದ ನಾಯಕರ ಪರಸ್ಪರ ಕೆಸರೆರಚಾಟಕ್ಕೂ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ ಇದರ ತನಿಖೆಯನ್ನು ಎಸ್​ಐಟಿ ಪೊಲೀಸರಿಗೆ ವಹಿಸಿತ್ತು. ಹೀಗಾಗಿ ಗಂಭೀರ ತನಿಖೆಗೆ ಮುಂದಾಗಿರುವ ಪೊಲೀಸರು ಹಲವು ಆಯಾಮಗಳಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ, ಹಲವು ಪ್ರಮುಖರನ್ನು ಈಗಾಗಗಲೇ ವಿಚಾರಣೆಗೆ ಒಳಪಡಿಸಿದ್ದಾರೆ.
  Published by:MAshok Kumar
  First published: