ರೌಡಿಶೀಟರ್​ ಲಕ್ಷ್ಮಣ್​ ಕೊಲೆ ಪ್ರಕರಣ; ತನಿಖೆಯ ದಿಕ್ಕು ಬದಲಿಸಿದ ಸಿಸಿಬಿ ಪೊಲೀಸರು

ಈಗಾಗಲೇ ಸಿಸಿಬಿ ಪೊಲೀಸರ ವಶದಲ್ಲಿರುವ ಲಕ್ಷ್ಮಣ್ ಕೊಲೆ ಆರೋಪಿಗಳು ವಿಭಿನ್ನ ಹೇಳಿಕೆಗಳನ್ನು ನೀಡಿದ್ದಾರೆ. ಒಬ್ಬೊಬ್ಬ ಆರೋಪಿ ಒಂದೊಂದು ಹೇಳಿಕೆ ನೀಡುತ್ತಿರುವುದು ತನಿಖೆಯ ದಿಕ್ಕು ಬದಲಿಸಲು ಕಾರಣವಾಗಿದೆ.

Latha CG | news18
Updated:March 15, 2019, 10:52 AM IST
ರೌಡಿಶೀಟರ್​ ಲಕ್ಷ್ಮಣ್​ ಕೊಲೆ ಪ್ರಕರಣ; ತನಿಖೆಯ ದಿಕ್ಕು ಬದಲಿಸಿದ ಸಿಸಿಬಿ ಪೊಲೀಸರು
ರೌಡಿ ಲಕ್ಷ್ಮಣ
Latha CG | news18
Updated: March 15, 2019, 10:52 AM IST
ಬೆಂಗಳೂರು,(ಮಾ.15): ಸಿಲಿಕಾನ್​ ಸಿಟಿಯಲ್ಲಿ ಹಾಡಹಗಲೇ ಕೊಲೆಯಾಗಿದ್ದ ರೌಡಿ ಲಕ್ಷ್ಮಣ್​ ಕೊಲೆ ಪ್ರಕರಣ ದಿನಕ್ಕೊಂದು ಆಯಾಮ ಪಡೆಯುತ್ತಿದೆ. ರೌಡಿಶೀಟರ್​​ ಲಕ್ಷ್ಮಣ ಕೊಲೆ ಪ್ರಕರಣವನ್ನು ಸಿಸಿಬಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಸಿಸಿಬಿ ತನಿಖೆ ಹಲವು ರೌಡಿಗಳಿಗೆ ಭಯ ಹುಟ್ಟಿಸಿದೆ. ನಗರದ ನಟೋರಿಯಸ್​ ರೌಡಿಗಳ ಬೆನ್ನು ಬಿದ್ದಿರುವ ಸಿಸಿಬಿ, ತೀವ್ರ ತನಿಖೆ ನಡೆಸುತ್ತಿದೆ. ಆರೋಪಿ ವರ್ಷಿಣಿ ಪ್ರೇಮ ವಿಚಾರವಲ್ಲದೇ, ಬೇರೆ ಬೇರೆ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ. ರೌಡಿ ಲಕ್ಷ್ಮಣ್​ ರಿಯಲ್​​ ಎಸ್ಟೇಟ್​​​ ವ್ಯವಹಾರ, ಭೂ ಪರಭಾರೆಗಳು, ಭೂ ಕಬಳಿಕೆ ಸೇರಿ ಹಲವು ವ್ಯವಹಾರಗಳನ್ನು ಮಾಡುತ್ತಿದ್ದ. ಅಷ್ಟೇ ಅಲ್ಲದೇ ಹಲವು ಭೂಪಾತಕಿಗಳಿಗೆ ಬೆಂಗಾವಲಾಗಿದ್ದ ಎಂದು ತಿಳಿದು ಬಂದಿದೆ.

ಲಕ್ಷ್ಮಣ್​​ ಬೆಂಗಳೂರು, ಮಂಡ್ಯ ರಾಜಕಾರಣಿಗಳಿಗೆ ತುಂಬಾ ಹತ್ತಿರದವನಾಗಿದ್ದ. ಇತ್ತೀಚೆಗೆ ರಾಜಕೀಯವಾಗಿಯೂ ಬೆಳೆಯಲು ಮುಂದಾಗಿದ್ದ. ಭೂ ಕಬಳಿಕೆ, ಭೂ ವ್ಯಾಜ್ಯ ಸಂಬಂಧ ಸೆಟ್ಲ್​​​ಮೆಂಟ್​​​ ಗಲಾಟೆ ಮಾಡಿಕೊಂಡಿದ್ದ ಎನ್ನಲಾಗಿದೆ. ವ್ಯವಹಾರಗಳ ಹಿನ್ನೆಲೆ ಕೊಲೆಗೆ ಕುಮ್ಮಕ್ಕು ನೀಡಿರುವ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಸಿಸಿಬಿ ಪೊಲೀಸರು ಮಂಡ್ಯ ಮತ್ತು ಬೆಂಗಳೂರು ರೌಡಿಗಳ ಬೆನ್ನು ಬಿದ್ದಿದೆ.

ರೌಡಿಶೀಟರ್​ ಲಕ್ಷ್ಮಣ ಕೊಲೆ ಪ್ರಕರಣ; ಯುವತಿಯನ್ನು ಮುಂದಿಟ್ಟುಕೊಂಡು ಹತ್ಯೆಗೆ ಸಂಚು

ಈಗಾಗಲೇ ಸಿಸಿಬಿ ಪೊಲೀಸರ ವಶದಲ್ಲಿರುವ ಲಕ್ಷ್ಮಣ್ ಕೊಲೆ ಆರೋಪಿಗಳು ವಿಭಿನ್ನ ಹೇಳಿಕೆಗಳನ್ನು ನೀಡಿದ್ದಾರೆ. ಒಬ್ಬೊಬ್ಬ ಆರೋಪಿ ಒಂದೊಂದು ಹೇಳಿಕೆ ನೀಡುತ್ತಿರುವುದು ತನಿಖೆಯ ದಿಕ್ಕು ಬದಲಿಸಲು ಕಾರಣವಾಗಿದೆ.

ಪ್ರಮುಖ ಆರೋಪಿ ರೂಪೇಶ, ತನ್ನ ಪ್ರೀತಿಗೆ ಎಳ್ಳು ನೀರು ಬಿಟ್ಟಿದ್ದು ಹಾಗೂ ಸುಳ್ಳು ಕೇಸ್ ಹಾಕಿ ಜೈಲಿಗೆ ಕಳಿಸಿದ್ದ ಸೇಡು ಇತ್ತು. ಕ್ಯಾಟ್ ರಾಜ ತನ್ನ ಗುರು ಕುರಿ ಕೃಷ್ಣನ ಕೊಲೆ ಸೇಡು ತೀರಿಸಿಕೊಳ್ಳುವ ತವಕ ಇತ್ತು. ಮತ್ತೊಬ್ಬ ರೌಡಿ ಹೇಮಂತ್ ಮಚ್ಚ ಮಂಜನ ಕೊಲೆ ಸೇಡಿಗಾಗಿ ಕಾಯುತ್ತಿದ್ದೆ ಎಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುವಂತೆ ಸಿಸಿಬಿ ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್ ಸೂಚನೆ ನೀಡಿದ್ದಾರೆ.

ಹಾಡಹಗಲೇ ಲಕ್ಷ್ಮಣ್ ಕೊಲೆ ಮಾಡುತ್ತಾರೆ ಅಂದರೆ ಸುಮ್ಮನೆ ಅಲ್ಲ. ಕಾಣದ ದೊಡ್ಡ ದೊಡ್ಡ ಕೈಗಳ ಕುಮ್ಮಕ್ಕು ಇರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಸಿಸಿಬಿ ಬೆಂಗಳೂರು ದಕ್ಷಿಣ ಹಾಗೂ ಪಶ್ಚಿಮ ಭಾಗದ ರೌಡಿಶೀಟರ್​​​ಗಳ ಬೆನ್ನು ಬಿದ್ದಿದೆ.
Loading...

First published:March 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...