ಯೋಗೇಶ್​ ಗೌಡ ಹತ್ಯೆ ಕೇಸ್​​: ತನಿಖೆ ತೀವ್ರಗೊಳಿಸಿದ ಸಿಬಿಐ; ಪತ್ನಿ ಮಲ್ಲಮ್ಮ ಸೇರಿ ಹಲವರ ವಿಚಾರಣೆ

ಪೊಲೀಸ್ ಅಧಿಕಾರಿ ಸುಲ್ಫಿ, ಜೆಡಿಎಸ್ ಮುಖಂಡ ಗುರುರಾಜ ಹುಣಸಿಮರದ, ಕೆಲ ರಾಜಕೀಯ ವ್ಯಕ್ತಿಗಳು ಸೇರಿ ಹೊಟೇಲ್ ಉದ್ಯಮಿ ಮಹೇಶ ಶೆಟ್ಟಿ ಮನೆಯಲ್ಲಿ ರಾಜಿ ಸಂಧಾನಕ್ಕೆ ಯತ್ನಿಸಿದ ಆರೋಪಕ್ಕೆ ಮಹೇಶ ಶೆಟ್ಟಿ ಠಾಣೆಗೆ ಕರೆಯಿಸಿ ಈಗಾಗಲೇ ಸಿಬಿಐ ತಂಡ ವಿಚಾರಣೆಗೆ ಒಳಪಡಿಸಿದೆ.

ಮೃತ ಯೋಗೇಶ್ ಗೌಡ

ಮೃತ ಯೋಗೇಶ್ ಗೌಡ

  • Share this:
ಧಾರವಾಡ(ಸೆ.17): ಧಾರವಾಡದಲ್ಲಿ ಕಳೆದ ಎರಡು ದಿನಗಳಿಂದ ಠಿಕಾಣಿ ಹೂಡಿರುವ ಜಿಲ್ಲಾ ಪಂಚಾಯಿತಿ ಬಿಜೆಪಿ ಸದಸ್ಯ ಯೋಗೇಶಗೌಡ ಕೊಲೆ ಪ್ರಕರಣದ ತನಿಖೆ ತೀವ್ರಗೊಳಿಸಿದೆ. ಪ್ರಕರಣ ಸಂಬಂಧಿಸಿದಂತೆ ಧಾರವಾಡ ಉಪನಗರ ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದೆ. ಬುಧವಾರವಷ್ಟೇ ಕಾಂಗ್ರೆಸ್ ಮುಖಂಡ ಹನುಮಂತ ಕೊರವರ ಎಂಬ ವ್ಯಕ್ತಿ ವಿಚಾರಣೆ ನಡೆಸಿದ ಸಿಬಿಐ ಅಧಿಕಾರಿಗಳು, ಕೊಲೆಗೆ ಸಂಬಂಧಿಸಿದ ಸಾಕ್ಷ ನಾಶ ಪಡಿಸಿದವರ ವಿರುದ್ಧ ಪ್ರತ್ಯೇಕವಾಗಿ ಎಫ್​ಐಆರ್​​​ ದಾಖಲಿಸಲು ನ್ಯಾಯಾಲಯದ ಅನುಮತಿ ಕೋರಿತ್ತು. ಇಂದು ಯೋಗೇಶ ಸಹೋದರ ಗುರುನಾಥಗೌಡ, ಪತ್ನಿ ಮಲ್ಲಮ್ಮ ಹಾಗೂ ಸಹೋದರಿ ಸುಮಾ, ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ, ಕೆಪಿಸಿಸಿ ಕಾರ್ಯದರ್ಶಿ ನಾಗರಾಜ ಗೌರಿ , ಮಾಜಿ ಸಚುವ ವಿನಯ ಕುಲಕರ್ಣಿ ಆಪ್ತ ಸಹಾಯಕ ಪ್ರಶಾಂತ ಕೇಕರಾ ಸೇರಿ ಹಲವರನ್ನು ತೀವ್ರ ವಿಚಾರಣೆಗೆ ಮಾಡಿದರು. ಪತಿ ಯೋಗೇಶ ಕೊಲೆ ಸಿಬಿಐಗೆ ಆಗ್ರಹಿಸಿದ ಪತ್ನಿ ಮಲ್ಲರನ್ನು, ಹೈಜಾಕ್ ಮಾಡಿದ ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ ಹಾಗೂ ಕೆಪಿಸಿಸಿ ಕಾರ್ಯದರ್ಶಿ ನಾಗರಾಜ ಗೌರಿ ಕಾಂಗ್ರೆಸ್‌ಗೆ ಸೇರ್ಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಹಿನ್ನಲೆ ಅವರನ್ನು ವಿಚಾರಣೆ ನಡೆಸಿದೆ.

ಪೊಲೀಸ್ ಅಧಿಕಾರಿ ಸುಲ್ಫಿ, ಜೆಡಿಎಸ್ ಮುಖಂಡ ಗುರುರಾಜ ಹುಣಸಿಮರದ, ಕೆಲ ರಾಜಕೀಯ ವ್ಯಕ್ತಿಗಳು ಸೇರಿ ಹೊಟೇಲ್ ಉದ್ಯಮಿ ಮಹೇಶ ಶೆಟ್ಟಿ ಮನೆಯಲ್ಲಿ ರಾಜಿ ಸಂಧಾನಕ್ಕೆ ಯತ್ನಿಸಿದ ಆರೋಪಕ್ಕೆ ಮಹೇಶ ಶೆಟ್ಟಿ ಠಾಣೆಗೆ ಕರೆಯಿಸಿ ಈಗಾಗಲೇ ಸಿಬಿಐ ತಂಡ ವಿಚಾರಣೆಗೆ ಒಳಪಡಿಸಿದೆ. ಅಲ್ಲದೇ, ಶಿವಾನಂದ ಕರಿಗಾರ, ನಾಗರಾಜ ಗೌರಿ, ಪ್ರಶಾಂತ ಕೇಕರಾ, ಮಲ್ಲಮ್ಮ ಹಾಗೂ ಸುಮಾ ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ವಿಚಾರಣೆ ನಡೆಸಿದ ಸಿಬಿಐ ಅಧಿಕಾರಿಗಳ ತಂಡ ಯೋಗೇಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಮಾಹಿತಿ ಕಲೆ ಹಾಕಿರುವುದು ತಿಳಿದಿದೆ.

ಮೊನ್ನೆಯಷ್ಟೇ ಬೆಂಗಳೂರಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ ವಿಚಾರಣೆ ನಡೆಸಿದ ತಂಡ ತನಿಖೆ ಕಾರಣಕ್ಕಾಗಿ ಪುನಃ ಧಾರವಾಡಕ್ಕೆ ಆಗಮಿಸಿರುವುದು ಜಿಲ್ಲೆಯ ರಾಜಕಾರಣದಲ್ಲಿ ತಳಮಳ ಉಂಟಾಗಿದ್ದು, ಜನರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಎರಡು ದಿನದಿಂದ ಧಾರವಾಡದಲ್ಲಿ ಬೀಡು ಬಿಟ್ಟಿರುವ ಸಿಬಿಐ ತಂಡ ಇನ್ನಷ್ಟು ದಿನ ಇಲ್ಲಿಯೇ ಠಿಕಾಣಿ ಹೂಡುವ ಲಕ್ಷಣಗಳಿದ್ದು, ಸಾಕ್ಷಿ ನಾಶ ಆರೋಪಕ್ಕೆ ಕುರಿತಂತೆ ಪ್ರತ್ಯೇಕ ಎಫ್‌ಐಆರ್ ದಾಖಲಿಸಲು ಸಿಬಿಐ ಅಧಿಕಾರಿಗಳ ತಂಡ ಇಲ್ಲಿನ ನ್ಯಾಯಾಲಯದ ಅನುಮತಿಗೆ ಕಾಯುತ್ತಿದೆ.

ಮಾಜಿ ಸಚಿವ ವಿನಯ ಕುಲಕರ್ಣಿ ಹಾಗೂ ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳು ವಿರುದ್ಧ ಸಾಕ್ಷ್ಯಿ ನಾಶದ ಆರೋಪ ಇರುವ ಕಾರಣ ಅವರಲ್ಲಿ ಭೀತಿ ಹುಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಯಾರನೆಲ್ಲ ವಿಚಾರಣೆಗೆ ಒಳಪಡಿಸಲಿದ್ದಾರೆ ಎಂಬುದು ಕಾದುನೋಡಬೇಕಿದೆ. ಸಿಬಿಐ ವಿಚಾರಣೆ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿ ನಾಗರಾಜ ಗೌರಿ, ಯೋಗೇಶಗೌಡ ಅವರ ಪತ್ನಿ ಮಲ್ಲಮ್ಮ‌ಗೌಡರ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿರೊ‌ ಬಗ್ಗೆ ಸಿಬಿಐ ಅಧಿಕಾರಿಗಳು ಕೇಳಿದರು. ಮಲ್ಲಮ್ಮ‌ ಅವರು ಕಾಂಗ್ರೆಸ್ ಪಕ್ಷ ಸೇರಲು ಯತ್ನ ಮಾಡಿದ್ದೇವೆ ಹೋರತು ಬೇರಾವ ವಿಚಾರಚ ನನಗೆ ಗೊತ್ತಿಲ್ಲ ಎಂದು ಸಿಬಿಐ ಅಧಿಕಾರಿಗಳಿಗೆ ಹೇಳಿದ್ದೆನೆ ಎಂದಿದ್ದಾರೆ.

ಇದನ್ನೂ ಓದಿ: ಜಿಲ್ಲಾ ಪಂಚಾಯತ್​ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣ ಸಿಬಿಐಗೆ ವಹಿಸಲು ರಾಜ್ಯ ಸರ್ಕಾರ ನಿರ್ಧಾರ

ಒಟ್ಟಾರೆಯಾಗಿ ಜಿಪಂ ಸದಸ್ಯ ಯೋಗೇಶಗೌಡ ಗೌಡರ ಕೊಲೆ ವಿಚಾರವಾಗಿ ಸಿಬಿಐ ಅಧಿಕಾರಿಗಳು ಧಾರವಾಡದಲ್ಲಿ  ಠಿಕಾನಿ ಹೂಡಿದ್ದು, ಈಗಾಗಲೇ‌ ಹಲವನ್ನು ಡ್ರಿಲ್ ಮಾಡಿ ಮಾಹಿತಿ ಕಲೆಹಾಕಿದೆ. ಇನ್ನಾರನ್ನು ವಿಚಾರಗೆ ಕರೆಯುತ್ತಾರೆ ಎಂಬುದು ಹಾಗೂ ಸಾಕ್ಷಿ‌ ನಾಶ ಕೇಸ್ ದಾಖಲೆಗೆ ಕೋರ್ಟ್ ಮೊರೆಹೊಗಿದ್ದು, ಮಾತ್ರ ಸ್ಥಳೀಯರ ಚರ್ಚೆಗೆ ಕಾರಣವಾಗಿದೆ.
Published by:Ganesh Nachikethu
First published: