Cauvery Theerthodbhava: ಅಕ್ಟೋಬರ್ 17 ರಂದು ಸಂಜೆ 7 ಗಂಟೆ 21 ನಿಮಿಷಕ್ಕೆ ಕಾವೇರಿ ತೀರ್ಥೋದ್ಭವ

ಅಕ್ಟೋಬರ್ 17 ರ ಸೋಮವಾರ ರಾತ್ರಿ 07.21 ಗಂಟೆಗೆ ಸಲ್ಲುವ ಮೇಷ ಲಗ್ನದಲ್ಲಿ “ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ" ಜರುಗಲಿದೆ

ತೀರ್ಥೋದ್ಭವ

ತೀರ್ಥೋದ್ಭವ

  • Share this:
ಕೊಡಗು: ನಾಡಿನ ಜೀವನದಿ, ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ (Tala Cauvery) ಅಕ್ಟೋಬರ್ 17 ರಂದು ರಾತ್ರಿ 7.21 ಗಂಟೆಗೆ ಸಲ್ಲುವ ಮೇಷ ಲಗ್ನದಲ್ಲಿ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋಧ್ಬವ (Cauvery Teerthodbhava) ಸಂಭವಿಸಲಿದೆ.  ಸೆಪ್ಟೆಂಬರ್ 27 ರಂದು ಬೆಳಗ್ಗೆ 11.05 ನಿಮಿಷಕ್ಕೆ ಸಲ್ಲುವ ವೃಚ್ಛಿಕ ಲಗ್ನದಲ್ಲಿ "ಪತ್ತಾಯಕ್ಕೆ ಅಕ್ಕಿ ಹಾಕುವುದು", ಅಕ್ಟೋಬರ್ 05 ರಂದು ಬೆಳಗ್ಗೆ 09.35 ನಿಮಿಷಕ್ಕೆ ಸಲ್ಲುವ ವೃಚ್ಛಿಕ ಲಗ್ನದಲ್ಲಿ “ಆಜ್ಞಾ ಮುಹೂರ್ತ". ಅಕ್ಟೋಬರ್ 15 ರಂದು ಬೆಳಿಗ್ಗೆ 11.45 ನಿಮಿಷಕ್ಕೆ ಸಲ್ಲುವ ಧನುರ್ ಲಗ್ನದಲ್ಲಿ “ಅಕ್ಷಯ ಪಾತ್ರೆ ಇರಿಸುವುದು" ಮತ್ತು 04.15 ನಿಮಿಷಕ್ಕೆ ಸಲ್ಲುವ ಕುಂಭ ಲಗ್ನದಲ್ಲಿ “ಕಾಣಿಕೆ ಡಬ್ಬಿಗಳನ್ನು ಇಡುವುದು”. ಅಕ್ಟೋಬರ್ 17 ರ ಸೋಮವಾರ ರಾತ್ರಿ 07.21 ಗಂಟೆಗೆ ಸಲ್ಲುವ ಮೇಷ ಲಗ್ನದಲ್ಲಿ “ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ" ಜರುಗಲಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಭಾಗಮಂಡಲ ಭಗಂಡೇಶ್ವರ ಮತ್ತು ತಲಕಾವೇರಿ ದೇವಾಲಯಗಳ ಆಡಳಿತಾಧಿಕಾರಿ ಡಾ.ನಂಜುಂಡೇಗೌಡ ಅವರು ತಿಳಿಸಿದ್ದಾರೆ. 

ಇನ್ನು ಕೊಡಗು ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ (Minister BC Nagesh) ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಚಿವ ನಾಗೇಶ್ ಮೈಸೂರು ದಸರಾದಷ್ಟೇ ವಿಖ್ಯಾತಿ, ಅದ್ಧೂರಿಯಿಂದ ನಡೆಯುವ ಮಡಿಕೇರಿ ದಸರಾ  ಜನೋತ್ಸವದಲ್ಲಿ (Madikeri Dasara Janotsava) ಡಿಜೆಯನ್ನು ಬಳಸಲು ಸುಪ್ರಿಂ Supreme Court) ಮೊರೆಹೋಗಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

Cauvery theerthodbhava at Talacauvery on October 17 2022 rsk mrq
ತಲಕಾವೇರಿ


ಡಿಜೆ ಬಳಕೆ ಸುಪ್ರೀಂ ಮೊರೆ ಹೋಗಲು ಚಿಂತನೆ

ರಾತ್ರಿ 10 ರ ಬಳಿಕ ಧ್ವನಿವರ್ದಕವನ್ನು ಬಳಸುವಂತಿಲ್ಲ ಎಂದು ಈಗಾಗಲೇ ಸುಪ್ರೀಂಕೋಟ್ ನೀಡಿರುವ ಆದೇಶವನ್ನು ಪಾಲನೆ ಮಾಡಬೇಕಾಗಿರುವ ಹಿನ್ನೆಲೆಯಲ್ಲಿ ಇದು ಮಡಿಕೇರಿ ದಸರಾ ಜನೋತ್ಸವಕ್ಕೆ ಸಮಸ್ಯೆಯಾಗುವ ಸಾಧ್ಯತೆ ಇತ್ತು. ಈ ಕುರಿತು ಸಭೆಯಲ್ಲೂ ಗಂಭೀರ ಚರ್ಚೆ ಮಾಡಿದ ಸಚಿವರು ಮತ್ತು ಶಾಸಕರು ಕೋರ್ಟ್ ಮೊರೆ ಹೋಗುವುದು ಅನಿವಾರ್ಯ ಎಂಬ ನಿರ್ಧಾರಕ್ಕೆ ಬಂದರು.

ಈ ವಿಷಯವನ್ನು ಈಗಾಗಲೇ ಕಾನೂನು ಸಚಿವ ಮಾಧುಸ್ವಾಮಿ (Minister Madhuswamy) ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ  (CM Basavaraj Bommai) ಅವರೊಂದಿಗೆ ಮಾತನಾಡಲಾಗಿದೆ. ವಿಶೇಷ ಪ್ರಕರಣವೆಂದು ರಾತ್ರಿ ಹನ್ನೆರಡು ಗಂಟೆಯವರೆಗೆ ಧ್ವನಿವರ್ಧಕವನ್ನು ಬಳಸಲು ಅವಕಾಶ ಇರುವುದ ಆಧಾರದಲ್ಲಿ ಅದನ್ನು ರಾತ್ರಿ ಪೂರ್ತಿ ಬಳಕೆ ಅವಕಾಶ ಕೇಳಲು ನಿರ್ಧರಿಸಲಾಗಿದೆ ಎಂದು ಸಚಿವ ನಾಗೇಶ್ ಹೇಳಿದರು.

ಇದನ್ನೂ ಓದಿ:  Kodagu Success Story: ಕೊಡಗಿನ ಮಹಿಳೆಯರಿಗೆ ಭೇಷ್ ಎನ್ನಿ! ಇದು ಸ್ತ್ರೀಯರೇ ರೂಪಿಸಿದ ನರ್ಸರಿ!

ಮಡಿಕೇರಿ ದಸರಾಗೆ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ

ಮಡಿಕೇರಿ ಮತ್ತು ಗೋಣಿಕೊಪ್ಪ ಎರಡು ದಸರಾ ಸಮಿತಿಗಳು ದಸರಾ ಸಿದ್ಧತಾ ಸಭೆಯಲ್ಲಿ ಹೆಚ್ಚುವರಿ ಅನುದಾನಕ್ಕೆ ಮನವಿ ಮಾಡಿದವು. ಮಡಿಕೇರಿ ದಸರಾ ಸಮಿತಿ ಹೆಚ್ಚುವರಿಯಾಗಿ 36 ಲಕ್ಷಕ್ಕೆ ಮನವಿ ಮಾಡಿದರೆ, ಗೋಣಿಕೊಪ್ಪ ಸಮಿತಿ ಹೆಚ್ಚುವರಿಯಾಗಿ 10 ಲಕ್ಷ ಅನುದಾನಕ್ಕೆ ಮನವಿ ಸಲ್ಲಿಸಿತು. ಮಡಿಕೇರಿ ದಸರಾಕ್ಕೆ ಒಂದು ಕೋಟಿ ಅನುದಾನ ಬಿಡುಗಡೆಯಾಗಿದ್ದು, ಗೋಣಿಕೊಪ್ಪ ದಸರಾಕ್ಕೆ 50 ಲಕ್ಷ ಅನುದಾನ ನೀಡಲಾಗಿತ್ತು. ಹೆಚ್ಚುವರಿಯಾಗಿ 46 ಲಕ್ಷ ಕೇಳಿದ್ದಾರೆ.

ಸೋಮವಾರ ಅಧಿವೇಶನದ ಸಂದರ್ಭ ಜಿಲ್ಲೆಯ ಶಾಸಕರೊಂದಿಗೆ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಹೆಚ್ಚುವರಿ ಅನುದಾನ ಕೇಳಲಾಗುವುದು. ಸಮಿತಿಗಳು ಕೇಳಿರುವ ಅನುದಾನವನ್ನು ಒದಗಿಸಲಾಗುವುದು ಎಂದು ಹೇಳಿದರು. ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಅತ್ಯಂತ ಸರಳ ದಸರಾ ನಡೆದಿದೆ. ಆದರೆ ಈ ಬಾರಿ ಅದ್ಧೂರಿ ದಸರಾ ಆಚರಣೆ ಮಾಡುತ್ತಿರುವುದು ಎಂದರು.

Cauvery theerthodbhava at Talacauvery on October 17 2022 rsk mrq
ತಲಕಾವೇರಿ


ಸುರಾಸುರರ ಭೀಕರ ಕಾಳಗ

ನಾಡ ಹಬ್ಬ ಮೈಸೂರು ದಸರಾವನ್ನು ಕಣ್ತುಂಬಿಕೊಂಡ ಅರ್ಧದಷ್ಟು ಜನರು ಅದು ಮುಗಿಯುತ್ತಿದ್ದಂತೆ ಮಡಿಕೇರಿಯಲ್ಲಿ ಬೆಳಕಿನ ಚಿತ್ತಾರದಲ್ಲಿ ಧರೆಗಿಳಿಯುವ ಸುರಾಸುರ ಭೀಕರ ಕಾಳಗವನ್ನು ನೋಡಿ ಪುಳಕಿತರಾಗಲು ಬರುತ್ತಾರೆ.

ಇದನ್ನೂ ಓದಿ:  Kodagu: ಮಳೆಗಾಲದಲ್ಲೂ ಬೇಗ ಬಟ್ಟೆ ಒಣಗಿಸಿ! ಇದು ಕೊಡವರ ಐಡಿಯಾ!

ಮಡಿಕೇರಿಯಲ್ಲಿರುವ ಗಾಂಧಿ ಮೈದಾನದಲ್ಲಿ ಕೂಡ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳೂ ರಾತ್ರಿ ಇಡೀ ಮೇಳೈಸುತ್ತವೆ. ಇದೆಲ್ಲವನ್ನು ನೋಡಿ ಸಂಭ್ರಮಿಸಲು ಲಕ್ಷಾಂತರ ಜನರು ಕೊಡಗಿನತ್ತ ಧಾವಿಸುತ್ತಾರೆ.
Published by:Mahmadrafik K
First published: