Bengaluru Crime News: ಡ್ರ್ಯಾಗರ್ ನಿಂದ ಹಲ್ಲೆಗೈದು ಪರಾರಿಯಾಗಲು ಯತ್ನಿಸಿದ್ದ Rowdysheeter ಕಾಲಿಗೆ ಗುಂಡೇಟು

2013 ನಲ್ಲಿ ಆನೆಪಾಳ್ಯದಲ್ಲಿ ಲೋಕಿ ಎಂಬಾತನನ್ನ ಕೊಲೆಗೈದಿರುವ ಆರೋಪ ಸಹ ಪಳನಿ ಮೇಲಿದೆ. ಕುಮಾರಸ್ವಾಮಿ‌ಲೇಔಟ್ ಪೊಲೀಸ್ ಠಾಣೆಯಲ್ಲಿ (Kumaraswamy Layout Police Station) ಈತನ ವಿರುದ್ಧ ಪ್ರಕರಣ ದಾಖಲಾಗಿವೆ. ಎರಡು ಕೊಲೆಯತ್ನ ಪ್ರಕರಣ, ಮೂರು ಕೊಲೆ ಪ್ರಕರಣ ಸೇರಿದಂತೆ ಒಟ್ಟು 15 ಪ್ರಕರಣದಲ್ಲಿ ಆರೋಪಿ ಭಾಗಿಯಾಗಿದ್ದಾನೆ.

ರೌಢಿ ಶೀಟರ್ ಪಳನಿ

ರೌಢಿ ಶೀಟರ್ ಪಳನಿ

  • Share this:
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru Crime News) ಗುಂಡಿನ ಸದ್ದು ಕೇಳಿದೆ. ಪಳನಿ ಅಲಿಯಾಸ್ ಕರ್ಚಿಫ್ ಪಳನಿಗೆ ಕಾಲಿಗೆ ಸಿಸಿಬಿ (CCB) ಎಸಿಪಿ ಪರಮೇಶ್ ಗುಂಡು ಹೊಡೆದು ಬಂಧಿಸಿದ್ದಾರೆ. ಆರೋಪಿ (Accused) ಪಳನಿ ಅಶೋಕ ನಗರದ ಸ್ಮಶಾನದ ಬಳಿ ಇರೋದು ಮಾಹಿತಿ ಲಭ್ಯವಾಗುತ್ತಿದ್ದಂತೆ ಎಸಿಪಿ ಪರಮೇಶ್ (ACP Paramesh) ಅವರ ತಂಡ ತೆರಳಿತ್ತು. ಶರಣಾಗುವಂತೆ ಪೊಲೀಸರು ಸೂಚನೆ ನೀಡಿದ್ರು ಇನ್ಸ್ ಪೆಕ್ಟರ್ (Police Inspector) ಹರೀಶ್ ಕುಮಾರ್ ಗೆ ಡ್ರ್ಯಾಗರ್ ನಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ಆತ್ಮ ರಕ್ಷಣೆಗಾಗಿ ಪಳನಿ ಎಡಕಾಲಿಗೆ ಎಸಿಪಿ ಗುಂಡು ಹಾರಿಸಿದ್ದಾರೆ. ಆರೋಪಿ ಪಳನಿ ಬೆಳ್ಳಂದೂರು ಕೊಲೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದನು. ಪಳನಿ 15ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿರುವ ಆರೋಪಿಯಾಗಿದ್ದಾನೆ.

ದಾರಿ ಬಿಡುವ ವಿಚಾರಕ್ಕೆ ಕಿರಿಕ್ ಮಾಡಿಕೊಂಡಿದ್ದ ಜಗಳ ಮುನ್ನಕುಮಾರ್ ಕೊಲೆಯಲ್ಲಿ ಅಂತ್ಯವಾಗಿತ್ತು. ಚಾಕುವಿನಿಂದ  ಮುನ್ನಕುಮಾರ್  ಕತ್ತು ಸೀಳಿ ಕೊಲೆ ಮಾಡಿದ್ದ ಪಳನಿ ನಾಪತ್ತೆಯಾಗಿದ್ದನು. ಪ್ರಕರಣ ಸಂಬಂಧ ಬೆಳ್ಳಂದೂರು ಹಾಗು ಸಿಸಿಬಿ ಪೊಲೀಸರು (CCB Police) ಹುಡುಕಾಟ ನಡೆಸಿದ್ದರು.

ಡ್ಯಾಗರ್ ನಿಂದ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನ

ಸಿಸಿಬಿ  OCW  ಎಸಿಪಿ ಪರಮೇಶ್ವರ್ ಮಾಹಿತಿ ಪಡೆದು ಅರೋಪಿ ಬಂಧನಕ್ಕೆ ಹಿಂಬಾಲಿಸಿದ್ದಾರೆ‌. ಅಶೋಕ್ ನಗರದ ಸ್ಮಶಾನ ಬಳಿ ಅರೋಪಿ ಬಂಧನಕ್ಕೆ ಮುಂದಾಗಿದ್ದಾರೆ. ಈ ವೇಳೆ ಇನ್ ಸ್ಪೆಕ್ಟರ್ ಹರೀಶ್ ಕುಮಾರ್ ಮೇಲೆ ಡ್ಯಾಗರ್ ನಿಂದ ಹಲ್ಲೆ ಮಾಡಿದಾಗ ಗುಂಡು ಹಾರಿಸಿ ಬಂಧಿಸಲಾಗಿದೆ. ಪೊಲೀಸರ ಮೇಲೆ ಹಲ್ಲೆ ಮತ್ತು ಶೂಟೌಟ್ ಸಂಬಂಧ ಆಶೋಕ್ ನಗರ (Ashok Nagar) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:  Crime News: ಬೆಂಗಳೂರಿನಲ್ಲಿ ಐವರ ಆತ್ಮಹತ್ಯೆ ಪ್ರಕರಣ; ಸಾವಿಗೆ ಕಾರಣ ಇದೇನಾ? 3 ವರ್ಷದ ಮಗು ಬದುಕುಳಿದಿದ್ದು ಹೇಗೆ?

ಒಟ್ಟು 15 ಪ್ರಕರಣಕ್ಕೆ ಬೇಕಾಗಿದ್ದ ಆರೋಪಿ

ಪಳನಿ 2013 ನಲ್ಲಿ ಆನೆಪಾಳ್ಯದಲ್ಲಿ ಲೋಕಿ ಎಂಬಾತನನ್ನ ಕೊಲೆಗೈದಿರುವ ಆರೋಪ ಸಹ ಪಳನಿ ಮೇಲಿದೆ. ಕುಮಾರಸ್ವಾಮಿ‌ಲೇಔಟ್ ಪೊಲೀಸ್ ಠಾಣೆಯಲ್ಲಿ (Kumaraswamy Layout Police Station) ಈತನ ವಿರುದ್ಧ ಪ್ರಕರಣ ದಾಖಲಾಗಿವೆ. ಎರಡು ಕೊಲೆಯತ್ನ ಪ್ರಕರಣ, ಮೂರು ಕೊಲೆ ಪ್ರಕರಣ ಸೇರಿದಂತೆ ಒಟ್ಟು 15 ಪ್ರಕರಣದಲ್ಲಿ ಆರೋಪಿ ಭಾಗಿಯಾಗಿದ್ದಾನೆ.

ರೌಡಿಶೀಟರ್ ಬಬ್ಲಿಯ ಸಹಚರನೇ ಈ ಪಳನಿ

ರೌಡಿಶೀಟರ್ ಬಬ್ಲಿಯ ಸಹಚರನಾಗಿದ್ದ ಪಳನಿ ಹಲವು ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡಿದ್ದನು. ಬೆಂಗಳೂರು ಸಿಸಿಬಿ ಪೊಲೀಸರು ನಗರದಲ್ಲಿನ ಅಪರಾಧ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿರುವವರ ಬಗ್ಗೆ ಮಾಹಿತಿ ಕಲೆ ಹಾಕ್ತಿದೆ. ನವಂಬರ್ 10 ರಂದು ಬೆಳ್ಳಂದೂರು ಠಾಣೆ ವ್ಯಾಪ್ತಿಯಲ್ಲಿ ಒಂದು ಕೊಲೆ ಪ್ರಕರಣ ಆಗಿರುತ್ತೆ. ಅದರಲ್ಲಿ ಕೆಲ ಆರೋಪಿಗಳನ್ನು ಈಗಾಗಲೆ ಬಂಧಿಸಲಾಗಿದೆ. ಮುಖ್ಯ ಆರೋಪಿ ಪಳನಿ ತಲೆಮರೆಸಿಕೊಂಡಿದ್ದನು. ಈತ 15 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದನು ಎಂದು ಸಿಸಿಬಿ ಜಂಟಿ ಪೋಲಿಸ್‌ ಆಯುಕ್ತ ಸಂದೀಪ್ ಪಾಟಿಲ್ ಹೇಳಿದ್ದಾರೆ.

ಇದನ್ನೂ ಓದಿ:  Mandya Crime News: ಅಣ್ಣನ ಕೈಲಿ ಮನೆ ಕೆಲಸ ಮಾಡಿಸುತ್ತಾಳೆಂದು ಗರ್ಭಿಣಿ ಅತ್ತಿಗೆ ಕೊಂದು ನೇಣಿಗೆ ಶರಣಾದ ನಾದಿನಿ

ಸಂದೀಪ್ ಪಾಟಿಲ್ ಹೇಳಿಕೆ

ನಿನ್ನೆ ಅಶೋಕನಗರ  ಸ್ಮಾಶನ ಬಳಿ ಇರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಸಿಸಿಬಿ ಎಸಿಪಿ ಪರಮೇಶ್ವರ್ ನೇತೃತ್ವದಲ್ಲಿ ಆತನನ್ನ ಹಿಡಿಯುವ ಪ್ರಯತ್ನ ಮಾಡಲಾಗಿತ್ತು. ಆದ್ರೆಆರೋಪಿ ಶರಣಾಗದೇ ತಪ್ಪಿಸಿಕೊಳ್ಳಲು ಮುಂದಾಗಿ, ಡ್ರ್ಯಾಗರ್ ನಿಂದ ಇನ್ಸ್ ಪೆಕ್ಟರ್ ಹರೀಶ್ ಮೇಲೆ ಹಲ್ಲೆ ಮಾಡಿದ್ದನು. ಎಸಿಪಿ ಸಾಕಷ್ಟು ವಾರ್ನಿಂಗ್ ಕೂಡ ಕೊಟ್ಟರು.

ಮಾತು ಕೇಳದಿದ್ದಾಗ ಅನಿವಾರ್ಯವಾಗಿ ಕಾಲಿಗೆ ಗುಂಡು ಹೊಡೆಯಲಾಯ್ತು. ಆರೋಪಿ ಹಾಗೂ ಗಾಯಾಳು ಇನ್ಸ್ ಪೆಕ್ಟರ್ ಇಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೆಚ್ಚಿನ ತನಿಖೆಯನ್ನು ಮುಂದುವರೆಸಲಾಗ್ತಿದೆಎಂದು ಸಿಸಿಬಿ ಜಂಟಿ ಪೋಲಿಸ್‌ ಆಯುಕ್ತ ಸಂದೀಪ್ ಪಾಟಿಲ್ ಹೇಳಿಕೆ ನೀಡಿದ್ದಾರೆ.
Published by:Mahmadrafik K
First published: