ಹ್ಯಾಕರ್ ಶ್ರೀಕೃಷ್ಣನ ಮತ್ತಷ್ಟು ಲೀಲೆಗಳು ಅನಾವರಣ; ಒಂದೊಂದೇ ಕೃತ್ಯಗಳನ್ನು ಬಯಲಿಗೆಳೆಯುತ್ತಿರುವ ಸಿಸಿಬಿ!

ತನ್ನ ಸಹಚರರ ಜೊತೆಗೆ ಐಷಾರಾಮಿ ಹೋಟೆಲ್ ಗಳಲ್ಲಿ ವಾಸ್ತವ್ಯ ಹೂಡುತ್ತಿದ್ದ ಆರೋಪಿ ಮೋಜಿನ ಜೀವನ ನಡೆಸಲು ಸಾಕಷ್ಟು ಹಣ ವ್ಯಯಿಸುತ್ತಿದ್ದನಂತೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಆರೋಪಿ ಬಿಟ್ ಕಾಯಿನ್ ಮೂಲಕ ಹಣ ಗಳಿಕೆ ಮಾಡುತ್ತಿದ್ದು ಇದೇ ಮೊದಲ ಬಾರಿಗೆ ರಾಜ್ಯ ಪೊಲೀಸರು ಡಿಜಿಟಲ್ ಬಿಟ್ ಕಾಯಿನ್ ಜಪ್ತಿ ಮಾಡಿ ತನಿಖೆ ಮುಂದುವರೆಸಿದ್ದೇವೆ ಎಂದರು.

ಹ್ಯಾಕರ್ ಶ್ರೀಕೃಷ್ಣ

ಹ್ಯಾಕರ್ ಶ್ರೀಕೃಷ್ಣ

  • Share this:
ಬೆಂಗಳೂರು; ಆತ ಡ್ರಗ್ ಕೇಸ್ ನಲ್ಲಿ ಸಿಕ್ಕಿ ಬಿದ್ದಿದ್ದ ಆರೋಪಿ. ಸಿಸಿಬಿ ಪೊಲೀಸರ ತೆಕ್ಕೆಯಲ್ಲಿದ್ದ ಆತನಿಗೆ ಪುಲ್ ಲೆಫ್ಟ್ ರೈಟ್ ತೆಗೆದು ವಿಚಾರಣೆ ಮಾಡಿದ್ರು. ಸಿಸಿಬಿ ಡ್ರಿಲ್ ವೇಳೆ ಆತನ ಮತ್ತೊಂದು ಮುಖ ಅನಾವರಣವಾಗಿದೆ. ಹಲವು ವೆಬ್ ಸೈಟ್ ಗಳಿಗೆ ಕನ್ನ ಹಾಕಿದ ಅಸಾಮಿ ಬಿಟ್ ಕಾಯಿನ್ ದೊರೆಯಾಗಿದ್ದ ಅನ್ನೋದು ಪತ್ತೆಯಾಗಿದೆ.

ಹೌದು, ಡ್ರಗ್ ಕೇಸ್ ನಲ್ಲಿ ಸಿಕ್ಕಿಬಿದ್ದು ಸಿಸಿಬಿ ಪೊಲೀಸರಿಂದ ಲೆಫ್ಟ್ ರೈಟ್ ಗೆ ಒಳಗಾಗಿದ್ದ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನ ಲೀಲೆ ಬಗೆದಷ್ಟು ಬಯಲಾಗುತ್ತಿದೆ. ಹ್ಯಾಕ್ ಮಾಡೋದರಲ್ಲಿ ಕಿಂಗ್ ಆಗಿದ್ದ ಅಸಾಮಿ ದೇಶಿ ಹಾಗೂ ವಿದೇಶಿ ವೆಬ್ ಗಳಿಗೆ ಕನ್ನ ಹಾಕಿದ್ದಾನೆ. ಕೋಟಿಗಟ್ಟಲೆ ಹಣ ಮಾಡಿರೋದು ಬೆಳಕಿಗೆ ಬಂದಿದೆ.

ಸಿಸಿಬಿ ಪೊಲೀಸರ ತನಿಖೆ ವೇಳೆ ಅಂತಾರಾಷ್ಟ್ರೀಯ ವೆಬ್ ಸೈಟ್ ಗಳು, ವಿವಿಧ ಪೋಕರ್ ಗೇಮ್ ವೆಬ್ ಸೈಟ್ ಗಳು, ಕ್ರಿಪ್ಟೋ ಕರೆನ್ಸಿಗಳಾದ ಬಿಟ್ ಕಾಯಿನ್ಸ್, ವೈಎಫ್ಒ, ಇಥೆರಿಯಂ ಎಂಬ ಖಾತೆಗಳನ್ನು ಹ್ಯಾಕ್ ಮಾಡಿರೊದು ಬಯಲಾಗಿದೆ. ಆರೋಪಿ ಶ್ರೀಕೃಷ್ಣ 3 ಬಿಟ್ ಕಾಯಿನ್ ಎಕ್ಸ್ ಚೇಂಜ್, 10 ಪೋಕರ್ ವೆಬ್ ಸೈಟ್, 4 ವಿದೇಶಿ ವೆಬ್ ಸೈಟ್, 3 ಮಲ್ವಾರಿಸ್ ಎಕ್ಸ್ ಪ್ಲೋಟೆಡ್ ಗಳನ್ನು ಹ್ಯಾಕ್ ಮಾಡಿದ್ದು 9 ಕೋಟಿ ಮೌಲ್ಯದ 31 ಡಿಜಿಟಲ್ ಬಿಟ್ ಕಾಯಿನ್ ಗಳನ್ನ ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.

ಇದನ್ನು ಓದಿ: ಏರ್ ಶೋ ಬಗ್ಗೆ ಬೆಂಗಳೂರಿಗೆ ಇರುವ ಅನುಭವ ದೇಶದ ಇತರ ಯಾವ ನಗರಕ್ಕೂ ಇಲ್ಲ; ರಕ್ಷಣಾ ಸಚಿವ ರಾಜನಾಥ ಸಿಂಗ್

ಡ್ರಗ್ ಕೇಸ್ ನಲ್ಲಿ ಬಂಧಿಸಲ್ಪಟ್ಟ ಸುನೀಷ್ ಹೆಗ್ಡೆ, ಸುಜಯ್, ಹೇಮಂತ್ ಸೇರಿ ಈತನ 9 ಸಹಚರರ ಮೂಲಕ ಹಲವು ವೆಬ್ ಸೈಟ್ ಗಳನ್ನ ಹ್ಯಾಕ್ ಮಾಡಿಸುತಿದ್ರಂತೆ. ಅವುಗಳ ಡೇಟಾ ಕದ್ದು, ಬಿಟ್ ಕಾಯಿನ್ ಗಳಿಗೆ ಮಾರುತಿದ್ರು. ಇನ್ನು ಬಂದ ಬಿಟ್ ಕಾಯಿನ್ ಗಳನ್ನು ಬಿಟ್ ಕಾಯಿನ್ ಟ್ರೇಡರ್ ಗಳಿಗೆ ಮಾರಾಟ ಮಾಡಿ ಹವಾಲಾ ಮುಖಾಂತರ ಹಣ ಪಡೆಯುತಿದ್ರಂತೆ. ಸದ್ಯ ಇದೇ ಮೊದಲ ಬಾರಿಗೆ ಡಿಜಿಟಲ್ ಬಿಟ್ ಕಾಯಿನ್ ಸೀಜ್ ಪ್ರಕ್ರಿಯೆ ರಾಜ್ಯದಲ್ಲಿ ನಡೆದಿದ್ದು ಸಿಸಿಬಿ ಪೊಲೀಸರು ಈ ಬಗ್ಗೆ ತೀವ್ರ ತನಿಖೆ ನಡೆಸಿದ್ದಾರೆ.

ಆರೋಪಿ ಹ್ಯಾಕಿಂಗ್ ಶ್ರೀಕಿ ಪ್ರತಿಷ್ಟಿತ ಹಾಗೂ ಐಷಾರಾಮಿ ಹೋಟೆಲ್ ಗಳಲ್ಲಿ ಕುಳಿತು ಬಿಟ್ ಕಾಯಿನ್ ಗಳ ಕಳವು ಪ್ರಕ್ರಿಯೆ ಮಾಡಿದ್ದನಂತೆ. ಸದ್ಯ ಈತನ ಒಂದೊಂದೆ ಲೀಲೆ ಬಯಲಿಗೆಳಿಯುತ್ತಿರುವ ಸಿಸಿಬಿ ಮುಂದಿನ ದಿನಗಳಲ್ಲಿ ಈತನ ಮತ್ತಷ್ಟು ಲೀಲೆಗಳು ಬಯಲಿಗೆಳೆಯಲು ಪೊಲೀಸರು ಮುಂದಾಗಿದ್ದಾರೆ. ತನ್ನ ಸಹಚರರ ಜೊತೆಗೆ ಐಷಾರಾಮಿ ಹೋಟೆಲ್ ಗಳಲ್ಲಿ ವಾಸ್ತವ್ಯ ಹೂಡುತ್ತಿದ್ದ ಆರೋಪಿ ಮೋಜಿನ ಜೀವನ ನಡೆಸಲು ಸಾಕಷ್ಟು ಹಣ ವ್ಯಯಿಸುತ್ತಿದ್ದನಂತೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಆರೋಪಿ ಬಿಟ್ ಕಾಯಿನ್ ಮೂಲಕ ಹಣ ಗಳಿಕೆ ಮಾಡುತ್ತಿದ್ದು ಇದೇ ಮೊದಲ ಬಾರಿಗೆ ರಾಜ್ಯ ಪೊಲೀಸರು ಡಿಜಿಟಲ್ ಬಿಟ್ ಕಾಯಿನ್ ಜಪ್ತಿ ಮಾಡಿ ತನಿಖೆ ಮುಂದುವರೆಸಿದ್ದೇವೆ ಎಂದರು.
Published by:HR Ramesh
First published: