Bengaluru: ಅನುಮಾನಾಸ್ಪದ ವ್ಯಕ್ತಿಯನ್ನ ವಶಕ್ಕೆ ಪಡೆದ ಸಿಸಿಬಿ; ಟವರ್ ಲೊಕೇಷನ್ ಆಧರಿಸಿ 30 ಪೊಲೀಸರಿಂದ ದಾಳಿ

ರಾತ್ರಿ 9 ಗಂಟೆಗೆ ಬರುತ್ತಿದ್ದ ಯುವಕರು ಫುಡ್ ಡೆಲಿವರಿ ಮಾಡಲು ತೆರಳುತ್ತಿದ್ದರು. ನಾವು ಅಷ್ಟಾಗಿ ಯುವಕರನ್ನು ನೋಡಿರಲಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಸಿಸಿಬಿ

ಸಿಸಿಬಿ

  • Share this:
ಬೆಂಗಳೂರಿನ ತಿಲಕ್ ನಗರದಲ್ಲಿ (Tilak Nagara, Bengaluru) ವಾಸವಾಗಿದ್ದ ಅಸ್ಸಾಂ (Assam) ಮೂಲದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು (CCB Police) ಕಳೆದ ರಾತ್ರಿ ವಶಕ್ಕೆ ಪಡೆದುಕೊಂಡಿದ್ದಾರೆ. ರಾತ್ರಿ ಸುಮಾರು 8 ಗಂಟೆಗೆ ದಾಳಿ ನಡೆಸಿದ ಮೂವತ್ತಕ್ಕೂ ಅಧಿಕ ಪೊಲೀಸರು ಅಖ್ತರ್ ಹುಸೇನ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ತಿಲಕ್ ನಗರದ ಬಿಟಿಪಿ ಏರಿಯಾದ ಕಟ್ಟಡದ ಮೂರನೇ ಮಹಡಿಯಲ್ಲಿ ನಾಲ್ವರ ಜೊತೆ ಅಖ್ತರ್ ವಾಸವಾಗಿದ್ದನು. ಈ ಕೋಣೆಯಲ್ಲಿ ವಾಸವಾಗಿದ್ದ ಎಲ್ಲರೂ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ರು. ಆದ್ರೆ ಈ ಯುವಕರು ಹಗಲಿನ ವೇಳೆ ಹೊರಗೆ ಕಾಣಿಸಿಕೊಳ್ಳುತ್ತಿರಲಿಲ್ಲ ಎಂದು ತಿಳಿದು ಬಂದಿದೆ. ವ್ಯಕ್ತಿಯ ಮೊಬೈಲ್ ಟವರ್ ಲೊಕೇಷನ್ (Mobile Tower Location) ಆಧರಿಸಿ ಆತ ಬರುವ ರೂಮಿಗೆ ಬರುವ ಸಮಯ ನೋಡಿಕೊಂಡು ಸಿಸಿಬಿ ದಾಳಿ ನಡೆಸಿದೆ.

ಸುಮಾರು ಒಂದು ವರ್ಷದಿಂದ ಈ ಯುವಕರು ಏರಿಯಾದಲ್ಲಿ ವಾಸವಾಗಿದ್ದರು. ಸಂಜೆ ಐದು ಗಂಟೆಗೆ ಮಪ್ತಿಯಲ್ಲಿ ಬಂದಿದ್ದ ಪೊಲೀಸ್ ತಂಡ ದಾಳಿಗೆ ಪ್ಲಾನ್ ರೂಪಿಸಿತ್ತು. ರಾತ್ರಿ ಎಂಟು ಗಂಟೆಗೆ ವ್ಯಕ್ತಿ ಬರುತ್ತಿರೋದನ್ನು ಗಮನಿಸಿ, ಸ್ಥಳೀಯ  ಪೊಲೀಸರ ಸಹಾಯದಿಂದ ಕಾರ್ಯಾಚರಣೆ ನಡೆಸಿದ್ದಾರೆ.

ಯುವಕರ ಬ್ಯಾಗ್, ದಾಖಲೆ ಪರಿಶೀಲನೆ

ಮೊದಲೇ ಪ್ಲಾನ್ ಮಾಡಿಕೊಂಡಂತೆ ಸಿಸಿಬಿ ದಾಳಿಗೆ ತಿಲಕ ನಗರ ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದರು. ರೂಮಿನೊಳಗೆ ತೆರಳಿದ ಪೊಲೀಸರು ಯುವಕರ ಬ್ಯಾಗ್ ಮತ್ತು ದಾಖಲೆಗಳನ್ನ ಪರಿಶೀಲನೆ ನಡೆಸಿ ಹೆಚ್ಚಿನ ವಿಚಾರಣೆಗಾಗಿ ಠಾಣೆಗೆ ಕರೆದೊಯ್ದಿದ್ದಾರೆ.

ಇದನ್ನೂ ಓದಿ:  Karnataka Dams Water Level: ಜಲಾಶಯಗಳ ಇಂದಿನ ಒಳಹರಿವು ಎಷ್ಟಿದೆ? ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಇಲ್ಲಿದೆ

ರಾತ್ರಿ 8 ಗಂಟೆಗೆ ರೂಮ್ ಮೇಲೆ ದಾಳಿ

ನಿನ್ನೆ ಸಂಜೆ ಐದು ಗಂಟೆಯಿಂದಲೇ ಮಫ್ತಿಯಲ್ಲಿದ್ದ ಪೊಲೀಸರು ಅಖ್ತರ್ ನಿವಾಸದ ಸುತ್ತಮುತ್ತವೇ ಮೊಕ್ಕಾಂ ಹೂಡಿದ್ದರು. ಸಂಜೆ ಏಳು ಗಂಟೆಗೆ ಅಖ್ತರ್ ರೂಮಿಗೆ ಬಂದಿದ್ದಾನೆ. ಒಂದು ಗಂಟೆ ಬಳಿಕ ಅಂದ್ರೆ ಎಂಟು ಗಂಟೆಗೆ ರೂಮ್ ಮೇಲೆ ಪೊಲೀಸರು ದಾಳಿ ನಡೆಸಿ ಎಲ್ಲರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ ರೂಮ್ ನೆರೆಹೊರೆಯವರಿಂದಲೂ ಮಾಹಿತಿ ಕಲೆ ಹಾಕಿರುವ ಪೊಲೀಸರು ಮೊಬೈಲ್ ನಂಬರ್ ಪಡೆದುಕೊಂಡು ಹಿಂದಿರುಗಿದ್ದಾರೆ.

ಈ ನಾಲ್ವರು ಯುವಕರು ಹಗಲಿನಲ್ಲಿ ಯಾರಿಗೂ ಕಾಣಿಸುತ್ತಿರಲಿಲ್ಲ. ರಾತ್ರಿ 9 ಗಂಟೆಗೆ ಬರುತ್ತಿದ್ದ ಯುವಕರು ಫುಡ್ ಡೆಲಿವರಿ ಮಾಡಲು ತೆರಳುತ್ತಿದ್ದರು. ನಾವು ಅಷ್ಟಾಗಿ ಯುವಕರನ್ನು ನೋಡಿರಲಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ನೆರೆಹೊರೆ ಅವರಿಂದಲೂ ಮಾಹಿತಿ ಕಲೆ

ಒಂದೇ ಮನೆಯಲ್ಲಿ ಕೆಲವು ಯುವಕರು ವಾಸವಾಗಿದ್ದರು. ಆಗಾಗ ಕೆಲವು ಯುವಕರು ಬಂದು ಹೋಗ್ತಾ ಇದ್ರು. ಎಲ್ಲರೂ ಪುಡ್ ಡೆಲಿವರಿ ಬಾಯ್ ಗಳಾಗಿ ಕೆಲಸ ಮಾಡುತ್ತಿದ್ದರು. ಯಾರು ಅನ್ನೋದು ನಮಗೂ ಗೊತ್ತಿರಲಿಲ್ಲ. ನಿನ್ನೆ ರಾತ್ರಿ ಎಂಟು ಗಂಟೆ ಸುಮಾರಿಗೆ ಪೊಲೀಸರು ಬಂದು ಒಬ್ಬ ವ್ಯಕ್ತಿಯನ್ನ ಕರೆದುಕೊಂಡು ಹೋಗಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

ಬೆಳಗ್ಗೆ ಮೂರು ಗಂಟೆಗೆ ಪೊಲೀಸರು ನಮ್ಮ ಮನೆಗೆ ಬಂದು ಪಕ್ಕದ ರೂಮ್ ನಲ್ಲಿ ವಾಸವಾಗಿದ್ದವರ ಮಾಹಿತಿ ಕೇಳಿದರು. ಎಲ್ಲಿಂದ ಬಂದ್ದಿದಿಯಾ? ಏನ್ ಕೆಲಸ ಮಾಡ್ತಿದ್ದೀಯಾ? ಎಷ್ಟು ವರ್ಷಗಳಿಂದ ಕೆಲಸ ಮಾಡ್ತಿದ್ದೀಯಾ ಎಂದು ಪ್ರಶ್ನೆ ಮಾಡಿದರು ಎಂದು ಪಕ್ಕದ ಮನೆಯ ನಿವಾಸಿ ಮಾತಾಬ್ ಹೇಳಿದ್ದಾರೆ. ಸುಮಾರು 15 ನಿಮಿಷಗಳ ಕಾಲ ಪೊಲೀಸರು ತಮ್ಮನ್ನ ವಿಚಾರಣೆ ನಡೆಸಿರುವ ಬಗ್ಗೆ ಮಾತಾಬ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:  Suicide: ಪ್ರೀತಿಸಿದ ಹುಡುಗಿ ಸಿಗಲಿಲ್ಲ ಅಂತ ಆತ್ಮಹತ್ಯೆಗೆ ಶರಣಾದ ಯುವಕ! ಆಡಿಯೋದಲ್ಲಿ ನೋವು ತೋಡಿಕೊಂಡು ಸೂಸೈಡ್

ಸದ್ಯ ಪೊಲೀಸರು ನಾಲ್ವರ ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ. ಆದ್ರೆ ಈ ಕುರಿತು ಪೊಲೀಸರು ಇದುವರೆಗೂ ಯಾವುದೇ ಮಾಹಿತಿಯನ್ನು ನೀಡಿಲ್ಲ. ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಎಫ್ಐಆರ್ ದಾಖಲಿಸಲು ಪೊಲೀಸರು ನಿರ್ಧರಿಸಿದ್ದಾರೆ.
Published by:Mahmadrafik K
First published: