• Home
  • »
  • News
  • »
  • state
  • »
  • Hassan Accident: ಭೀಕರ ಅಪಘಾತಕ್ಕೆ ಕಾರಣ ಏನು? ಪೊಲೀಸರ ಮುಂದೆ ಶರಣಾದ ಲಾರಿ ಚಾಲಕ, ಒಂದೇ ಗ್ರಾಮದ 9 ಜನ ಸಾವು

Hassan Accident: ಭೀಕರ ಅಪಘಾತಕ್ಕೆ ಕಾರಣ ಏನು? ಪೊಲೀಸರ ಮುಂದೆ ಶರಣಾದ ಲಾರಿ ಚಾಲಕ, ಒಂದೇ ಗ್ರಾಮದ 9 ಜನ ಸಾವು

ಹಾಸನ ಅಪಘಾತ

ಹಾಸನ ಅಪಘಾತ

ಚೈತ್ರ ತನ್ನ ಗಂಡ, ಅಪ್ಪ ಅಜ್ಜ ಅಜ್ಜಿ ಎಲ್ಲರಿಗೂ ಪೂಜೆ ಮಾಡಿ ಹೋದಳು. ಬರುವಾಗ ಹೀಗೆ ಆಗುತ್ತೆ ಎಂದು ಯಾರಿಗೆ ತಾನೇ ಗೊತ್ತು. ಯಾವ ದೇವರಿಗೂ ಕಣ್ಣಿಲ್ಲ ಎಂದು ಸಂಬಂಧಿಕರು ಕಣ್ಣೀರು ಹಾಕುತ್ತಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಧರ್ಮಸ್ಥಳ ಮಂಜುನಾಥ (Dharmasathala) ಮತ್ತು ಹಾಸನಾಂಬೆಯ (Hassanambe) ದರ್ಶನ ಪಡೆದು ಹಿಂದಿರುಗುತ್ತಿದ್ದು 9 ಜನರು ಅಪಘಾತದಲ್ಲಿ (Accident) ಮೃತರಾಗಿದ್ದಾರೆ. ಮೃತರೆಲ್ಲರೂ ಒಂದೇ ಗ್ರಾಮದ ನಿವಾಸಿಗಳು ಮತ್ತು ಸಂಬಂಧಿಗಳಾಗಿದ್ದರು. ಹಳ್ಳಿಕೆರೆ (ಸಾಲಾಪುರ) ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತರ ಶವಗಳನ್ನು ಅರಸೀಕೆರೆ ಆಸ್ಪತ್ರೆಯಲ್ಲಿರಿಸಲಾಗಿದೆ. ಗಾಯಗೊಂಡಿರುವ 12 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಅಪಘಾತದ ಬಳಿಕ ಪರಾರಿಯಾಗಿದ್ದ ಹಾಲಿನ ಲಾರಿ ಚಾಲಕ (Lorry Driver) ನವೀನ್ ಬಾಣವಾರ ಪೊಲೀಸರ ಮುಂದೆ ಶರಣಾಗಿದ್ದಾನೆ. ಚಾಲಕ ನವೀನ್ ಒನ್​​ವೇಯಲ್ಲಿ ಬಂದಿದ್ದರಿಂದಲೇ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.


ಅಪಘಾತಕ್ಕೆ ಕಾರಣ ಏನು?


ಭೀಕರ ರಸ್ತೆ ಅಪಘಾತಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಎಡವಟ್ಟು ಕಾರಣವಾಯ್ತಾ ಅನ್ನೋ ಪ್ರಶ್ನೆ ಮೂಡಿದೆ. ಸರಿಯಾಗಿ ಮಾರ್ಗಸೂಚಿ ಬೋರ್ಡ್ ಹಾಕದಿರುವ ಕಾರಣ ಅಪಘಾತ ಸಂಭವಿಸಿರುವ ಸಾಧ್ಯತೆಗಳಿವೆ.


ಎಡಬದಿಯ ತಿರುವಿಗೆ ಹಾಕಿದ್ದ ಬೋರ್ಡ್ ಕಾಣಿಸದೇ ಹಾಲಿನ ಟ್ಯಾಂಕರ್ ಚಾಲಕ ಏಕಮುಖ ಬಂದಿದ್ದಾನೆ. Diversion ಬೋರ್ಡ್ ಸಹ ಚಿಕ್ಕದಾಗಿ ಹಾಕಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುತ್ತಿದ್ದು, ರಸ್ತೆ ಮಧ್ಯೆ ಭಾಗ ಚಿಕ್ಕದಾಗಿ ಡೈವರ್ಸನ್ ಬೋರ್ಡ್​ ಹಾಕಲಾಗಿದೆ.


ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ: ಸಿಎಂ


ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಿನ್ನೆ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂಬತ್ತು ಜನ ಮೃತರಾಗಿರುವುದು ತೀವ್ರ ದುಃಖದಾಯಕ. ಮೃತರ ಆತ್ಮಗಳಿಗೆ ಶಾಂತಿಯನ್ನು ಕೋರುತ್ತೇನೆ. ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲಾಗುವುದು ಮತ್ತು ಗಾಯಾಳುಗಳ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.


ಯಾವ ದೇವರಿಗೂ ಕಣ್ಣಿಲ್ಲ


ಶುಕ್ರವಾರ ಹಿರಿಯರ ಪೂಜೆ ಮುಗಿಸಿ ಧರ್ಮಸ್ಥಳಕ್ಕೆ ಹೋದರು. ಎಲ್ಲಾ ಕೆಲಸ ಮಾಡಿ ಎಲ್ಲರೂ ಖುಷಿ-ಖುಷಿಯಾಗಿ ಆಟವಾಡಿಕೊಂಡು ಹೋಗಿದ್ರು. ಚೈತ್ರ ತನ್ನ ಗಂಡ, ಅಪ್ಪ ಅಜ್ಜ ಅಜ್ಜಿ ಎಲ್ಲರಿಗೂ ಪೂಜೆ ಮಾಡಿ ಹೋದಳು. ಬರುವಾಗ ಹೀಗೆ ಆಗುತ್ತೆ ಎಂದು ಯಾರಿಗೆ ತಾನೇ ಗೊತ್ತು. ಯಾವ ದೇವರಿಗೂ ಕಣ್ಣಿಲ್ಲ ಎಂದು ಸಂಬಂಧಿಕರು ಕಣ್ಣೀರು ಹಾಕುತ್ತಿದ್ದಾರೆ.


ಧರ್ಮಸ್ಥಳಕ್ಕೆ ತೆರಳಿದ್ದ  14 ಮಂದಿ


ಹಳ್ಳಿಕೆರೆ ಗ್ರಾಮದ ಹದಿನಾಲ್ಕು ಮಂದಿ ಟಿಟಿ ವಾಹನದಲ್ಲಿ ಧರ್ಮಸ್ಥಳಕ್ಕೆ ತೆರಳಿ, ಅಲ್ಲಿಂದ ಹಾಸನಕ್ಕೆ ಆಗಮಿಸಿ ಹಾಸನಾಂಬೆ ದೇವಿ ದರ್ಶನ ಪಡೆದು ಗ್ರಾಮಕ್ಕೆ ತೆರಳುತ್ತಿದ್ದರು. ಊರಿಗೆ ತಲುಪಲು ಎರಡರಿಂದ ಮೂರು ನಿಮಿಷವಿರುವಾಗಲೇ ಅಪಘಾತ ಸಂಭವಿಸಿದೆ. ಹಾಸನ ಅರಸೀಕೆರೆ ತಾಲ್ಲೂಕಿನ, ಹಳ್ಳಿಕೆರೆ ಗ್ರಾಮದ ಹದಿನಾಲ್ಕು ಮಂದಿ ಟೆಂಪೋ ಟ್ರಾವೆಲ‌ರ್ ವಾಹನದಲ್ಲಿ ನಿನ್ನೆ ಧರ್ಮಸ್ಥಳಕ್ಕೆ ತೆರಳಿದ್ದರು.


ಇದನ್ನೂ ಓದಿ:  Audio Leak: ಕೊಡಗಿನ ಮೇಲೆ ಪೆಟ್ರೋಲ್ ಬಾಂಬ್​ಗೆ ನಡೆದಿತ್ತಾ ಸಂಚು? ಬೆಚ್ಚಿ ಬೀಳಿಸುವ ಸ್ಫೋಟಕ ಆಡಿಯೋ ಲೀಕ್


ಮಕ್ಕಳು ಸೇರಿದಂತೆ ಪುರುಷರು ಮುಡಿ ನೀಡಿ ಶ್ರೀ ಮಂಜುನಾಥನ ಸ್ವಾಮಿ ದರ್ಶನ ಪಡೆದು ಪೂಜೆ ಸಲ್ಲಿಸಿ, ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನದ ಅಧಿದೇವತೆ ಹಾಸನಾಂಬೆ ದೇವಾಲಯಕ್ಕೆ ಆಗಮಿಸಿ ದೇವಿ ದರ್ಶನ ಪಡೆದು ಎಲ್ಲರೂ ಹಳ್ಳಿಕೆರೆ ಗ್ರಾಮಕ್ಕೆ ತೆರಳುತ್ತಿದ್ದರು.


ಮೃತರ ವಿವರ


ಟಿಟಿ ವಾಹನದಲ್ಲಿದ್ದ ಲೀಲಾವತಿ (50), ಚೈತ್ರಾ (33), ಸಮರ್ಥ (10), ಡಿಂಪಿ (12), ತನ್ಮಯ್ (10), ದ್ರುವ (2), ವಂದನಾ (20), ದೊಡ್ಡಯ್ಯ (60), ಭಾರತಿ (50) ಸೇರಿ ಒಂಭತ್ತು ಮಂದಿ ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿದ್ದು, 12 ಮಂದಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.


ಇದನ್ನೂ ಓದಿ: Karnataka Assembly Elections: ಕಾಪುವಿನಲ್ಲಿ 'ಯುದ್ಧ' ಪಕ್ಕಾ: ಕೈ ನಾಯಕನ ಎದುರಿಸಲು ಮಾಜಿ ಸಚಿವರ ಕಣಕ್ಕಿಳಿಸುತ್ತಾ ಬಿಜೆಪಿ?


ವಾಹನಗಳ ತೆರವು


ಹತ್ತು ಮಂದಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇಬ್ಬರು ಅರಸೀಕೆರೆ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿಕ್ಕಿ ರಭಸಕ್ಕೆ ಟಿಟಿ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಕ್ರೇನ್ ಮೂಲಕ ಟಿಟಿ ವಾಹನವನ್ನು ತೆರುವುಗೊಳಿಸಲಾಗಿದೆ.‌ ಒಂದೇ ಗ್ರಾಮದ ನಾಲ್ವರು ಮಕ್ಕಳು, ಮೂವರು ಮಹಿಳೆಯರು, ಓರ್ವ ಪುರುಷ ಸಾವನ್ನಪ್ಪಿದ್ದು, ಮೃತದೇಹಗಳನ್ನು ಅರಸೀಕೆರೆ ತಾಲ್ಲೂಕು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.‌

Published by:Mahmadrafik K
First published: