ಜೂಜಾಟದ ನೆಪದಲ್ಲಿ ಗ್ಯಾಂಬ್ಲಿಂಗ್ ಅಡ್ಡೆ ಮೇಲೆ ಸಿಸಿಬಿ ಪೊಲೀಸರ ದಾಳಿ: 65 ಜನರ ಬಂಧನ, 80 ಲಕ್ಷ ರೂಪಾಯಿ ಜಪ್ತಿ

ಸಿಸಿಬಿ ಡಿಸಿಪಿ ರವಿಕುಮಾರ್ ನೇತೃತ್ವದ ಸುಮಾರು 30 ಸಿಸಿಬಿ ಪೊಲೀಸರ ತಂಡ ಹೋಟೆಲ್​​ ಮೇಲೆ ದಾಳಿ ನಡೆಸಿ ಶೋಧ ಕೈಗೊಂಡಿದ್ದಾರೆ. ಈ ವೇಳೆ ಪ್ರತಿಯೊಬ್ಬರ ಬಳಿ ಲಕ್ಷ ಲಕ್ಷ ಹಣ ಪತ್ತೆಯಾಗಿದೆ

news18-kannada
Updated:October 12, 2020, 7:20 AM IST
ಜೂಜಾಟದ ನೆಪದಲ್ಲಿ ಗ್ಯಾಂಬ್ಲಿಂಗ್ ಅಡ್ಡೆ ಮೇಲೆ ಸಿಸಿಬಿ ಪೊಲೀಸರ ದಾಳಿ: 65 ಜನರ ಬಂಧನ, 80 ಲಕ್ಷ ರೂಪಾಯಿ ಜಪ್ತಿ
ವಶಪಡಿಸಿಕೊಂಡ ನಗದು ಹಣ
  • Share this:
ಬೆಂಗಳೂರು(ಅಕ್ಟೋಬರ್​. 12): ಜೂಜು ಆಡುವ ನೆಪದಲ್ಲಿ ದಾಳಿ ನಡೆಸಿ ಸುಮಾರು 65 ಜೂಜುಕೋರರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಗರದ ಮಹದೇವಪುರ ಠಾಣಾ ವ್ಯಾಪ್ತಿಯ ಹೋಟೆಲ್​​​ವೊಂದರ ಮೇಲೆ ಇಂದು ಮಧ್ಯಾಹ್ನ ಸಿಸಿಬಿ ಪೊಲೀಸರು ದಾಳಿ ನಡೆಸಿ 80 ಲಕ್ಷಕ್ಕೂ ಅಧಿಕ ನಗದು ಹಣವನ್ನ ಜಪ್ತಿ ಮಾಡಿದ್ದಾರೆ. ಆಂಧ್ರಪ್ರದೇಶ ದಿಂದ ಬಂದಿದ್ದ ಸುಮಾರು 65ಕ್ಕೂ ಹೆಚ್ಚು ಜನರ ಗುಂಪು ಮಹದೇವಪುರ ಬಳಿಯ ಖಾಸಗಿ ಹೊಟೇಲ್ ನಲ್ಲಿ ಜೂಜಾಟದಲ್ಲಿ ತೊಡಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಹೋಟೆಲ್​​ ಬಳಿ ಜಮಾಯಿಸಿ ಗ್ಯಾಂಬ್ಲಿಂಗ್ ಅಡ್ಡೆ ಶುರುವಾಗುವುದನ್ನೆ ಕಾದು ಕುಳಿತಿದ್ದರು. ಗ್ಯಾಂಬ್ಲಿಂಗ್ ಶುರುವಾಗುತ್ತಿದ್ದಂತೆ ಸಿಸಿಬಿ ಪೊಲೀಸರ ಒಂದು ತಂಡ ಸುಮಾರು ಐದು ಲಕ್ಷ ರೂಪಾಯಿ ಹಣದೊಂದಿಗೆ ಜೂಜು ಆಡುವ ನೆಪದಲ್ಲಿ ಹೋಟೆಲ್​​ ಪ್ರವೇಶಿಸಿದರು.

ಗ್ಯಾಂಬ್ಲಿಂಗ್ ಆಡಲು ಐದು ಲಕ್ಷ ಮುಂಗಡ ಹಣ ಕಟ್ಟಬೇಕಿದ್ದು, ಪೊಲೀಸರು ಸಹ ಅದರಂತೆ ಹಣ ಸಿದ್ದಪಡಿಸಿಕೊಂಡು ಜೂಜು ಆಡ್ಡೆಗೆ ಎಂಟ್ರಿಯಾಗಿದ್ದರು. ಜೂಜು ಅಡ್ಡೆ ಆರಂಭವಾಗುತ್ತಿದ್ದಂತೆ ಹೊಟೇಲ್ ಒಳಗಡೆಯಿಂದ ಹೊರಗಡೆ ಇದ್ದ ಸಿಸಿಬಿ ಪೊಲೀಸರಿಗೆ ಮಾಹಿತಿ ರವಾನೆಯಾಗಿದೆ.

ಕೂಡಲೇ ಸಿಸಿಬಿ ಡಿಸಿಪಿ ರವಿಕುಮಾರ್ ನೇತೃತ್ವದ ಸುಮಾರು 30 ಸಿಸಿಬಿ ಪೊಲೀಸರ ತಂಡ ಹೋಟೆಲ್​​ ಮೇಲೆ ದಾಳಿ ನಡೆಸಿ ಶೋಧ ಕೈಗೊಂಡಿದ್ದಾರೆ. ಈ ವೇಳೆ ಪ್ರತಿಯೊಬ್ಬರ ಬಳಿ ಲಕ್ಷ ಲಕ್ಷ ಹಣ ಪತ್ತೆಯಾಗಿದೆ.

ಇದನ್ನೂ ಓದಿ : ಕಲಬುರ್ಗಿಯಲ್ಲಿ ವರುಣನ ಅಬ್ಬರ ; ಹಳ್ಳದಲ್ಲಿ ಕೊಚ್ಚಿ ಹೋಗಿ ಇಬ್ಬರು ಬಾಲಕರ ಸಾವು

ವೀಕೆಂಡ್ ಆಗಿರುವುದರಿಂದ ಆಂಧ್ರಪ್ರದೇಶದಿಂದ ಬಂದಿದ್ದ ಈ ಗ್ಯಾಂಗ್ ಲಕ್ಷ ಲಕ್ಷ ಹಣ ಪಣಕ್ಕಿಟ್ಟು ಜೂಜು ಆಡುತ್ತಿದ್ದರು ಎನ್ನಲಾಗಿದೆ. ಸದ್ಯ ಸಿಸಿಬಿ ಪೊಲೀಸರು 65 ಜನರನ್ನ ಬಂಧಿಸಿ 80 ಲಕ್ಷ ನಗದು ಹಣವನ್ನ ಜಪ್ತಿ ಮಾಡಿದ್ದಾರೆ.

ಅಲ್ಲದೆ ಇನ್ನೂ ಪರಿಶೀಲನೆ ಮುಂದುವರೆದಿದ್ದು ಮತ್ತಷ್ಟು ಹಣ ಪತ್ತೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ಈ ಬಗ್ಗೆ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ.
Published by: G Hareeshkumar
First published: October 12, 2020, 7:20 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading