HOME » NEWS » State » CAUVERY WATER PRICE WILL BE HIKE SOON BY BANGALORE WATER BOARD RMD

ಬೆಂಗಳೂರಿಗರಿಗೆ ಜಲಮಂಡಳಿಯಿಂದ ಶಾಕ್​; ಕಾವೇರಿ ನೀರಿನ ದರ ಎಷ್ಟು ದುಬಾರಿ ಆಗಲಿದೆ ಗೊತ್ತಾ?

ಬೆಂಗಳೂರಿಗರಿಗೆ ಕುಡಿಯುವ ನೀರನ್ನು ಪೂರೈಕೆ ಮಾಡುವ ಪ್ರಮುಖ ಮೂಲ ಕಾವೇರಿ ನದಿ. 2014ರಲ್ಲಿ ಬೆಂಗಳೂರು ಜಲಮಂಡಳಿ ನೀರಿನ ದರವನ್ನು ಪರಿಷ್ಕರಣೆ ಮಾಡಿತ್ತು. ಈಗ ನೀರಿನ ದರವನ್ನು ಹೆಚ್ಚಳ ಮಾಡುವ ಪ್ರಸ್ತಾವನೆ ಇಡಲಾಗಿದೆ.

news18-kannada
Updated:February 7, 2020, 3:42 PM IST
ಬೆಂಗಳೂರಿಗರಿಗೆ ಜಲಮಂಡಳಿಯಿಂದ ಶಾಕ್​; ಕಾವೇರಿ ನೀರಿನ ದರ ಎಷ್ಟು ದುಬಾರಿ ಆಗಲಿದೆ ಗೊತ್ತಾ?
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಫೆ.7): ರಾಜ್ಯ ರಾಜಧಾನಿ ಬೆಂಗಳೂರಿನ ಬಹುತೇಕ ಜನರು ಕಾವೇರಿ ನೀರಿನ ಮೇಲೆ ಅವಲಂಬಿಸಿದ್ದಾರೆ. ಕಳೆದ ಆರು ವರ್ಷಗಳಿಂದ ಒಂದೇ ರೀತಿ ಇದ್ದ ನೀರಿನ ದರವನ್ನು ಪರಿಷ್ಕರಿಸಲು ಬೆಂಗಳೂರು ಜಲಮಂಡಳಿ ಮುಂದಾಗಿದೆ. ಹೀಗಾಗಿ ಕಾವೇರಿ ನೀರು ಮತ್ತಷ್ಟು ದುಬಾರಿ ಆಗಲಿದೆ.

ಬೆಂಗಳೂರಿಗರಿಗೆ ಕುಡಿಯುವ ನೀರನ್ನು ಪೂರೈಕೆ ಮಾಡುವ ಪ್ರಮುಖ ಮೂಲ ಕಾವೇರಿ ನದಿ. 2014ರಲ್ಲಿ ಬೆಂಗಳೂರು ಜಲಮಂಡಳಿ ನೀರಿನ ದರವನ್ನು ಪರಿಷ್ಕರಣೆ ಮಾಡಿತ್ತು. ಈಗ ನೀರಿನ ದರವನ್ನು ಶೇ.30ರಷ್ಟು  ಹೆಚ್ಚಳ ಮಾಡುವ ಪ್ರಸ್ತಾವನೆ ಇಡಲಾಗಿದೆ.

ಕಳೆದ ಆರು ವರ್ಷಗಳಲ್ಲಿ ಅನೇಕ ಬಾರಿ ವಿದ್ಯುತ್​ ದರವನ್ನು ಸರ್ಕಾರ ಏರಿಕೆ ಮಾಡಿದೆ. ಹೀಗಾಗಿ ಬೆಂಗಳೂರಿಗೆ ನೀರಿನ ಪೂರೈಕೆ ದುಬಾರಿ ಆಗುತ್ತಲೇ ಇದೆ. ಹೀಗಾಗಿ 6 ವರ್ಷಗಳ ಬಳಿಕ ಮತ್ತೆ ದರ ಪರಿಷ್ಕರಣೆ ಸರ್ಕಾರ ಮುಂದಾಗಿದೆ. ಸರ್ಕಾರ ಒಪ್ಪಿದ ಕೂಡಲೇ ನೀರಿನ ದರ ಏರಿಕೆ ಆಗಲಿದೆ.

ಇದನ್ನೂ ಓದಿ: ಬೆಂಗಳೂರಿಗರಿಗೆ ಶಾಕ್; ಇನ್ಮುಂದೆ ಹೋಟೆಲ್ ಹೊಕ್ಕರೆ ಜೇಬಿಗೆ ಬೀಳುತ್ತೆ ಕತ್ತರಿ

ಹೋಟೆಲ್​ ದರದಲ್ಲೂ ಹೆಚ್ಚಳ:

ಇನ್ನು, ಹೋಟೆಲ್​ ದರದಲ್ಲೂ ಏರಿಕೆ ಆಗುತ್ತಿದೆ. ಕಳೆದ 2 ತಿಂಗಳಿನಿಂದ ತರಕಾರಿ ಬೆಲೆಯಲ್ಲಿ ಏರಿಕೆಯಾಗುತ್ತಲೇ ಇದೆ. ಈರುಳ್ಳಿ ಬೆಲೆಯಂತೂ ಕೈಗೆಟುಕದಂತಾಗಿತ್ತು. ಇದರ ಜೊತೆಗೆ ದವಸ-ಧಾನ್ಯಗಳು, ಗ್ಯಾಸ್ ಬೆಲೆ ಕೂಡ ಏರಿಕೆಯಾಗುತ್ತಿದೆ. ಹಾಲು, ಮೊಸರು, ತರಕಾರಿ, ಎಣ್ಣೆ, ಬೇಳೆಕಾಳು, ಗ್ಯಾಸ್ ಇತ್ಯಾದಿಗಳ ಬೆಲೆ ಹೆಚ್ಚಳವಾಗುತ್ತಿರುವುದರಿಂದ ಹೋಟೆಲ್ ಊಟ-ಉಪಹಾರಗಳ ಬೆಲೆ ಹೆಚ್ಚಳವಾಗಿದೆ. ಕಟ್ಟಡ ಬಾಡಿಗೆ, ವಿದ್ಯುತ್ ನೀರಿನ ದರಗಳು ಹೆಚ್ಚಳವಾಗುತ್ತಿರುವುದರಿಂದ ತಿಂಡಿತಿನಿಸುಗಳ ದರವನ್ನು ಹೆಚ್ಚಿಸಲು ಬೃಹತ್ ಬೆಂಗಳೂರು ಹೋಟೆಲ್ ಸಂಘ ನಿರ್ಧರಿಸಿದೆ. ಈ ಮೂಲಕ ಹೋಟೆಲ್ ಗ್ರಾಹರಿಗೆ ಬೆಲೆ ಏರಿಕೆಯ ಶಾಕ್ ನೀಡಿದೆ.
Youtube Video

 
First published: February 7, 2020, 3:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories