ಐಎಂಎ ಪ್ರಕರಣ; ಇಬ್ಬರು ಐಪಿಎಸ್ ಅಧಿಕಾರಿಗಳು ಸೇರಿ 9 ಮಂದಿ ಮೇಲೆ ಎಫ್​ಐಆರ್ ದಾಖಲಿಸಿದ ಸಿಬಿಐ

ಐಎಂಎ ಕಂಪನಿ ಬಗ್ಗೆ ಯಾವುದೇ ಕ್ರಮ ಜರುಗಿಸದೇ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ  ಆರೋಪ ಕೇಳಿಬಂದಿದೆ. ಅಂದಿನ ಇನ್ಸ್‌ಪೆಕ್ಟರ್ ಎಂ ರಮೇಶ್ ಹಾಗೂ ಅಂದಿನ ಡಿಸಿಪಿ ಅಜಯ್ ಹಿಲೋರಿ ನಿರ್ಲಕ್ಷ್ಯ ಮಾಡಿರಿವ ಆರೋಪ ಕೇಳಿಬಂದ ಕಾರಣ ಇವರ ವಿರುದ್ಧ ಸಿಬಿಐ ಎಫ್​ಐಆರ್ ದಾಖಲಿಸಿದೆ.

ಐಎಂಎ ಕಂಪನಿ.

ಐಎಂಎ ಕಂಪನಿ.

  • Share this:
ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಇಬ್ಬರು ಐಪಿಎಸ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಸೇರಿ ಒಂಭತ್ತು ಮಂದಿ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ. ಜೊತೆಗೆ ಐಎಂ ಹಾಗೂ ಅನಧಿಕೃತ ಅಧಿಕಾರಿಗಳನ್ನು ಆರೋಪಿಗಳನ್ನಾಗಿ ಮಾಡಲಾಗಿದೆ.

ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್, ಅಜಯ್ ಹಿಲೋರಿ ಹಾಗೂ ಅಂದಿನ ಕಮರ್ಷಿಯಲ್ ಠಾಣೆ ಇನ್ಸ್‌ಪೆಕ್ಟರ್ ಎಂ.ರಮೇಶ್, ಸಬ್ ಇನ್ಸ್‌ಪೆಕ್ಟರ್ ಗೌರಿಶಂಕರ್, ಸಿಐಡಿ ಡಿವೈಎಸ್ಪಿ ಶ್ರೀಧರ್ ಮೇಲೆ ಸೆಕ್ಷನ್ 120 ಬಿ ಅಡಿ ಬೆಂಗಳೂರು ಸಿಬಿಐ ಕಚೇರಿಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಐಎಂಎ ಪ್ರಕರಣ ಸಂಬಂಧ ಅಧಿಕಾರಿಗಳ ವಿರುದ್ಧ ಸಿಬಿಐ ತನಿಖೆಗೆ ಕಳೆದ ವಾರವಷ್ಟೇ ರಾಜ್ಯ ಸರ್ಕಾರ ಅನುಮತಿ ನೀಡಿತ್ತು.

2016ರಲ್ಲಿ ಐಎಂಎ ಕಂಪನಿ ಬಗ್ಗೆ ನಿಗಾ ವಹಿಸಿ ತನಿಖೆ ನಡೆಸುವಂತೆ ಆರ್​ಬಿಐ ಪತ್ರ ಬರೆದಿತ್ತು. ಅದರಂತೆ ಅಂದು  ಡಿಸಿಪಿಯಾಗಿದ್ದ ಅಜಯ್ ಹಿಲೋರಿ ಮೂಲಕ ಕಮರ್ಷಿಯಲ್ ಸ್ಟ್ರೀಟ್ ಇನ್ಸ್‌ಪೆಕ್ಟರ್ ರಮೇಶ್ ಗೆ ಪತ್ರ ಕೂಡ ರವಾನಿಸಲಾಗಿತ್ತು. ತನಿಖೆ ನಡೆಸಿ ಐಎಂಎ ಕಂಪನಿ ಬಗ್ಗೆ ವರದಿ ನೀಡಲು ಸೂಚನೆ ನೀಡಲಾಗಿತ್ತು. ಅದರೆ ಈ ವೇಳೆ ಐಎಂಎ ಕಂಪನಿ ಬಗ್ಗೆ ಯಾವುದೇ ಕ್ರಮ ಜರುಗಿಸದೇ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ  ಆರೋಪ ಕೇಳಿಬಂದಿದೆ. ಅಂದಿನ ಇನ್ಸ್‌ಪೆಕ್ಟರ್ ಎಂ ರಮೇಶ್ ಹಾಗೂ ಅಂದಿನ ಡಿಸಿಪಿ ಅಜಯ್ ಹಿಲೋರಿ ನಿರ್ಲಕ್ಷ್ಯ ಮಾಡಿರಿವ ಆರೋಪ ಕೇಳಿಬಂದ ಕಾರಣ ಇವರ ವಿರುದ್ಧ ಸಿಬಿಐ ಎಫ್​ಐಆರ್ ದಾಖಲಿಸಿದೆ.

ಇದನ್ನು ಓದಿ: ಅನ್ನದಾಸೋಹ ಯೋಜನೆ ರದ್ದು, ಸಿದ್ಧಗಂಗಾ ಮಠ ಸೇರಿ ನೂರಾರು ಸಂಸ್ಥೆಗೆ ನೀಡಲಾಗುತ್ತಿದ್ದ ಅಕ್ಕಿ, ಗೋಧಿಗೂ ಕತ್ತರಿ; ಯು.ಟಿ.ಖಾದರ್
First published: