ಸ್ಯಾಂಡಲ್​​ವುಡ್​​ ಡ್ರಗ್ಸ್​ ಕೇಸ್​​ - ದೊಡ್ಡ ತಲೆಗೆ ಬಲೆ ಬೀಸಿದ ಸಿಸಿಬಿ ಪೊಲೀಸ್​​​​

ಈಗಾಗಲೇ ಆ ಬಿಗ್ ಫಿಶ್ ಸಿಸಿಬಿಯ ಒಂದು ತಂಡ ಕಂಪ್ಲೀಟ್ ಮಾಹಿತಿ ಕಲೆ ಹಾಕಿದ್ದು, ಆತನ ಜಾಡು ಹಿಡಿದು ತನಿಖೆ ಕೈಗೊಂಡಿದ್ದಾರಂತೆ ಸಿಸಿಬಿ ಡಿಸಿಪಿ ರವಿಕುಮಾರ್ ನೇತೃತ್ವದಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರಂತೆ.

news18-kannada
Updated:September 29, 2020, 8:03 AM IST
ಸ್ಯಾಂಡಲ್​​ವುಡ್​​ ಡ್ರಗ್ಸ್​ ಕೇಸ್​​ - ದೊಡ್ಡ ತಲೆಗೆ ಬಲೆ ಬೀಸಿದ ಸಿಸಿಬಿ ಪೊಲೀಸ್​​​​
ರಾಗಿಣಿ ಹಾಗೂ ಸಂಜನಾ
  • Share this:
ಬೆಂಗಳೂರು(ಸೆ.29): ಡ್ರಗ್ ಡೀಲ್​​ನಲ್ಲಿ ನಟಿಯರು ಪೆಡ್ಲರ್​​ಗಳನ್ನ ಬಂಧಿಸಿ ವಿಚಾರಣೆ ನಡೆಸಿದ ಸಿಸಿಬಿ ಪೊಲೀಸರು ಈಗ ಮಾದಕ ಲೋಕದ ದೊಡ್ಡ ಬಿಗ್ ಫಿಶ್​ಗೆ ಬಲೆ ಬೀಸಿದ್ದಾರೆ. ಬೆಂಗಳೂರು ಸೇರಿ ಹಲವೆಡೆ ಡ್ರಗ್ಸ್ ಸಫ್ಲೈ ಲಿಂಕ್ ಹೊಂದಿರುವ ಓರ್ವ ವ್ಯಕ್ತಿಯ ಮಾಹಿತಿ ಸಂಗ್ರಹ ಮಾಡಿರೋ ಸಿಸಿಬಿ ಪೊಲೀಸರು ಗೌಪ್ಯವಾಗಿ ಆತನ ಬೆನ್ನು ಬಿದ್ದಿದ್ದಾರೆ. ಆ ಬಿಗ್ ಫಿಶ್ ಬೆಂಗಳೂರು-ಮಂಗಳೂರು, ಬೆಂಗಳೂರು-ಮುಂಬೈ, ಬೆಂಗಳೂರು ಗೋವಾ ಸೇರಿದಂತೆ ಹಲವೆಡೆ ಡ್ರಗ್ ಸಫ್ಲೈ ಮಾಡಿರೋ ಬಗ್ಗೆ ಸಿಸಿಬಿ ಮಾಹಿತಿ ಕಲೆ ಹಾಕಿದೆ. ಖಾಕಿ ಕಣ್ತಪ್ಪಿಸಿ ಲೀಲಾಜಾಲವಾಗಿ ಡ್ರಗ್ ಸಫ್ಲೈ ಮಾಡಿರೋ ಆತ ಹಲವು ಸೆಲೆಬ್ರಿಟಿಗಳ ಜೊತೆ ಲಿಂಕ್ ಹೊಂದಿದ ಎನ್ನಲಾಗಿದೆ. ಇದೀಗ ಆ ಬಿಗ್ ಫಿಶ್ ಅನ್ನ ಬಲೆಗೆ ಬೀಳಿಸಲು ಖಾಕಿ ಖೆಡ್ಡ ರೆಡಿ ಮಾಡಿದ್ದಾರಂತೆ. ಸಿಸಿಬಿ ಪೊಲೀಸರು ಈವರೆಗೆ ಬಂಧಿಸಿರುವ ಡ್ರಗ್ ಪೆಡ್ಲರ್ ಗಳು ಕೊಟ್ಟ ಮಾಹಿತಿ ಮೇರೆಗೆ ಈ ಕಾರ್ಯಾಚರಣೆಯನ್ನ ನಡೆಸ್ತಿದ್ದಾರಂತೆ. 

ಇನ್ನು, ಆ ಪೆಡ್ಲರ್ ಜೊತೆ ಭೂಗತಲೋಕದ ಪಾತಾಕಿಗಳು, ಸೆಲೆಬ್ರಿಟಿಗಳು, ಗಣ್ಯ ವ್ಯಕ್ತಿಗಳ ಪುತ್ರರು ಸೇರಿ ಹಲವರ ನಂಟು ಹೊಂದಿದ್ದಾರೆ ಎನ್ನಲಾಗಿದೆ. ಬಾಲಿವುಡ್, ಸ್ಯಾಂಡಲ್ ವುಡ್ ನಟ ನಟಿಯರ ಜೊತೆಗು ಪೆಡ್ಲರ್ ಗೆ ನಂಟಿದ್ದು, ಆತನ ಬಂಧನ ಬಳಿಕ ಡ್ರಗ್ಸ್ ಡೀಲ್​​ನ ಮತ್ತಷ್ಟು ರೋಚಕ ಕಹಾನಿ ಹೊರ ಬರುತ್ತೆ ಅಂತಿದ್ದಾರೆ ಸಿಸಿಬಿಯ ಉನ್ನತ ಮೂಲಗಳು.

ಈಗಾಗಲೇ ಆ ಬಿಗ್ ಫಿಶ್ ಸಿಸಿಬಿಯ ಒಂದು ತಂಡ ಕಂಪ್ಲೀಟ್ ಮಾಹಿತಿ ಕಲೆ ಹಾಕಿದ್ದು, ಆತನ ಜಾಡು ಹಿಡಿದು ತನಿಖೆ ಕೈಗೊಂಡಿದ್ದಾರಂತೆ ಸಿಸಿಬಿ ಡಿಸಿಪಿ ರವಿಕುಮಾರ್ ನೇತೃತ್ವದಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರಂತೆ.

ನಿನ್ನೆಯಷ್ಟೇ ಸ್ಯಾಂಡಲ್​​ವುಡ್​​​ ಡ್ರಗ್ಸ್​ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟಿ ರಾಗಿಣಿ ದ್ವಿವೇದಿ, ಸಂಜನಾ ಗರ್ಲಾನಿ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಕೇಸ್​​ ಸಂಬಂಧ ವಾದ-ಪ್ರತಿವಾದ ಆಲಿಸಿದ ಎನ್​ಡಿಪಿಎಸ್ ನ್ಯಾಯಾಲಯ ರಾಗಿಣಿ ಮತ್ತು ಸಂಜನಾ ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ಪ್ರಕಟಿಸಿತ್ತು. ಆದ್ದರಿಂದ ಇಬ್ಬರಿ ನಟಿಯರಿಗೂ ಇನ್ನೊಂದಷ್ಟು ಪರಪ್ಪನ ಅಗ್ರಹಾರ ಜೈಲೇ ಗತಿಯಾಗಿದೆ. ವಿಶೇಷ ಕೋರ್ಟ್ ನ್ಯಾ. ಜಿ ಎಂ ಶೀನಪ್ಪನವರು ಈ ಆದೇಶ ಹೊರಡಿಸಿದ್ದಾರೆ. ಸಿಸಿಬಿ ತನಿಖೆ ಇನ್ನು ಪ್ರಾಥಮಿಕ ಹಂತದಲ್ಲಿದೆ. ಈ ಹಂತದಲ್ಲಿ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ಧಾರೆ.


ಇದನ್ನೂ ಓದಿ: ಸ್ಯಾಂಡಲ್​​ವುಡ್​​ ಡ್ರಗ್ಸ್ ಕೇಸ್​​​: ನಟಿ ರಾಗಿಣಿ, ಸಂಜನಾ ಜಾಮೀನು ಅರ್ಜಿ ವಜಾ, ಜೈಲೇ ಗತಿ

ಇನ್ನು, ರಾಗಿಣಿ ಮತ್ತು ಸಂಜನಾ ಜೊತೆಗೆ ರಾಹುಲ್ ಥಾನ್ಸೆ, ವಿರೇಂದ್ರ ಖನ್ನಾ, ರವಿಶಂಕರ್ ಕೂಡ ಜಾಮೀನು ಕೋರಿ ಕೋರ್ಟ್​ ಮೊರೆ ಮೆಟ್ಟಿಲೇರಿದ್ದರು. ಇಬ್ಬರು ನಟಿಯರೊಂದಿಗೆ ಈ ಮೇಲಿನವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬಳಿಕ ಕೋರ್ಟ್ ತನ್ನ ಅಂತಿಮ ತೀರ್ಪು ನೀಡಿದೆ. ಎಲ್ಲರ ಅರ್ಜಿ ವಿಚಾರಣೆಯನ್ನು ಇನ್ನೊಂದು ಮೂರು ನಾಲ್ಕು ದಿನಕ್ಕೆ ಮುಂದೂಡಿದೆ.
Published by: Ganesh Nachikethu
First published: September 29, 2020, 7:17 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading