HOME » NEWS » State » CCB POLICE ISSUED NOTICE TO RAVISHANKARS EX WIFE ARCHANA NAIK IN DRUGS CASE HERE IS THE DETAILS AE

Sandalwood Drug Scandal: ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣ: ಪ್ರಮುಖ ಆರೋಪಿ ರವಿಶಂಕರ್ ಮಾಜಿ ಪತ್ನಿಗೆ ನೋಟಿಸ್​..!

2018ಕ್ಕೂ ಮೊದಲು ರವಿಶಂಕರ್ ಹೇಗಿದ್ದರು, ಯಾವ ಪಾರ್ಟಿಗಳಿಗೆ ಹೋಗುತ್ತಿದ್ದರು ಎಂದು ಮಾಹಿತಿ ಕಲೆಹಾಕುತ್ತಿರೋ ಸಿಸಿಬಿ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.  ಇಡೀ ಡ್ರಗ್ಸ್ ಪ್ರಕರಣ ಹೊರಗೆ ಬರೋಕೆ ಪ್ರಮುಖ ಕಾರಣ ಇದೇ ರವಿಶಂಕರ್. ರವಿಶಂಕರ್ ಕೊಟ್ಟ ಮಾಹಿತಿ ಮೇಲೆ ಕಾಟನ್ ಪೇಟೆಯಲ್ಲಿ ಕೇಸ್ ದಾಖಲು ಮಾಡಿದ್ದು, ನಟಿ ರಾಗಿಣಿ, ಸಂಜನಾ, ರಾಹುಲ್ , ಶಿವಪ್ರಕಾಶ್ ಸೇರಿ 16 ಮಂದಿ ಮೇಲೆ‌ ಕೇಸ್ ದಾಖಲು ಮಾಡಲಾಗಿದೆ.

news18-kannada
Updated:September 23, 2020, 10:44 AM IST
Sandalwood Drug Scandal: ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣ: ಪ್ರಮುಖ ಆರೋಪಿ ರವಿಶಂಕರ್ ಮಾಜಿ ಪತ್ನಿಗೆ ನೋಟಿಸ್​..!
ಪ್ರಾತಿನಿಧಿಕ ಚಿತ್ರ.
  • Share this:
ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ಪ್ರಮುಖ ಆರೋಪಿ ರವಿಶಂಕರ್ ಅವರ ಮಾಜಿ‌ ಪತ್ನಿಗೆ ನೋಟಿಸ್ ಜಾರಿ ಮಾಡಿದ್ದಾರೆ. ರವಿಶಂಕರ್ ಮಾಜಿ ಪತ್ನಿ ಅರ್ಚನಾ ನಾಯ್ಕ್ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಅಧಿಕಾರಿಗಳು ಸೂಚನೆ‌ ನೀಡಿದ್ದಾರೆ. ವಾಟ್ಸ್​ಆ್ಯಪ್​ ಮೂಲಕ ನೋಟಿಸ್​ ಕಳುಹಿಸಿರೋ ಸಿಸಿಬಿ ಪೊಲೀಸರು, ರವಿಶಂಕರ್ ಬಗ್ಗೆ ಮಾಹಿತಿ ಇನ್ನಷ್ಟು ಮಾಹಿತಿ ಕಲೆ ಹಾಕುಲು ಮುಂದಾಗಿದ್ದಾರೆ. ಮಾದಕವಸ್ತು ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಶಿವಪ್ರಕಾಶ್​ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಸಾಕಷ್ಟು ಶ್ರಮವಹಿಸುತ್ತಿದ್ದಾರೆ.  2010ರಲ್ಲಿ ಅರ್ಚನಾ ನಾಯ್ಕ್ ಜೊತೆ ಮದುವೆಯಾಗಿದ್ದ ರವಿಶಂಕರ್,  2018ರ ನವೆಂಬರ್​ನಲ್ಲಿ ಇಬ್ಬರೂ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿದ್ದಾರೆ. ರವಿಶಂಕರ್ ಹಾಗೂ ಅರ್ಚನಾ ನಾಯ್ಕ್ ಅವರಿಗೆ ಎಂಟು ವರ್ಷದ ಮಗು ಇದೆ. ಸದ್ಯ ರವಿಶಂಕರ್ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಇರುವ ದಾರಿ ಎಂದರೆ ಅದು ಅರ್ಚನಾ ಮಾತ್ರ. 

2018ಕ್ಕೂ ಮೊದಲು ರವಿಶಂಕರ್ ಹೇಗಿದ್ದರು, ಯಾವ ಪಾರ್ಟಿಗಳಿಗೆ ಹೋಗುತ್ತಿದ್ದರು ಎಂದು ಮಾಹಿತಿ ಕಲೆಹಾಕುತ್ತಿರೋ ಸಿಸಿಬಿ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.  ಇಡೀ ಡ್ರಗ್ಸ್ ಪ್ರಕರಣ ಹೊರಗೆ ಬರೋಕೆ ಪ್ರಮುಖ ಕಾರಣ ಇದೇ ರವಿಶಂಕರ್. ರವಿಶಂಕರ್ ಕೊಟ್ಟ ಮಾಹಿತಿ ಮೇಲೆ ಕಾಟನ್ ಪೇಟೆಯಲ್ಲಿ ಕೇಸ್ ದಾಖಲು ಮಾಡಿದ್ದು, ನಟಿ ರಾಗಿಣಿ, ಸಂಜನಾ, ರಾಹುಲ್ , ಶಿವಪ್ರಕಾಶ್ ಸೇರಿ 16 ಮಂದಿ ಮೇಲೆ‌ ಕೇಸ್ ದಾಖಲು ಮಾಡಲಾಗಿದೆ.

Special treatment for Actress Ragini and Sanjan who jailed in Drug Case
ಸಂಜನಾ, ರಾಗಿಣಿ


ಸದ್ಯ ಈಗ ಪರಪ್ಪನ ಅಗ್ರಹಾರ ಜೈಲು ಸೇರಿರೋ ಆರೋಪಿ ರವಿಶಂಕರ್​ನನ್ನು ಸಿಸಿಬಿ ಪೊಲೀಸರು ತೀವ್ರ ವಿಚಾರಣೆ ಮಾಡುತ್ತಿದ್ದಾರೆ. ಬಾಣಸವಾಡಿಯಲ್ಲಿ 2018 ರಲ್ಲಿ ಕೊಕೇನ್‌ ಮಾರಾಟ ಮಾಡ್ತಿದ್ದ ಪ್ರತೀಕ್ ಶೆಟ್ಟಿ ಬಂಧನ ಆಗಿತ್ತು. ಈ‌ ವೇಳೆ ಪ್ರತೀಕ್​ ಶೆಟ್ಟಿ ಇದೇ ರವಿಶಂಕರ್ ಹೆಸರು ಬಾಯಿಬಿಟ್ಟಿದ್ದ. ಸದ್ಯ ಇದೇ ಪ್ರಕರಣದಲ್ಲಿ ರವಿಶಂಕರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದ ಸಿಸಿಬಿ ಸಾಕಷ್ಟು ಮಾಹಿತಿ ಕಲೆಹಾಕಿದ್ದಾರೆ. 2018 ಲ್ಲಿ ಬಾಣಸವಾಡಿ ಕೇಸ್ ಆದಾಗ ಅರ್ಚನಾ ನಾಯ್ಕ್ ಜೊತೆಯಲ್ಲಿಯೇ ಇದ್ದರು ಅನ್ನೋ ಮಾಹಿತಿ ಗೊತ್ತಾಗಿದ್ದು, ಕೇಸ್ ಸಂಬಂಧ ಹಾಗೂ ರವಿಶಂಕರ್ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಲು ನೋಟಿಸ್ ನೀಡಿರೋ‌ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Yogi: ಡ್ರಗ್ಸ್​ಗೂ ನನಗೂ ಸಂಬಂಧವಿಲ್ಲ, ಆದರೂ ವಿಚಾರಣೆಗೆ ಸಹಕರಿಸುತ್ತೇನೆ ಎಂದ ನಟ ಯೋಗಿ

ಈಗ ಅರ್ಚನಾ ಅವರಿಗೆ ನೋಟಿಸ್​ ನೀಡಿರುವ ಹಿನ್ನಲೆಯಲ್ಲಿ ಬಂಧಿತ ಸೆಲೆಬ್ರಿಟಿಗಳು ಮತ್ತೆ ಆತಂಕದಲ್ಲಿರುವಂತಾಗಿದೆ. ರಾಗಿಣಿ ಕುರಿತಾಗಿ ಮತ್ತಷ್ಟು ಮಾಹಿತಿಗಳು ಹೊರ ಬಿದ್ದರೂ ಆಶ್ಚರ್ಯ ಪಡಬೇಕಾಗಿಲ್ಲ ಅನ್ನೋ ಮಾತುಗಳೂ ಕೇಳಿ ಬರುತ್ತಿವೆ.

ccb police, Diganth Manchale, Drugs Case, Drugs Mafia in Sandalwood, Aindrita Ray, Sheik Fazil, Aindritra Rey, Sandalwood,
ದಿಗಂತ್​ ಹಾಗೂ ಐಂದ್ರಿತಾ ರೇ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುತ್ತಿದ್ದ ರಾಷ್ಟ್ರೀಯ ಮಟ್ಟದಲ್ಲಿ ಈವೆಂಟ್ಸ್ ನಡೆಸುತ್ತಿದ್ದ ವಿರೇನ್​ ಖನ್ನಾರನ್ನು ಮತ್ತೆ ಸಿಸಿಬಿ ವಶಕ್ಕೆ ಪಡೆದಿದೆ. ಹೆಚ್ಚಿನ ವಿಚಾರಣೆಗಾಗಿ ವಿರೇನ್​ ಖನ್ನರನ್ನು ಪೊಲೀಸ್​ ಕಸ್ಟಡಿಗೆ ಒಪ್ಪಿಸಿ ಎನ್​ಡಿಪಿಎಸ್​ ನ್ಯಾಯಾಲಯ ಆದೇಶ ನೀಡಿದೆ.

ಇದನ್ನೂ ಓದಿ: Shwetha Srivatsav: ಮಗಳಿಗೆ ಬಿಸಿ ಬಿಸಿ ರಾಗಿ ಮುದ್ದೆಯ ರುಚಿ ತೋರಿಸಿದ ನಟಿ ಶ್ವೇತಾ ಶ್ರೀವಾತ್ಸವ್​..!​

ಇನ್ನು ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗುಲ್ರಾನಿ ಜಾಮೀನು ಅರ್ಜಿಯನ್ನು ನ್ಯಾಯಾಲಯ ಸೆಪ್ಟೆಂಬರ್​​ 24ಕ್ಕೆ ಮುಂದೂಡಿದೆ. ಇದೇ ವಿಷಯವಾಗಿ ದಿಗಂತ್​ ಹಾಗೂ ಐಂದ್ರಿತಾ ರೇ ಅವರನ್ನು ವಿಚಾರಣೆಗೊಳಪಡಿಸಲಾಗಿದೆ. ಇನ್ನು ಕಳೆದ ಶನಿವಾರವಷ್ಟೆ ನಟ ಯೋಗಿ ಅವರನ್ನೂ ಸಿಸಿಬಿ ಪೊಲೀಸರು ವಿಚಾರಣೆ ಮಾಡಿದ್ದಾರೆ. ನಿನ್ನೆಯಷ್ಟೆ ನಟ ಯೋಗಿ ಪತ್ರಿಕಾಗೋಷ್ಠಿ ಕರೆದಿದ್ದು, ಡ್ರಗ್ಸ್​ಗೂ ನನಗೂ ಸಂಬಂಧವಿಲ್ಲ. ಆದರೆ ಪೊಲೀಸರ ತನಿಖೆಗೆ ಸಹಕರಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
Published by: Anitha E
First published: September 23, 2020, 10:14 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading