ಸಿಐಡಿ ಡಿವೈಎಸ್​ಪಿ ಆತ್ಮಹತ್ಯೆ ಪ್ರಕರಣ; ಪೊಲೀಸರಿಂದ ಲಕ್ಷ್ಮೀ ಗೆಳೆಯರ ವಿಚಾರಣೆ

ಲಕ್ಷ್ಮೀ ಗೆಳೆಯ ಮನೋಹರ್ ಪೊಲೀಸರ ಮುಂದೆ ನೀಡಿರುವ ಹೇಳಿಕೆ ಈ ರೀತಿ ಇದೆ.  ನಮ್ಮ ಮನೆಯಲ್ಲಿ ನಿನ್ನೆ ರಾತ್ರಿ 10 ಗಂಟೆಗೆ ಪಾರ್ಟಿ ಮುಗಿತು. ಡಿವೈಎಸ್‌ಪಿ ಲಕ್ಷ್ಮೀ ರೆಸ್ಟ್ ಮಾಡ್ತಿನಿ ಅಂತಾ ರೂಂಗೆ ತೆರಳಿದರು. ತೆರಳುವ ವೇಳೆ ದುಪ್ಪಟ ತಗೆದುಕೊಂಡು ಹೋಗುವಂತೆ ಲಕ್ಷ್ಮೀಗೆ ಹೇಳಿದೆ ಎಂದು ವಿಚಾರಣೆ ವೇಳೆ ಹೇಳಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಬೆಂಗಳೂರು(ಡಿ.17): ಸಿಬಿಐನ ಡಿವೈಎಸ್​ಪಿ ಲಕ್ಷ್ಮೀ ಆತ್ಮಹತ್ಯೆ ಪ್ರಕರಣ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಲಕ್ಷ್ಮೀ ಸ್ನೇಹಿತರಾದ ಮನೋಹರ್, ಧರ್ಮೇಗೌಡ, ಪ್ರಜ್ವಲ್ ಸೇರಿದಂತೆ ನಾಲ್ವರ​ ವಿಚಾರಣೆ ನಡೆಸಲಾಗುತ್ತಿದೆ. ಕಳೆದ ರಾತ್ರಿ ಲಕ್ಷ್ಮೀ  ತನ್ನ ಐವರು ಗೆಳೆಯರೊಂದಿಗೆ ಪಾರ್ಟಿ ಮಾಡಿದ್ದರು ಎನ್ನಲಾಗಿದೆ. ಹೀಗಾಗಿ ಆ ಪಾರ್ಟಿಯಲ್ಲಿ ಭಾಗಿಯಾಗಿದ್ದ ಆಕೆಯ ಸ್ನೇಹಿತರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.

  ನಿನ್ನೆ ರಾತ್ರಿ ತನ್ನ ಪರಿಚಯಸ್ಥರ ಮನೆಗೆ ತೆರಳಿದ್ದ ಲಕ್ಷ್ಮೀ, ಪಾರ್ಟಿ ಮುಗಿದ ಬಳಿಕ ಅಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಆದರೆ ಮೃತ ಡಿವೈಎಸ್​ಪಿ ಲಕ್ಷ್ಮೀ ತಂದೆ ವೆಂಕಟೇಶ್ ತನ್ನ ಮಗಳ ಸಾವಿನ ಕುರಿತಾಗಿ ಅನುಮಾನ ವ್ಯಕ್ತಪಡಿಸಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಪಾರ್ಟಿಯಲ್ಲಿ ಭಾಗಿಯಾಗಿದ್ದ ಲಕ್ಷ್ಮೀ ಸ್ನೇಹಿತರನ್ನು ವಿಚಾರಣೆಗೆ ಒಳಪಡಿಸಿ, ಹೇಳಿಕೆ ಪಡೆಯುತ್ತಿದ್ದಾರೆ.

  DySP Lakshmi Suicide: ಬೆಂಗಳೂರಿನಲ್ಲಿ ಸಿಐಡಿ ಡಿವೈಎಸ್​ಪಿ ಲಕ್ಷ್ಮೀ ಆತ್ಮಹತ್ಯೆ; ನಿನ್ನೆ ರಾತ್ರಿ ಸ್ನೇಹಿತರ ಮನೆಯಲ್ಲೇ ನೇಣಿಗೆ ಶರಣು

  ಬಿಬಿಎಂಪಿ ಎ1 ಕಾಂಟ್ರಾಕ್ಟರ್ ಆಗಿದ್ದ ಮನೋಹರ್ ಜೊತೆ ನಿನ್ನೆ ರಾತ್ರಿ ಲಕ್ಷ್ಮೀ ಸೇರಿ ಐವರು ಸೇರಿ ಪಾರ್ಟಿ ಮಾಡಿದ್ದರು ಎನ್ನಲಾಗಿದೆ.  ಲಕ್ಷ್ಮೀ ಗೆಳೆಯ ಮನೋಹರ್ ಪೊಲೀಸರ ಮುಂದೆ ನೀಡಿರುವ ಹೇಳಿಕೆ ಈ ರೀತಿ ಇದೆ.  ನಮ್ಮ ಮನೆಯಲ್ಲಿ ನಿನ್ನೆ ರಾತ್ರಿ 10 ಗಂಟೆಗೆ ಪಾರ್ಟಿ ಮುಗಿತು. ಡಿವೈಎಸ್‌ಪಿ ಲಕ್ಷ್ಮೀ ರೆಸ್ಟ್ ಮಾಡ್ತಿನಿ ಅಂತಾ ರೂಂಗೆ ತೆರಳಿದರು. ತೆರಳುವ ವೇಳೆ ದುಪ್ಪಟ ತಗೆದುಕೊಂಡು ಹೋಗುವಂತೆ ಲಕ್ಷ್ಮೀಗೆ ಹೇಳಿದೆ ಎಂದು ವಿಚಾರಣೆ ವೇಳೆ ಹೇಳಿದ್ದಾರೆ.

  ಈ ಸಂಬಂಧ  ಐಪಿಸಿ ಸೆಕ್ಷನ್ 174 ಸಿ ಅಡಿಯಲ್ಲಿ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.  ಅನ್ನಪೂರ್ಣೇಶ್ವರಿ ನಗರ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ. ಐಪಿಸಿ ಸೆಕ್ಷನನ್ 174 ಸಿ- ಯಾವುದೇ ಸರ್ಕಾರಿ ಅಧಿಕಾರಿ ಕೊಲೆ, ಆತ್ಮಹತ್ಯೆ, ಆಕ್ಸಿಡೆಂಟ್ ಸೇರಿ ಯಾವುದೇ ರೀತಿಯಲ್ಲಿ ಸಾವನ್ನಪ್ಪಿದ ವೇಳೆ ತನಿಖೆ ಸೂಕ್ತ ನಡೆಸುವುದು ಎಂದು ಹೇಳುತ್ತದೆ. ಜೊತೆಗೆ ಅನುಮಾನಸ್ಪದ ಸಾವನ್ನಪ್ಪಿದ ವೇಳೆ ಸೂಕ್ತ ತನಿಖೆ ನಡೆಸುವುದಾಗಿದೆ.

  ಒಂದೆಡೆ ಪೊಲೀಸರು ಮೃತ ಲಕ್ಷ್ಮೀ ಗೆಳೆಯರ ವಿಚಾರಣೆ ನಡೆಸುತ್ತಿದ್ದರೆ, ಮತ್ತೊಂದೆಡೆ, ಎಫ್ಎಸ್ಎಲ್ ಅಧಿಕಾರಿಗಳು ರಾತ್ರಿ ಪಾರ್ಟಿ ಮಾಡಿದ್ದ ಮನೋಹರ್​​ ಫ್ಲಾಟ್​​ನಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಬೆರಳಚ್ಚು ತಜ್ಞರು ಎಲ್ಲೆಡೆ ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ. ಜೊತೆಗೆ ಎಫ್​ಎಸ್​ಎಲ್​ ತಜ್ಞರು ಲಕ್ಷ್ಮೀ ಬಂದಿದ್ದ  ಬೆನ್ಜ್​ ಕಾರನ್ನೂ ಪರಿಶೀಲನೆ ನಡೆಸುತ್ತಿದ್ದಾರೆ.

  ಎಫ್​ಎಸ್​ಎಲ್​ ಅಧಿಕಾರಿಗಳು ಡಿವೈಎಸ್ಪಿ ಲಕ್ಷ್ಮಿಯ ಮೃತದೇಹದ ಪರಿಶೀಲನೆಯನ್ನೂ ಮಾಡಿದ್ದಾರೆ.  ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮೃತದೇಹವನ್ನು ಪರಿಶೀಲಿಸಿದ್ದಾರೆ. ಅಧಿಕಾರಿಗಳು ಲಕ್ಷ್ಮೀ  ಮೃತದೇಹದ ಮೇಲಿರುವ ಬೆರಳಚ್ಚು, ದೇಹದ ಗುರುತು, ಕೂದಲು ಮತ್ತು ರಕ್ತದ ಸ್ಯಾಂಪಲ್ ಪಡೆದಿದ್ದಾರೆ. ಸ್ಯಾಂಪಲ್ ಗಳನ್ನು ಪಡೆದು ವಿಕ್ಟೋರಿಯಾ ಆಸ್ಪತ್ರೆಯಿಂದ ಹೊರಟಿದ್ದಾರೆ.
  Published by:Latha CG
  First published: