ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ಗೆ ಸಿಬಿಐ ಸಮನ್ಸ್​; 25ರಂದು ವಿಚಾರಣೆಗೆ ಹಾಜರು

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮನೆ ಮೇಲೆ ಅಕ್ಟೋಬರ್​ 5ರಂದು ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು. ಭ್ರಷ್ಟಾಚಾರದಿಂದ ಹಣ ಗಳಿಸಿರುವ ಆರೋಪ ಹಿನ್ನೆಲೆಯಲ್ಲಿ ಈ ದಾಳಿ ನಡೆದಿತ್ತು.

news18-kannada
Updated:November 21, 2020, 12:22 PM IST
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ಗೆ ಸಿಬಿಐ ಸಮನ್ಸ್​; 25ರಂದು ವಿಚಾರಣೆಗೆ ಹಾಜರು
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​.
  • Share this:
ಬೆಂಗಳೂರು (ನವೆಂಬರ್​ 21):  ಅಕ್ಟೋಬರ್​ ಆರಂಭದಲ್ಲಿ ನಡೆದ ದಾಳಿಗೆ ಸಂಬಂಧಿಸಿಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಅವರಿಗೆ ಸಿಬಿಐ ಸಮನ್ಸ್​ ನೀಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್​ ಪ್ರತಿಕ್ರಿಯೆ ನೀಡಿದ್ದು, ನವೆಂಬರ್​ 25ಕ್ಕೆ ವಿಚಾರಣೆಗೆ ತೆರಳುವುದಾಗಿ ತಿಳಿಸಿದ್ದಾರೆ.

19ರಂದು ಸಿಬಿಐನಿಂದ ಡಿಕೆಶಿಗೆ ಸಮನ್ಸ್ ಬಂದಿದೆ‌. 23ಕ್ಕೆ ವಿಚಾರಣೆಗೆ ಬರುವಂತೆ ಸೂಚನೆ ನೀಡಲಾಗಿತ್ತು. ಆದರೆ, 23ರಂದು ಅವರು ಉತ್ತರ ಕರ್ನಾಟಕ ಪ್ರವಾಸದಲ್ಲಿರುತ್ತಾರೆ. ಹೀಗಾಗಿ, 25ಕ್ಕೆ ವಿಚಾರಣೆಗೆ ಹಾಜರಾಗಲು ಅನುಮತಿ ನೀಡುವಂತೆ ಡಿಕೆಶಿ ಮನವಿ ಮಾಡಿದ್ದರು. ಇದಕ್ಕೆ ಸಿಬಿಐ ಅನುಮತಿ ನೀಡಿದೆ. ಹೀಗಾಗಿ, ಅವರು ನವೆಂಬರ್​ 25ರಂದು ವಿಚಾರಣೆಗೆ ದೆಹಲಿಗೆ ತೆರಳಲಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮನೆ ಮೇಲೆ ಅಕ್ಟೋಬರ್​ 5ರಂದು ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು. ಭ್ರಷ್ಟಾಚಾರದಿಂದ ಹಣ ಗಳಿಸಿರುವ ಆರೋಪ ಹಿನ್ನೆಲೆ, 5  ಮಂದಿ ಸಿಬಿಐ ಅಧಿಕಾರಿಗಳು ಡಿಕೆಶಿ ನಿವಾಸದ ಮೇಲೆ ದಾಳಿ ಮಾಡಿದ್ದರು. ಈ ಹಿಂದೆ ಐಟಿ ಮತ್ತು ಇಡಿ ಎರಡೂ ತನಿಖಾ ಸಂಸ್ಥೆಗಳು ಡಿಕೆಶಿವಕುಮಾರ್ ಮನೆ ಮೇಲೆ ದಾಳಿ ನಡೆಸಿ ವಿಚಾರಣೆ ನಡೆಸಿತ್ತು. ಈ ಬೆನ್ನಲ್ಲೇ ಇದೀಗ ಸಿಬಿಐ ಅಧಿಕಾರಿಗಳು ಡಿಕೆಶಿ ನಿವಾಸದ ಮೇಲೆ ದಾಳಿ ನಡೆಸಿದ್ದರು. ಜೊತೆಗೆ ಸಂಸದ ಡಿಕೆ ಸುರೇಶ್​ ಮನೆ ಮೇಲೂ ಸಹ ಸಿಬಿಐ ದಾಳಿ ನಡೆದಿತ್ತು.

 ಅಖಂಡ ಶ್ರೀನಿವಾಸ್ ಬಗ್ಗೆ ಮಾತನಾಡಿದ ಡಿಕೆಶಿ:

ಅಖಂಡ ಶ್ರೀನಿವಾಸ್ ಪ್ರಕರಣದ ಬಗ್ಗೆಯೂ ಡಿಕೆಶಿ ಮಾತನಾಡಿದ್ದಾರೆ. ಶ್ರೀನಿವಾಸ್​ ಇವತ್ತು ಮನವಿ ಮಾಡಿದ್ದಾರೆ. ಅವರ ಮನವಿಯನ್ನ ಆಲಿಸಿದ್ದೇನೆ. ಅವರಿಗೆ ಅನ್ಯಾಯ ಆಗಿರೋದು ಗೊತ್ತಿದೆ. ನನಗೂ ತುಂಬಾ ನೋವಾಗಿದೆ. ಸಂಪತ್ ರಾಜ್ ಅವರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಪತ್ರ ಕೊಟ್ಟಿದ್ದಾರೆ. ಆದರೆ, ಏಕಾಏಕಿ ನಿರ್ಧಾರ ತೆಗೆದುಕೊಳ್ಳೋದು ಕಷ್ಟ. ನಮ್ಮಲ್ಲಿ ಶಿಸ್ತು ಸಮಿತಿಯಿದೆ. ಶಿಸ್ತು ಸಮಿತಿಯ ಮುಂದೆ ತಂದು ಕ್ರಮತೆಗೆದುಕೊಳ್ಳುತ್ತೇವೆ. ಚಾರ್ಜ್ ಶೀಟ್​​ನಲ್ಲಿ ಕೆಲವರ ಹೆಸರು ಹಾಕಿದ್ದಾರೆ. ಒತ್ತಡದಿಂದಾಗಿ ಪೊಲೀಸರು ಚಾರ್ಜ್ ಶೀಟ್ ಹಾಕಿರಬಹುದು. ಅವರ ಮೇಲೆ ಬಿಜೆಪಿಯವರ ಒತ್ತಡವಿದೆ. ಹೀಗಾಗಿ ಏಕಾಏಕಿ ಏನೂ ಮಾಡೋಕೆ ಆಗುವುದಿಲ್ಲ. ಅಖಂಡಗೆ ನ್ಯಾಯ ದೊರಕಿಸಿ ಕೊಡ್ತೇವೆ, ಎಂದಿದ್ದಾರೆ.
Published by: Rajesh Duggumane
First published: November 21, 2020, 12:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading