• Home
  • »
  • News
  • »
  • state
  • »
  • Cauvery: ಜೀವನದಿಯ ಉಳಿವಿಗಾಗಿ ಕಾವೇರಿ ಆರತಿ

Cauvery: ಜೀವನದಿಯ ಉಳಿವಿಗಾಗಿ ಕಾವೇರಿ ಆರತಿ

ಕಾವೇರಿ ಆರತಿ

ಕಾವೇರಿ ಆರತಿ

ಯಾವುದೇ ಕಷ್ಮಲ ನದಿಗೆ ಹೋಗಬಾರದು ಎಂಬ ಹಿನ್ನೆಲೆಯಲ್ಲಿ ಕಾವೇರಿ ನದಿ ಉತ್ಸವವನ್ನು ಮಾಡಲಾಗುತ್ತಿದೆ. ಇಂದು ಭಾಗಮಂಡಲದಿಂದ ಆರಂಭವಾಗಿ ಕುಶಾಲನಗರ ಗಡಿಭಾಗದವರೆಗೆ ನದಿ ದಂಡೆಯಲ್ಲಿರುವವರಿಂದ ಕಾವೇರಿ ನದಿ ಕಲುಷಿತವಾಗುತ್ತಿದೆ

  • Share this:

ಕೊಡಗು: ತವರು ಜಿಲ್ಲೆಯಲ್ಲೇ ಕಾವೇರಿ ನದಿ (Cauvery River) ಮಲೀನಗೊಳ್ಳುತ್ತಿದ್ದು ಜೀವನಾಡಿಯ ಉಳಿವಿಗಾಗಿ ಇದೀಗ ಅಭಿಯಾನ ಶುರುವಾಗಿದೆ. ಸಾಕಷ್ಟು ವರ್ಷದಿಂದ ವಿವಿಧ ಸಂಘ ಸಂಸ್ಥೆಗಳಿಂದ ಕೇಳಿ ಬರುತ್ತಿದ್ದ ಕಾವೇರಿ ಆರತಿಯ (Cauvery Arati) ಕೂಗಿಗೆ ಕೊನೆಗೂ ಸರ್ಕಾರವೂ (Karnataka Government) ಧ್ವನಿಗೂಡಿಸಿದೆ. ಜಲಸಂಪನ್ಮೂಲ ಇಲಾಖೆ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಹಾಗೂ ಅಖಿಲ ಭಾರತ ಸನ್ಯಾಸಿಗಳ ಸಂಘದಿಂದ ಶುಕ್ರವಾರ ತಲಕಾವೇರಿ (Talakaveri) ಹಾಗೂ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದ ಮಹಾ ಆರತಿ (Maha Arati) ಮಾಡಲಾಯಿತು. ತಲಕಾವೇರಿಯಲ್ಲಿ ಬ್ರಹ್ಮ ಕುಂಡಿಕೆಯಲ್ಲಿ ಕೊಡಗಿನ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಮತ್ತು ಅರಮೇರಿ ಕಳಂಚೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಆರತಿ ಬೆಳಗುವ ಮೂಲಕ ಸ್ವಚ್ಛ ಕಾವೇರಿಗಾಗಿ ನಡೆಯುತ್ತಿರುವ ಅಭಿಯಾನಕ್ಕೆ ಚಾಲನೆ ನೀಡಿದರು.


ಭಾಗಮಂಡಲಕ್ಕೆ ಆಗಮಿಸಿದ ಸಾಧು ಸಂತರು, ಜನಪ್ರತಿನಿಧಿಗಳು ಮತ್ತು ಕಾವೇರಿ ಹೋರಾಟ ಸಮಿತಿ ಸದಸ್ಯರು ತ್ರಿವೇಣಿ ಸಂಗಮದಲ್ಲಿ ಕಾವೇರಿ ಮಾತೆಗೆ  ಭಕ್ತಿ ಭಾವದಿಂದ ಆರತಿ ಬೆಳಗಿದರು.


ಕಾವೇರಿಯ ಸ್ವಚ್ಛತೆ ನಮ್ಮೆಲ್ಲರ ಕರ್ತವ್ಯ


ಈ ವೇಳೆ ಮಾತನಾಡಿದ ಅಖಿಲ ಭಾರತ ಸನ್ಯಾಸಿಗಳ ಸಂಘದ ಅಧ್ಯಕ್ಷ ಭಾನು ಪ್ರಕಾಶ್ ಶರ್ಮಾಸ್ವಾಮೀಜಿ ಜೀವ ಕೋಟಿಗೆ ಜಲವಾಗಿರುವ ಕಾವೇರಿ ಕೋಟ್ಯಂತರ ರೈತರ ಬದುಕನ್ನು ಹಸನಾಗಿಸಿದೆ. ಕೋಟಿ ಕೋಟಿ ಜೀವಿಗಳಿಗೆ ಆಶ್ರಯವಾಗಿರುವ ಕಾವೇರಿಯ ಸ್ವಚ್ಛತೆ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದರು.


ಕೊಡಗಿನ ಶಾಸಕದ್ವಯರು ಮಾತನಾಡಿ, ನದಿ ತಟದಲ್ಲಿರುವವರಿಂದಲೇ ಕಾವೇರಿ ಕಲುಷಿತಗೊಳ್ಳುತ್ತಿದೆ. ಹೀಗಾಗಿ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕಾವೇರಿ ನದಿ ಸ್ವಚ್ಛತೆ ಕಾಪಾಡಬೇಕಾಗಿದೆ ಎಂದರು.


cauvery aarati held in madikeri mrq
ಕಾವೇರಿ ಆರತಿ


ಕಾವೇರಿ ನದಿ ಉತ್ಸವದ ಉದ್ದೇಶ ಏನು?


ಶಾಸಕ ಕೆ. ಜಿ ಬೋಪಯ್ಯ ಅವರು ಮಾತನಾಡಿ ಕಾವೇರಿ ಸ್ವಚ್ಛವಾಗಿರಬೇಕು. ಯಾವುದೇ ಕಷ್ಮಲ ನದಿಗೆ ಹೋಗಬಾರದು ಎಂಬ ಹಿನ್ನೆಲೆಯಲ್ಲಿ ಕಾವೇರಿ ನದಿ ಉತ್ಸವವನ್ನು ಮಾಡಲಾಗುತ್ತಿದೆ. ಇಂದು ಭಾಗಮಂಡಲದಿಂದ ಆರಂಭವಾಗಿ ಕುಶಾಲನಗರ ಗಡಿಭಾಗದವರೆಗೆ ನದಿ ದಂಡೆಯಲ್ಲಿರುವವರಿಂದ ಕಾವೇರಿ ನದಿ ಕಲುಷಿತವಾಗುತ್ತಿದೆ ಎಂದರು.


ಪರಿಸರ ಸಂರಕ್ಷಣೆ ಪ್ರತಿಜ್ಞಾ ವಿಧಿ ಬೋಧನೆ


ಭಾನು ಪ್ರಕಾಶ್ ಸ್ವಾಮೀಜಿ ಅವರು ಪರಿಸರವನ್ನು ಸಂರಕ್ಷಣೆ ಮಾಡುವುದಾಗಿ ಜನರಿಗೆ ಪ್ರತಿಜ್ಞಾ ವಿಧಿಸಿ ಬೋಧಿಸಿದರು. ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿಜಿ ಮಾತನಾಡಿ ಪ್ರಕೃತಿಯೇ ಗುರು ಎಂದು ಶರಣರು ಹೇಳುತ್ತಾರೆ. ಆದ್ದರಿಂದ ಯಾರು ಪೃಕೃತಿಯನ್ನು ಗೌರವಿಸುತ್ತಾರೋ ಅವರು ಎಲ್ಲರನ್ನು ಗೌರವಿಸುತ್ತಾರೆ.


cauvery aarati held in madikeri mrq


ಆದರೆ ಇಂದು ಪ್ರಕೃತಿಯನ್ನು ಸಾಕಷ್ಟು ಹಾಳು ಮಾಡಲಾಗುತ್ತಿದ್ದು ನಾವು ಅದನ್ನು ನಿಯಂತ್ರಿಸದಿದ್ದರೆ ಮುಂದೆ ಅದರಿಂದ ಬಹಳಷ್ಟು ನಷ್ಟ ಅನುಭವಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.


ಇದನ್ನೂ ಓದಿ: Bengaluru Crime News: ತಲೆಗೆ ಹೊಡೆದು ಮರ್ಮಾಂಗ ಕತ್ತರಿಸಿ ವ್ಯಕ್ತಿಯ ಬರ್ಬರ ಹತ್ಯೆ; ಪತ್ನಿ ಪೊಲೀಸರ ವಶಕ್ಕೆ

 ಅವೈಜ್ಞಾನಿಕ ಅಭಿವೃದ್ಧಿ ಕೆಲಸಗಳು


ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿ ರಾಷ್ಟ್ರೀಯ ಹಬ್ಬಗಳು ಆಗುವಂತಹ ರೀತಿಯಲ್ಲಿ ನದಿಯ ಉತ್ಸವಗಳು ಆಗುವ ಮೂಲಕ ಸ್ವಚ್ಛತೆಯನ್ನು ಕಾಪಾಡಬೇಕಾಗಿದೆ. ಕೋಟ್ಯಂತರ ಜನರಿಗೆ ಜೀವಜಲ ನೀಡುತ್ತಿರುವ ಕಾವೇರಿ ನದಿಯನ್ನು ಜನರು ಪೂಜ್ಯನೀಯ ಭಾವನೆಯಿಂದ ಸ್ವಚ್ಛತೆ ಕಾಪಾಡಿಕೊಳ್ಳಬೇಕಾಗಿದೆ. ಎಲ್ಲೆಡೆ ಅವೈಜ್ಞಾನಿಕ ಅಭಿವೃದ್ಧಿ ಕೆಲಸಗಳೇ ಇಂದು ನದಿ ಮತ್ತು ಪರಿಸರ ಹಾಳಾಗಲು ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ:  Lumpy Skin Disease: ದನಕರು ರಕ್ಷಣೆಗೆ ವಿಜಯನಗರದಲ್ಲಿ ಅಜ್ಜಿ ಆಚರಣೆ!
 ಒಟ್ಟಿನಲ್ಲಿ ತಲಕಾವೇರಿಯಿಂದ ಆರಂಭವಾಗಿರುವ ಕಾವೇರಿ ನದಿ ಸ್ವಚ್ಛತಾ ಆಂದೋಲನ ತಮಿಳುನಾಡಿನ ಪೂಂಪ್ ಹಾರ್ ಮೂಲಕ ಬಂಗಾಳಕೊಲ್ಲಿ ಸೇರುವವರೆಗೆ ಕಾವೇರಿಯನ್ನು ಶುದ್ಧವಾಗಿಯೇ ಉಳಿಸಬೇಕಾಗಿದ್ದು, ಆ ಆಂದೋಲನ ಯಶಸ್ವಿ ಆಗಲಿ ಎನ್ನುವುದು ನಮ್ಮ ಆಶಯ.

Published by:Mahmadrafik K
First published: