HOME » NEWS » State » CCB POLICE GET IMPORTANT CLUES AFTER INTERROGATING SANJANAS ASSOCIATE RAHUL IN DRUG CASE SNVS

ಡ್ರಗ್ ಕೇಸ್​ನಲ್ಲಿ ಸಂಜನಾ ಆಪ್ತ ರಾಹುಲ್; ವಿಚಾರಣೆ ವೇಳೆ ಪೊಲೀಸರಿಗೆ ಮಹತ್ವದ ಸುಳಿವು?

ಸತತವಾಗಿ ನಾವು ಡ್ರಗ್ಸ್ ಜಾಲದ ಮೇಲೆ ರೇಡ್ ಮಾಡುತ್ತಿದ್ದೇವೆ. ಟೆಕ್ನಾಲಜಿ ಮೂಲಕ ಸಪ್ಲೈ ಎಲ್ಲೆಲ್ಲಿ ಆಗುತ್ತಿದೆ ಎನ್ನುವುದನ್ನೂ ಪರಿಶೀಲಿಸುತ್ತಿದ್ದೇವೆ. ಕೆಲವು ಸಿನಿಮಾ ನಟರು ಭಾಗಿಯಾಗಿದ್ದಾರೆ ಎನ್ನೋ ಮಾಹಿತಿ ಇದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

news18-kannada
Updated:September 3, 2020, 11:20 AM IST
ಡ್ರಗ್ ಕೇಸ್​ನಲ್ಲಿ ಸಂಜನಾ ಆಪ್ತ ರಾಹುಲ್; ವಿಚಾರಣೆ ವೇಳೆ ಪೊಲೀಸರಿಗೆ ಮಹತ್ವದ ಸುಳಿವು?
ಬೆಂಗಳೂರಿನಲ್ಲಿರುವ ಸಿಸಿಬಿ ಪೊಲೀಸ್ ಕಚೇರಿ
  • Share this:
ಬೆಂಗಳೂರು(ಸೆ. 03): ಡ್ರಗ್ಸ್ ಜೊತೆ ಸ್ಯಾಂಡಲ್​ವುಡ್ ನಂಟಿನ ಒಂದೊಂದೇ ಎಳೆ ಬಿಚ್ಚಿಕೊಳ್ಳುತ್ತಿರುವಂತೆ ತೋರುತ್ತಿದೆ. ನಿನ್ನೆ ನಟಿ ರಾಗಿಣಿ ಆಪ್ತ ರವಿಶಂಕರ್ ಅವರನ್ನು ವಶಕ್ಕೆ ಪಡೆದಿದ್ದ ಸಿಸಿಬಿ ಪೊಲೀಸರು ಈಗ ಮತ್ತೊಬ್ಬ ನಟಿ ಸಂಜನಾ ಗಲ್​ರಾಣಿ ಅವರ ಆಪ್ತರೆನ್ನಲಾದ ರಾಹುಲ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಡ್ರಗ್ ಪೆಡ್ಲರ್​ಗಳ ಜೊತೆ ಸಂಪರ್ಕ ಹೊಂದಿದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಪೊಲೀಸರು ರಾಹುಲ್​ರನ್ನು ವಶಕ್ಕೆ ಪಡೆದರೆನ್ನಲಾಗಿದೆ.

ವಿಚಾರಣೆಯ ವೇಳೆ ರಾಹುಲ್​ರಿಂದ ಡ್ರಗ್ಸ್ ದಂಧೆಗೆ ಸಂಬಂಧಿಸಿದಂತೆ ಮಹತ್ವದ ಸುಳಿವು ಸಿಕ್ಕಿರುವುದಾಗಿ ಸಿಸಿಬಿಯ ಉನ್ನತ ಮೂಲಗಳು ಹೇಳಿವೆ. ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ಇಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿ ವಿಚಾರಣೆಯ ವಿವರಗಳನ್ನ ನೀಡಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವರೂ ಕೂಡ ರಾಹುಲ್ ವಿಚಾರಣೆಯಿಂದ ಮಹತ್ವದ ಸುಳಿವು ಸಿಕ್ಕಿರುವುದನ್ನು ಖಚಿತಪಡಿಸಿದರು.

ಸತತವಾಗಿ ನಾವು ಡ್ರಗ್ಸ್ ಜಾಲದ ಮೇಲೆ ರೇಡ್ ಮಾಡುತ್ತಿದ್ದೇವೆ. ಟೆಕ್ನಾಲಜಿ ಮೂಲಕ ಸಪ್ಲೈ ಎಲ್ಲೆಲ್ಲಿ ಆಗುತ್ತಿದೆ ಎನ್ನುವುದನ್ನೂ ಪರಿಶೀಲಿಸುತ್ತಿದ್ದೇವೆ. ಕೆಲವು ಸಿನಿಮಾ ನಟರು ಭಾಗಿಯಾಗಿದ್ದಾರೆ ಎನ್ನೋ ಮಾಹಿತಿ ಇದೆ. ಸ್ವಯಂ ಹೇಳಿಕೆ ಕೊಟ್ಟವರೂ ಮಹತ್ವದ ಸುಳಿವು ಕೊಟ್ಟಿದ್ದಾರೆ. ಕೇವಲ ಸಿಸಿಬಿ ಮಾತ್ರವಲ್ಲ, ಎಲ್ಲಾ ಠಾಣೆ ವ್ಯಾಪ್ತಿಯಲ್ಲೂ ಕ್ರೈಮ್ ಬ್ರ್ಯಾಂಚ್ ಹೆಚ್ಚು ಜಾಗೃತವಾಗಿರುವಂತೆ ಸೂಚಿಸಿದ್ದೇವೆ. ಕಸ್ಟಮ್ಸ್ ಮತ್ತು ಏರ್​ಪೋರ್ಟ್​​ಗಳಲ್ಲಿ ಎಲ್ಲಿಂದ ಸಪ್ಲೈ ಬರುತ್ತಿದೆ ಅನ್ನೋ ಬಗ್ಗೆ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದೇನೆ ಎಂದು ಗೃಹ ಸಚಿವರು ತಿಳಿಸಿದರು.

ಇದೇ ವೇಳೆ, ಸಂಜನಾ ಆಪ್ತ ರಾಹುಲ್​ನ ಇನೋವಾ ಕಾರನ್ನೂ ಪೊಲೀಸರು ವಶದಲ್ಲಿಟ್ಟುಕೊಂಡಿದ್ದಾರೆ. ಅವರ ಮೊಬೈಲ್ ಅನ್ನೂ ಪರಿಶೀಲಿಸಿದ್ದಾರೆ. ರಾಹುಲ್ ವಿಚಾರಣೆ ಬೆನ್ನಲ್ಲೇ ಪೊಲೀಸರು ನಟಿ ಸಂಜನಾ ಗಲ್​ರಾಣಿ ಅವರಿಗೂ ವಿಚಾರಣೆಗೆ ನೋಟೀಸ್ ನೀಡುವ ಸಾಧ್ಯತೆ ಇದೆ. ಇನ್ನು, ನಟಿ ಸಂಜನಾ ತಮಗೂ ಈ ದಂಧೆಗೂ ಯಾವ ಸಂಬಂಧ ಇಲ್ಲ. ಡ್ರಗ್ಸ್ ವಿಚಾರ ತಮಗೆ ಗೊತ್ತಿಲ್ಲ. ರಾಹುಲ್ ತನ್ನ ಬಾಯ್ ಫ್ರೆಂಡ್ ಅಲ್ಲ. ಅವರು ತಮ್ಮ ರಾಖಿ ಸಹೋದರ ಎಂದು ಸ್ಪಷ್ಟಪಡಿಸಿದ್ದಾರೆ.
Published by: Vijayasarthy SN
First published: September 3, 2020, 11:20 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories