ಬೆಂಗಳೂರು(ಆ. 24): ಡಿ.ಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಸದ್ಯ ಪೊಲೀಸರಿಗೆ ಮೊಬೈಲ್ ಫೋನ್ ರಿಟ್ರೈವ್ ಮಾಡುವುದೇ ಒಂದು ಸಮಸ್ಯೆಯಾಗಿದೆ. ಸಿಸಿಬಿ ಪೊಲೀಸರು ಸಮೀವುದ್ದೀನ್, ವಾಜೀದ್ ಮತ್ತು ಕಾಂಗ್ರೆಸ್ ಕಾರ್ಪೊರೇಟರ್ ಸಂಪತ್ ರಾಜ್ ಹಾಗೂ ಜಾಕೀರ್ ಹುಸೇನ್, ಮಾಜಿ ಮೇಯರ್ ಸಂಪತ್ ರಾಜ್ ಅವರ ಪಿಎ ಅರುಣ್ ಬಳಸುತ್ತಿದ್ದ ಮೊಬೈಲ್ ಫೋನ್ಗಳನ್ನ ಸೀಜ್ ಮಾಡಿದ್ದಾರೆ. ಕೆಲವು ಪೋನ್ಗಳನ್ನು ರಿಟ್ರೀವ್ ಮಾಡಿದರೆ, ಇನ್ನು ಕೆಲವು ಹೈಪೈ ಫೋನ್ಗಳನ್ನು ರಿಟ್ರೀವ್ ಮಾಡುವುದೇ ಕಷ್ಟವಾಗಿದೆ.
ಅದ್ರಲ್ಲೂ ಮಾಜಿ ಮೇಯರ್ ಸಂಪತ್ ರಾಜ್ ಮೊಬೈಲ್ ಐಪೋನ್ 10 ಆಗಿದ್ದು, ಅದನ್ನು ರಿಟ್ರೈವ್ ಮಾಡೋ ಟೆಕ್ನಾಲಜಿ ಸಿಸಿಬಿ ಟೆಕ್ನಿಕಲ್ ವಿಂಗ್ನಲ್ಲಿ ಇಲ್ಲ. ಮಡಿವಾಳದ ಎಫ್ಎಸ್ಎಲ್ಗೂ ಮೊಬೈಲ್ ಕಳುಹಿಸಿದ್ದು ಅಲ್ಲಿಯೂ ರಿಟ್ರೈವ್ ಆಗಲ್ಲ ಎಂದಿದ್ದಾರಂತೆ. ಕೆಲವು ಮೆಸೇಜ್ಗಳು ಡಿಲೀಟ್ ಆಗಿರುವುದು ಪಕ್ಕಾ ಆಗಿದ್ದು ಹೇಗಾದರೂ ಮಾಡಿ ರಿಟ್ರೈವ್ ಮಾಡಲೇಬೇಕು ಎಂದು ನಿಶ್ಚಯಿಸಿರುವ ಪೊಲೀಸರು, ಕೆಲವು ಖಾಸಗಿ FSL ತಂಡಗಳ ನೆರವನ್ನೂ ಯಾಚಿಸಿದ್ದಾರೆ. ಅಲ್ಲಿಯೂ ಯಾವುದೇ ಸಹಾಯ ಆಗಿಲ್ಲ.
ಇದನ್ನೂ ಓದಿ: Crime News: ಬುದ್ಧಿ ಹೇಳಿದ ಅಪ್ಪನನ್ನು ನಡುರಸ್ತೆಯಲ್ಲಿ ಕೊಂದ ಮಗ; ಬೆಳ್ತಂಗಡಿಯಲ್ಲಿ ಭೀಕರ ಕೃತ್ಯ
ಇದ್ರಿಂದ ತಲೆ ಕೆಡಿಸಿಕೊಂಡ ಸಿಸಿಬಿ ಪೊಲೀಸರು ಬೇರೆ ಬೇರೆ ರಾಜ್ಯದ FSL ತಜ್ಞರನ್ನು ಸಂಪರ್ಕ ಮಾಡಿದ್ದಾರೆ. ಡಾಟಾ ರಿಟ್ರೀವಲ್ನಲ್ಲಿ ಪರಿಣಿತಿ ಹೊಂದಿರುವ ತಿರುವನಂತಪುರಂನ ಎಫ್ಎಸ್ಎಲ್ಗೆ ಕಳುಹಿಸಿದ್ರೆ ರಿಟ್ರೀವ್ ಮಾಡುವ ಚಾನ್ಸ್ ಇದೆ ಎಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಸಿಕ್ಕಿದೆ. ಇದ್ರಿಂದ ಎರಡು ದಿನಗಳ ಹಿಂದೆ ಸಿಸಿಬಿ ಪೊಲೀಸರು ಸಂಪತ್ ರಾಜ್ ಮೊಬೈಲ್ ಅನ್ನು ತಿರುವನಂತಪುರಂನ FSL ಲ್ಯಾಬ್ಗೆ ಕಳುಹಿಸಿದ್ದಾರೆ. ಆದ್ರೆ ಅಲ್ಲಿಂದಲೂ ಯಾವುದೇ ಪಾಸಿಟವ್ ಉತ್ತರ ಇನ್ನೂ ಬರದೇ ಇರುವುದರಿಂದ ಸಿಸಿಬಿ ಪೊಲೀಸರು ಸಂಪೂರ್ಣವಾಗಿ ತಲೆಕೆಡಿಸಿಕೊಂಡಿದ್ದಾರೆ. ಎಲ್ಲೋ ಒಂದು ಕಡೆ ಮೊಬೈಲ್ನ ಮೆಸೇಜ್ಗಳು ರಿಟ್ರೈವ್ ಆಗದೇ ಇದ್ದರೆ ಸಂಪತ್ ರಾಜ್ ಸಿಸಿಬಿ ಗಂಡಾಂತರದಿಂದ ತಪ್ಪಿಸಿಕೊಂಡಂತೆ ಆದರೂ ಆಶ್ವರ್ಯವಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ