Lovers Suicide: ಇನ್ಮುಂದೆ ಇಬ್ಬರು ಸೇರಲೇಬಾರದು ಅಂದ್ರು.. ಜೊತೆಯಾಗಿ ಸಾವಿನ ಮನೆ ಸೇರಿದ ಪ್ರೇಮಿಗಳು!

ಎರಡೂ ಕುಟುಂಬದ ನಡುವೆ ಮಾತುಕತೆಯೂ ನಡೆದಿದ್ದು, ಇಬ್ಬರನ್ನ ಬೇರೆ ಬೇರೆ ಮಾಡಲಾಗಿತ್ತು. ಇಬ್ಬರೂ ಇನ್ಮುಂದೆ ಸೇರದಂತೆ ಕೂಡಾ ಮನೆಯಲ್ಲಿ ತಾಕೀತು ಮಾಡಿದ್ದರು. ಕುಟುಂಬಸ್ಥರ ಕಟ್ಟಪ್ಪಣೆಗೆ ಈ ಜೋಡಿ ಹೆದರಿಕೊಂಡು ನೇಣಿಗೆ ಶರಣಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೀದರ್  : ಪ್ರೀತಿ (Love) ಮಾಡಬಾರದು, ಮಾಡಿದರೆ ಜಗಕೆ ಹೆದರ ಬಾರದು ಅಂತ ಹೇಳ್ತಾರೆ. ಆದರೆ ಇಲ್ಲಿಬ್ಬರು ಪ್ರೇಮಿಗಳು ಕುಟುಂಬದ ( Lovers Family) ವಿರೋಧಕ್ಕೆ ಹೆದರಿ ಬದುಕನ್ನೇ ಕೊನೆ ಮಾಡಿಕೊಂಡಿದ್ದಾರೆ. ಅವರಿಬ್ಬರದ್ದು ಜಾತಿ (Caste) ಬೇರೆ ಬೇರೆ ಆಗಿದ್ದರಿಂದ ಸಹಜವಾಗಿಯೇ ಕುಟುಂಬಸ್ಥರು ಮದುವೆಗೆ ವಿರೋಧ ವ್ಯಕ್ತ ಪಡಿಸಿದ್ದರು, ಅವರು ವಿರೋಧ ವ್ಯಕ್ತ ಪಡಿಸಿದ್ದಕ್ಕೆ ಮನನೊಂದ ಈ ಪ್ರೇಮಿಗಳು ಬದುಕಿಗೆ ಅಂತ್ಯ ಹಾಡಿದ್ದಾರೆ. ನೇಣಿಗೆ ಕೊರಳೊಡ್ಡಿ ಬದುಕಿಗೆ ಫುಲ್ ಸ್ಟಾಪ್ ಇಟ್ಟಿರುವ   ಮನಕಲಕುಲ ಘಟನೆ ಬಸವಕಲ್ಯಾಣ ತಾಲೂಕಿನ ಕಲಖೊರಾ ತಾಂಡದ ಬಳಿ ಇರುವ ಗ್ರಾಮದಲ್ಲಿ. 

  ಪ್ರೇಮ ವಿವಾಹಕ್ಕೆ ಜಾತಿ ಭೂತ

  ಕಮಲಾಪೂರ ತಾಲೂಕಿನ ಓಕಳಿ ಗ್ರಾಮದ ನಿವಾಸಿ ರಮೇಶ್ ಭೀಮಶಾ ಬೇಡರ್ (28)  ಮತ್ತು ಅದೇ ಗ್ರಾಮದ  ಭಿಮಾಬಾಯಿ ಅಶೋಕ್ ರಾಠೋಡ್ (19) ಯುವತಿ ಹಲವಾರು ವರ್ಷಗಳಿಂದಲೂ ಪರಸ್ಪರ ಪ್ರೀತಿಸುತ್ತಿದ್ದರು. ಅಲ್ಲದೇ ಸುಂದರ ಬದುಕಿನ ಕನಸು ಕಂಡಿದ್ದ ಇವರು ವಿವಾಹವಾಗಲು ಕೂಡ ಇಚ್ಚಿಸಿದ್ದರು, ಆದರೆ ಇವರಿಬ್ಬರ ಜಾತಿ ಬೇರೆ ಬೇರೆಯಾದ್ದರಿಂದ ಕುಟುಂಬದ ಕಡೆಯಿಂದ ವಿರೋಧ ವ್ಯಕ್ತವಾಗಿತ್ತು. ಜತೆಗೆ ಎರಡೂ ಕುಟುಂಬದ ನಡುವೆ ಮಾತುಕತೆಯೂ ನಡೆದಿದ್ದು, ಇಬ್ಬರನ್ನ ಬೇರೆ ಬೇರೆ ಮಾಡಲಾಗಿತ್ತು. ಇಬ್ಬರೂ ಇನ್ಮುಂದೆ ಸೇರದಂತೆ ಕೂಡಾ ಮನೆಯಲ್ಲಿ ತಾಕೀತು ಮಾಡಿದ್ದರು. ಕುಟುಂಬಸ್ಥರ ಕಟ್ಟಪ್ಪಣೆಗೆ ಈ ಜೋಡಿ ಹೆದರಿಕೊಂಡು ನೇಣಿಗೆ ಶರಣಾಗಿದೆ.

  ಇದನ್ನೂ ಓದಿ: Shivamogga: ಕಲ್ಯಾಣ ಮಂಟಪಕ್ಕೆ ಹೊರಡುವಾಗಲೇ ವರನ ತಂದೆಯ ಸಾವು; ಮದುವೆ ಮನೆಯಲ್ಲಿ ಸೂತಕದ ಛಾಯೆ

  ಮನವೊಲಿಕೆ ಪ್ರಯತ್ನಗಳು ವಿಫಲವಾಗಿದ್ದವು 

  ಒಬ್ಬರಿಗೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿಸುತ್ತಿದ್ದ ಪ್ರೇಮಿಗಳು ಈ ಎಲ್ಲ ಬೆಳವಣಿಗೆಗಳಿಂದ ತೀವ್ರವಾಗಿ ಮನನೊಂದಿದ್ದರು. ಹೇಗಾದರೂ ಸರಿ ಕುಟುಂಬಸ್ಥರ ಮನವೊಲಿಸಿ ಮದುವರೆಯಾಗುವ ಪ್ರಯತ್ನ ಮಾಡಿದ್ದರು. ಆದ್ರೆ ಆ ಜೋಡಿ  ಅದೇನೇ ಮಾಡಿದರು ಸಹ ಇಬ್ಬರ ಕುಟುಂಬಸ್ಥರು ಈ ಅಂತರ್ಜಾತಿ ವಿವಾಹಕ್ಕೆ ಸುತಾರಾಂ ಒಪ್ಪಿಗೆ ಕೊಡಲಿಲ್ಲ. ಇದರಿಂದಾಗಿ ಹತಾಷೆಗೆ ಜಾರಿದ ಜೋಡಿ ಇಬ್ಬರೂ ಹಲವು ದಿನಗಳ ವರೆಗೂ ಮಾನಸಿಕವಾಗಿ ಕುಗ್ಗಿ ಹೋಗಿದ್ದರು.

  ಒಟ್ಟಿಗೆ ನೇಣಿಗೆ ಕೊರಳೊಡ್ಡಿದರು 

  ಹೀಗಾಗಿ ಇನ್ನು ಎರಡೂ ಕುಟುಂಬಗಳನ್ನ ಎದುರು ಹಾಕಿಕೊಂಡು ಮದುವರೆಯಾಗೋದು ಸಾದ್ಯವೇ ಇಲ್ಲ ಅನ್ನೋದು ಇವರ ಅರಿವಿಗೆ ಬರುತ್ತಿದ್ದಂತೆ ಅವರಿಬ್ಬರೂ ಅದೊಂದು ಆ ಗಟ್ಟಿ ನಿರ್ಧಾರಕ್ಕೆ ಇವರಿಬ್ಬರು ಬಂದಿದ್ದರು.ಬದುಕಿದ್ದಾಗ ನಾವು  ಒಂದಾಗೋದಕ್ಕೆ ಆಗದೇ ಹೋದರೂ ಪರವಾಗಿಲ್ಲ, ಕೊನೆ ಪಕ್ಷ ಸಾವಿನಲ್ಲಾದರೂ ನಾವೂ ಒಂದಾಗೋಣವೆಂದು ಗಟ್ಟಿ ನಿರ್ಧಾರ ಮಾಡಿಕೊಂಡ ಪ್ರೇಮಿಗಳು
  ಅದರಂತೆ ಇಬ್ಬರು ನಿಶ್ಚಯಿಸಿಕೊಂಡು ರಮೇಶ್ ಹಾಗೂ ಭೀಮಾಬಾಯಿ  ಈ ಜೋಡಿಯು  ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕಲಖೋರಾ ತಾಂಡದ ಬಳಿ ಭೇಟಿಯಾಗಿದ್ದಾರೆ. ಅಲ್ಲಿ ಒಂದಿಷ್ಟು ಹೊತ್ತು ಮನಸೋ ಇಚ್ಚೇ ರೋಧಿಸಿದ ಪ್ರೇಮಿಗಳು ಕೊನೆಗೆ ತಮ್ಮ ಮದುವೆಯನ್ನ ಈ  ಸಮಾಜ ಒಪ್ಪಲಾರದು ಎಂದು ಅರಿತುಕೊಂಡು ನೇಣಿಗೆ ಕೊರಳೊಡ್ಡಲು ನಿರ್ಧರಿಸಿ, ಮರದ ಕೊಂಬೆಗೆ ಯುವತಿ ವೇಲ್ ಬಿಗಿದುಕೊಂಡು ಇಬ್ಬರು ಸಾವಿನಲ್ಲಿ ಒಂದಾಗಿದ್ದಾರೆ.

  ಇದನ್ನೂ ಓದಿ: Murder: ಹೊರಗಡೆ ಪ್ರೇಮ'ಯೋಗ', ಪ್ರಿಯಕರನ ಜೊತೆ ಪಲ್ಲಂಗ! ಇದು ಪತಿ, ಪತ್ನಿ ಮತ್ತು ಅವನ ಕಥೆ

  ಇತ್ತ ಸುದ್ದಿ ತಿಳಿದ ಗ್ರಾಮಸ್ಥರು ವಿಷಯವನ್ನ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ  ಮುಡಬಿ  ಪೊಲೀಸ್ರು ಪೋಷಕರನ್ನ ಕರೆಸಲಾಗಿದೆ, ಎರಡೂ ಕುಟುಂಬಗಳ ಇವರ ದುಢುಕಿನ ನಿರ್ಧಾರಕ್ಕೆ ಕಣ್ಣಿರಾಗಿದ್ದಾರೆ. ಕರುಳ ಬಳ್ಳಿಗಳನ್ನ ಕಳೆದುಕೊಂಡ ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿದೆ....

  ವರದಿ: ಚಮನ್ ಹೊಸಮನಿ‌ 
  Published by:Kavya V
  First published: