ಚೀಟಿ ಹರಿದಿದ್ದ ಪ್ರಕರಣದಲ್ಲಿ ಡಿಕೆಶಿಗೆ ಸಂಕಷ್ಟ: ಕ್ರಿಮಿನಲ್ ಪ್ರಾಸಿಕ್ಯೂಶನ್​ಗೆ ಸಿಬಿಐ ಕೋರ್ಟ್​ ಆದೇಶ


Updated:February 14, 2018, 10:32 PM IST
ಚೀಟಿ ಹರಿದಿದ್ದ ಪ್ರಕರಣದಲ್ಲಿ ಡಿಕೆಶಿಗೆ ಸಂಕಷ್ಟ: ಕ್ರಿಮಿನಲ್ ಪ್ರಾಸಿಕ್ಯೂಶನ್​ಗೆ ಸಿಬಿಐ ಕೋರ್ಟ್​ ಆದೇಶ
ಇಂಧನ ಸಚಿವ ಡಿ.ಕೆ. ಶಿವಕುಮಾರ್

Updated: February 14, 2018, 10:32 PM IST
ಬೆಂಗಳೂರು(ಫೆ.14): ಈಗಲ್​ಟನ್​ ರೆಸಾರ್ಟ್​ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದ ವೇಳೆ ಚೀಟಿ ಹರಿದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿ.ಕೆ ಶಿವಕುಮಾರ್​ ಅವರಿಗೆ ಸಂಕಷ್ಟ ಎದುರಾಗಿದೆ.

ಡಿ.ಕೆ. ಶಿವಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಿ, ಕ್ರಿಮಿನಲ್ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿ ಸಿಬಿಐ ಆರ್ಥಿಕ ಅಪರಾಧಗಳ ನ್ಯಾಯಪೀಠ ಆದೇಶ ಮಾಡಿದೆ.

ಐಟಿ ದಾಳಿ ವೇಳೆ ಡಿ.ಕೆ. ಶಿವಕುಮಾರ್ ಹರಿದಿದ್ದ ಚೀಟಿ ಜೋಡಿಸಿ ಅದರಲ್ಲಿದ್ದ ಮಾಹಿತಿಗಳನ್ನ ಐಟಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಚೀಟಿಯಲ್ಲಿ ಸುಮಾರು 18 ಕೋಟಿ ರೂ. ವರ್ಗಾವಣೆ ವಿಚಾರವನ್ನ ಬರೆಯಲಾಗಿತ್ತು ಎಂದು ಮೂಲಗಳು ನ್ಯೂಸ್ 18ಗೆ ನೀಡಿರುವ ಮಾಹಿತಿಯಲ್ಲಿ ತಿಳಿದು ಬಂದಿದೆ.

ಗುಜರಾತ್ ಶಾಸಕರ ಜೊತೆ ಡಿ.ಕೆ. ಶಿವಕುಮಾರ್ ರಾಮನಗರ ಬಳಿಯ ಈಗಲ್ ಟನ್ ರೆಸಾರ್ಟ್​ನಲ್ಲಿ ತಂಗಿದ್ದ ವೇಳೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಸಂದರ್ಭ ಐಟಿ ಅಧಿಕಾರಿಗಳನ್ನ ಕಂಡು ಡಿ.ಕೆ.ಶಿವಕುಮಾರ್ ಯಾವುದೋ ಚೀಟಿಯನ್ನ ಹರಿದಿದ್ದರು. ಚೀಟಿ ಹರಿದಿದ್ದ ಕುರಿತಂತೆ ಡಿಕೆಶಿ ವಿರುದ್ಧ ಐಟಿ ಅಧಿಕಾರಿಗಳು ಸಾಕ್ಷ್ಯ ನಾಶದ ದೂರು ನೀಡಿದ್ದರು.ಐಟಿ ದೂರಿನನ್ವಯ ಕೋರ್ಟ್ ಮುಂದೆ ಹಾಜರಾಗಲು ಸಿಬಿಐ ಆರ್ಥಿಕ ಅಪರಾಧಗಳ ನ್ಯಾಯಪೀಠ ಸೂಚನೆ ನೀಡಿದೆ. ಮಾರ್ಚ್​​ 22ರೊಳಗೆ ಹಾಜರಾಗುವಂತೆ ಡಿಕೆಶಿಗೆ ಸೂಚನೆ ನೀಡಲಾಗಿದೆ. ಸಾಕ್ಷ್ಯನಾಶ ಆರೋಪದಡಿ ಸಚಿವ ಡಿಕೆಶಿ ಬಂಧನ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
First published:February 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ