CBSE 12th Board Exams ನಡೆಸಲು ಗ್ರೀನ್ ಸಿಗ್ನಲ್; ಜೂ.1ರಂದು ದಿನಾಂಕ ನಿಗದಿ

ಪರೀಕ್ಷೆ ನಡೆಸುವ ಬಗ್ಗೆಯೂ ಎರಡು ಆಯ್ಕೆಗಳನ್ನು ನೀಡಲಾಗಿದೆ. ಮುಖ್ಯ ವಿಷಯಗಳಿಗೆ ಮಾತ್ರ ಪರೀಕ್ಷೆಯನ್ನು ನಿಗದಿತ ಸೆಂಟರ್​ಗಳಲ್ಲಿ ಮಾತ್ರ ನಡೆಸುವುದು. ಮತ್ತೊಂದು ಮುಖ್ಯ ವಿಷಯಗಳಿಗೆ ಮಾತ್ರ ಕೇವಲ 90 ನಿಮಿಷಗಳ ಕಾಲ ಪರೀಕ್ಷೆ ಮಾಡುವ ಆಯ್ಕೆಯನ್ನು ನೀಡಲಾಗಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಬೆಂಗಳೂರು: ಕೊರೋನಾ 2ನೇ ಅಲೆ ಅಬ್ಬರದಿಂದ ಮುಂದೂಡಲಾಗಿದ್ದ CBSE 12ನೇ ತರಗತಿ ಪರೀಕ್ಷೆಯನ್ನು ನಡೆಸಲು ಕೇಂದ್ರ ಸರ್ಕಾರ ಗ್ರೀನ್​​ ಸಿಗ್ನಲ್​ ಕೊಟ್ಟಿದೆ. ಜೂನ್ 1ರಂದು CBSE ಸೆಕೆಂಡ್ PUC ಪರೀಕ್ಷೆಗೆ ದಿನಾಂಕ ನಿಗದಿ ಪಡಿಸಲಾಗುವುದು. ಪರೀಕ್ಷಾ ಮಾದರಿಯನ್ನು ಕೇಂದ್ರ ಶಿಕ್ಷಣ ಇಲಾಖೆ ಪ್ರಕಟಿಸಲಿದೆ. ಯಾವ ಸ್ವರೂಪದಲ್ಲಿ, ಯಾವಾಗ ಮತ್ತು ಹೇಗೆ ನಡೆಯುತ್ತದೆ ಎಂಬ ಮಾಹಿತಿ ಜೂನ್ 1 ರಂದು ಪ್ರಕಟಿಸಲಿದೆ. ಇನ್ನು ಪರೀಕ್ಷೆ ನಡೆಸುವ ಬಗ್ಗೆಯೂ ಎರಡು ಆಯ್ಕೆಗಳನ್ನು ನೀಡಲಾಗಿದೆ. ಮುಖ್ಯ ವಿಷಯಗಳಿಗೆ ಮಾತ್ರ ಪರೀಕ್ಷೆಯನ್ನು ನಿಗದಿತ ಸೆಂಟರ್​ಗಳಲ್ಲಿ ಮಾತ್ರ ನಡೆಸುವುದು. ಮತ್ತೊಂದು ಮುಖ್ಯ ವಿಷಯಗಳಿಗೆ ಮಾತ್ರ ಕೇವಲ 90 ನಿಮಿಷಗಳ ಕಾಲ ಪರೀಕ್ಷೆ ಮಾಡುವ ಆಯ್ಕೆಯನ್ನು ನೀಡಲಾಗಿದೆ. ಜೂ.1ರಂದು ಪರೀಕ್ಷೆ ದಿನಾಂಕದ ಜೊತೆ ಪರೀಕ್ಷೆ ವಿಧಾನದ ಬಗ್ಗೆ ಅಂತಿಮ ನಿರ್ಧಾರ ಹೊರ ಬೀಳಲಿದೆ.

ಕೊರೋನಾ ನಡುವೆಯೂ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕಳೆದ ವರ್ಷದಂತೆ ಈ ಬಾರಿಯೂ ಜುಲೈನಲ್ಲಿ ಪರೀಕ್ಷೆ ನಡೆಯುವ ಸಾಧ್ಯತೆಗಳಿವೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಗ್ರೂಪ್ ಆಫ್ ಮಿನಿಸ್ಟರ್ಸ್ ಸಭೆಯಲ್ಲಿ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಯಿತು. ರಾಜ್ಯಗಳ ಅಭಿಪ್ರಾಯ ಪಡೆದು ನಿರ್ಧಾರ ತೆಗೆದುಕೊಳ್ಳಲಾಗಿದೆ.

CBSE ಸೆಕೆಂಡ್ PUC ಪರೀಕ್ಷೆ ನಡೆಸುವ ವಿಚಾರವಾಗಿ ಮೇ 25 ರೊಳಗೆ ವಿವರವಾದ ಸಲಹೆ ನೀಡುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ. ಗ್ರೂಪ್ ಆಫ್ ಮಿನಿಸ್ಟರ್ಸ್ ಸಭೆಯಲ್ಲಿ ಮಾನವ ಸಂಪನ್ಮೂಲ ಖಾತೆ ಸಚಿವ ರಮೇಶ್ ಪೋಖ್ರಿಯಾಲ್ ಮನವಿ ಮಾಡಿಕೊಂಡರು. ರಾಜ್ಯಗಳ ಸಲಹೆಗಳನ್ನು ಆಧರಿಸಿ ಮಾರ್ಗಸೂಚಿ ರಚನೆ ಮಾಡಲಿದ್ದಾರೆ.

ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಇನ್ನೂ ಪ್ರತಿದಿನ ಸರಿ ಸುಮಾರು ಎರಡೂವರೆ ಲಕ್ಷ ಜನ ಸೋಂಕು ಪೀಡಿತರಾಗುತ್ತಿದ್ದಾರೆ. ಕೊರೋನಾದಿಂದ ಸಾಯುತ್ತಿರುವವರ ಸಂಖ್ಯೆಯಲ್ಲೂ ಇಳಿಮುಖ ಆಗದೆ ಪ್ರತಿ ದಿನ ನಾಲ್ಕು ಸಾವಿರಕ್ಕೂ ಹೆಚ್ಚು ಜನ‌ ಕೊರೋನಾಗೆ ಬಲಿ ಆಗುತ್ತಿದ್ದಾರೆ. ಈ ನಡುವೆ ಕೊರೋನಾ ಲಸಿಕೆ ಕೊರತೆ ಉಂಟಾಗಿದ್ದು ಸಕಾಲಕ್ಕೆ ಎಲ್ಲರಿಗೂ ಲಸಿಕೆ ಸಿಗುವ ಸಾಧ್ಯತೆ ಇಲ್ಲ. ಇದರಿಂದ ಮೂರನೇ ಅಲೆಯ ಅಬ್ಬರವೂ ಕಾಡಬಹುದು. ಈ ಎಲ್ಲಾ ಹಿನ್ನಲೆಯಲ್ಲಿ CBSE ಸೆಕೆಂಡ್ PUC ಪರೀಕ್ಷೆಯನ್ನು ನಡೆಸಬೇಕೋ ಬೇಡವೋ ಎಂಬ ಬಗ್ಗೆಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಯಿತು.
Published by:Kavya V
First published: