CBSE 12 ನೇ ಫಲಿತಾಂಶ 2021: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಇಂದು 14 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಫಲಿತಾಂಶಗಳನ್ನು ಘೋಷಿಸಿದೆ. ಇದು ಪರೀಕ್ಷೆಗಳಿಲ್ಲದ ಮೊದಲ ಫಲಿತಾಂಶವಾಗಿದೆ. Cbse.nic.in, cbseresults.nic.in ನಲ್ಲಿ ಡೌನ್ಲೋಡ್ ಮಾಡಲು ಅಂಕಪಟ್ಟಿಗಳು ಲಭ್ಯವಿರುತ್ತವೆ. ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯನ್ನು ಡಿಜಿ ಲಾಕರ್ ಸೌಲಭ್ಯದಿಂದ digilocker.gov.in ನಲ್ಲಿ ಪಡೆಯಬಹುದು.
90+ ಸ್ಕೋರ್ಗಳಿಸಿದ ಸಂಖ್ಯೆ ಕಳೆದ ವರ್ಷದಂತೆಯೇ ಇದ್ದು. ಈ ವರ್ಷ ಅನೇಕ ಶಾಲೆಗಳು ತಮ್ಮ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕಗಳನ್ನು ನೀಡಿವೆ. ಈ ಅಂಕ ನೀಡುವ ಪ್ರಕ್ರಿಯೆಯನ್ನ, ಸಿಬಿಎಸ್ಇ ತರ್ಕಬದ್ದವಾದ ವಿಧಾನವನ್ನು ಅನುಸರಿಸುವಂತೆ ಕೇಳಿಕೊಂಡಿತ್ತು. ಈ ವರ್ಷ, 1,50,152 ವಿದ್ಯಾರ್ಥಿಗಳಿಗೆ 90% ಕ್ಕಿಂತ ಹೆಚ್ಚು ಅಂಕಗಳು ದೊರೆತಿವೆ.
ದಾಖಲೆ ನಿರ್ಮಿಸಿದ ಪಾಸ್ ಆದವರ ಸಂಖ್ಯೆ
ಬಹುತೇಕ ಎಲ್ಲಾ ವಿದ್ಯಾರ್ಥಿಗಳು 12 ನೇ ತರಗತಿಯ ಫಲಿತಾಂಶವನ್ನು ಪಡೆದಿರುವ ಕಾರಣ ಈ ವರ್ಷ ದಾಖಲೆಯುತ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಪರೀಕ್ಷೆಗೆ ನೋಂದಾಯಿಸಿದ 1304561 ಅಭ್ಯರ್ಥಿಗಳಲ್ಲಿ, 1296318 ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಈ ವರ್ಷ, 12 ನೇ ತರಗತಿಯ ಫಲಿತಾಂಶಗಳನ್ನು 12 ನೇ ತರಗತಿಯ ಇಂಟರ್ನಲ್ಗಳು, 10 ನೇ ತರಗತಿಯ ಫೈನಲ್ ಪರೀಕ್ಷೆ ಮತ್ತು 11 ನೇ ತರಗತಿಯ ಫೈನಲ್ ಪರೀಕ್ಷೆಗಳ ಆಧಾರದ ಮೇಲೆ ಲೆಕ್ಕಾಚಾರ ಮಾಡಲಾಗುತ್ತದೆ. ಹೆಚ್ಚು ಚರ್ಚೆಯ ನಂತರ, ಈ ವರ್ಷಕ್ಕೆ ಮಂಡಳಿಯಿಂದ ಹೊಸಾ ಸೂತ್ರವನ್ನು ಅಂತಿಮಗೊಳಿಸಲಾಯಿತು ಮತ್ತು 2022 ಬ್ಯಾಚ್ಗೂ ಹೊಸ ಮೌಲ್ಯಮಾಪನ ಸೂತ್ರವನ್ನು ರಚಿಸಲಾಗಿದೆ.
6149 ವಿದ್ಯಾರ್ಥಿಗಳು ವಿಭಾಗೀಯ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ. ಈ ಪರೀಕ್ಷೆಗಳು ಸೆಪ್ಟೆಂಬರ್ನಲ್ಲಿ ನಡೆಯಲಿದೆ. ಕೇವಲ 0.47% ವಿದ್ಯಾರ್ಥಿಗಳನ್ನು ಮಾತ್ರ ಈ ರೀತಿಯ ಪರೀಕ್ಷೆಗೆ ಒಳಪಡಿಸಲಾಗಿದೆ.
ಇಂದು 65,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಫಲಿತಾಂಶ ಪಡೆಯುವುದಿಲ್ಲಎಂದು ಮಂಡಲಿ ತಿಳಿಸಿದೆ. 65,184 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಫಲಿತಾಂಶವನ್ನು ಶನಿವಾರ ಘೋಷಿಸಲು ಸಾಧ್ಯವಾಗಲಿಲ್ಲ. ಈ ವಿದ್ಯಾರ್ಥಿಗಳು ಆಗಸ್ಟ್ 5 ರೊಳಗೆ ಫಲಿತಾಂಶ ಪಡೆಯುತ್ತಾರೆ ಎಂದು ಸಿಬಿಎಸ್ಇ ಮಾಹಿತಿ ನೀಡಿದೆ. ಅನೇಕ ಶಾಲೆಗಳು ತಪ್ಪಾದ ಡೇಟಾವನ್ನು ನೀಡಿವೆ ಅಥವಾ ಸಮಯಕ್ಕೆ ಡೇಟಾವನ್ನು ಸಲ್ಲಿಸಲು ಸಾಧ್ಯವಾಗದ ಕಾರಣ ಇದು ಸಂಭವಿಸಿದೆ ಎಂದು ಹೇಳಲಾಗಿದೆ.
ಇಲ್ಲೂ ಸಹ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ ಹುಡುಗಿಯರು ಹುಡುಗರಿಗಿಂತ 0.54% ರಷ್ಟು ಉತ್ತಮ ಸಾಧನೆ ಮಾಡಿದ್ದಾರೆ
ಇತ್ತೀಚಿನ ಇತಿಹಾಸದಲ್ಲಿ CBSE 12 ನೇ ವಿದ್ಯಾರ್ಥಿಗಳಿಂದ ಇದು ಅತ್ಯುತ್ತಮ ಫಲಿತಾಂಶವಾಗಿದೆ. ಬಾಲಕಿಯರಲ್ಲಿ 99.67% ಉತ್ತೀರ್ಣರಾಗಿದ್ದರೆ, ಹುಡುಗರಲ್ಲಿ 99.13% ಆಗಿದೆ. ಹುಡುಗಿಯರು ಮತ್ತು ಹುಡುಗರ ಫಲಿತಾಂಶಗಳು 99% ಕ್ಕಿಂತ ಹೆಚ್ಚಿದ್ದರೂ, ಹುಡುಗಿಯರು ಹುಡುಗರಿಗಿಂತ ಅಲ್ಪ ಮುನ್ನಡೆ ಸಾಧಿಸಿ ಉತ್ತಮ (0.54%) ಪ್ರದರ್ಶನ ನೀಡಿದ್ದಾರೆ.
ಈ ವ್ಯವಸ್ಥೆಯ ಬಗ್ಗೆ ಅಸಮಾಧಾನ ಇರುವ ವಿದ್ಯಾರ್ಥಿಗಳು ನೇರವಾಗಿ 12ನೇ ತರಗತಿಯ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅವಕಾಶವಿದೆ. ಕಳೆದ ವರ್ಷ ಶೇಕಡಾ 88.78 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಇದು ಅದರ ಹಿಂದಿನ ವರ್ಷ ಅಂದರೆ 2019ಕ್ಕಿಂತ ಶೇಕಡ 5.38ರಷ್ಟು ಹೆಚ್ಚಿನ ಫಲಿತಾಂಶವಾಗಿದೆ.
ಇದನ್ನೂ ಓದಿ: CBSE Results today: ಇಂದು ಮಧ್ಯಾಹ್ನ 2 ಗಂಟೆಗೆ ಸಿಬಿಎಸ್ಇ ಫಲಿತಾಂಶ, ರಿಸಲ್ಟ್ ನೋಡೋಕೆ ಹೀಗೆ ಮಾಡಿ
2020ರಲ್ಲಿ ಶೇಕಡಾ 92.15ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದು ಶೇಕಡಾ 86.18 ಬಾಲಕರು ಉತ್ತೀರ್ಣರಾಗಿದ್ದರು. ಶೇಕಡಾ 66.67 ತೃತೀಯ ಲಿಂಗ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಆಗಸ್ಟ್ 16ರಿಂದ ಸೆಪ್ಟೆಂಬರ್ 15ರವರಗೆ 10 ಮತ್ತು 12ನೇ ತರಗತಿಯ ಖಾಸಗಿ ವಿದ್ಯಾರ್ಥಿಗಳಿಗೆ ತರಗತಿ ನಡೆಸುವುದಾಗಿ ಸಿಬಿಎಸ್ಇ ಘೋಷಿಸಿತ್ತು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ