CCB Arrest Drug Peddlers ಬರ್ತ್ ಡೇ ಗಿಫ್ಟ್, ಸ್ವಿಗ್ಗಿಯಲ್ಲಿ ಗಾಂಜಾ ಸಾಗಾಟ ಮಾಡ್ತಿದ್ದ ಇಬ್ಬರು ಬೆಂಗಳೂರು ಪೊಲೀಸರ ಬಲೆಗೆ

ಬಂಧಿತರಿಂದ ಗಾಂಜಾ ಪ್ಯಾಕ್ ಮಾಡಲಾಗಿದ್ದ ಬರ್ತ್ ಡೇ ಗಿಫ್ಟ್ ಮತ್ತು ಹಿಡನ್ ಬಾಕ್ಸ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟು 60 ಲಕ್ಷ ಮೌಲ್ಯದ Ecstacy pills, LSD ಮತ್ತು ಗಾಂಜಾ ವಶಕ್ಕೆ ಪಡೆಯಲಾಗಿದೆ. ಬಿಟ್ ಕಾಯಿನ್ ಬಳಸಿ ಡಾರ್ಕ್ ನೆಟ್ ಮೂಲಕ ಗಾಂಜಾ ಖರೀದಿಸಲಾಗುತ್ತಿತ್ತು

ವಶಕ್ಕೆ ಪಡೆದ ಗಾಂಜಾ

ವಶಕ್ಕೆ ಪಡೆದ ಗಾಂಜಾ

  • Share this:
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಾದಕ ದ್ರವ್ಯ ಮಾರಾಟ ಜಾಲವೊಂದನ್ನು ಬೆಂಗಳೂರು ಪೊಲೀಸರು (Bengaluru CCB Police) ಬೇಧಿಸಿದ್ದು, ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 60 ಲಕ್ಷ ಮೌಲ್ಯದ ಮಾದಕದ್ರವ್ಯ ವಶಕ್ಕೆ ಪಡೆದುಕೊಂಡಿದ್ದಾರೆ. ಗ್ರಾಹಕರು ಗಾಂಜಾ ಖರೀದಿಗಾಗಿ ಪೆಡ್ಲರ್ (Drug Peddlers) ಗಳನ್ನು ವಿಕರ್ ಮತ್ತು ಸೆಸನ್ ಆಪ್ (Wickr, Session App) ಗಳ ಮೂಲಕ ಸಂಪರ್ಕಿಸುತ್ತಿದ್ದರು. ಈ ಮೂಲಕವೇ ಮಾರಾಟ-ಖರೀದಿ ವ್ಯವಹಾರ ನಡೆಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು ಪೊಲೀಸರಿಗೆ ಅನುಮಾನ ಬರದಿರಲಿ ಎಂದು ಆನ್ ಲೈನ್ ಫುಡ್ ಡೆಲಿವರಿ (Online Food Delivery)ಬಾಯ್ ಗಳ ಮೂಲಕ ಗ್ರಾಹಕರಿಗೆ ಮಾದಕ ಪದಾರ್ಥ ತಲುಪಿಸಲಾಗುತ್ತಿತ್ತು.

ಈ ಕುರಿತು ಮಾಹಿತಿ ನೀಡಿರುವ ಬೆಂಗಳೂರು ಸಿಟಿ ಜಂಟಿ ಪೊಲೀಸ್ ಅಯುಕ್ತರಾದ ಸಂದೀಪ್ ಪಾಟೀಲ್, ಸಿಸಿಬಿ ಇಬ್ಬರನ್ನು ಬಂಧಿಸಿ, ಬಂಧಿತರಿಂದ ಗಾಂಜಾ ಪ್ಯಾಕ್ ಮಾಡಲಾಗಿದ್ದ ಬರ್ತ್ ಡೇ ಗಿಫ್ಟ್ ಮತ್ತು ಹಿಡನ್ ಬಾಕ್ಸ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟು 60 ಲಕ್ಷ ಮೌಲ್ಯದ Ecstacy pills, LSD ಮತ್ತು ಗಾಂಜಾ ವಶಕ್ಕೆ ಪಡೆಯಲಾಗಿದೆ. ಬಿಟ್ ಕಾಯಿನ್ ಬಳಸಿ ಡಾರ್ಕ್ ನೆಟ್ ಮೂಲಕ ಗಾಂಜಾ ಖರೀದಿಸಲಾಗುತ್ತಿತ್ತು. ಗ್ರಾಹಕರು ಗಾಂಜಾ ಖರೀದಿಗಾಗಿ ಪೆಡ್ಲರ್ ಗಳನ್ನು ವಿಕರ್ ಮತ್ತು ಸೆಸನ್ ಆಪ್ ಗಳ ಮೂಲಕ ಸಂಪರ್ಕಿಸುತ್ತಿದ್ದರು. ನಂತರ ಸ್ವಿಗ್ಗಿ/ದುನ್ಜೋ( Dunzo/Swiggy)  ಮೂಲಕ  ಗಾಂಜಾ ತಲುಪಿಸಲಾಗುತ್ತಿತ್ತು.

ಇದನ್ನೂ ಓದಿ:  Actress Niveditha: ಗಾಂಜಾ ಗಿಡ ತುಳಸಿಯಂತೆಯೇ ಪವಿತ್ರ ಎಂದಿದ್ದ ನಟಿ ನಿವೇದಿತಾ ವಿರುದ್ಧ ದಾಖಲಾಯ್ತು ದೂರು..!

ಸೆಪ್ಟೆಂಬರ್ 28ರಂದು ನಾಲ್ವರ ಬಂಧನ

ಮನೆಯಲ್ಲಿಯೇ ಗಾಂಜಾ ಬೆಳೆದಿದ್ದ ಇರಾನ್ ಮೂಲದ ಇಬ್ಬರು ವಿದ್ಯಾರ್ಥಿಗಳನ್ನು ಸಿಸಿಬಿ ಬಂಧಿಸಿತ್ತು. ಬಂಧಿತ ವಿದ್ಯಾರ್ಥಿಗಳು ಸ್ಟುಡೆಂಟ್ ವಿಸಾ ಮೂಲಕ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದರು. ಈ ವಿದ್ಯಾರ್ಥಿಗಳು ಸಹ ಡಾರ್ಕ್ ನೆಟ್ ಮೂಲಕ ಗಾಂಜಾ ಬೀಜಗಳನ್ನು ತಂದು ಯುವಿ ಲೈಟ್ (UV Lights) ಬಳಸಿ ಮನೆಯಲ್ಲಿಯೇ ಬೆಳೆದುಕೊಂಡಿದ್ದರು.

ಇದನ್ನೂ ಓದಿ:  Ganja Case- ರಾಜಧಾನಿ ಕೂಗಳತೆಯಲ್ಲೇ 'ಮಾದಕ' ಘಾಟು! ಮನೆ ಟೆರೇಸ್ ಮೇಲೆ 'ಗಾಂಜಾಲೋಕ' ಸೃಷ್ಟಿ!

2020ರಲ್ಲಿ ಸಿಸಿಬಿ ಕಾರ್ಯಾಚರಣೆ

TOR ಹೆಸರಿನ ಬ್ರೌಸರ್ ಮೂಲಕ ಹೈ ಎಂಡ್‌ ಡ್ರಗ್ಸ್ ನಗರಕ್ಕೆ ತರಿಸಿ ನಂತರ ಅದೇ ಬ್ರೌಸರ್ ಮೂಲಕ ಮಾರಾಟ ಮಾಡ್ತಿದ್ರಂತೆ. ಅನ್ ಲೈನ್ ಮೂಲಕ ಡ್ರಗ್ ಖರೀದಿಸಿ ಅದಕ್ಕೆ ಬಿಟ್ ಕಾಯಿನ್ ನಲ್ಲಿ ಹಣ ಪಾವತಿ ಮಾಡುತ್ತಿದ್ರಂತೆ. ಈ ಬಗ್ಗೆ ಡಾರ್ಕ್ ನೆಟ್ ವೆಬ್ ಮೇಲೆ ಕಣ್ಣಿಟ್ಟಿದ್ದ ಸಿಸಿಬಿ ಪೊಲೀಸರು, ಇಂಟರ್ ನ್ಯಾಷನಲ್ ಪೋಸ್ಟ್ ನಲ್ಲಿ ಬರುವ ಕೊರಿಯರ್ ಗಳನ್ನ ಪತ್ತೆ ಹಚ್ಚಿ ಡ್ರಗ್ಸ್ ಜಪ್ತಿ ಮಾಡಿದ್ದರು. 80 ಲಕ್ಷ ಮೌಲ್ಯದ 660 ಎಲ್ ಎಸ್ ಡಿ, 389 ಎಂಡಿಎಂಎ, 12 ಗ್ರಾ ಎಂಡಿಎಂಎ ಕ್ರಿಸ್ಟಲ್, 10 ಗ್ರಾಂ ಕೊಕೇನ್ ಜಪ್ತಿ ಮಾಡಿದ್ದಾರೆ. ಇದೇ ವೇಳೆ ಸಿಸಿಬಿಯ ಮಾದಕವಸ್ತುಗಳ ತಂಡದಿಂದ ಓರ್ವ ನೈಜಿರಿಯನ್ ಪ್ರಜೆ ಸೇರಿ  9 ಜನರ ಗ್ಯಾಂಗ್ ಬಂಧಿಸಿದ್ದರು.ಏನಿದು ಡಾರ್ಕ್ ನೆಟ್ ವೆಬ್?

ಡಾರ್ಕ್ ನೆಟ್ (DARKNET) ಅನ್ನೋದು ಅಪರಾಧ ಲೋಕದ ವೇದಿಕೆ ಎಂಬ ರೀತಿಯಲ್ಲಿ ಬಿಂಬಿತವಾಗಿದೆ. ಇಲ್ಲಿ ನೀವು ಟಿಓಆರ್ ಬ್ರೌಸರ್  ಮೂಲಕ ಪ್ರವೇಶಿಸಬಹುದಾಗಿದೆ. ಬಹುತೇಕ ಡಾರ್ಕ್ ನೆಟ್ ಬಳಕೆದಾರರು ಅನಾಮಧೇಯ ಹೆಸರಿನಲ್ಲಿಯೇ ಇರುತ್ತಾರೆ. ಹಾಗಾಗಿ ಜನರ ಅಸಲಿ ಗುರುತು ಸಿಗಲ್ಲ, 2019ರ ವರದಿ ಪ್ರಕಾರ, ಶೇ.10ರಷ್ಟು ಜನರು ಇಂಟರ್ ನೆಟ್ ಮೂಲಕ ಡಾರ್ಕ್ ನೆಟ್ ವೆಬ್ ಗೆ ಭೇಟಿ ನೀಡುತ್ತಾರೆ. ಇನ್ನುಳಿದ ಶೇ.90ರಷ್ಟು ಜನರು ಸ್ಪೇಸ್ ನೆಟ್ ನಂತರ ಎಂಟ್ರಿ ನೀಡುತ್ತಾರೆ. ಇಲ್ಲಿ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದ ವಸ್ತುಗಳು ಮತ್ತು ಮಾದಕ ಪದಾರ್ಥಗಳು ಸಿಗುತ್ತವೆ.
Published by:Mahmadrafik K
First published: