CBI Raids: ಅಮ್ನೆಸ್ಟಿ ಸಂಸ್ಥೆ ಮೇಲೆ ಸಿಬಿಐ ದಾಳಿ: ತನಿಖೆ ಮುಂದುವರಿಸಿದ ಅಧಿಕಾರಿಗಳು

ಈಗಾಗಲೇ ಅಮ್ನೆಸ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಕೆಲ ವ್ಯಕ್ತಿಗಳ ಮಾಹಿತಿ ಸಂಗ್ರಹಿಸಿದೆ. ಹಾಗೆಯೇ ಇವರಿಗೆ ಸಂಬಂಧಿಸಿದ ಲ್ಯಾಪ್​ಟಾಪ್​ಗಳನ್ನು ವಶಕ್ಕೆ ಪಡೆಯಲಾಗಿದೆ. ಅಮ್ನೆಸ್ಟಿ ಬ್ಯಾಂಕ್​​ ಅವ್ಯವಹಾರಗಳ ಮೇಲೆಯೂ ಜಾರಿ ನಿರ್ದೇಶನಾಲಯ ಹದ್ದಿನ ಕಣ್ಣಿಟ್ಟಿದೆ.

news18-kannada
Updated:November 15, 2019, 7:27 PM IST
CBI Raids: ಅಮ್ನೆಸ್ಟಿ ಸಂಸ್ಥೆ ಮೇಲೆ ಸಿಬಿಐ ದಾಳಿ: ತನಿಖೆ ಮುಂದುವರಿಸಿದ ಅಧಿಕಾರಿಗಳು
ಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾ ಸಂಸ್ಥೆಯ ಕಚೇರಿ
  • Share this:
ಬೆಂಗಳೂರು(ನ.15): ನಗರದ ಪ್ರತಿಷ್ಠಿತ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾ ಸಂಸ್ಥೆಯ ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಿದೇಶಿ ಕೊಡುಗೆಗಳ ನಿಯಂತ್ರಣ ಕಾಯ್ದೆ(FCRA) ಉಲ್ಲಂಘಿಸಿ ಅಮ್ನೆಷ್ಟಿ ಸಂಸ್ಥೆ ಭಾರೀ ಮೊತ್ತದ ದೇಣಿಗೆ ಸಂಗ್ರಹಿಸಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಸಿಬಿಐ ದಿಢೀರ್​​ ಅಮ್ನೆಸ್ಟಿ ಸಂಸ್ಥೆ ಮೇಲೆ ದಾಳಿ ನಡೆಸಿ ಕಡತಗಳ ಪರಿಶೀಲನೆ ನಡೆಸುತ್ತಿದೆ.

ಕಳೆದ ವರ್ಷ ಅಕ್ಟೋಬರ್​​​ 25ನೇ ತಾರೀಕಿನಂದು ಜಾರಿ ನಿರ್ದೇಶನಾಲಯ ಅಮ್ನೆಸ್ಟಿ ಸಂಸ್ಥೆಯ ಕಚೇರಿ ಮೇಲೆ ದಾಳಿ ನಡೆಸಿತ್ತು. ತನಿಖೆ ನಡೆಸುತ್ತಿದ್ದ ಮಧ್ಯದಲ್ಲೇ ಇಡಿ ಅಧಿಕಾರಿಗಳು ಅಧಿಕೃತ ಪತ್ರಿಕಾ ಪ್ರಕಟಣೆ ಹೊರಿಡಿಸಿದ್ದರು. ವಿದೇಶಿ ಕೊಡುಗೆಗಳ ನಿಯಂತ್ರಣ ಕಾಯ್ದೆ ಉಲ್ಲಂಘಿಸಿರುವ ಅಮ್ನೆಷ್ಟಿ ಸಂಸ್ಥೆ ಭಾರೀ ಮೊತ್ತದ ದೇಣಿಗೆ ಸಂಗ್ರಹಿಸಿದೆ ಎಂದು ಆರೋಪಿಸಿತ್ತು.

ಅಮ್ನೆಸ್ಟಿ ಸಂಸ್ಥೆಗೆ ಅಕ್ರಮವಾಗಿ ವಿದೇಶದಿಂದ 36 ಕೋಟಿ ಹಣ ವರ್ಗಾವಣೆಯಾಗಿದೆ. ಇದರಲ್ಲಿ 10 ಕೋಟಿಯನ್ನು ದೀರ್ಘಾವಧಿ ಸಾಲವಾಗಿ ಪಡೆಯಲಾಗಿದೆ. ಹಾಗಾಗಿಯೇ ಅಮ್ನೆಸ್ಟಿ ಸಂಸ್ಥೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು ಎನ್ನಲಾಗಿತ್ತು.

ಇದನ್ನೂ ಓದಿ: ರಾಜ್ಯಾದ್ಯಂತ ಕನಕ ಜಯಂತಿ ಆಚರಣೆ: ‘ಜಾತಿ ವಿರುದ್ಧ ದನಿಯೆತ್ತಿದ ದಾಸರ ಹಾದಿಯಲ್ಲಿ ಸಾಗೋಣ‘ ಎಂದ ಗಣ್ಯರು

ಈಗಾಗಲೇ ಅಮ್ನೆಸ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಕೆಲ ವ್ಯಕ್ತಿಗಳ ಮಾಹಿತಿ ಸಂಗ್ರಹಿಸಿದೆ. ಹಾಗೆಯೇ ಇವರಿಗೆ ಸಂಬಂಧಿಸಿದ ಲ್ಯಾಪ್​ಟಾಪ್​ಗಳನ್ನು ವಶಕ್ಕೆ ಪಡೆಯಲಾಗಿದೆ. ಅಮ್ನೆಸ್ಟಿ ಬ್ಯಾಂಕ್​​ ಅವ್ಯವಹಾರಗಳ ಮೇಲೆಯೂ ಜಾರಿ ನಿರ್ದೇಶನಾಲಯ ಹದ್ದಿನ ಕಣ್ಣಿಟ್ಟಿದೆ.

ಏನಿದು ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾ?

ಮಾನವ ಹಕ್ಕುಗಳ ವಿಚಾರದಲ್ಲಿ ಜಾಗತಿಕವಾಗಿ ಹೋರಾಡುವ ಸಂಸ್ಥೆಗಳಲ್ಲಿ ಅಮ್ನೆಸ್ಟಿ ಇಂಟರ್​ನ್ಯಾಷನಲ್ ಸಂಸ್ಥೆ ಕೂಡ ಒಂದು. ಸುಮಾರು 160 ದೇಶಗಳಲ್ಲಿ ಈ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದ್ದು, 70 ಲಕ್ಷಕ್ಕೂ ಹೆಚ್ಚಿನ ಸದಸ್ಯರಿದ್ದಾರೆ. ಹಲವು ಸಂಘಟನೆಗಳು ಇದರ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿದೆ. 1977ರಲ್ಲಿ ಈ ಸಂಸ್ಥೆಗೆ ನೋಬೆಲ್ ಶಾಂತಿ ಪ್ರಶಸ್ತಿ ಕೂಡ ಲಭಿಸಿತ್ತು. 2016ರಲ್ಲಿ ಬೆಂಗಳೂರಿನಲ್ಲಿ ಅಮ್ನೆಸ್ಟಿ ಇಂಟರ್​ನ್ಯಾಷನಲ್ ಇಂಡಿಯಾ ಸಂಸ್ಥೆ ಸಹಯೋಗದಲ್ಲಿ 'ಯುನೈಟೆಡ್ ಥಿಯೋಲಾಜಿಕಲ್ ಕಾಲೇಜ್' ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ದೇಶದ್ರೋಹದ ಘೋಷಣೆ ಕೂಗಲಾಗಿದೆ ಎಂಬ ಆರೋಪವೂ ಕೇಳಿ ಬಂದಿತ್ತು.ಇದನ್ನೂ ಓದಿ: ಬೆಂಗಳೂರಲ್ಲಿ ರೇಸ್ ವೇಳೆ ಕಾಲು ಮುರಿದುಕೊಂಡ ಕುದುರೆ; ಜನರಿಂದ ರಂಪಾಟ
-----------
First published:November 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ