ಐಎಂಎ ವಂಚನೆ ಪ್ರಕರಣ: ಪೊಲೀಸ್ ಅಧಿಕಾರಿಗಳು ಸೇರಿ 28 ಮಂದಿ ವಿರುದ್ಧ ಪೂರಕ ಚಾರ್ಜ್​ಶೀಟ್

ಐಎಂಎ ವಂಚನೆ ಪ್ರಕರಣದಲ್ಲಿ ಸರಿಯಾಗಿ ತನಿಖೆ ನಡೆಸದೆ ಕ್ಲೀನ್ ಚಿಟ್ ನೀಡಿದ ಆರೋಪ ಎದುರಿಸುತ್ತಿರುವ ಪೊಲೀಸ್ ಅಧಿಕಾರಿಗಳು ಒಳಗೊಂಡಂತೆ 28 ಮಂದಿ ವಿರುದ್ಧ ಸಿಬಿಐ ಸಪ್ಲಿಮೆಂಟರ್ ಚಾರ್ಜ್ ಶೀಟ್ ಫೈಲ್ ಮಾಡಿದೆ.

news18-kannada
Updated:October 17, 2020, 11:46 PM IST
ಐಎಂಎ ವಂಚನೆ ಪ್ರಕರಣ: ಪೊಲೀಸ್ ಅಧಿಕಾರಿಗಳು ಸೇರಿ 28 ಮಂದಿ ವಿರುದ್ಧ ಪೂರಕ ಚಾರ್ಜ್​ಶೀಟ್
ಸಿಬಿಐ
  • Share this:
ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣದಲ್ಲಿ ಪೊಲೀಸ್ ಆಧಿಕಾರಿಗಳಿಗೆ ಸಂಕಷ್ಟ ಶುರುವಾಗಿದೆ. ಐಎಂಎ ಪ್ರಕರಣದಲ್ಲಿ ಸೂಕ್ತ ತನಿಖೆ ನಡೆಸದೆ ಕ್ಲೀನ್ ಚೀಟ್ ನೀಡಿದ ಆರೋಪದ ಮೇಲೆ ಪೊಲೀಸ್ ಆಧಿಕಾರಿಗಳು ಸೇರಿ 28 ಆರೋಪಿಗಳ ವಿರುದ್ಧ ಸಿಬಿಐ ಪೂರಕ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.

ಬಹುಕೋಟಿ ಐಎಂಎ ವಂಚನೆ ಪ್ರಕರಣದಲ್ಲಿ ಸಿಬಿಐನಿಂದ ಸಪ್ಲಿಮೆಂಟರಿ ಚಾರ್ಜ್‌ಶೀಟ್ ಮಾಡಲಾಗಿದೆ. ಐಎಂಎ ಕಂಪನಿ ಮಾಲೀಕ ಮನ್ಸೂರ್ ಖಾನ್ ಸೇರಿದಂತೆ 28 ಜನರ ವಿರುದ್ಧ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಇಂದು ದೋಷಾರೋಪಣೆ ಪಟ್ಟಿ ಸಲ್ಲಿಕೆ ಮಾಡಲಾಗಿದೆ.

ಸಿಬಿಐ ಸಲ್ಲಿಕೆ ಮಾಡಿರುವ ಪೂರಕ ಚಾರ್ಜ್ ಶೀಟ್ ನಲ್ಲಿ ಐಪಿಎಸ್ ಅಧಿಕಾರಿಗಳು, ಪೊಲೀಸರು ಸೇರಿ ಹಲವು ಮಂದಿಯ ವಿರುದ್ಧ ಆರೋಪಗಳು ಕೇಳಿ ಬಂದಿವೆ. ಐಎಂಎ ವಂಚನೆ ಪ್ರಕರಣ ಬೆಳಕಿಗೆ ಬಂದ ವೇಳೆ ಅಂದಿನ ಆಧಿಕಾರಿಗಳು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಲಾಗಿದೆ‌. ಆಗಿನ ಬೆಂಗಳೂರು ಉತ್ತರ ವಿಭಾಗದ ಎಸಿಪಿ, ಸಿಐಡಿ ಆರ್ಥಿಕ ಅಪರಾಧ ವಿಭಾಗದ ಐಜಿ,ಅಂದಿನ ಪೂರ್ವ ವಿಭಾಗದ ಡಿಸಿಪಿ, ಕಮರ್ಷಿಯಲ್ ಸ್ಟ್ರೀಟ್‌ ಠಾಣೆ ಇನ್ಸ್‌ಪೆಕ್ಟರ್ ಮತ್ತು ಸಬ್ ಇನ್ಸ್‌ಪೆಕ್ಟರ್ ಮೇಲೆ ಆರೋಪಗಳು ಕೇಳಿ ಬಂದಿದ್ದು ಎಲ್ಲರ ವಿರುದ್ಧ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಕೆ ಮಾಡಲಾಗಿದೆ.

ಇದನ್ನೂ ಓದಿ: ಮನೀಶ್ ಶೆಟ್ಟಿ ಕೊಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ; ಇಬ್ಬರ ಕಾಲಿಗೆ ಗುಂಡೇಟು

ಮೇಲ್ಕಂಡ ಆರೋಪಿಗಳು ಐಎಂಎ ವಿರುದ್ಧ ಸೂಕ್ತ ವೆರಿಫಿಕೇಶನ್ ಮಾಡಿರುವುದಿಲ್ಲ. ಕೆಪಿಐಡಿ ಕಾಯ್ದೆಯಡಿ ಸೂಕ್ತ ಕ್ರಮ ಕೈಗೊಂಡಿರುವುದಿಲ್ಲ. ಕಾನೂನಿನಡಿ ಸೂಕ್ತ ತನಿಖೆ ನಡೆಸದೆ ಐಎಂಎ ಕಂಪನಿಗೆ ಕ್ಲೀನ್ ಚಿಟ್ ನೀಡಲಾಗಿದೆ. ಈ ಕಾರಣಗಳಿಂದ ಐಎಂಎ ವಂಚನೆ ಮುಂದುವರೆಯಲು ಕಾರಣವೆಂದು ಉಲ್ಲೇಖಿಸಿದ್ದಾರೆ. ಐಎಂಎ ಹಗರಣ 4 ಸಾವಿರ ಕೋಟಿಗೂ ಅಧಿಕ ವಂಚನೆ ಪ್ರಕರಣವಾಗಿದ್ದು ಈಗಾಗಲೇ ಸಿಬಿಐ 4 ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದೆ.

ವರದಿ: ಮುನಿರಾಜು ಹೊಸಕೋಟೆ
Published by: Vijayasarthy SN
First published: October 17, 2020, 11:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading