• Home
 • »
 • News
 • »
 • state
 • »
 • Silent Sunil: ಬಹಿರಂಗ ಸಮಾವೇಶ ಮಾಡಿದರೂ CCB ಕಣ್ಣಿಗೆ ಕಾಣಲಿಲ್ವಾ ಸೈಲೆಂಟ್ ಸುನೀಲ್?

Silent Sunil: ಬಹಿರಂಗ ಸಮಾವೇಶ ಮಾಡಿದರೂ CCB ಕಣ್ಣಿಗೆ ಕಾಣಲಿಲ್ವಾ ಸೈಲೆಂಟ್ ಸುನೀಲ್?

ಸೈಲೆಂಟ್ ಸುನೀಲ್

ಸೈಲೆಂಟ್ ಸುನೀಲ್

ಈ ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ, ಪಿಸಿ ಮೋಹನ್, ಶಾಸಕ ಉದಯ್ ಗರುಡಾಚಾರ್​, ಎನ್.ಆರ್.ರಮೇಶ್ ಭಾಗಿಯಾಗಿದ್ದರು. ಬಹಿರಂಗವಾಗಿಯೇ ಸೈಲೆಂಟ್​ ಸುನೀಲ್​ಗೆ ಶುಭ ಹಾರೈಸಿದ್ದರು.

 • News18 Kannada
 • 5-MIN READ
 • Last Updated :
 • Bangalore, India
 • Share this:

ನವೆಂಬರ್ 23ರಂದು ಸಿಸಿಬಿ ಪೊಲೀಸರು (CCB Police) ರಾಜಧಾನಿಯಲ್ಲಿರುವ ಸುಮಾರು 80ಕ್ಕೂ ಅಧಿಕ ರೌಡಿಶೀಟರ್​ಗಳ (Rowdy sheeters) ನಿವಾಸದ ಮೇಲೆ ದಾಳಿ ನಡೆಸಿದ್ದರು. ಎಂದಿನಂತೆ ಎಲ್ಲರನ್ನೂ ಠಾಣೆಗೆ ಕರೆತಂದು ಎಚ್ಚರಿಕೆ ನೀಡಿದ್ದರು. ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ (Mangaluru Cooker Bomb Blast) ಸ್ಫೋಟದ ಬೆನ್ನಲ್ಲೇ ಅಲರ್ಟ್​ ಆಗಿದ್ದ ಸಿಸಿಬಿ ಈ ದಾಳಿ ನಡೆಸಿತ್ತು ಎನ್ನಲಾಗಿತ್ತು. ಬೆಂಗಳೂರಿನ (Bengaluru) ಎಲ್ಲಾ ಠಾಣಾ ವ್ಯಾಪ್ತಿಗಳ ಐವರು ಎಸಿಪಿ ಮತ್ತು 20 ಇನ್​ಸ್ಪೆಕ್ಟರ್​ಗಳ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಈ ವೇಳೆ ರೌಡಿಶೀಟರ್​​ಗಳ ಮನೆಯನ್ನು ಸಹ ಪರಿಶೀಲನೆಗೆ ಒಳಪಡಿಸಲಾಗಿತ್ತು. ಇದೀಗ  ಸಣ್ಣ ಪುಟ್ಟ ರೌಡಿಗಳ‌ ಮೇಲೆ ಪ್ರತಾಪ ತೋರಿಸಿ ಸಿಸಿಬಿ ಸುಮ್ಮನಾಯ್ತಾ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಮಾಡುತ್ತಿದ್ದಾರೆ. ರೌಡಿಸಂ ಫೀಲ್ಡ್​ನಲ್ಲಿ ದೊಡ್ಡ ದೊಡ್ಡ ಹೆಸರು ಮಾಡಿಕೊಂಡಿರುವವರನ್ನು ಬಿಟ್ಟು ಪುಡಿ ರೌಡಿಗಳ ಮೇಲೆ ದಾಳಿ ನಡೆಸಿ ಸಿಸಿಬಿ ಪೊಲೀಸರು ಪೋಸ್​ ಕೊಟ್ಟರಾ ಎಂದು ಸಾರ್ವಜನಿಕರು ಕೇಳುತ್ತಿದ್ದಾರೆ.


ಸೈಲೆಂಟ್ ಸುನೀಲ್, ವಿಲ್ಸನ್ ಗಾರ್ಡನ್ ನಾಗ, ಸೈಕಲ್ ರವಿ, ಒಂಟೆ ರೋಹಿತ, ಕಾಡುಬೀಸನಹಳ್ಳಿ ರೋಹಿತ, ಕಾಡುಬೀಸನಹಳ್ಳಿ ಲೋಕಿ ಎಂಬವರು ದಾಳಿ ವೇಳೆ ಪರಾರಿಯಾಗಿದ್ದರು ಎಂದು ಸಿಸಿಬಿ ಪೊಲೀಸರು ಐದು ದಿನಗಳ ಹಿಂದೆ ಹೇಳಿಕೆ ನೀಡಿದ್ದರು.


ಬಹಿರಂಗವಾಗಿ ಕಾಣಿಸಿಕೊಂಡ ಸೈಲೆಂಟ್ ಸುನೀಲ್


ಆದರೆ ನಿನ್ನೆ ಸೈಲೆಂಟ್ ಸುನೀಲ್ ಬಹಿರಂಗವಾಗಿ ಕಾಣಿಸಿಕೊಂಡರೂ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗಿರೋದು ಅವರ ಕಾರ್ಯವೈಖರಿ ಬಗ್ಗೆ ಅನುಮಾನ ಮೂಡಿಸಿದೆ. ದೊಡ್ಡ ದೊಡ್ಡವರಿಗೆ ನೆರಳಾಗಿ ಪೊಲೀಸರು ಕೆಲಸ ಮಾಡ್ತಿದ್ದೀರಾ ಎಂಬ ಪ್ರಶ್ನೆಯನ್ನು ಜನರು ಮಾಡುತ್ತಿದ್ದಾರೆ.


BJP leaders welcomes silent sunil politics mrq
ಬಿಜೆಪಿ ನಾಯಕರ ಜೊತೆ ಸೈಲೆಂಟ್ ಸುನೀಲ್


ರಕ್ತ ಹರಿಸಿದನಿಂದ ರಕ್ತದಾನ ಶಿಬಿರ


ರಕ್ತ ಹರಿಸಿ ರೌಡಿ ಅಗಿದ್ದ ಸೈಲೆಂಟ್ ಸುನೀಲ್, ಬಿಜೆಪಿ ನಾಯಕರ ಜೊತೆ ವೇದಿಕೆಯಲ್ಲಿ ಕಾಣಿಸಿಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದನು. ಇದೇ ಕಾರ್ಯಕ್ರಮದಲ್ಲಿ ಸೈಲೆಂಟ್ ಸುನೀಲ್​ನ ಸಹಚರರು ಸಹ ಭಾಗಿಯಾಗಿದ್ದರು. ಸಂಸದರು, ಶಾಸಕರ ಆಗಮನ ಹಿನ್ನೆಲೆ ಕಾರ್ಯಕ್ರಮ ನಡೆದ ಸ್ಥಳದಲ್ಲಿ  ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.


ಸೈಲೆಂಟ್ ಸುನೀಲ್ ಕಾರ್ಯಕ್ರಮದಲ್ಲಿ ಬಿಜೆಪಿ ಪಡೆ


ಈ ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ, ಪಿಸಿ ಮೋಹನ್, ಶಾಸಕ ಉದಯ್ ಗರುಡಾಚಾರ್​, ಎನ್.ಆರ್.ರಮೇಶ್ ಭಾಗಿಯಾಗಿದ್ದರು. ಬಹಿರಂಗವಾಗಿಯೇ ಸೈಲೆಂಟ್​ ಸುನೀಲ್​ಗೆ ಶುಭ ಹಾರೈಸಿದ್ದರು.


ಇದನ್ನೂ ಓದಿ: ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಸುನೀಲ್​ನ ಸೈಲೆಂಟ್ ತಯಾರಿ?


ಸಾರ್ವಜನಿಕರಿಂದ ಪ್ರಶ್ನೆ


ಬಹಿರಂಗ ಸಮಾವೇಶ ಮಾಡಿದರೂ ಸೈಲೆಂಟ್ ಸುನಿಲ್ ಸಿಸಿಬಿ ಕಣ್ಣಿಗೆ ಕಾಣಲಿಲ್ವಾ? ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಕಾರ್ಯವೈಖರಿ‌ ಇದೇನಾ? ಪೊಲೀಸ್ ಇಲಾಖೆ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಕೆಲಸ ಮಾಡ್ತಿದೆಯಾ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.


ರಾಜಕೀಯಕ್ಕೆ ಸೈಲೆಂಟ್ ಸುನೀಲ್


ಚಾಮರಾಜಪೇಟೆಯಲ್ಲಿ (Chamarajapete) ಬೃಹತ್ ರಕ್ತ ದಾನ ಶಿಬಿರ ಆಯೋಜನೆ ಮಾಡುವ ಮೂಲಕ ಸೈಲೆಂಟ್ ಸುನೀಲ್ ರಾಜಕೀಯ ಪ್ರವೇಶ ಮಾಡಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಜಮೀರ್ ಅಹ್ಮದ್ ಖಾನ್ (MLA Zameer Ahmed Khan) ವಿರುದ್ಧ ಕಣಕ್ಕಿಳಿಯೋದು ಬಹುತೇಕ ಖಚಿತವಾಗಿದೆ. ಬಿಜೆಪಿ ನಾಯಕರು ಸೈಲೆಂಟ್ ಸುನೀಲ್ ರಾಜಕೀಯ ಪ್ರವೇಶವನ್ನು ಖಚಿತಪಡಿಸಿದರು.


BJP leaders welcomes silent sunil politics mrq
ಸೈಲೆಂಟ್ ಸುನೀಲ್


ನಿಮ್ಮ ಹಾರೈಕೆ ನನ್ನ ಮೇಲಿರಲಿ


ಈ ವೇಳೆ ಮಾತನಾಡಿದ ಸೈಲೆಂಟ್ ಸುನೀಲ್, ನಾನು ನಿಮ್ಮ ಮಧ್ಯದಲ್ಲೇ ಇರ್ತೇನೆ. ನಾನು ಇದೇ ರೀತಿ ಮುಂದೆಯೂ ನನ್ನ ಕೈಲಾದಷ್ಟು ಸಹಾಯ ಮಾಡ್ಕೊಂಡು ಹೋಗ್ತೀನಿ. ನಿಮ್ಮ ಸಹಾಯ ನನ್ನ ಮೇಲೆ ಹೀಗೆ ಇರಲಿ ಎಂದಿದ್ದ.


ಇದನ್ನೂ ಓದಿ:  Silent Sunil: ಸೈಲೆಂಟ್ ಸುನೀಲ್ ರಾಜಕೀಯ ಪ್ರವೇಶಕ್ಕೆ ಶುಭ ಕೋರಿದ ಬಿಜೆಪಿ ನಾಯಕರು


ನಾನು ಜನರಿಗೆ ಸಹಾಯವಾಗಲು ಸಮಾಜ ಸೇವೆಯ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದೇನೆ. ಮುಂದೆಯೂ ಬೆಂಗಳೂರಿನಾದ್ಯಂತ ಹೀಗೆ ಕಾರ್ಯಕ್ರಮಗಳನ್ನು ಮಾಡುತ್ತೇನೆ. ಮುಂದೆ ರಾಜಕೀಯ ಪ್ರವೇಶಿಸುವ ಇಚ್ಛೆಯೂ ಇದೆ. ಈ ಬಗ್ಗೆ ಈ ಸಮಯದಲ್ಲಿ ಹೆಚ್ಚು ಮಾತನಾಡಲ್ಲ ಎಂದು ಮಾತು ಮುಗಿಸಿ ನಮಸ್ಕಾರ ಮಾಡಿದ್ದ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು