ಗೋಮಾಂಸಕ್ಕಾಗಿ ಹಸು ಕಳವು; ಚರ್ಮ ಬಿಟ್ಟು ಮಾಂಸ ಕೊಂಡೊಯ್ದ ದುಷ್ಕರ್ಮಿಗಳು

ಎತ್ತುಗಳನ್ನು ಗ್ರಾಮದ ಹೊರಗೆ ಹತ್ಯೆ ಮಾಡಿ ಅವುಗಳ ಚರ್ಮವನ್ನು ಅಲ್ಲಿಯೇ ಬಿಟ್ಟು ಮಾಂಸವನ್ನು ತೆಗೆದುಕೊಂಡು ಹೋಗಿದ್ದಾರೆ.

Seema.R | news18
Updated:January 10, 2019, 1:44 PM IST
ಗೋಮಾಂಸಕ್ಕಾಗಿ ಹಸು ಕಳವು; ಚರ್ಮ ಬಿಟ್ಟು ಮಾಂಸ ಕೊಂಡೊಯ್ದ ದುಷ್ಕರ್ಮಿಗಳು
ಹಸು ಕಳುವು ಮಾಡಿ ಚರ್ಮ ಬಿಟ್ಟು ಹೋಗಿರುವ ದುಷ್ಕರ್ಮಿಗಳು
Seema.R | news18
Updated: January 10, 2019, 1:44 PM IST
ಪುಟ್ಟಪ್ಪ

ಮೈಸೂರು (ಜ.10): ಗೋಮಾಂಸಕ್ಕಾಗಿ ಗ್ರಾಮದಲ್ಲಿ ಕಟ್ಟಿದ ಐದು ಹಸುಗಳನ್ನು ಕದ್ದೊಯ್ದು,  ಊರ ಹೊರಗೆ ಚರ್ಮ ಸುಲಿದು ಮಾಂಸ ಎತ್ತುಕೊಂಡು ಹೋಗಿರುವ ಅಮಾನವೀಯ ಘಟನೆ ಜಿಲ್ಲೆಯ ದಡದಹಳ್ಳಿಯಲ್ಲಿ ನಡೆದಿದೆ.

ಗ್ರಾಮದ  ಚಿಕ್ಕಸಣ್ಣಮ್ಮರ ಎರಡು ಹಸು.   ಶಿವರಾಮು ಅವರ ಒಂದು ಹಸು. ನಾಗರಾಜು ಅವರ ಎರಡು ಹಸುಗಳನ್ನು ಎರಡು ದಿನಗಳ ಹಿಂದೆ ದುಷ್ಕರ್ಮಿಗಳು ಕಳವು ಮಾಡಿದ್ದರು. ಗ್ರಾಮದಲ್ಲಿ ಎಲ್ಲಿ ಹುಡುಕಿದರು ಈ ಹಸುಗಳು ಪತ್ತೆಯಾಗಿರಲಿಲ್ಲ.

ಬಳಿಕ ನಂಜಪ್ಪ ಅವರ ಜೋಡಿ ಎತ್ತುಗಳು ನಾಪತ್ತೆಯಾಗಿದ್ದವು. ಈ ಎತ್ತುಗಳನ್ನು ಗ್ರಾಮದ ಹೊರಗೆ ಹತ್ಯೆ ಮಾಡಿ ಅವುಗಳ ಚರ್ಮವನ್ನು ಅಲ್ಲಿಯೇ ಬಿಟ್ಟು ಮಾಂಸವನ್ನು ತೆಗೆದುಕೊಂಡು ಹೋಗಿದ್ದಾರೆ.

ಇದನ್ನು ಓದಿ: ಸಿದ್ದರಾಮಯ್ಯ ಕ್ಷೇತ್ರಕ್ಕೆ ಅನುದಾನ ಬಿಡುಗಡೆಗೆ ಸಿಎಂ ಮೀನಾಮೇಷ !

ಬೆಳಗ್ಗೆ ಗ್ರಾಮಸ್ಥರು ಈ ದಾರಿಯಲ್ಲಿ ಹೋಗುವಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಗ್ರಾಮದಲ್ಲಿ ನಡೆಯುತ್ತಿರುವ ಕೃತ್ಯದಿಂಗ ಗಾಬರಿಗೊಂಡ ಗ್ರಾಮಸ್ಥರು ಈ ಕುರಿತು ಮೈಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಈ ಕುರಿತು ತನಿಖೆಯನ್ನು ಆರಂಭಿಸಲಾಗಿದೆ.

First published:January 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ