Anekal: ಒಂದೇ ಬಟ್ಟೆ ಹಾಕ್ತಾರೆ, ಕೈಯಲ್ಲಿ ಆಯುಧ ಹಿಡಿದಿರ್ತಾರೆ; ಬೀಗ ಹಾಕಿದ ಮನೆಗಳೇ ಇವರ ಟಾರ್ಗೆಟ್

Anekal Theft: ಘಟನೆಗೆ ಸಂಬಂಧಿಸಿದಂತೆ ಆನೇಕಲ್ ಪೊಲೀಸರು ಸ್ಥಳ‌ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಕಳ್ಳರಿಗಾಗಿ ಶೋಧ ಮುಂದುವರಿಸಿದ್ದಾರೆ.

ಕಳ್ಳರು ಕನ್ನ ಹಾಕಿದ ಮನೆ

ಕಳ್ಳರು ಕನ್ನ ಹಾಕಿದ ಮನೆ

  • Share this:
ತಡರಾತ್ರಿ ಕಳ್ಳತನ (Anekal Theft) ಮಾಡಲು ಮೂವರು ಒಂದೇ ರೀತಿಯ ಬಟ್ಟೆ ಹಾಕಿಕೊಂಡು ಕೈಯಲ್ಲಿ ಆಯುಧಗಳನ್ನು ಹಿಡಿದು ಮನೆಯೊಂದಕ್ಕೆ ಎಂಟ್ರಿ ಕೊಡುತ್ತಿರುವ ಸಿಸಿ ಕ್ಯಾಮೆರಾ ದೃಶ್ಯ (CCTV Footage) ಕಂಡು ಬಂದದ್ದು ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದ (Anekal City) ಮುನಿವೆಂಕಟಪ್ಪ ಬಡಾವಣೆಯಲ್ಲಿ. ಪಕ್ಕಾ ಪ್ರೊಫೆಷನಲ್ ಕಳ್ಳರ ರೀತಿ ಕಾಣುವ ಅಸಾಮಿಗಳು ಬೀಗ ಹಾಕಿರುವ ಮನೆಯನ್ನೇ ಹುಡುಕಿ ಕಬ್ಬಿಣದ ಗಡಾಟರಿಯಿಂದ ಬಾಗಿಲು ಮುರಿದು ನಗನಾಣ್ಯ (Cash And Jewellery) ದೋಚಿದಾರೆ. ಜೊತೆಗೆ ಮನೆಯ ಪಕ್ಕದ ಫಾರಖ್ ಜ್ಞಾನ ಸಿದ್ದಾಂತ ಆಶ್ರಮವನ್ನು ದೋಚಿ ಪರಾರಿಯಾಗಿದ್ದಾರೆ. ಇನ್ನೂ ನಾಲ್ಕು ತಿಂಗಳಲ್ಲಿ ಮಗಳ ಮದುವೆ (Daughter Marriage) ನಿಶ್ಚಯವಾಗಿತ್ತು. ಹಾಗಾಗಿ 8 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಮೂರು ಲಕ್ಷ ಎಪ್ಪತ್ತೈದು ಸಾವಿರ ನಗದು ಮನೆಯಲ್ಲಿತ್ತು. ಬೀರುವನ್ನು ಒಡೆದು ಹಾಕಿ ಹಣ ಒಡವೆಯನ್ನು ಹೊತ್ತೊಯ್ದಿದ್ದಾರೆ.

ನಾವು ಮನೆಯಲ್ಲಿ ಇರಲಿಲ್ಲ. ಆಂಧ್ರ ಪ್ರದೇಶದ ಭೋವಿಕೊಂಡ ಗಂಗಮ್ಮ ದೇವಸ್ಥಾನಕ್ಕೆ ಕುಟುಂಬ ಸಮೇತ ಹೋಗಿದ್ದಾಗ ಕೃತ್ಯ ನಡೆದಿದೆ ಎಂದು ಮನೆಯ ಮಾಲೀಕ ಮಂಜುನಾಥ್ ತಿಳಿಸಿದ್ದಾರೆ.

ಬೆಳಗ್ಗೆ ನೆರೆಹೊರೆ ಅವರಿಂದ ಮಾಲೀಕರಿಗೆ ಮಾಹಿತಿ

ಇನ್ನೂ ಬೆಳಗ್ಗೆ ಅಕ್ಕಪಕ್ಕದ ಮನೆಯವರು ಗಮನಿಸಿದಾಗ ಮನೆಯ ಬಾಗಿಲು ತೆರೆದಿದ್ದು, ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ಗಮನಿಸಿ ಮನೆ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಮನೆಗೆ ಬಂದು ನೋಡಿದಾಗ ನಗ ನಾಣ್ಯ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

Cash And Jewellery robbed from two home in anekal city cank mrq
ಮನೆ ಕಳ್ಳತನ


ಸುಮಾರು ಎಂಟು ಲಕ್ಷ ಮೌಲ್ಯದ ಒಡವೆ ಮತ್ತು ಮೂರು ಮುಕ್ಕಾಲು ಲಕ್ಷ ಹಣ ಕಳವಾಗಿದೆ ಎಂದು ಮನೆ ಮಾಲೀಕರು ತಿಳಿಸಿದ್ದಾರೆ. ಜೊತೆಗೆ ಪಕ್ಕದ ಆಶ್ರಮದಲ್ಲಿಯು ಕಳವು ಮಾಡಿ ಕಾಲ್ಕಿತ್ತಿದ್ದಾರೆ ಎಂದು ಸ್ಥಳೀಯರಾದ ಸಿದ್ದರಾಜು  ತಿಳಿಸಿದ್ದಾರೆ.

ಇದನ್ನೂಓದಿ:   ಪ್ರೇಯಸಿಯ ಕತ್ತು ಸೀಳಿ ಬರ್ಬರ ಹತ್ಯೆ; ಪ್ರಿಯಕರನ ರೂಮಿಗೆ ಹೋದ ಯುವತಿಯ ದುರಂತ ಅಂತ್ಯ

ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ಮತ್ತು ಪರಿಶೀಲನೆ

ಒಟ್ಟಿನಲ್ಲಿ ಮನೆಯಲ್ಲಿ ಮನೆಯಲ್ಲಿ ಒಡವೆ ಹಣ ಇರುವುದು ತಿಳಿದು ಮನೆಗೆ ಕಳ್ಳರು ಖನ್ನ ಹಾಕಿದರಾ? ಅಥವಾ ಕಳ್ಳರ ನಸೀಬು ಖುಲಾಯಿಸಿ ಹಣ ಒಡವೆ ಸಿಕ್ಕಿತೋ ಗೊತ್ತಿಲ್ಲ. ಆದ್ರೆ ಮಗಳ ಮದುವೆಗೆ ಇಟ್ಟಿದ್ದ ಹಣ ಒಡವೆ ಕಳೆದುಕೊಂಡು ಮಂಜುನಾಥ್ ಕುಟುಂಬ ಕಂಗಾಲಾಗಿದ್ದು, ಘಟನೆ ಸಂಬಂಧಿಸಿದಂತೆ ಆನೇಕಲ್ ಪೊಲೀಸರು ಸ್ಥಳ‌ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಕಳ್ಳರಿಗಾಗಿ ಶೋಧ ಮುಂದುವರಿಸಿದ್ದಾರೆ.

Cash And Jewellery robbed from two home in anekal city cank mrq
ಮನೆ ಕಳ್ಳತನ


ಸಿಸಿ ಕ್ಯಾಮೆರಾಗಳ ಪರಿಶೀಲೆನೆ ನಡೆಸಿದ ಪೊಲೀಸರಿಗೆ ಕಳ್ಳರ ವೇಷಭೂಷಣ ಗಮನಿಸಿದರೆ ಪಕ್ಕಾ ಪ್ರೊಫೆಷನಲ್ ಕಳ್ಳರ ಇರಬಹುದು ಎಂಬ ಅನುಮಾನ ಮೂಡಿದ್ದು, ಆನೇಕಲ್ ಜನತೆ ಕೊಂಚ ಜಾಗರೂಕರಾಗಿರುವುದು ಒಳ್ಳೆಯದು.

ಯುವಕನ ಕತ್ತು ಸೀಳಿ ಕೊಲೆ

ರಾತ್ರಿ ಹತ್ತು ಗಂಟೆ ಸರಿ ಸುಮಾರು. ಆತ ಆಗ ತಾನೇ ಮಧ್ಯಾಹ್ನ ಪಾಳಿ ಕೆಲಸ (Second Shift Work) ಮುಗಿಸಿ ರೂಮಿನತ್ತ ಹೊರಟಿದ್ದ . ಮಾರು ದೂರು ಸಾಗುತ್ತಿದ್ದಂತೆ ಮೂರು ಮಂದಿ ದುತ್ತನೆ ಪ್ರತ್ಯಕ್ಷರಾಗಿದ್ದಾರೆ. ಕುತ್ತಿಗೆಗೆ ಚಾಕು (Knife) ಹಿಡಿದು ಮೊಬೈಲ್ ಕೊಡು ಎಂದಿದ್ದಾನೆ. ಆತ ಮೊಬೈಲ್ (Mobile) ಕೊಡುವುದಿಲ್ಲ ಎಂದು ಪ್ರತಿರೋಧ ತೋರುತ್ತಿದ್ದಂತೆ ಆತನ ಕುತ್ತಿಗೆ ಸೀಳಿ ಮೊಬೈಲ್ ಸಮೇತ ಕ್ಷಣ ಮಾತ್ರದಲ್ಲಿ ಕಿರಾತಕರು ಪರಾರಿಯಾಗಿದ್ದಾರೆ.

ಇದನ್ನೂ ಓದಿ: Bangalore Murder: ಬೆಂಗಳೂರಿನ ನಡುರಸ್ತೆಯಲ್ಲೇ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕತ್ತು ಸೀಳಿ ಬರ್ಬರ ಹತ್ಯೆ

ಬೆಂಗಳೂರಿನ (Bengaluru) ಹೊರವಲಯದಲ್ಲಿ ಈ ಘಟನೆ ನಡೆದಿದ್ದು, ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ರಾತ್ರಿ ಒಬ್ಬರೇ ಹೊರ ಬರೋದು ಎಷ್ಟು ಸೇಫ್ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

ಸೋನು ಥಾಮ್ಸನ್ ಕೊಲೆಯಾದ ವ್ಯಕ್ತಿ. ಮೂಲತಃ ಕೇರಳದವರಾದ ಸೋನು, ಜಿಗಣಿ ಕೈಗಾರಿಕಾ ಪ್ರದೇಶದ ಟಾಟಾ ಅಡ್ವಾನ್ಸ್ ಕಪನಿಯಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ ಸೆಕೆಂಡ್ ಶಿಫ್ಟ್ ಕೆಲಸ ಮುಗಿಸಿ ಹೊರ ಬರುತ್ತಿದ್ದಂತೆ ಅಡ್ಡಗಟ್ಟಿದ ಮೂರು ಮಂದಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದಾರೆ.
Published by:Mahmadrafik K
First published: