ಬೆಂಗಳೂರು; ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ನಟಿಯರಿಗೆ ಮತ್ತೊಂದು ಸಂಕಷ್ಟ ಶುರುವಾಗಿದೆ. ಎರಡನೇ ಬಾರಿಗೆ ಪೊಲೀಸರು ಕೂದಲು ಸಂಗ್ರಹ ಮಾಡಿದ್ದು, ಎಫ್ಎಸ್ ಎಲ್ ಗೆ ರವಾನೆ ಮಾಡಿದ್ದಾರೆ. ಡ್ರಗ್ಸ್ ಕೇಸ್ ನಲ್ಲಿ ನಟಿ ರಾಗಿಣಿ ಹಾಗೂ ಸಂಜನಾ ಇಬ್ಬರು ಪರಪ್ಪನ ಅಗ್ರಹಾರ ಜೈಲು ಸೇರಿ ಎರಡೂವರೆ ತಿಂಗಳಾಯ್ತು. ಇತ್ತ ಜೈಲಿಗೆ ಹೋಗೋಕು ಮುನ್ನ ನಟಿಯರನ್ನು ಹೇರ್ ಪಾಲಿಕ್ ಟೆಸ್ಟ್ ಮಾಡಿದ್ದರು. ಅಂದರೆ ನಟಿಯರು ಕೂದಲು ಮಾದರಿಯನ್ನು ಬೌರಿಂಗ್ ಆಸ್ಪತ್ರೆಯ ವೈದ್ಯರಿಂದ ಸಂಗ್ರಹ ಮಾಡಿ ಹೈದ್ರಾಬಾದ್ ಎಫ್ಎಸ್ಎಲ್ ಕೇಂದ್ರಕ್ಕೆ ಕಳುಹಿಸಿದ್ದರು. ಆದರೆ ತಾಂತ್ರಿಕ ಕಾರಣದ ಜೊತೆಗೆ ಕೂದಲು ಮಾದರಿ ಸರಿಯಾಗಿ ಸಂಗ್ರಹಿಸದಿದ್ದಲ್ಲಿ ಮತ್ತೊಮ್ಮೆ ಕೂದಲು ಮಾದರಿಯನ್ನು ಸಂಗ್ರಹಿಸಿದ್ದಾರೆ.
ಕೂದಲು ಸಂಗ್ರಹಕ್ಕೆ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡು ನ್ಯಾಯಾಲಯದ ಆದೇಶದಂತೆ ಇಂದು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟಿಯರಿಬ್ಬರ ಕೂದಲು ಮಾದರಿಯನ್ನು ಸಂಗ್ರಹ ಮಾಡಿದ್ದಾರೆ. ಹೌದು ಯಾವುದೇ ಒಬ್ಬ ವ್ಯಕ್ತಿಯ ಕೂದಲಿನಿಂದ ಡ್ರಗ್ಸ್ ಸೇವನೆ ಮಾಡಿದ್ದಾರಾ ಇಲ್ವಾ ಅನ್ನೋದು ಗೊತ್ತಾಗುತ್ತೆ. ಒಂದು ವರ್ಷದ ಒಳಗೆ ಏನಾದರೂ ಡ್ರಗ್ಸ್ ಸೇವನೆ ಮಾಡಿದ್ದರೆ ಈ ಚೆಕಪ್ ನಿಂದ ತಿಳಿಯುತ್ತೆ. ಇನ್ನು ಈ ಕೂದಲು ಮಾದರಿ ಸಂಗ್ರಹವನ್ನು ತಲೆಯ ಮೂರು ಭಾಗದಲ್ಲಿ ಸಂಗ್ರಹ ಮಾಡಲಾಗುತ್ತೆ. ಕಿವಿಯ ಮೇಲ್ಬಾಗ ಹಾಗೂ ತಲೆಯ ಮಧ್ಯ ಭಾಗದಲ್ಲಿ ಕೂದಲನ್ನು ಸಂಗ್ರಹ ಮಾಡಿ ಅದನ್ನು ಎಫ್ ಎಸ್ ಎಲ್ ಗೆ ರವಾನೆ ಮಾಡ್ತಾರೆ. ಕೂದಲಿನ ಬೇರಿನ ಮೂಲಕ ಡ್ರಗ್ಸ್ ಸೇವನೆ ಮಾಡಿದ್ದಾರಾ ಇಲ್ಲವಾ ಅನ್ನೋದು ಪರೀಕ್ಷೆಯಲ್ಲಿ ತಿಳಿಯುತ್ತೆ.
ಇದನ್ನು ಓದಿ: ಗರ್ಭಪಾತ ಪ್ರಕರಣ; ಮಹಾಲಿಂಗಪುರದಲ್ಲಿ ಬಿಜೆಪಿ ಶಾಸಕ ಸಿದ್ದು ಸವದಿ ವಿರುದ್ಧ ಕಾಂಗ್ರೆಸ್ ಶಕ್ತಿ ಪ್ರದರ್ಶನ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ