ಐಎಂಎ ಹಗರಣ: ಹೇಮಂತ್ ನಿಂಬಾಳ್ಕರ್ ನಿವಾಸ ಸೇರಿ 15 ಸ್ಥಳಗಳ ಮೇಲೆ ಸಿಬಿಐ ದಾಳಿ

ಐಎಂಎ ಸಮೂಹದ ಕಂಪನಿಗಳ ವಿರುದ್ಧ ದೂರು ಕೇಳಿಬಂದಾಗ ಈ ಅಧಿಕಾರಿಗಳು ತನಿಖೆ ನಡೆಸಿದ್ದರು. ಐಎಂಎ ಪರವಾಗಿ ವರದಿಗಳನ್ನು ಸಿದ್ಧಪಡಿಸಿ ಕ್ಲೀನ್ ಚಿಟ್ ನೀಡಿದ್ದರು. ಹಾಗಾಗಿ, ಐಎಂಎ ವಿರುದ್ಧ ಯಾವುದೇ ಕ್ರಮ ಜರುಗಿಸಲು ಯಾರೂ ಮುಂದಾಗಲಿಲ್ಲ. ಐಎಂಎ ವಂಚನೆ ಮುಂದುವರಿಯಲು ಇದು ಕಾರಣವಾಯಿತು.

news18
Updated:November 8, 2019, 6:41 PM IST
ಐಎಂಎ ಹಗರಣ: ಹೇಮಂತ್ ನಿಂಬಾಳ್ಕರ್ ನಿವಾಸ ಸೇರಿ 15 ಸ್ಥಳಗಳ ಮೇಲೆ ಸಿಬಿಐ ದಾಳಿ
ಐಎಂಎ ಕಂಪನಿ
  • News18
  • Last Updated: November 8, 2019, 6:41 PM IST
  • Share this:
ಬೆಂಗಳೂರು(ನ. 08): ಬಹುಕೋಟಿ ಐಎಂಎ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐನ ಅಧಿಕಾರಿಗಳು ಇಂದು 15 ಸ್ಥಳಗಳ ಮೇಲೆ ದಾಳಿ ನಡೆಸಿದೆ. ಇದರಲ್ಲಿ ಬೆಂಗಳೂರಿನ 11 ಸ್ಥಳಗಳೂ ಸೇರಿವೆ. ಮಂಡ್ಯ, ರಾಮನಗರ, ಬೆಳಗಾವಿ ಮತ್ತು ಉತ್ತರ ಪ್ರದೇಶದ ಮೀರತ್ ನಗರಗಳಲ್ಲೂ ದಾಳಿಗಳಾಗಿವೆ.

ಎಂಎಂಎ ಹಗರಣ ನಡೆದಾಗ ಸಿಐಡಿಯ ಆರ್ಥಿಕ ಅಪರಾಧ ವಿಭಾಗದ ಐಜಿ ಆಗಿದ್ದ ಹೇಮಂತ್ ನಿಂಬಾಳ್ಕರ್, ಅಂದಿನ ಪೂರ್ವ ವಲಯ ಡಿಸಿಪಿ ಅಜಯ್ ಹಿಲೋರಿ, ಆಗಿನ ಬಿಡಿಎ ಮುಖ್ಯ ಎಂಜಿನಿಯರ್ ಪಿಡಿ ಕುಮಾರ್ ಮೊದಲಾದವರ ನಿವಾಸಗಳ ಮೇಲೆ ಸಿಬಿಐ ಅಧಿಕಾರಿಗಳು ರೇಡ್ ಮಾಡಿದ್ದಾರೆ.

ಇದನ್ನೂ ಓದಿ: ಇತ್ತ ಚುನಾವಣೆ, ಅತ್ತ ಸುಪ್ರೀಂ ತೀರ್ಪು ಅನಿಶ್ಚಿತ: ಅತಂತ್ರಗೊಂಡ ಅನರ್ಹ ಶಾಸಕರಿಗೆ ಮುಂದಿನ ದಾರಿಗಳೇನು?

ಸಿಬಿಐ ರೇಡ್ ಮಾಡಿದ ಕೆಲ ವ್ಯಕ್ತಿಗಳು:
1) ಹೇಮಂತ್ ನಿಂಬಾಳ್ಕರ್, ಅಂದಿನ ಸಿಐಡಿ ಆರ್ಥಿಕ ಅಪರಾಧ ವಿಭಾಗದ ಐಜಿ
2) ಇ.ಬಿ. ಶ್ರೀಧರ್, ಅಂದಿನ ಸಿಐಡಿ ಪೊಲೀಸ್ ಉಪವರಿಷ್ಠಾಧಿಕಾರಿ
3) ಅಜಯ್ ಹಿಲೋರಿ, ಅಂದಿನ ಪೂರ್ವ ವಲಯ ಡಿಸಿಪಿ4) ಎಂ. ರಮೇಶ್, ಅಂದಿನ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣಾಧಿಕಾರಿ
5) ಗೌರಿ ಶಂಕರ್, ಅಂದಿನ ಕಮರ್ಷಿಯಲ್ ಸ್ಟ್ರೀಟ್ ಠಾಣೆಯ ಉಪನಿರೀಕ್ಷಕ
6) ಎಲ್.ಸಿ. ನಾಗರಾಜ್, ಅಂದಿನ ಬೆಂಗಳೂರು ಉತ್ತರ ಉಪವಿಭಾಗದ ಎಸಿಪಿ ಹಾಗೂ ಕೆಪಿಐಡಿ ಕಾಯ್ದೆಯ ಅಧಿಕಾರಿ
7) ಬಿ.ಎಂ. ವಿಜಯಶಂಕರ್, ಅಂದಿನ ಬೆಂಗಳೂರು ನಗರ ಜಿಲ್ಲೆ ಡಿಸಿಪಿ
8) ಮಂಜುನಾಥ್, ಬೆಂಗಳೂರು ಉತ್ತರ ಉಪವಿಭಾಗದ ಲೆಕ್ಕಿಗ
9) ಪಿ.ಡಿ. ಕುಮಾರ್, ಅಂದಿನ ಬಿಡಿಎ ಮುಖ್ಯ ಎಂಜಿನಿಯರ್

ಐಎಂಎ ಸಮೂಹದ ಕಂಪನಿಗಳ ವಿರುದ್ಧ ದೂರು ಕೇಳಿಬಂದಾಗ ಈ ಅಧಿಕಾರಿಗಳು ತನಿಖೆ ನಡೆಸಿದ್ದರು. ಐಎಂಎ ಪರವಾಗಿ ವರದಿಗಳನ್ನು ಸಿದ್ಧಪಡಿಸಿ ಕ್ಲೀನ್ ಚಿಟ್ ನೀಡಿದ್ದರು. ಹಾಗಾಗಿ, ಐಎಂಎ ವಿರುದ್ಧ ಯಾವುದೇ ಕ್ರಮ ಜರುಗಿಸಲು ಯಾರೂ ಮುಂದಾಗಲಿಲ್ಲ. ಐಎಂಎ ವಂಚನೆ ಮುಂದುವರಿಯಲು ಇದು ಕಾರಣವಾಯಿತು.

ಇದನ್ನೂ ಓದಿ: ವಿಧಿ ತುಮಕೂರಿಗೆ ಎಳೆದುಕೊಂಡು ಬಂದು ಚುನಾವಣೆಯಲ್ಲಿ ಸೋಲುವಂತೆ ಮಾಡಿತು; ದೇವೇಗೌಡ

ಐಎಂಎ ಸಂಸ್ಥೆಯ ಮುಖ್ಯಸ್ಥ ಹಾಗೂ ಹಗರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ನೀಡಿದ್ದ ಹೇಳಿಕೆಗಳ ಆಧಾರದ ಮೇಲೆ ತನಿಖೆ ನಡೆಯುತ್ತಿದೆ. ಅಜಯ್ ಹಿಲೋರಿ ಡಿಸಿಪಿ ಆಗಿದ್ದ ಸಂದರ್ಭದಲ್ಲಿ ಅವರಿಗೆ 20 ಕೋಟಿರೂ ಲಂಚ ನೀಡಿದ್ದಾಗಿ ಮನ್ಸೂರ್ ಬಾಯಿಬಿಟ್ಟಿದ್ದ. ಸಿಬಿಐಗೂ ಮೊದಲು ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್​ಐಟಿ ಅಜಯ್ ಹಿಲೋರಿ ಅವರ ವಿಚಾರಣೆ ನಡೆಸಿತ್ತು. ಸಿಬಿಐ ಅಧಿಕಾರಿಗಳೂ ಕೂಡ ಅಜಯ್ ಹಿಲೋರಿಯನ್ನು ಮೂರು ಬಾರಿ ವಿಚಾರಣೆ ನಡೆಸಿದ್ದರು. ಈಗ ಅವರ ಮನೆಯನ್ನ ರೇಡ್ ಮಾಡಿ ದಾಖಲೆ ಪರಿಶೀಲನೆ ಮಾಡಿದ್ದಾರೆ.

ಇನ್ನು, ಉತ್ತರಪ್ರದೇಶದ ಮೌಲ್ವಿಯೊಬ್ಬರಿಗೆ ಕೋಟ್ಯಂತರ ರೂ ಹಣ ನೀಡಿದ್ದಾಗಿ ಮನ್ಸೂರ್ ಒಪ್ಪಿಕೊಂಡಿದ್ದಾರೆ. ಈ ವಿಚಾರ ಬೆಳಕಿಗೆ ಬರುತ್ತಲೇ ಆ ಮೌಲ್ವಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದರು. ಈಗ ಬೆಳಗಾವಿ ಭಾಗದಲ್ಲಿ ಅವರು ಇರುವುದು ಗೊತ್ತಾಗಿ ಅಲ್ಲಿ ಸಿಬಿಐ ದಾಳಿಯಾಗಿದೆ.

ಇನ್ನು, ಹೇಮಂತ್ ನಿಂಬಾಳ್ಕರ್ ಅವರ ಡಾಲರ್ಸ್ ಕಾಲೊನಿ ನಿವಾಸದ ಮೇಲೆ ದಾಳಿ ಮಾಡಿದ ಸಿಬಿಐ 2-3 ಗಂಟೆ ಕಾಲ ಪರಿಶೀಲನೆ ನಡೆಸಿ ಕೆಲ ಮಹತ್ವದ ದಾಖಲೆಗಳನ್ನು ಕೊಂಡೊಯ್ದಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:November 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ