• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಸಾಂಪ್ರದಾಯಿಕ ಭೂತಾರಾಧನೆಗೂ ಡಿಜಿಟಲ್ ಟಚ್; ಇಲ್ಲಿ ವ್ಯವಹಾರವೆಲ್ಲವೂ ಕ್ಯಾಶ್ ಲೆಸ್

ಸಾಂಪ್ರದಾಯಿಕ ಭೂತಾರಾಧನೆಗೂ ಡಿಜಿಟಲ್ ಟಚ್; ಇಲ್ಲಿ ವ್ಯವಹಾರವೆಲ್ಲವೂ ಕ್ಯಾಶ್ ಲೆಸ್

ಭೂತಾರಾಧನೆ

ಭೂತಾರಾಧನೆ

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಕುಟುಂಬವೊಂದು ಪ್ರಧಾನಮಂತ್ರಿಗಳ ಆಶಯದಂತೆ ಕ್ಯಾಶ್ ಲೆಸ್ ವ್ಯವಹಾರವನ್ನು ಭೂತಾರಾಧನೆಯಲ್ಲೂ ಪರಿಚಯಿಸುವ ಮೂಲಕ ಗಮನ ಸೆಳೆದಿದೆ. ಭೂತಾರಾಧನೆಗೆ ಬೇಕಾದ ಸಾಮಾಗ್ರಿಗಳು, ಚಪ್ಪರ, ವಾದ್ಯದವರು, ಅರ್ಚಕರು, ಭೂತ ಕಟ್ಟುವ ಕಲಾವಿದರು, ದೈವದ ಪಾತ್ರಿಗಳು, ಅಡಿಗೆಯವರು, ಆಳುಗಳು, ಹೀಗೆ ಎಲ್ಲಾ ಪೇಮೆಂಟ್ ಗಳೂ ಈ ಬಾರಿ ಡಿಜಿಟಲೀಕರಣ ವ್ಯವಸ್ಥೆಯ ಮೂಲಕವೇ ಸಂದಾಯ ಮಾಡಲಾಗಿದೆ.

ಮುಂದೆ ಓದಿ ...
  • Share this:

ಕೇಂದ್ರ ಸರಕಾರ ನಗದು ವಹಿವಾಟಿನ ಬದಲು ಕ್ಯಾಶ್ ಲೆಸ್ ವ್ಯವಹಾರಕ್ಕೆ ಹೆಚ್ಚಿನ ಒತ್ತು ನೀಡಿದ ಬಳಿಕ, ಇದೀಗ ಹೆಚ್ಚಿನ ಜನ ಕ್ಯಾಶ್ ಲೆಸ್ ವ್ಯವಸ್ಥೆಯತ್ತ ಮುಖ ಮಾಡಿದ್ದಾರೆ. ಬ್ಯಾಂಕ್ ವ್ಯವಹಾರಗಳು, ಅವಶ್ಯಕ ವಸ್ತುಗಳ ಖರೀದಿ ಹೀಗೆ ಎಲ್ಲವನ್ನೂ ನಗದು ಮುಕ್ತ ಮಾಡಲು ಹೊರಟಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಕುಟುಂಬವೊಂದು ಸಾಂಪ್ರದಾಯಿಕವಾಗಿ ನಡೆದುಕೊಂಡು ಬರುತ್ತಿರುವ ದೈವಾರಾಧನೆಗೂ ಡಿಜಿಟಲ್ ಟಚ್ ನೀಡಿದೆ. ದೈವಗಳ ಆರಾಧನೆಗೆ ಬೇಕಾದ ಎಲ್ಲಾ ವ್ಯವಹಾರಗಳನ್ನು ಕ್ಯಾಶ್ ಲೆಸ್ ಮಾಡಿದೆ. ನೋಟು ಅಮಾನ್ಯೀಕರಣದ ಬಳಿಕ ಚೆಕ್ ಮೂಲಕ ದೈವಗಳ ಪಾತ್ರಿ ಸೇರಿದಂತೆ ಎಲ್ಲಾ ಸೌಕರ್ಯ ಒದಗಿಸುವವರಿಗೆ ಚೆಕ್ ಮೂಲಕ ಹಣ ಪಾವತಿಸುತ್ತಿದ್ದ ಈ ಕುಟುಂಬ, ಈ ಬಾರಿ ಹಣಕಾಸಿನ ವ್ಯವಹಾರವನ್ನು ಸಂಪೂರ್ಣ ಡಿಜಿಟಲೀಕರಣ ಮಾಡಿದೆ. ಭೀಮ್, ಗೂಗಲ್ ಪೇ ಮೂಲಕ ಹಣ ವರ್ಗಾಯಿಸುವ ಮೂಲಕ ಸಂಪೂರ್ಣ ಕ್ಯಾಶ್ ಲೆಸ್ ವ್ಯವಹಾರ ನಡೆಸಿದೆ.


2017 ನವಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ಧೇಶಿಸಿ ಮಾತನಾಡಿ ನವಂಬರ್ 8 ರ ಮಧ್ಯರಾತ್ರಿಯಿಂದ ದೇಶದಲ್ಲಿ 500 ಹಾಗೂ 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ನಿಶೇಧಿಸಿದ್ದರು. ಆ ಬಳಿಕ ನಡೆದ ವಿದ್ಯಮಾನಗಳು ಎಲ್ಲರಿಗೂ ತಿಳಿದದ್ದೇ. ನಗದು ವ್ಯವಹಾರಕ್ಕಿಂತ ನಗದು ಮುಕ್ತ ವ್ಯವಹಾರಕ್ಕೆ ಹೆಚ್ಚಿನ ಒತ್ತು ನೀಡಿದ ಕೇಂದ್ರ ಸರಕಾರದ ಪ್ರಯತ್ನಕ್ಕೆ ಆ ಬಳಿಕ ಎಲ್ಲೆಡೆ ಸಕಾರಾತ್ಮಕ ಬೆಂಬಲವೂ ವ್ಯಕ್ತವಾಗಿದೆ. ಜನ ಇಂದು ತನ್ನ ಅವಶ್ಯಕತೆಯ ಎಲ್ಲಾ ವ್ಯವಹಾರಗಳನ್ನೂ ಸಾಧ್ಯವಾದಷ್ಟು ಮಟ್ಟಿಗೆ ನಗದು ಮುಕ್ತವಾಗಿಯೇ ನಡೆಸಿಕೊಂಡು ಬರುತ್ತಿದ್ದಾರೆ.


ನಾಳೆ ಮತ್ತೆ ಸಾರಿಗೆ ಸಿಬ್ಬಂದಿ ಮುಷ್ಕರ; ಬಸ್​ ಸಂಚಾರದಲ್ಲಿ ವ್ಯತ್ಯಯ ಇಲ್ಲ


ಇದೀಗ ಈ ನಗದು ಮುಕ್ತ ವ್ಯವಹಾರ ತುಳುನಾಡಿನ ಸಾಂಪ್ರದಾಯಿಕ ಆಚರಣೆಯಾದ ದೈವಾರಾಧನೆಯಲ್ಲೂ ಬಳಕೆಯಾಗುತ್ತಿದೆ. ಸಾಮಾನ್ಯವಾಗಿ ದೈವಾರಾಧನೆಯ ಸಮಯದಲ್ಲಿ ಆಚರಣೆಗೆ ಸಂಬಂಧಿಸಿದಂತೆ ಹಣಕಾಸಿನ ವ್ಯವಹಾರಗಳೆಲ್ಲಾ ನಗದು ರೂಪದಲ್ಲೇ ನಡೆಯುತ್ತದೆ. ಆದರೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಕುಟುಂಬವೊಂದು ಪ್ರಧಾನಮಂತ್ರಿಗಳ ಆಶಯದಂತೆ ಕ್ಯಾಶ್ ಲೆಸ್ ವ್ಯವಹಾರವನ್ನು ಭೂತಾರಾಧನೆಯಲ್ಲೂ ಪರಿಚಯಿಸುವ ಮೂಲಕ ಗಮನ ಸೆಳೆದಿದೆ. ಭೂತಾರಾಧನೆಗೆ ಬೇಕಾದ ಸಾಮಾಗ್ರಿಗಳು, ಚಪ್ಪರ, ವಾದ್ಯದವರು, ಅರ್ಚಕರು, ಭೂತ ಕಟ್ಟುವ ಕಲಾವಿದರು, ದೈವದ ಪಾತ್ರಿಗಳು, ಅಡಿಗೆಯವರು, ಆಳುಗಳು, ಹೀಗೆ ಎಲ್ಲಾ ಪೇಮೆಂಟ್ ಗಳೂ ಈ ಬಾರಿ ಡಿಜಿಟಲೀಕರಣ ವ್ಯವಸ್ಥೆಯ ಮೂಲಕವೇ ಸಂದಾಯ ಮಾಡಲಾಗಿದೆ. ನೋಟು ಅಮಾನ್ಯೀಕರಣ ನಡೆದ ವರ್ಷದಲ್ಲಿ ಚೆಕ್‌ ಮೂಲಕ ಹಣ ಪಾವತಿಸಿದ್ದ ಈ‌ ಕುಟುಂಬ ಈ ಬಾರಿ ಭೀಮ್, ಗೂಗಲ್ ಪೇ ಹಾಗು ಇತರ ವ್ಯವಸ್ಥೆಯ ಮೂಲಕ ಹಣ ಪಾವತಿಸಿ ಗಮನಸೆಳೆದಿದೆ.


ಪ್ರಧಾನಮಂತ್ರಿ ಮೋದಿ ದೇಶಕ್ಕೆ ಕರೆ ನೀಡಿದ ಕ್ಯಾಶ್ ಲೆಸ್ ವ್ಯವಹಾರದ ಮನವಿಗೆ ಈ ಕೂಡು ಕುಟುಂಬ ಸಕಾರಾತ್ಮಕವಾಗಿ ಸ್ಪಂದಿಸಿದೆ. ಪುತ್ತೂರಿನ ಪಿಲಿಗುಂಡ ಕುಟುಂಬದಲ್ಲಿ ಪ್ರತಿವರ್ಷವೂ ಭೂತಾರಾಧನೆಯು ನಡೆದುಕೊಂಡು ಬರುತ್ತಿದ್ದು, ಈ ಬಾರಿಯ ಆಚರಣೆ ಮಾತ್ರ ಸಂಪೂರ್ಣ ಡಿಜಿಟಲೀಕರವಾಗಿತ್ತು. ಕುಟುಂಬದ ವತಿಯಿಂದ ನಡೆಯುವ ಈ ಆಚರಣೆಗೆ ಬೇಕಾದ ದೇಣಿಗೆಯನ್ನೂ ಈ ಬಾರಿ ನೇರವಾಗಿ ಕುಟುಂಬದ ಬ್ಯಾಂಕ್ ಖಾತೆಗೇ ಜಮಾ ಮಾಡಿಸುವ ವ್ಯವಸ್ಥೆ, ಬ್ಯಾಂಕ್ ಖಾತೆಯಿಲ್ಲದ ಕುಟುಂಬದ ಪ್ರತಿ ಸದಸ್ಯನಿಗೂ ದೈವಾರಾಧನೆ ನಡೆಯುವ ದಿನವೇ ಬ್ಯಾಂಕ್ ಖಾತೆ ತೆರೆಯುವ ವ್ಯವಸ್ಥೆ ಎಲ್ಲವನ್ನೂ ಇಲ್ಲಿ ಅಚ್ಚುಕಟ್ಟಾಗಿ ಮಾಡಲಾಗಿದೆ. ಅಲ್ಲದೆ ಈ ಕೂಡು ಕುಟುಂಬದಲ್ಲಿರುವ ವಿಧವೆಯರಿಗೆ, ವಯೋವೃದ್ಧರಿಗೆ ಮಾಸಿಕ ವೇತನವನ್ನೂ ನೀಡುವ ವ್ಯವಸ್ಥೆಯನ್ನೂ ಮಾಡಲಾಗಿದೆ ಎನ್ನುತ್ತಾರೆ  ಕುಟುಂಬದ ಸದಸ್ಯರಾದ  ಪಿ.ಕೆ.ಎಸ್. ಗೌಡ.


ಸುಮಾರು 200 ಕ್ಕೂ ಮಿಕ್ಕಿದ ಸದಸ್ಯರನ್ನೂ ಹೊಂದಿರುವ  ಈ ಕೂಡು ಕುಟುಂಬದ ವಯೋವೃದ್ಧರಿಂದ ಹಿಡಿದ ಚಿಕ್ಕ ಮಕ್ಕಳ ವರೆಗಿನ ಪ್ರತಿ ಸದಸ್ಯರೂ ಇದೀಗ ಬ್ಯಾಂಕ್ ಖಾತೆಯನ್ನು ಹೊಂದಿದ್ದಾರೆ. ಕ್ಯಾಶ್ ಲೆಸ್ ವ್ಯವಹಾರವನ್ನೂ ಕನಸಿನಲ್ಲೂ ನೆನೆಸದ ಕೃಷಿಕರನ್ನೇ ಹೆಚ್ಚಾಗಿ ಹೊಂದಿರುವ  ಈ ಕುಟುಂಬವೀಗ ಸಾಂಪ್ರದಾಯಿಕ ಆಚರಣೆಯಾದ ಭೂತಾರಾಧನೆಯನ್ನೂ ಡಿಜಿಟಲ್ ಇಂಡಿಯಾ ಪರಿಕಲ್ಪನೆಗೆ ಹೊಸದಾಗಿ ಸೇರ್ಪಡೆಗೊಳಿಸಿದೆ.

Published by:Latha CG
First published: