Terrorists in Bengaluru: ಶಂಕಿತ ಉಗ್ರನ ಸಂಪರ್ಕದಲ್ಲಿದ್ದವರಿಗೆ ಶಾಕ್! ಸಿಸಿಬಿಯಿಂದ ನಾಲ್ವರ ವಿಚಾರಣೆ

ನಿನ್ನೆ ಶಂಕಿತ ಉಗ್ರನನ್ನ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಆತನ ವಿಚಾರಣೆ ಮುಂದುವರೆದಿದೆ. ಇದೀಗ ಈತನ ಜೊತೆಯಲ್ಲಿ ವಾಸವಿದ್ದ ಅಸ್ಸಾಂ ಮೂಲದ ಮೂವರು ಯುವಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಬಂಧಿತ ಶಂಕಿತ ಉಗ್ರ ಅಖ್ತರ್ ಹುಸೇನ್

ಬಂಧಿತ ಶಂಕಿತ ಉಗ್ರ ಅಖ್ತರ್ ಹುಸೇನ್

  • Share this:
ಬೆಂಗಳೂರು: ರಾಜ್ಯಧಾನಿ ಬೆಂಗಳೂರಲ್ಲಿ (Bengaluru) ಫುಡ್ ಡೆಲಿವರಿ ಬಾಯ್ (Food Delivery Boy) ಆಗಿ ಕೆಲಸ ಮಾಡುತ್ತಲೇ, ಉಗ್ರ ಚಟುವಟಿಕೆಯಲ್ಲಿ ಶಾಮೀಲಾಗಿದ್ದ ಶಂಕಿತ ಉಗ್ರನನ್ನು (suspected terrorist) ನಿನ್ನೆ ಸಿಸಿಬಿ ಪೊಲೀಸರು (CCB Police) ಅರೆಸ್ಟ್ (Arrest) ಮಾಡಿದ್ದರು. ಇದೀಗ ಆತನ ವಿಚಾರಣೆ (Enquiry) ಮುಂದುವರೆದಿದೆ. ಇದೀಗ ತನಿಖೆಯ ಭಾಗವಾಗಿ ಆತನ ಜೊತೆ ಸಂಪರ್ಕದಲ್ಲಿ ಇದ್ದ ಯುವಕರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ತಡರಾತ್ರಿ ತಮಿಳುನಾಡಿಂದ (Tamil Nadu) ಯುವಕನೊಬ್ಬನನ್ನು ಕರೆತಂದ ಪೊಲೀಸರು, ವಿಚಾರಣೆ ನಡೆಸಿದ್ದಾರೆ. ಇನ್ನುಳಿದಂತೆ ಆತನೊಂದಿಗೆ ಬಾಡಿಗೆ ಮನೆಯಲ್ಲಿದ್ದ (Rent House) ಯುವಕರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.

ಸಿಸಿಬಿ ಬಲೆಗೆ ಬಿದ್ದಿದ್ದ ಶಂಕಿತ ಉಗ್ರ

ಬೆಂಗಳೂರಲ್ಲಿ ವಾಸವಿದ್ದ ಶಂಕಿತ ಉಗ್ರನನ್ನು ಬೆಂಗಳೂರು ಸಿಸಿಬಿ ಪೊಲೀಸರು ನಿನ್ನೆ ವಶಕ್ಕೆ ಪಡೆದಿದ್ದರು. ಅಸ್ಸಾಂ ಮೂಲದ ಅಖ್ತರ್ ಹುಸೇನ್ ಎಂಬಾತನೆ ಬಂಧಿತ ಶಂಕಿತ ಉಗ್ರನಾಗಿದ್ದಾನೆ. ತಿಲಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಿಟಿಪಿ ಪ್ರದೇಶದ ಕಟ್ಟಡದ 3ನೇ ಮಹಡಿಯಲ್ಲಿ ಅಖ್ತರ್ ವಾಸವಾಗಿದ್ದ. ರೂಮ್​ನಲ್ಲಿದ್ದ ಇತರ ಮೂವರು ಯುವಕರು ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದರು. ನಾಲ್ವರೂ ಸಹ ರಾತ್ರಿ ವೇಳೆ ಮಾತ್ರ ಓಡಾಟ ನಡೆಸುತ್ತಿದ್ದು, ಸ್ಥಳೀಯರೊಂದಿಗೆ ಸಂಪರ್ಕದಲ್ಲಿ ಇರಲಿಲ್ಲ ಎಂದು ಹೇಳಲಾಗುತ್ತಿದೆ.

ರೂಮ್‌ನಲ್ಲಿದ್ದ ಮೂವರು ಯುವಕರ ವಿಚಾರಣೆ

ಕೇಂದ್ರ ಹಾಗೂ ರಾಜ್ಯ ತನಿಖಾ‌ ಸಂಸ್ಥೆಗಳ‌ ನೆರವಿನಿಂದ ಬೆಂಗಳೂರ ನಗರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ, ನಿನ್ನೆ ತಿಲಕ್ ನಗರದ ಮನೆಯೊಂದರ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಶಂಕಿತ ಉಗ್ರನನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಈತನ ಜೊತೆಯಲ್ಲಿ ವಾಸವಿದ್ದ ಅಸ್ಸಾಂ ಮೂಲದ ಮೂವರು ಯುವಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಇದನ್ನೂ ಓದಿ: Suspected Terrorist: ಉಗ್ರರ ಅಡಗು ತಾಣವಾಗಿದ್ಯಾ ಬೆಂಗಳೂರು? ಮತ್ತೊಬ್ಬ ಶಂಕಿತ ಉಗ್ರನ ಬಂಧನ

ತಮಿಳುನಾಡಿಂದ ಯುವಕನನ್ನು ಕರೆತಂದ ಪೊಲೀಸರು

ಶಂಕಿತ ಉಗ್ರ ಅಖ್ತರ್ ಹುಸೇನ್ ಜೊತೆ ಸಂಪರ್ಕದಲ್ಲಿದ್ದ ಆದಿಲ್ ಎಂಬಾತನನ್ನು ತಮಿಳುನಾಡಿಂದ ಕರೆದು ತಂದಿರುವ ಸಿಸಿಬಿ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ. ತಡರಾತ್ರಿಯೇ ನಗರಕ್ಕೆ ಕರೆತಂದಿರುವ ಪೊಲೀಸರು, ಇಂದು ವಿಚಾರಣೆ ನಡೆಸಿ, ಬಳಿಕ ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ಈತನೂ ಅಸ್ಸಾಂ ಮೂಲದವನಾಗಿದ್ದು, ಬಂಧಿತ ಅಖ್ತರ್ ಹುಸೇನ್ ಜೊತೆಗೆ ಸಂಪರ್ಕ ಹೊಂದಿದ್ದ.

ಮುಂದುವರೆದ ಶಂಕಿತ ಉಗ್ರನ ವಿಚಾರಣೆ

ಬಧಿತ ಅಖ್ತರ್ ಹುಸೇನ್‌ಗೆ ಸಿಸಿಬಿ ಡ್ರಿಲ್ ಮುಂದುವರೆದಿದೆ. ಸಾಮಾಜಿಕ ಜಾಲತಾಣಗಳ ಮೂಲಕ  ಉಗ್ರ ಚಟುವಟಿಕೆಗೆ ಯುವಕರನ್ನು ಪ್ರೇರೇಪಣೆ ಮಾಡುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಬಂಧಿತನ ಮೊಬೈಲ್ ಫೋನ್ ಡೇಟಾ ಮತ್ತು ಚಾಟಿಂಗ್ ರಿಟ್ರೀವ್ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳನ್ನ ಪರಿಶೀಲನೆ ನಡೆಸಿ ಅಖ್ತರ್ ಹುಸೇನ್ ವಿಚಾರಣೆ ನಡೆಸಲಾಗ್ತಿದೆ.

ಎನ್ಐಎಯಿಂದಲೂ ಅಖ್ತರ್ ಹುಸೇನ್ ವಿಚಾರಣೆ

ಇನ್ನು ಉಗ್ರ ಚಟುವಟಿಕೆಗಳಲ್ಲಿ ಶಾಮೀಲಾಗಿರುವ ಶಂಕೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ತಂಡ ಬಂಧಿತ ಶಂಕಿತ ಉಗ್ರನನ್ನು ವಿಚಾರಣೆ ನಡೆಸಿದೆ. ನಿನ್ನೆ ಮಧ್ಯಾಹ್ನದವರೆಗೂ ಎನ್ಐಎ ತಂಡ ಶಂಕಿತ ಉಗ್ರನನ್ನು ವಿಚಾರಣೆಗೆ ಒಳಪಡಿಸಿದೆ.

ಇದನ್ನೂ ಓದಿ: Student Missing Case: ಖಾಕಿ ಕೈಗೆ ಸಿಕ್ಕಿದ್ರು ನಾಪತ್ತೆಯಾದ ಇಬ್ಬರು ವಿದ್ಯಾರ್ಥಿನಿಯರು; ಮತ್ತಿಬ್ಬರು ಗೋವಾಗೆ ಹೋಗಿರೋ ಶಂಕೆ

ಅಖ್ತರ್ ಹುಸೇನ್ ಸಹೋದರನ ವಿಚಾರಣೆ

ಅಖ್ತರ್ ಹುಸೇನ್ ಜೊತೆ ಆತನ ತಮ್ಮ ಕೂಡ ರೂಂನಲ್ಲಿ ವಾಸವಿದ್ದ. ಹೀಗಾಗಿ ಆತನನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಇನ್ನು ಆತನ ರೂಂನಲ್ಲಿ ಆತನ ಜೊತೆಗಿದ್ದ ನಾಲ್ವರು ಯುವಕರನ್ನು ವಿಚಾರಣೆ ನಡೆಸಿ, ಬಿಡಲಾಗಿದೆ ಅಂತ ಮೂಲಗಳು ತಿಳಿಸಿವೆ.
Published by:Annappa Achari
First published: