HOME » NEWS » State » CCB POLICE ARREST SANDALWOOD DRUGS CASE ACCUSED VINAYA KUMAR SESR KMTV

Durgs Case: ಬರೋಬ್ಬರಿ 100 ದಿನಗಳ ನಂತರ ಸಿಸಿಬಿ ಪೊಲೀಸರ ಬಲೆಗೆ ಬಿದ್ದ ವಿನಯ್ ಕುಮಾರ್

ಪ್ರಕರಣದ ಎ 12 ಆರೋಪಿಯಾಗಿರುವ ವಿನಯ್​ ಕೇಸ್ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದ. ಪೊಲೀಸರು ಸಹ ವಿನಯ್ ಗಾಗಿ ಸುಮಾರು ಮೂರು ತಿಂಗಳ ಕಾಲ ನಿರಂತರ ಶೋಧ ನಡೆಸಿದ್ದರು

news18-kannada
Updated:December 21, 2020, 7:19 PM IST
Durgs Case: ಬರೋಬ್ಬರಿ 100 ದಿನಗಳ ನಂತರ ಸಿಸಿಬಿ ಪೊಲೀಸರ ಬಲೆಗೆ ಬಿದ್ದ ವಿನಯ್ ಕುಮಾರ್
ವಿನಯ್ ಕುಮಾರ್
  • Share this:
ಬೆಂಗಳೂರು (ಡಿ. 21): ಸ್ಯಾಂಡಲ್ ವುಡ್ ಡ್ರಗ್ ಡೀಲ್ ಪ್ರಕರಣದ ಪ್ರಮುಖ ಆರೋಪಿ ಕಡೆಗೂ ಖಾಕಿ ಬಲೆಗೆ ಬಿದ್ದಿದ್ದಾನೆ. ಪ್ರಕರಣ ದಾಖಲಾದ ಬರೋಬ್ಬರಿ 100 ದಿನಗಳ ನಂತರ ಆರೋಪಿ ಸೆರೆ ಸಿಕ್ಕಿದ್ದಾನೆ.  ಆತನೇ ವಿನಯ್​ ಕುಮಾರ್​. ಪ್ರಕರಣದ ಎ 12 ಆರೋಪಿಯಾಗಿರುವ ವಿನಯ್​ ಕೇಸ್ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದ. ಪೊಲೀಸರು ಸಹ ವಿನಯ್ ಗಾಗಿ ಸುಮಾರು ಮೂರು ತಿಂಗಳ ಕಾಲ ನಿರಂತರ ಶೋಧ ನಡೆಸಿದ್ದರು. ಅದರೆ ಎಲ್ಲೂ ಸಹ ವಿನಯ್ ಇರುವ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ವಿನಯ್ ಚಲನವಲನಗಳ ಮೇಲೆ ಪೊಲೀಸರು ನಿಗಾ ವಹಿಸಿದ್ದರು. ವಿನಯ್​ ಗೊರಗುಂಟೆಪಾಳ್ಯ ಬಳಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಇನ್ಸ್‌ಪೆಕ್ಟರ್ ಪುನೀತ್ ನೇತೃತ್ವದ ತಂಡ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನೂ ಡ್ರಗ್ ಡೀಲ್ ಪ್ರಕರಣದಲ್ಲಿ ವಿನಯ್ ಪ್ರಮುಖ ಪಾತ್ರ ವಹಿಸಿದ್ದು, ಈತ ಸಹ ಹಲವು ಪಾರ್ಟಿಗಳನ್ನ ಆಯೋಜನೆ ಮಾಡಿದ್ದ. ಸೆಲೆಬ್ರಿಟಿಗಳ ಜೊತೆ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದ ಆರೋಪಿ ಡ್ರಗ್ ಡೀಲ್ ಕೇಸ್ ನ ಹಲವು ಆರೋಪಿಗಳ ಜೊತೆ ನಂಟು ಹೊಂದಿದ್ದ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ. ಕಾಟನ್ ಪೇಟೆಯಲ್ಲಿ ದಾಖಲಾದ ಪ್ರಕರಣದಲ್ಲಿ ವಿನಯ್ ಎ೧೨ ಆರೋಪಿಯಾಗಿದ್ದು ಈವರೆಗೆ ನಾಪತ್ತೆಯಾಗಿದ್ದ. ಆತನಿಗಾಗಿ ನಿರಂತರ ಹುಡುಕಾಟ ನಡೆಸಿದ್ದು ಇಂದು ಬಂಧಿಸಲಾಗಿದೆ. ಅಲ್ಲದೇ ಆರೋಪಿ ಎಸ್ಕೇಪ್ ಆಗಲು ನೆರವು ನೀಡಿದವರು, ಇಷ್ಟು ದಿನ ಎಲ್ಲಿ ಉಳಿದುಕೊಂಡಿದ್ದ ಎಂಬ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದು ಸಂದೀಪ್ ಪಾಟೀಲ್ ತಿಳಿಸಿದರು.

ಇದನ್ನು ಓದಿ: ಸರ್ಕಾರಿ ಮನೆ ತೊರೆದು ಸ್ಚಕ್ಷೇತ್ರಕ್ಕೆ ತೆರಳಿದ ಸಭಾಪತಿ ಪ್ರತಾಪ್​ ಚಂದ್ರ ಶೆಟ್ಟಿ

ಆರೋಪಿಯನ್ನ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಸಿಸಿಬಿ ಪೊಲೀಸರು ಹೆಚ್ಚಿನ ವಿಚಾರಣೆ ಸಲುವಾಗಿ ಪುನಃ ತಮ್ಮ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಲಯ‌ ಡಿಸೆಂಬರ್ 28 ರವರೆಗೆ ಆರೋಪಿಯನ್ನ ಸಿಸಿಬಿ ಪೊಲೀಸರ‌ ವಶಕ್ಕೆ ನೀಡಿ ಆದೇಶಿಸಿದೆ‌. ಆರೋಪಿ ಹಲವು ಪಾರ್ಟಿಗಳ ಆಯೋಜನೆ, ಡ್ರಗ್ ಪೆಡ್ಲರ್ ಗಳ ಜೊತೆ ಸಂಪರ್ಕ ಹೊಂದಿರುವ ಬಗ್ಗೆ ಮಾಹಿತಿ ಇರುವುದರಿಂದ ಸಿಸಿಬಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಇದೇ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಯನ್ನ ಸಿಸಿಬಿ ಪೊಲೀಸರು ಬಂಧಿಸಿದ್ದರು. ಇಬ್ಬರು ನಟಿಯರನ್ನ ಬಂಧಿಸಿದ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿ ಬಳಿಕ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿದ್ದರು. ಪ್ರಕರಣದಲ್ಲಿ ನಟಿ ಸಂಜನಾ ಹೈಕೋರ್ಟ್ ನಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದು, ರಾಗಿಣಿ ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಇನ್ನುಳಿದಂತೆ ಪೇಜ್ ಪಾರ್ಟಿ ಆಯೋಜಕರು, ನೈಜೀರಿಯಾ ಡ್ರಗ್ ಪೆಡ್ಲರ್ ಗಳು ಸೇರಿ ಒಟ್ಟು 16 ಜನರನ್ನ ಸಿಸಿಬಿ ಪೊಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.
Published by: Seema R
First published: December 21, 2020, 7:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories