ಕೋಲಾರ: ಆಧುನಿಕ ಜಗತ್ತು ಮುಂದುವರೆಯುತ್ತಿದ್ದಂತೆ ಮನುಷ್ಯರು ಕಾಲ ಕಾಲಕ್ಕೆ ಬದಲಾಗುತ್ತಾ ಮುನ್ನೆಡೆಯುತ್ತಿದ್ದಾರೆ, ಆದರೆ ನಮ್ಮಲ್ಲಿ ಇನ್ನೂ ಆಚರಣೆಯಲ್ಲಿರುವ ಮೂಡ ನಂಬಿಕೆಗಳು (Superstition) ಅಲ್ಲಲ್ಲಿ ಹಾಗೆಯೇ ಉಳಿದುಕೊಂಡಿದೆ, ಹಲವು ವರ್ಷಗಳ ಹಿಂದೆ ಮೇಲ್ವರ್ಗದ ಜನರು ಕೆಳವರ್ಗದ ಜನರ ಮೇಲೆ ದೌರ್ಜನ್ಯ ದಬ್ಬಾಳಿಕೆ ನಡೆಸುತ್ತಿದ್ದ ಘಟನೆಗಳು ಈಗ ಕಾಣೆಯಾಗಿದ್ದರು, ಆಗಾಗ ಇಂತಹ ಸಂದರ್ಭಗಳು ಮತ್ತೆ ಮತ್ತೆ ಮರುಕಳಿಸುತ್ತಿದೆ. ಅಸ್ಪೃಶ್ಯತೆಯ (Untouchability) ಆಚರಣೆಗಳಿಗೆ ನಿಷೇದ ಹೇರಿದ್ದರು, ಅಂತಹ ಘಟನೆ ಕೋಲಾರದ ಮಾಲೂರಿನಲ್ಲಿ (Maluru, Kolar) ತಡವಾಗಿ ಬೆಳಕಿಗೆ ಬಂದಿದೆ.
ಹಲವು ವರ್ಷಗಳಿಂದ ಅಸ್ಪೃಶ್ಯತೆ
ಮಾಲೂರಿನ ಮೈಲಾಂಡಹಳ್ಳಿ ಗ್ರಾಮದಲ್ಲಿ ದಲಿತರಿಗೆ ದೇಗುಲ ಪ್ರವೇಶ ನಿಷೇಧಿಸಲಾಗಿದ್ದು, ಗ್ರಾಮದಲ್ಲಿನ ಏಕೈಕ ಕ್ಷೌರಿಕ ಮಳಿಗೆಯಲ್ಲು ದಲಿತರಿಗೆ ಕಟಿಂಗ್ ಶೇವಿಂಗ್ ಮಾಡದಂತೆಯು ಒತ್ತಡ ಹೇರಲಾಗಿದೆ, ಗ್ರಾಮದಲ್ಲಿ ಹಲವು ವರ್ಷಗಳಿಂದ ಅಸ್ಪೃಶ್ಯತೆ ಆಚರಣೆ ಮಾಡಲಾಗುತ್ತಿದ್ದು ಕಳೆದ ಎರಡು ದಿನಗಳ ಹಿಂದಷ್ಟೆ ಇದಕ್ಕೆ ಬಲಿಯಾಗಿದ್ದ ದಲಿತರ ಆಕ್ರೋಶ ಹೊಡೆದು ಇದೀಗ ಪ್ರಕರಣ ಬೆಳಕಿಗೆ ಬಂದಿದೆ.
ದೇವಸ್ಥಾನಕ್ಕೆ ಪ್ರವೇಶ ನಿರಾಕರಣೆ
ಕಳೆದ ಭಾನುವಾರ ಗ್ರಾಮದ ಮಾರಿಕಾಂಬ ದೇಗುಲದಲ್ಲಿ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಎಂದಿನಂತೆ ಗ್ರಾಮದ ಮಹಿಳೆಯರು ಮಾರಿಕಾಂಬ ಅಮ್ಮನವರಿಗೆ ದೀಪ ಬೆಳಗಲು ಮುಂದಾದಾಗ ದೇಗುಲ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿದೆ.
ಇದನ್ನೂ ಓದಿ: Astrology: ನೆಚ್ಚಿನ ಉದ್ಯೋಗ ಹೊಂದುವ ಈ ರಾಶಿಯವರ ಕನಸು ನನಸು; ಇಲ್ಲಿದೆ 12 ರಾಶಿಗಳ ದಿನಭವಿಷ್ಯ
ದೇಗುಲದ ಅರ್ಚಕ ನಾರಾಯಣಪ್ಪ, ಕೃಷ್ಣಪ್ಪ ಹಾಗೂ ಇನ್ನು ಕೆಲವರು ದೇಗುಲ ಪ್ರವೇಶ ಮಾಡದಂತೆ ಹೇಳಿ, ಒಳಗೆ ಬಂದಿದ್ದವರನ್ನು ಹೊರಗೆ ಕಳಿಸಿದ್ದಾರಂತೆ, ತಮ್ಮವರನ್ನ ಹೊರಗೆ ಕಳಿಸಿದ್ದು ಯಾಕೆಂದು ಪ್ರಶ್ನಿಸಿದಾಗ, ಕೆಳಜಾತಿಯವರು ಒಳಗೆ ಬರಬಾರದೆಂದು ಹೇಳಿ ಕಳಿಸಿದ್ದಾರೆ, ಇದಕ್ಕೆ ಆಕ್ರೋಶಗೊಂಡ ಗ್ರಾಮದ ತಿಮ್ಮರಾಯಪ್ಪ ಎನ್ನುವರು ನಾರಾಯಣಪ್ಪ ಹಾಗು ಹಲವರೊಂದಿಗೆ ವಾಗ್ವಾದ ನಡೆಸಿ, ಜಗಳ ಮಾಡಿದ್ದಾರೆ.
ತಮ್ಮ ನಡೆಯನ್ನು ಸಮರ್ಥಿಸಿಕೊಂಡ ಅರ್ಚಕರು
ದಲಿತರನ್ನ ಉದ್ದೇಶ ಪೂರ್ವಕವಾಗಿ ದೇಗುಲ ಪ್ರವೇಶ ಮಾಡದಂತೆ ಮಾಡುತ್ತಾ, ಅಸ್ಪೃಶ್ಯತೆ ಆಚರಣೆ ಮಾಡಲಾಗುತ್ತಿದೆ ಎಂದು ದಲಿತರು ಆರೋಪಿಸಿದ್ದಾರೆ. ದೇಗುಲ ಪ್ರವೇಶಕ್ಕೆ ನಿರಾಕರಣೆ ಮಾಡಿದ್ದವರು, ತಮ್ಮ ಕ್ರಮದ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದು, ಈ ಹಿಂದೆಯಿಂದ ನಡೆದುಕೊಂಡು ಬಂದಂತೆಯೇ ನಾವು ಪ್ರವೇಶಕ್ಕೆ ಅನುಮತಿ ನೀಡಿಲ್ಲ ಎಂಬ ಸಬೂಬು ನೀಡಿದ್ದಾರೆ.
ತಿಳುವಳಿಕೆ ಹೇಳಿದ ಮಾಲೂರು ಶಾಸಕ ಕೆ.ವೈ. ನಂಜೇಗೌಡ.
ಘಟನೆ ಬೆಳಕಿಗೆ ಬಂದ ದಿನದಂದೆ ಮಾಲೂರು ಶಾಸಕ ಕೆ.ವೈ. ನಂಜೇಗೌಡ (MLA K.Y.Nanjegowda) ಗ್ರಾಮಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ, ಯಾವುದೇ ಕಾರಣಕ್ಕು ಕೆಳವರ್ಗದ ಜನರೆಂದು ಯಾರನ್ನು ಹೀಯಾಳಿಸಬೇಡಿ ಎಂದು ಬುದ್ಧಿವಾದ ಹೇಳಿದ ಶಾಸಕರು, ಎಲ್ಲರು ಸಮಾನವಾಗಿ ಬಾಳಬೇಕು, ಜಾತಿ ಧರ್ಮ ಇದೆಲ್ಲವೂ ಶಾಶ್ವತವಲ್ಲ ಮಾನವೀಯತೆಯೇ ಮುಖ್ಯ ಎಂದು ಎಲ್ಲರಿಗು ತಿಳಿ ಹೇಳಿದರು.
ಇದನ್ನೂ ಓದಿ: Shiradi Ghat Road: ಶಿರಾಡಿಘಾಟ್ ರಸ್ತೆಯಲ್ಲಿ ಪ್ರಯಾಣ ಡೇಂಜರ್; ಮಳೆಗಾಲದಲ್ಲಿ ಯಾಮಾರಿದ್ರೆ ಯಮನ ಪಾದ!
ಕ್ಷೌರ ಮಾಡಿಸಿಕೊಳ್ಳಲು ಮಾಲೂರಿಗೆ ಹೋಗಬೇಕು
ಗ್ರಾಮದಲ್ಲಿನ ಏಕೈಕ ಕಟಿಂಗ್ ಶಾಪ್ ನಲ್ಲು ದಲಿತರಿಗೆ ಕಟಿಂಗ್ ಶೇವಿಂಗ್ ಮಾಡದಂತೆ, ಕ್ಷೌರಿಕ ನಿಗೆ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಹಾಗಾಗಿ ಕಟಿಂಗ್ ಶೇವಿಂಗ್ ಮಾಡಿಸಿಕೊಳ್ಳಲು ಮಾಲೂರು ಪಟ್ಟಣಕ್ಕೆ ತೆರಳಬೇಕಿದೆ ಎಂದು ದಲಿತ ಕುಟುಂಬದ ಸದಸ್ಯರಾದ ತಿಮ್ಮರಾಯಪ್ಪ ಬೇಸರ ಹೊರಹಾಕಿದ್ದಾರೆ,
ಸಂಬಂದ ಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ದಲಿತ ಕಾಲೋನಿಯ ಜನರಿಗೆ ಇರುವ ಸಮಸ್ಯೆಗಳನ್ನ ನಿವಾರಿಸಬೇಕೆಂದು ಗ್ರಾಮಸ್ಥರಾದ ಚಂದನ್ ಅವರು ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ನಾವು ಎಷ್ಟೇ ಬೆಳೆದರು ನಮ್ಮದೇ ಸಮಾಜದಲ್ಲಿ ಮೇಲು ಕೀಳು ಎಂಬ ಭಾವನೆ ಇನ್ನೂ ಜೀವಂತವಾಗಿದೆ ಎಂಬುದು ಆಗಾಗ ಇಂತಹ ಪ್ರಕರಣಗಳು ಬೆಳಕಿಗೆ ಗೆ ಬರುತ್ತಿದೆ. ಎಲ್ಲರು ಒಂದೆ ಎನ್ನುವ ಸಮಾನತೆ ದೃಷ್ಟಿಯಿಂದ ಎಲ್ಲರನ್ನ ಕಾಣುವುದರಿಂದಲೇ ಅಸ್ಪೃಶ್ಯತೆಯಂತಹ ಪಿಡುಗು ತೊಲಗಲಿದೆ ಎಂಬುದು ಎಲ್ಲರು ಅರಿತುಕೊಳ್ಳಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ